For Quick Alerts
ALLOW NOTIFICATIONS  
For Daily Alerts

ನಿಜವಾಗಿಯೂ ಹಸುವಿನ ಹಾಲು ಮಗುವಿಗೆ ಆರೋಗ್ಯಕಾರಿಯೇ?

By Arpitha Rao
|

ಹೌದು ಮಗು ತನ್ನ ಮೊದಲ ಹುಟ್ಟಿದ ಹಬ್ಬ ಆಚರಿಸುವ ಮೊದಲು ಹಸುವಿನ ಹಾಲನ್ನು ಕೊಡಬಾರದು ಎಂಬುದು ಮಾತ್ರ ಸತ್ಯ. ಇದನ್ನು ತಜ್ಞರೂ ಕೂಡ ಒಪ್ಪುತ್ತಾರೆ. ಒಂದು ವರ್ಷ ತುಂಬುವವರೆಗೆ ಮಗುವಿಗೆ ತಾಯಿಯ ಎದೆ ಹಾಲು ಮತ್ತು ಮಗುವಿಗಾಗಿ ಸಿಗುವ ಕೆಲವು ಘನರೂಪದ ಆಹಾರ ಬಳಸುವುದು ಸೂಕ್ತ. ಆದಾಗ್ಯೂ ನಿಮ್ಮ ಮಗುವಿಗೆ ಆರು ತಿಂಗಳು ದಾಟಿದ ನಂತರ ಹಸುವಿನ ಹಾಲನ್ನು ಬಳಸಿ ಮಾಡಿದ ಆಹಾರವನ್ನು ಕೊಡಬಹುದು.

ಹಸುವಿನ ಹಾಲಿನಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ. ಇದು ದೇಹವನ್ನು ಶಕ್ತಿಯುತವಾಗಿಸುತ್ತದೆ. ಇದರಲ್ಲಿ ಹೇರಳವಾಗಿ ದೊರೆಯುವ ಪ್ರೋಟೀನ್,ವಿಟಮಿನ್,ಸತು,ಕಾರ್ಬೋಹೈಡ್ರೇಟ್ಸ್ ಇವುಗಳು ಮಗುವಿನ ಒಟ್ಟಾರೆ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಸುವಿನ ಹಾಲಿನಿಂದಾಗುವ ಮುಖ್ಯ ಅನುಕೂಲತೆಗಳು. ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

*ಬಲಯುತವಾದ ಮೂಳೆ

ಕ್ಯಾಲ್ಸಿಯಂ ಹಸುವಿನ ಹಾಲಿನಲ್ಲಿ ಅಧಿಕವಾಗಿರುತ್ತದೆ. ಇದು ನಿಮ್ಮ ಮಗುವಿನ ಹಲ್ಲು ಮತ್ತು ಮೂಳೆಯನ್ನು ಸದೃಡಗೊಳಿಸುತ್ತದೆ. ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಮಗುವಿನ ಸ್ನಾಯುವಿನ ಬೆಳವಣಿಗೆಗೂ ಕೂಡ ಸಹಕರಿಸುತ್ತದೆ.

*ಅಗತ್ಯ ವಿಟಮಿನ್

ಹಸುವಿನ ಹಾಲಿನಲ್ಲಿ ವಿಟಮಿನ್ ಡಿ, ಎ ಮತ್ತು ಪ್ರೋಸ್ಪರಸ್ ಇರುತ್ತದೆ. ಇದು ಮಗುವಿನ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ತಡೆಯುತ್ತದೆ. ಜೊತೆಗೆ ನಂತರದ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಇವುಗಳು ಬರದಂತೆ ತಡೆಯುತ್ತದೆ.

*ಬೆಳವಣಿಗೆಗೆ ಅಗತ್ಯ ಪ್ರೋಟೀನ್

ಮಗು ಬೆಳೆಯುತ್ತಾ ಹೋದಂತೆ ಪ್ರೋಟೀನ್ ನ ಅವಶ್ಯಕತೆ ಇರುತ್ತದೆ.ಇದನ್ನು ನೀವು ಹಸುವಿನ ಹಾಲು ನೀಡುವುದರ ಮೂಲಕ ಒದಗಿಸಬಹುದು. ಹಸುವಿನ ಹಾಲು ಮಗುವನ್ನು ಇಡೀ ದಿನ ಶಕ್ತಿಯುತವಾಗಿರಿಸಲು ಬೇಕಾಗುವ ಕಾರ್ಬೋಹೈಡ್ರೇಟ್ಸ್ ಅನ್ನು ಕೂಡ ಒದಗಿಸುತ್ತದೆ. ಬಾಟಲ್ ಹಾಲು ಕೊಡುವ ಮೊದಲು ಕೆಲವೊಂದು ಸಲಹೆ

*ಮಗುವಿಗೆ ಎಷ್ಟು ಹಾಲು ಕೊಡಬೇಕು ?

ಅತಿಯಾಗಿ ಹಸುವಿನ ಹಾಲನ್ನು ಕೊಡಬೇಡಿ.ಏಕೆಂದರೆ ಕೆಲವೊಮ್ಮೆ ಇದರಿಂದ ರಕ್ತ ಹೀನತೆ ಕಾಣಿಸಿಕೊಳ್ಳಬಹುದು. ದಿನಕ್ಕೆ 16 ಔನ್ಸ್ ನಷ್ಟು ಹಾಲು ಕೊಡುವುದು ಉತ್ತಮ.ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಇದನ್ನು 24 ಔನ್ಸ್ ನಷ್ಟು ಹೆಚ್ಚಿಸಿ. ನಿಮ್ಮ ಮಗುವಿಗೆ ಹಸುವಿನ ಹಾಲು ನೀಡಲು ಪ್ರಾರಂಭಿಸಿದ ನಂತರ ಇತರ ಘನರೂಪದ ಆಹಾರ ನೀಡುವ ಪ್ರಮಾಣವನ್ನು ಕಡಿಮೆಗೊಳಿಸಿ.

English summary

Amazing Benefits Of Cow Milk For Babies

One thing is for sure – babies should not be put on cow’s milk before their first birthday. This is something all experts agree on. Until then, your baby will do just fine on breast milk or formula along with baby-specific solid food.
Story first published: Wednesday, October 29, 2014, 18:17 [IST]
X
Desktop Bottom Promotion