For Quick Alerts
ALLOW NOTIFICATIONS  
For Daily Alerts

ಮಗು ಮಾತನಾಡುವಂತೆ ಮಾಡಲು ಸುಲಭದ ದಾರಿಗಳು

By Poornima Heggade
|

ತಾಯಿ ತಂದೆಯರಿಗೆ ಮಕ್ಕಳು ನೀಡುವ ಖುಷಿಯನ್ನು ಜಗತ್ತಿನ ಬೇರ್ಯಾವುದೇ ವಸ್ತು ಅಥವಾ ಘಟನೆ ನೀಡಲಾರದು. ಮಕ್ಕಳು ಏನೇ ಮಾಡಿದರೂ ತಂದೆ ತಾಯಿಗೆ ಅದು ಖುಷಿ. ತಮ್ಮ ಮಗುವಿನೊಂದಿಗೆ ಮಗುವಾಗಿ ಅವರು ಪಡುವ ಸಂತೋಷ ಅವರಿಗಷ್ಟೇ ಗೊತ್ತು. ಎಷ್ಟೇ ಹೊತ್ತು ಮಗುವಿನೊಂದಿಗೆ ಕಳೆದರೂ ಕಡಿಮೆಯೇ. ಮಗು ಮಲಗದೇ ಅಕಾಲ ವೇಳೆಯಲ್ಲಿ ಎದ್ದು ಅತ್ತರೂ ತಾಯಿಗೆ ಸಿಟ್ಟು ಬಾರದು.

ಮಗುವಿನ ಮಾತು ಕೂಡ ಇಂತಹುದೇ ಖುಷಿ. ಮಗುವಿನ ತೊದಲು ಮಾತೇ ನಿಮ್ಮಲ್ಲಿ ಮಗುವಿನ ಮಾತು ಕೇಳಲು ಕಾತುರರಾಗಿ ಇರುವಂತೆ ಮಾಡುತ್ತದೆ. ಎಲ್ಲಾ ತಂದೆ ತಾಯಿಗಳಿಗೂ ಮಗುವಿನ ಬೆಳವಣಿಗೆಯ ಹಂತ ಅದರ ಮಾತನಾಡಲು ಆರಂಭ ಮಾಡುವ ಸಮಯದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಪುಟ್ಟ ಮಗುವಿನ ತೊದಲು ಮಾತುಗಳು ಯಾರಿಗೆ ತಾನೇ ಕೇಳಲು ಇಷ್ಟವಿಲ್ಲ ಹೇಳಿ? ಆದರೆ ಕೆಲವು ಮಕ್ಕಳು ನಿಗದಿತ ಸಮಯದಲ್ಲಿ ಮಾತನಾಡಲು ಆರಂಭಿಸದೇ ಇರಬಹುದು. ಆದರೆ ಇದು ನಿಜವಾಗಿ ಮಗಿವಿನಿಂದ ಮಗುವಿಗೆ ಬೇರೆಯಾಗಿರುತ್ತದೆ.

Best Ways To Get Your Child To Start Talking

ನಿಗದಿತ ಸಮಯದಲ್ಲಿ ಮಗು ಮಾತನಾಡದೇ ಇದ್ದರೆ ನಿಮ್ಮಲ್ಲಿ ಕಾತುರತೆ ಆತಂಕವಾಗಿ ಬದಲಾಗಿ ಮಾತನಾಡಲು ಆರಂಭವಾಗುವಂತೆ ಮಾಡಲು ಇರುವ ದಾರಿಗಳ ಬಗ್ಗೆ ಹುಡುಕಾಟ ಆರಂಭವಾಗುತ್ತದೆ. ಮಾತನಾಡಲು ಆರಂಭಿಸುವ ವಯಸ್ಸುಗಳು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ. ಆದರೆ ನಿಮ್ಮ ಮಗು ನಿಗದಿತ ಸಮಯದಲ್ಲಿ ಮಾತನಾಡಲು ಆರಂಭ ಮಾಡಿಲ್ಲ ಎಂದಾದರೆ ವೈದ್ಯರಲ್ಲಿ ಸಲಹೆ ಪಡೆಯುವುದು ಸೂಕ್ತ. ಮಗುವಿನಲ್ಲಿ ವೈದ್ಯಕೀಯವಾಗಿ ಯಾವುದೇ ಸಮಸ್ಯೆಗಳಿಲ್ಲದೇ ಇದ್ದರೆ ಮಗುವನ್ನು ಮಾತನಾಡುವಂತೆ ಮಾಡುವ ಹಲವು ದಾರಿಗಳಿವೆ.

ನೀವು ಸ್ವಲ್ಪ ಸಮಯವನ್ನು ವ್ಯಯಿಸುತ್ತೀರಿ ಸ್ವಲ್ಪ ಸಮಯವನ್ನು ಮಗುವಿಗಾಗಿ ಮಿಸಲಿಡುತ್ತೀರಿ ಎಂದಾದರೆ ಇಲ್ಲಿ ಕೆಲವು ದಾರಿಗಳಿವೆ.

ಸಮಾಜದಲ್ಲಿ ಬೆರೆಯುವಂತೆ ಮಾಡಿ – ಮಗುವನ್ನು ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯುವಂತೆ ಮಾಡಿ. ಇದು ನಿಮ್ಮ ಮಗುವಿನ ಮಾತಿನ ಆರಂಭಕ್ಕೆ ಬಹಳ ಸಹಾಯಕ. ಇದರಿಂದಾಗಿ ನಿಮ್ಮ ಮಗು ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಇದರಿಂದಾಗಿ ಮಾತನಾಡಲು ಹೆಚ್ಚು ಹೆಚ್ಚು ಪ್ರಯತ್ನಿಸುತ್ತದೆ.

ಮಗುವಿನೊಂದಿಗೆ ಮಾತನಾಡಿ – ಇದು ಮಾತನ್ನು ಆರಂಭಿಸುವ ಇನ್ನೊಂದು ಸುಲಭದ ದಾರಿ. ತಂದೆ ತಾಯಿ ಹೆಚ್ಚು ಸಮಯ ಮಗುವಿನೊಂದಿಗೆ ಕಳೆಯಲು ಆಗದಿದ್ದರೆ ಮಗು ಮಾತನಾಡಲು ನಿಧಾನಿಸುವುದು ಇದೇ ಕಾರಣಕ್ಕಾಗಿ. ನಾವು ಹೆಚ್ಚು ಮಾತನಾಡಿದಷ್ಟು ಮಗು ಹೆಚ್ಚು ಗ್ರಹಿಸುತ್ತದೆ. ನೀವು ಮಾತನಾಡುವುದು ಮಗುವಿಗೆ ಅರ್ಥವಾಗುತ್ತದೋ ಇಲ್ಲವೋ ಎಂಬ ಬಗ್ಗೆ ಚಿಂತಿಸಬೇಡಿ. ನಿಮ್ಮ ಮಾತಿಗೆ ಪ್ರತಿಕ್ರಿಯೆಯಾಗಿ ನಿಮ್ಮ ಮಗು ಮಾತು ಆರಂಭಿಸುತ್ತದೆ.

ಎಲ್ಲವನ್ನೂ ಹೆಸರಿನಿಂದ ಕರೆಯಿರಿ – ನಿಮ್ಮ ಮನೆಯ ಎಲ್ಲರನ್ನೂ ಹಾಗೂ ಸುತ್ತ ಮುತ್ತಲ ಎಲ್ಲವನ್ನೂ ಮಗುವಿಗೆ ಪರಿಚಯ ಮಾಡಿಕೊಡಿ. ಹತ್ತಿರ ಇರುವ ಎಲ್ಲವನ್ನೂ ಅದರ ಹೆಸರಿನಿಂದ ಕರೆಯಿರಿ ಮತ್ತು ಮಗುವಿಗೆ ಅದರ ಹೆಸರನ್ನು ತಿಳಿಯುವಂತೆ ಮಾಡಿ. ಸಂಬಂಧಗಳ ಬಗ್ಗೆಯೂ ಹೀಗೆಯೇ ಮಾಡಿ. ಪ್ರತಿದಿನ ಎಲ್ಲಾ ಹೆಸರುಗಳನ್ನೂ ಮತ್ತೆ ಮತ್ತೆ ಕರೆಯುತ್ತಲೇ ಇರಿ. ಹಾಗೂ ಮಗುವಿಗೆ ಹೇಳಲು ಹೇಳಿ.

ಮಲಗುವಾಗ ಕತೆ ಹೇಳಿ - ಮಲಗುವ ಮುನ್ನ ಯಾವುದಾದರೂ ಕತೆಯನ್ನು ಮಗುವಿಗೆ ಹೇಳುತ್ತಾ ಮಲಗಿಸಿ. ಇದು ನಿಮ್ಮ ಮಗುವಿನ ಮಾತನಾಡುವ ಕಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಬಹಳ ಸಹಾಯಕ. ಮೊದ ಮೊದಲು ನೀವು ಹೇಳುವ ಕತೆಯ ಕಡೆ ನಿಮ್ಮ ಮಗು ಗಮನ ನೀಡದು ಆದರೆ ಪ್ರಯತ್ನ ಬಿಡಬೇಡಿ.

ಶಬ್ದಗಳ ಅನುಕರಣೆ ಮಾಡಿ - ಯಾವುದೇ ಪ್ರಾಣಿ, ವಾದ್ಯಗಳು ಮತ್ತು ಇತರೆ ಯಾವುದೇ ಶಬ್ದಗಳನ್ನು ಅನುಕರಣೆ ಮಾಡಿ. ಹಾಗೂ ಹೀಗೆ ಮಾಡುವಾಗ ಮಗುವಿಗೆ ಆ ಶಬ್ದಗಳನ್ನು ಮಾಡಲು ಹೇಳಿ. ಹೀಗೆ ಮಾಡಿದಾಗ ಸುಲಭವಾದ ಹಲವು ಶಬ್ದಗಳನ್ನು ಮಗು ಕಲಿಯುತ್ತದೆ ಮತ್ತು ಅದೇ ಶಬ್ದಗಳನ್ನು ಹೊರತರಲು ಪ್ರಯತ್ನಿಸುತ್ತದೆ.

ಹಾಡುಗಳು - ಹಾಡುಗಳನ್ನು ಹಾಡುವುದೂ ಕೂಡ ಉತ್ತಮ ಪ್ರಯತ್ನವೇ. ಇದನ್ನು ಮಗುವಿಗೆ ಊಟ ಮಾಡಿಸುವಾಗ ಅಥವಾ ಸ್ನಾನ ಮಾಡುವಾಗ ಪ್ರಯತ್ನಿಸಿ. ಇದರಿಂದ ಕೆಲಸವೂ ಸುಲಭವಾಗುತ್ತದೆ ಮಗುವಿನ ಮಾತೂ ಬೇಗ ಆರಂಭವಾಗುತ್ತದೆ.

ನೀವು ಆಡುವ ಮಾತುಗಳನ್ನು ಮಗುವಿಗೆ ಹೇಳಲು ಹೇಳಿ - ನೀವು ಆಡುವ ಮಾತುಗಳನ್ನು ಮಗುವಿನ ಬಳಿ ಪುನರಾವರ್ತಿಸಲು ಹೇಳಿ. ಹಲವು ಪದಗಳನ್ನು ಹೇಳಿ ಒಂದೂ ಕಲಿಸದೇ ಇರುವ ಬದಲು ಪ್ರತಿನಿತ್ಯ ಕೆಲವೇ ಪದಗಳನ್ನು ಹೇಳಲು ಹೇಳಿ ಆ ಶಬ್ದಗಳನ್ನು ಮಗು ಕಲಿಯುವಂತೆ ಮಾಡಿ.

English summary

Best Ways To Get Your Child To Start Talking

If listening to the giggles of your baby makes you excited, then probably you will be waiting to see how you feel when they start talking.
X
Desktop Bottom Promotion