For Quick Alerts
ALLOW NOTIFICATIONS  
For Daily Alerts

ಪೌಷ್ಠಿಕ ಆಹಾರ- ಇದುವೇ ಮಕ್ಕಳ ಆರೋಗ್ಯದ ಕೀಲಿ ಕೈ

|

ಮಕ್ಕಳು ಆಗಾಗ ಕಾಯಿಲೆಗೆ ತುತ್ತಾಗುವುದು ಸಹಜ. ಇದಕ್ಕೆ ಮುಖ್ಯ ಕಾರಣ ಅವರಲ್ಲಿರುವ ರೋಗ ನಿರೋಧಕ ಶಕ್ತಿಯು ಇನ್ನೂ ಅವರ ದೇಹಕ್ಕೆ ಅಪಾಯವನ್ನುಂಟು ಮಾಡುವ ರೋಗಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದಿರುವುದಿಲ್ಲ. ಅದಕ್ಕಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವಂತಹ ಆಹಾರ ಪದಾರ್ಥಗಳನ್ನು ಸೇವಿಸಲು ನೀಡುವುದು ಉತ್ತಮ.

ಇದರಿಂದ ಅವರ ಆರೋಗ್ಯವು ಸುಧಾರಿಸುತ್ತದೆ ಮತ್ತು ಬೆಳವಣಿಗೆಯು ಸಹ ಆಗುತ್ತದೆ. ಮಕ್ಕಳು ಅಲರ್ಜಿಗಳು, ಇನ್‍ಫೆಕ್ಷನ್‍ಗಳು (ಸೋಂಕು) ಮತ್ತು ಅಜೀರ್ಣ ಸಮಸ್ಯೆಯಂತಹ ಸಾಮಾನ್ಯವಾದ ರೋಗರುಜಿನಗಳಿಗೆ ಸುಲಭವಾಗಿ ತುತ್ತಾಗುತ್ತಿರುತ್ತಾರೆ. ಇವುಗಳ ವಿರುದ್ಧ ಹೋರಾಡಲು ಮಕ್ಕಳಿಗೆ ರಕ್ಷಣಾ ಶಕ್ತಿಯನ್ನು ಹೊಂದಿರುವ ಆಹಾರದ ಅಗತ್ಯವಿರುತ್ತದೆ. ಬನ್ನಿ ಅಂತಹ ಆಹಾರಗಳು ಯಾವುದು ಎಂಬುದನ್ನು ನೋಡೋಣ... ಮಗುವಿಗೆ ಬಲವಂತವಾಗಿ ಊಟ ಮಾಡಿಸುವುದು ಸರಿಯೇ?

ಬೇಯಿಸಿದ ಆಹಾರ

Foods that help fight infection in children
ಆರೋಗ್ಯಕರವಾದ ಆಹಾರಗಳು ಮಕ್ಕಳನ್ನು ಇನ್‍ಫೆಕ್ಷನ್‍ಗಳಿಂದ ಪಾರು ಮಾಡುತ್ತದೆ. ಬೇಯಿಸಿದ ಅಥವಾ ಗ್ರಿಲ್ ಮಾಡಿದ ಆಹಾರಗಳು ಈ ನಿಟ್ಟಿನಲ್ಲಿ ಭಾರೀ ಪ್ರಯೋಜನಕಾರಿ. ಆದಷ್ಟು ಕರಿದ ಆಹಾರಗಳನ್ನು ನೀಡಲೇಬೇಡಿ. ಈ ಆಹಾರಗಳು ಮಕ್ಕಳ ರೋಗ ನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಜೊತೆಗೆ ಇನ್‍ಫೆಕ್ಷನ್‍ಗಳಿಗೆ ಗುರಿ ಮಾಡುತ್ತದೆ.

ಆಂಟಿ-ಆಕ್ಸಿಡೆಂಟ್‍ಗಳು

ಮಕ್ಕಳ ಆಹಾರದಲ್ಲಿ ಆಂಟಿ-ಆಕ್ಸಿಡೆಂಟ್‍ಗಳು ಇದ್ದರೆ ಒಳ್ಳೆಯದು. ಇವುಗಳು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕಾಯಿಲೆಗಳು ಬರದಂತೆ ತಡೆಯುತ್ತವೆ. ಕುಂಬಳಕಾಯಿಗಳು, ದಪ್ಪ ಮೆಣಸಿನಕಾಯಿ ಮತ್ತು ಬೆರ್ರಿಗಳಂತಹ ಆಹಾರ ಪದಾರ್ಥಗಳನ್ನು ಮಕ್ಕಳ ಆಹಾರದಲ್ಲಿರುವಂತೆ ನೋಡಿಕೊಳ್ಳಿ.

ಮನೆಯಲ್ಲಿ ತಯಾರಿಸಿದ ಜ್ಯೂಸ್‍ಗಳು

ಇವುಗಳು ಮಕ್ಕಳಲ್ಲಿ ಇನ್‍ಫೆಕ್ಷನ್ ಬರದಂತೆ ಕಾಪಾಡುವ ಆಹಾರ ಪದಾರ್ಥಗಳಲ್ಲಿಯೇ ಅತ್ಯುತ್ತಮವಾಗಿವೆ. ಮಕ್ಕಳಿಗೆ ಬೀದಿ ಬದಿಯಲ್ಲಿ ಮಾರುವ ಹಣ್ಣು ಮತ್ತು ಹಣ್ಣಿನ ರಸಗಳನ್ನು ನೀಡಬೇಡಿ. ಈ ಮೂಲಕ ನೀವು ನೀರಿನಿಂದ ಹರಡುವ ಕಾಯಿಲೆಗಳು ಬರದಂತೆ ತಡೆಯಬಹುದು.

ಹಣ್ಣುಗಳು

ಮಕ್ಕಳಿಗೆ ಹಣ್ಣುಗಳು ಹೇಳಿ ಮಾಡಿಸಿದ ಆಹಾರಗಳಾಗಿರುತ್ತವೆ. ದಾಳಿಂಬೆ, ಬಾಳೆಹಣ್ಣುಗಳು ಅಥವಾ ಪೀಚ್‍ಗಳಂತಹ ಹಣ್ಣುಗಳನ್ನು ನಿಮ್ಮ ಮಗುವಿನ ಆಹಾರ ಪದಾರ್ಥದ ಪಟ್ಟಿಯಲ್ಲಿ ಸೇರಿಸಿ. ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತವೆ. ಇವುಗಳು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವ

ಮಾಂಸದ ಉತ್ಪನ್ನಗಳು

ಇವುಗಳು ಮಕ್ಕಳಲ್ಲಿ ಇನ್‍ಫೆಕ್ಷನ್ ನಿವಾರಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥಗಳಾಗಿವೆ. ಆದರೂ, ಇವುಗಳನ್ನು ಬೇಯಿಸುವಾಗ ವಿಶೇಷ ಕಾಳಜಿಯನ್ನು ವಹಿಸುವುದು ಅತ್ಯಗತ್ಯ. ಮಕ್ಕಳಿಗೆ ಆದಷ್ಟು ಬೆಂದಿರದ ಮೊಟ್ಟೆಗಳು ಅಥವಾ ಸಮುದ್ರ ಜನ್ಯ ಆಹಾರ ಪದಾರ್ಥಗಳನ್ನು ನೀಡಬೇಡಿ. ಇವುಗಳು ಮಕ್ಕಳ ಹೊಟ್ಟೆಯನ್ನು ತೊಳೆಸುವಂತಹ ಕೆಲಸ ಮಾಡಿ, ಅವರಿಗೆ ಅಸೌಖ್ಯವನ್ನು ನೀಡುತ್ತದೆ. ಬೆಳೆಯುವ ಮಗುವಿನ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರಗಳು

ವಿಟಮಿನ್ ಸಿ

ಇದು ಮಕ್ಕಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಮಕ್ಕಳ ಆಹಾರ ಪದಾರ್ಥಗಳಲ್ಲಿ ಕಿತ್ತಳೆ ರಸ, ಕಿವಿ ಮತ್ತು ವಿಟಮಿನ್ ಸಿ ಗಳು ಇರುವಂತೆ ನೋಡಿಕೊಳ್ಳಿ. ಇವುಗಳು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
English summary

Foods that help fight infection in children

Children are usually exposed to a platter of allergies, infections and most common of all, indigestion problems. Kids need their resistance power to fight these things. The humidity in the atmosphere will decrease the digestion process. Hence, care must be taken to give foods that prevent infections in children. There are a few foods for kids that can be opted to ensure that your child will be free of infections. Take a look.
Story first published: Wednesday, September 23, 2015, 19:31 [IST]
X
Desktop Bottom Promotion