For Quick Alerts
ALLOW NOTIFICATIONS  
For Daily Alerts

ಶಾಲೆಯಲ್ಲಿ ನಿಮ್ಮ ಮಕ್ಕಳ ದೈಹಿಕ ಶಿಕ್ಷಣ ಹೇಗಿರಬೇಕು?

By Super
|

ಇಂದು ಉತ್ತಮ ಆರೋಗ್ಯ ಹಾಗೂ ಸುದೃಢ ಶರೀರಕ್ಕಾಗಿ ದಿನದ ಸಮಯ ಹಾಗೂ ವೇತನದಲ್ಲಿ ಕೊಂಚ ಪಾಲನ್ನು ಮೀಸಲಿಡುವುದು ಅಗತ್ಯವಾಗಿದೆ. ನಗರಗಳಲ್ಲಿ ಸಾವಿರಾರು ದೈಹಿಕ ವ್ಯಾಯಾಮದ ಜಿಮ್ ಗಳಿವೆ. ಪ್ರತಿಯೊಂದರಲ್ಲೂ ವಿವಿಧ ಹಾಗೂ ಆಧುನಿಕ ವ್ಯಾಯಾಮ ಸಲಕರಣೆಗಳಿವೆ. ಈ ಸಲಕರಣೆಗೆಳಿಗನುಸಾರವಾಗಿ ಜಿಮ್‌ನ ತಿಂಗಳ ವೆಚ್ಚದಲ್ಲೂ ವ್ಯತ್ಯಾಸವಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯವಿರುವುದು ನಿಮ್ಮ ಆರೋಗ್ಯ ಮತ್ತು ಶಾರೀರವನ್ನು ಗಮನಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬಲ್ಲ ದೈಹಿಕ ಶಿಕ್ಷಕ. ಮಗು ಪದೇ ಪದೇ ಅಳಲು ಕಾರಣಗಳೇನು?

ಆದರೆ ಈ ಶಿಕ್ಷಕನನ್ನು ಆರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವರು ತಮ್ಮ ಶರೀರವನ್ನು ಮಾತ್ರ ಮಾದರಿಯಾಗಿಟ್ಟುಕೊಂಡು ತಮ್ಮ ಶಿಷ್ಯರೂ ತಾವು ಅನುಸರಿಸಿದ ದಾರಿಯನ್ನೇ ಯಥಾವತ್ತಾಗಿ ಬಳಸಲು ಬಯಸುತ್ತಾರೆ. ಇದೊಂದು ಅಪಾಯಕಾರಿ ಮಾರ್ಗವಾಗಿದೆ. ಏಕೆಂದರೆ ಪ್ರತಿಯೊಬ್ಬರ ಶರೀರ ರಚನೆ ಹಾಗೂ ಆರೋಗ್ಯ, ಅನುವಂಶಿಕವಾಗಿ ಬಂದಿರಬಹುದಾದ ಲಕ್ಷಣಗಳು (ಉದಾಹರಣೆಗೆ ವ್ಯಕ್ತಿಯ ಎತ್ತರ) ಮೊದಲಾದವುಗಳು ಬೇರೆ ಬೇರಿಯಾಗಿರುತ್ತವೆ.

ಇವುಗಳಲ್ಲಿ ಮುಖ್ಯವಾದುದನ್ನು ಅಭ್ಯಾಶಿಸಿ ಅವರಿಗೆ ಪ್ರಾರಂಭದಿಂದ ಹಿಡಿದು ಉತ್ತಮ ದೇಹದಾರ್ಢ್ಯ ಪಡೆಯುವವರೆಗೂ ಸತತವಾಗಿ ಜೊತೆಯಲ್ಲಿದ್ದು ಪ್ರೇರಣೆ ನೀಡುವ ಶಿಕ್ಷಕನನ್ನು ಆರಿಸಿಕೊಳ್ಳುವುದು ಜಾಣತನ. ಇಂತಹ ಶಿಕ್ಷಕನನ್ನು ಆರಿಸಲು ಈ ಕೆಳಗಿನ ಹತ್ತು ವಿಷಯಗಳು ನಿಮಗೆ ನೆರವಾಗುತ್ತವೆ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು.

ಆತನ ಅರ್ಹತೆಯ ಬಗ್ಗೆ ರುಜುವಾತು

ಆತನ ಅರ್ಹತೆಯ ಬಗ್ಗೆ ರುಜುವಾತು

ನಿಮ್ಮ ಶಿಕ್ಷಕ ನಿಜವಾಗಿಯೂ ನಿಮಗೆ ತರಬೇತಿ ನೀಡಬಲ್ಲನೇ ಎಂಬುದನ್ನು ಪುಷ್ಟೀಕರಿಸುವ ಯಾವುದೇ ಪುರಾವೆ ಪರಿಶೀಲಿಸಿದ ಬಳಿಕವೇ ಶಿಕ್ಷಕರನ್ನಾಗಿ ಆಯ್ದುಕೊಳ್ಳಿರಿ. ಒಂದು ವೇಳೆ ಹೆಚ್ಚೇನೂ ಗೊತ್ತಿಲ್ಲದೇ ಕೇವಲ ತನ್ನ ದೇಹವನ್ನು ಮಾತ್ರ ಬೆಳೆಸಿಕೊಂಡಿದ್ದು ಇತರರಿಗೆ ಮಾದರಿಯಾಗಲು ಅನರ್ಹರಾದವರನ್ನು ತಿರಸ್ಕರಿಸಿ. ಯಾವುದೇ ಶಿಕ್ಷಣವಿಲ್ಲದೇ ಕೇವಲ ತಮ್ಮ ಶ್ರಮದಿಂದ ಈ ಕಲೆಯ ಎಲ್ಲಾ ಪಟುಗಳನ್ನು ಅರಿತವರೂ ನಿಮಗೆ ಶಿಕ್ಷಕರಾಗಲು ಅರ್ಹರು.

ಶಿಕ್ಷಕರ ಬಗ್ಗೆ ಇತರರು ಏನು ಹೇಳುತ್ತಾರೆಂದು ಕೇಳಿ

ಶಿಕ್ಷಕರ ಬಗ್ಗೆ ಇತರರು ಏನು ಹೇಳುತ್ತಾರೆಂದು ಕೇಳಿ

ಒಂದು ಉತ್ಪನ್ನದ ಬಗ್ಗೆ ನಾಲ್ವರ ಅಭಿಪ್ರಾಯ ಒಳ್ಳೆಯದೇ ಆಗಿದ್ದರೆ ನಾವೂ ಆ ಉತ್ಪನ್ನ ಕೊಳ್ಳಲು ಮನಸ್ಸು ಮಾಡುತ್ತೇವೆ. ಇಲ್ಲಿಯೂ ಅವರ ಬಗ್ಗೆ ಜನರ ಅಭಿಪ್ರಾಯ ಒಳ್ಳೆಯದೆಂದು ಕಂಡುಬಂದಲ್ಲಿ ಅವರು ನಿಮಗೂ ಶಿಕ್ಷಕರಾಗಲು ಅರ್ಹರು.

ನಿಮ್ಮ ಸಾಮರ್ಥ್ಯದ ಬಗ್ಗೆ ಅವರು ಅರಿಯುವಂತಹವರಾಗಬೇಕು

ನಿಮ್ಮ ಸಾಮರ್ಥ್ಯದ ಬಗ್ಗೆ ಅವರು ಅರಿಯುವಂತಹವರಾಗಬೇಕು

ಯಾವುದೇ ಶಿಕ್ಷಕನ ನಿಜವಾದ ಸಾಮರ್ಥ್ಯ ಅವರಿಂದ ತರಬೇತಿ ಪಡೆಯುವವರ ಸಾಮರ್ಥ್ಯದ ಬಗ್ಗೆ ಅರಿತುಕೊಳ್ಳುವುದಾಗಿದೆ. ಕೇವಲ ಅರಿತುಕೊಂಡರೆ ಸಾಲದು, ಅದಕ್ಕೆ ಸೂಕ್ತವಾದ ತರಬೇತಿಯನ್ನೂ ಪ್ರಥಮ ದಿನದಿಂದಲೇ ನೀಡುವವರಾಗಿರಬೇಕು. ತರಬೇತಿ ನೀಡಿದರೆ ಮಾತ್ರ ಸಾಲದು, ಅಂದಿನ ತರಬೇತಿ ಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗಿದೆಯೇ ಎಂದೂ ಪರಿಶೀಲಿಸಿ ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಇವರು ನಿಮ್ಮ ಶಿಕ್ಷಕರಾಗಲು ಸಂಪೂರ್ಣವಾಗಿ ಅರ್ಹರು.

ಅವರು ನಿಮಗೆ ಸಮಯ ನೀಡುವವರಂತಹವರಾಗಿರಬೇಕು

ಅವರು ನಿಮಗೆ ಸಮಯ ನೀಡುವವರಂತಹವರಾಗಿರಬೇಕು

ಹಲವು ಖ್ಯಾತ ದೈಹಿಕ ಶಿಕ್ಷಕರಿಗೆ ಸಮಯವೇ ಇರುವುದಿಲ್ಲ. ಅವರ ಸಮಯವೆಲ್ಲಾ ಈಗಾಗಲೇ ಅವರಿಂದ ತರಬೇತಿ ಪಡೆಯುತ್ತಿರುವವರಿಗಾಗಿ ಮುಡಿಪಾಗಿರುತ್ತದೆ. ನಿಮ್ಮನ್ನವರು ಶಿಷ್ಯರನ್ನಾಗಿ ಸ್ವೀಕರಿಸಿದರೂ ಒಂದು ವೇಳೆ ತಮಗೆ ಸಮಯ ನೀಡಲು ಅಸಮರ್ಥರಾದರೆ ಅವರು ನಿಮ್ಮ ಶಿಕ್ಷಕರಾಗಲು ಅನರ್ಹರು.

ತಮ್ಮ ವೃತ್ತಿಗೆ ಬದ್ದರಾಗಿರುವವರಾಗಿರಬೇಕು

ತಮ್ಮ ವೃತ್ತಿಗೆ ಬದ್ದರಾಗಿರುವವರಾಗಿರಬೇಕು

ಇಂದು ಜೀವನದಲ್ಲಿ ಯಶಸ್ವಿಯಾಗಿರುವ ಹಲವು ಶಿಕ್ಷಕರು ಹಿಂದೆ ಸ್ಥೂಲಕಾಯವುಳ್ಳವರಾಗಿದ್ದು ಸತತ ಪರಿಶ್ರಮ ಹಾಗೂ ದೃಢನಿಷ್ಠೆಯಿಂದ ತಮ್ಮ ದೇಹವನ್ನು ಸುದೃಢವಾಗಿಸಿಕೊಂಡಿದ್ದಾರೆ. ಈ ಪರಿಶ್ರಮ ಹಾಗೂ ನಿಷ್ಠೆಯನ್ನು ಅವರು ತಮ್ಮ ಶಿಷ್ಯರಿಂದಲೂ ಬಯಸಿ ಸೂಕ್ತ ಮಾರ್ಗದರ್ಶನ ನೀಡಬಲ್ಲವರಾದರೆ ಅವರು ನಿಮಗೆ ಶಿಕ್ಷಕರಾಗಲು ಅರ್ಹರು.

ತಮ್ಮ ವೃತ್ತಿಗೆ ಬದ್ದರಾಗಿರುವವರನ್ನು ಆರಿಸಿ

ತಮ್ಮ ವೃತ್ತಿಗೆ ಬದ್ದರಾಗಿರುವವರನ್ನು ಆರಿಸಿ

ಕೇವಲ ಹಣದಾಸೆಗಾಗಿ ನಿಮ್ಮನ್ನು ಶಿಷ್ಯರನ್ನಾಗಿ ಆರಿಸಿ ತರಬೇತಿಯನ್ನು ವರ್ಷಗಟ್ಟಲೇ ಎಳೆಯುವ ಶಿಕ್ಷಕರು ಎಷ್ಟೇ ಸಮರ್ಥರಿದ್ದರೂ ಸರ್ವಥಾ ಬೇಡ. ಇವರ ಬಗ್ಗೆ ಇತರರು ಯಾವ ಅಭಿಪ್ರಾಯ ಹೊಂದಿದ್ದಾರೆಂಬ ಮಾಹಿಸಿ ಸಂಗ್ರಹಿಸಿ ನಿಮ್ಮ ಆಯ್ಕೆಯನ್ನು ಖಚಿತಗೊಳಿಸಿರಿ.

ವ್ಯಾಯಾಮ ಶಾಲೆಯ ಸ್ಥಳ ನಿಮಗೆ ಅನುಕೂಲಕರವಾದಷ್ಟು ದೂರದಲ್ಲಿರಬೇಕು

ವ್ಯಾಯಾಮ ಶಾಲೆಯ ಸ್ಥಳ ನಿಮಗೆ ಅನುಕೂಲಕರವಾದಷ್ಟು ದೂರದಲ್ಲಿರಬೇಕು

ಪ್ರತಿದಿನ ನಿಮ್ಮ ವಾಸಸ್ಥಳದಿಂದ ವ್ಯಾಯಾಮಶಾಲೆ ಸುಲಭವಾಗಿ ಹೋಗಿ ಬರುವಂತಿರಬೇಕು. ನಿಮ್ಮ ಮನೆ ಹಾಗೂ ಕಛೇರಿಯ ನಡುವೆ ಸಿಗುವ ಸ್ಥಳವೂ ಸೂಕ್ತ. ಏಕೆಂದರೆ ಇಂದು ಬಹಳಷ್ಟು ವ್ಯಾಯಾಮಶಾಲೆಗಳಲ್ಲಿ ಸ್ನಾನಗೃಹದ ಸೌಲಭ್ಯವಿದ್ದು. ವ್ಯಾಯಾಮದ ಬಳಿಕ ನೀವು ಸಿದ್ಧರಾಗಿ ನಿಮ್ಮ ಕಾರ್ಯಸ್ಥಳಕ್ಕೆ ತೆರಳಬಹುದು.

ಶಿಕ್ಷಕರ ಹಿಂದಿನ ಸಾಧನೆಗಳು

ಶಿಕ್ಷಕರ ಹಿಂದಿನ ಸಾಧನೆಗಳು

ಈ ಶಿಕ್ಷಕ ಹಿಂದೆ ಏನು ಸಾಧನೆ ಮಾಡಿದ್ದಾರೆ, ಎಷ್ಟು ಜನರಿಗೆ ಇವರಿಂದಾಗಿ ಪ್ರಯೋಜನವಾಗಿದೆ ಎಂಬ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ಈ ಮಾಹಿತಿ ನಿರಾಶಾದಾಯಕವಾಗಿದ್ದರೆ ಇವರು ನಿಮಗೆ ಶಿಕ್ಷಕರಾಗಲು ಅನರ್ಹರು.

ವ್ಯಾಯಾಮ ಶಾಲೆಯ ವೆಚ್ಚ ನೀವು ಭರಿಸುವಂತಿರಬೇಕು

ವ್ಯಾಯಾಮ ಶಾಲೆಯ ವೆಚ್ಚ ನೀವು ಭರಿಸುವಂತಿರಬೇಕು

ಇಂದು ಹಲವು ವ್ಯಾಯಾಮಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಲಕರಣೆಗಳಿವೆ. ಆದರೆ ಇವುಗಳನ್ನು ಬಳಸಲು ದುಬಾರಿ ವೆಚ್ಚ ನೀಡಬೇಕಾದರೆ ಹಾಗೂ ಈ ವೆಚ್ಚ ನಿಮ್ಮ ಖರ್ಚುವೆಚ್ಚದಲ್ಲಿ ಸರಿದೂಗದೇ ಇದ್ದರೆ ಈ ಶಿಕ್ಷಕರ ಆಯ್ಕೆ ಬೇಡ. ವಾಸ್ತವವೆಂದರೆ ದೇಹಕ್ಕೆ ಅಗತ್ಯವಾದ ಎಲ್ಲಾ ವ್ಯಾಯಾಮಗಳನ್ನು ಸರಳವಾದ ಸಲಕರಣೆಗಳ ಮೂಲಕವೂ ಸಾಧಿಸಬಹುದು. ಇದಕ್ಕೆ ಅಗತ್ಯವಿರುವುದು ಕೇವಲ ಚಿತ್ತ ಮತ್ತು ಸತತವಾಗಿ ವ್ಯಾಯಾಮವನ್ನು ಮಾಡುವ ಹುಮ್ಮಸ್ಸು. ಸಲಕರಣೆಗಳ ವೆಚ್ಚದ ಹೊರತಾಗಿ ನಿಮಗೆ ಪ್ರೇರಣೆ ನೀಡುವ ಶಿಕ್ಷಕರು ನಿಮಗೆ ಅರ್ಹರು.

ನಿಮ್ಮ ತಪ್ಪುಗಳನ್ನು ಗುರುತಿಸಿ ತಿದ್ದುವವರಾಗಬೇಕು

ನಿಮ್ಮ ತಪ್ಪುಗಳನ್ನು ಗುರುತಿಸಿ ತಿದ್ದುವವರಾಗಬೇಕು

ಸಾಮಾನ್ಯವಾಗಿ ಯಾವುದೇ ವ್ಯಾಯಾಮದಲ್ಲಿ ಕೊಂಚ ನೋವು ಭರಿಸಬೇಕಾದುದು ಅಗತ್ಯ. ಮಾನವ ಸಹಜ ಗುಣದಿಂದಾಗಿ ಈ ನೋವಿನಿಂದ ತಪ್ಪಿಸಿಕೊಳ್ಳಲು ನಾವು ವ್ಯಾಯಾಮವನ್ನು ಸರಿಯಾದ ಕ್ರಮದಲ್ಲಿ ಮಾಡುವುದಿಲ್ಲ. ಈ ಕೊರತೆಯನ್ನು ಗಮನಿಸಿ ಸೂಕ್ತ ಮಾರ್ಗದರ್ಶನ ನೀಡುವ ಶಿಕ್ಷಕ ನಿಮಗೆ ಅರ್ಹರು.

English summary

10 Things Kids Love About Going To School

In this article, we answer the crucial question of how to choose the right gym trainer. We look at some tips to choose the right gym trainer, for choosing the right gym trainer is more impactful than you think as far as achieving milestones in training and fitness are concerned.
Story first published: Monday, November 10, 2014, 15:51 [IST]
X
Desktop Bottom Promotion