For Quick Alerts
ALLOW NOTIFICATIONS  
For Daily Alerts

ಒಳ್ಳೇ ಅಪ್ಪ-ಅಮ್ಮ ಆಗಲು ಕೆಲವು ಟಿಪ್ಸ್

|

ಒಳ್ಳೇ ಅಪ್ಪ-ಅಮ್ಮ ಆಗೋದು ಹೇಗೆ? ಕೆಲವು ತಂದೆತಾಯಿಗಳು ತುಂಬಾ ಕಟ್ಟುನಿಟ್ಟಾಗಿ, ಪ್ರೀತಿಸುತ್ತಾ, ಕಾಳಜಿ ವಹಿಸದರೆ ಸಾಕು ಮಕ್ಕಳನ್ನು ಆರಾಮಾಗಿ ಬೆಳೆಸಿಬಿಡಬಹುದು ಅಂದುಕೊಳ್ಳುತ್ತಾರೆ. ಆದರೆ ಒಳ್ಳೆ ಅಪ್ಪ-ಅಮ್ಮ ಅನ್ನಿಸಿಕೊಳ್ಳಲು ಇನ್ನೂ ಕೆಲವು ವಿಷಯಗಳು ಮುಖ್ಯವಾಗುತ್ತೆ.

ಕೆಲವರು ಪೋಷಕರಾಗುವುದು ಹೂವಿನ ಹಾಸಿಗೆ ಅಂದುಕೊಂಡಿರುತ್ತಾರೆ. ಆದರೆ ಇದು ಪರೀಕ್ಷೆಗೆ ತಯಾರಾಗುವಷ್ಟೇ ಕಷ್ಟದ್ದು ಎಂದು ಮರೆಯದಿರಿ. ನೀವು ಈಗಷ್ಟೇ ಅಪ್ಪ/ಅಮ್ಮ ಆಗಿದ್ದರೆ ನಾವು ನಿಮ್ಮನ್ನು ಹೆದರಿಸುತ್ತಿಲ್ಲ ಬದಲಿಗೆ ಕೆಲವು ಟಿಪ್ಸ್ ಗಳನ್ನು ನೀಡುತ್ತಿದ್ದೇವೆ. ಇದರಿಂದ ನೀವು ಮಕ್ಕಳೊಂದಿಗೆ ಉತ್ತಮ ಸಂಬಂಧ ಕಟ್ಟಿಕೊಳ್ಳಬಹುದು.

ಒಳ್ಳೆಯ ಪೋಷಕರಾಗಬೇಕಾದರೆ ಮುಖ್ಯವಾಗಿ ಕಾಲಕ್ಕೆ ಅನುಗುಣವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಆದ್ದರಿಂದ ಬೋಲ್ಡ್ ಸ್ಕೈ ನಿಮಗಾಗಿ ಇಂತಹ ಕೆಲವು ಸಲಹೆಗಳನ್ನು ನೀಡುತ್ತಿದೆ. ಓದಿ ನೋಡಿ ಅಳವಡಿಸಿಕೊಳ್ಳಿ:

ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಿರಿ

ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಿರಿ

ನಿಮ್ಮನ್ನು ನೀವು ಮಕ್ಕಳೊಂದಿಗೆ ಹೆಚ್ಚು ತೆರೆದುಕೊಂಡಷ್ಟು ನಿಮ್ಮ ಮತ್ತು ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.

ಮುಕ್ತವಾಗಿ ಮಾತನಾಡಿ

ಮುಕ್ತವಾಗಿ ಮಾತನಾಡಿ

ಮಕ್ಕಳೊಂದಿಗೆ ಹೆಚ್ಚೆಚ್ಚು ಮಾತಾಡಿ. ಇದರಿಂದ ಮಕ್ಕಳಿಗೆ ನೀವು ಆಪ್ತರಾಗುವಿರಿ.

ಮಗುವನ್ನು ಅರ್ಥಮಾಡಿಕೊಳ್ಳಿ

ಮಗುವನ್ನು ಅರ್ಥಮಾಡಿಕೊಳ್ಳಿ

ಒಳ್ಳೆಯ ಪೋಷಕರಾಗಬೇಕೆಂದರೆ ನೀವು ಮೊದಲು ನಿಮ್ಮ ಮಗುವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಮತ್ತು ನೀವು ಅವರನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ನಿಮ್ಮ ಮಗ/ಮಗಳಿಗೆ ಅನ್ನಿಸಬೇಕು.

ಅವರ ಜಾಗದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ

ಅವರ ಜಾಗದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ

ನಿಮ್ಮನ್ನು ನೀವು ಅವರ ಜಾಗದಲ್ಲಿಟ್ಟು ನೋಡಿಕೊಳ್ಳಲು ಸಾಧ್ಯವಾದರೆ ಆಗ ಅವರ ಸಮಸ್ಯೆಗಳು ನಿಮಗೆ ಅರ್ಥವಾಗುತ್ತದೆ. ಅವರಂತೆ ಯೋಚಿಸುವುದು ನಿಮಗೆ ಸಾಧ್ಯವಾದರೆ ನೀವು ಉತ್ತಮ ಪೋಷಕರಾಗುತ್ತೀರಿ.

ಒಂದು ಮೆಟ್ಟಿಲು ಕೆಳಗಿಳಿದು ನೋಡಿ

ಒಂದು ಮೆಟ್ಟಿಲು ಕೆಳಗಿಳಿದು ನೋಡಿ

ನಿಮ್ಮ ಯೋಚನೆಗಳನ್ನು ಅವರ ಮಟ್ಟಕ್ಕೆ ಇಳಿಸಿಕೊಳ್ಳಲು ನಿಮಗೆ ಸಾಧ್ಯವಾಗಬೇಕು. ಆದ್ದರಿಂದ ಅವರೊಂದಿಗೆ ಅವರ ರೀತಿಯಲ್ಲೇ ಮಾತನಾಡಿ. ಇದು ನಿಮ್ಮ ಮಗುವಿಗೆ ನೀವು ಉತ್ತಮ ಪೋಷಕರಾಗಲು ನೆರವು ನೀಡುತ್ತದೆ.

ಮಕ್ಕಳ ಮುಂದೆ ಅಹಂ ಪ್ರದರ್ಶನ ಸಲ್ಲ

ಮಕ್ಕಳ ಮುಂದೆ ಅಹಂ ಪ್ರದರ್ಶನ ಸಲ್ಲ

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವ ಜಗಳವಿದ್ದರೂ ಎಂದೂ ಅದನ್ನು ಮಕ್ಕಳ ಮುಂದೆ ಪ್ರದರ್ಶಿಸಬೇಡಿ. ನಿಮ್ಮ ಅಹಂ ಪ್ರೇರಿತ ನಡವಳಿಕೆ ಅವರನ್ನು ಪ್ರಭಾವಿಸುತ್ತದೆ ನೆನಪಿಡಿ.

ಪ್ರೀತಿಯ ಮಳೆಗೆರೆಯಿರಿ

ಪ್ರೀತಿಯ ಮಳೆಗೆರೆಯಿರಿ

ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ. ಇದು ಪ್ರತಿ ಅಪ್ಪ ಅಮ್ಮ ಸಹಜವಾಗಿ ತಮ್ಮ ಮಗುವಿನೊಂದಿಗೆ ಹೊಂದಿರುವ ಅನುಬಂಧ.

ಒಟ್ಟಿಗೆ ಕಾಲ ಕಳೆಯಿರಿ

ಒಟ್ಟಿಗೆ ಕಾಲ ಕಳೆಯಿರಿ

ನಿಮಗೆ ಕೆಲಸದೊತ್ತಡವಿರಬಹುದು. ಆದರೆ ಯಾವಾಗಲೂ ನಿಮ್ಮ ಮಗುವಿಗಾಗಿ ಸಮಯ ಮೀಸಲಿಡಿ. ಮಕ್ಕಳೊಂದಿಗೆ ನೀವು ಕಳೆಯುವ ಸಮಯ ನಿಮ್ಮ ಮತ್ತು ಅವರ ನಡುವಿನ ಅನುಬಂಧವನ್ನು ಹೆಚ್ಚಿಸುತ್ತದೆ.

ಯಾವಾಗಲೂ ಗದರಬೇಡಿ

ಯಾವಾಗಲೂ ಗದರಬೇಡಿ

ಒಂದು ವೇಳೆ ನಿಮ್ಮ ಮಗು ಏನಾದರೂ ತಪ್ಪು ಮಾಡಿದರೆ ಅವರನ್ನು ಬೈಯ್ದು ಶಿಕ್ಷಿಸುವ ಬದಲು ಅವರ ತಪ್ಪನ್ನು ಅವರಿಗೆ ಮನದಟ್ಟು ಮಾಡಿಕೊಡಿ.

ಮಕ್ಕಳ ಪಾಲಿಗೆ ರಾಕ್ಷಸರಾಗಬೇಡಿ

ಮಕ್ಕಳ ಪಾಲಿಗೆ ರಾಕ್ಷಸರಾಗಬೇಡಿ

ಮಕ್ಕಳನ್ನು ಬ್ಲಾಕ್ ಮೇಲ್ ಮೂಲಕ ಹೆದರಿಸ ಬೇಡಿ. ಮಕ್ಕಳನ್ನು ಪ್ರೀತಿಯಿಂದ ತಿದ್ದಿ.

ಅವರ ಕಣ್ಣಿರು ಒರೆಸಲು ಸದಾ ಜೊತೆಯಿರಿ

ಅವರ ಕಣ್ಣಿರು ಒರೆಸಲು ಸದಾ ಜೊತೆಯಿರಿ

ಅವರು ಅತ್ತಾಗ ಕಣ್ಣೀರು ಒರೆಸುವ ಕೈ ಯಾವಾಗಲೂ ನಿಮ್ಮದೇ ಆಗಿರಲಿ. ಇದು ಮಕ್ಕಳಿಗೆ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ, ಕಾಳಜಿ ವಹಿಸುತ್ತೀರಿ ಮತ್ತು ಜೊತೆ ನಿಲ್ಲುತ್ತೀರಿ ಎಂದು ತೋರಿಸುತ್ತದೆ.

ಮಾದರಿಯಾಗಿರಿ

ಮಾದರಿಯಾಗಿರಿ

ನಿಮ್ಮ ಮಗುವಿಗೆ ನೀವೇ ಮೊದಲ ಮತ್ತು ಸದಾಕಾಲ ಅನುಸರಿಸಬೇಕಾದ ಮಾದರಿ ವ್ಯಕ್ತಿಗಳಾಗಿರಿ. ನೀವು ಮಾದರಿಯಾಗುವ ಮೂಲಕ ಮಕ್ಕಳಿಗೆ ಸಮಾಜವನ್ನು ಹೇಗೆ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಎದುರಿಸಬೇಕೆಂಬುದನ್ನು ತೋರಿಸುತ್ತೀರಿ.

ಹೋಲಿಕೆ ಮಾಡಬೇಡಿ

ಹೋಲಿಕೆ ಮಾಡಬೇಡಿ

ಪ್ರತಿ ಮಗುವೂ ಅನನ್ಯವೇ ಎಂದೂ ಅದನ್ನು ಮತ್ತೊಂದು ಮಗುವಿನೊಂದಿಗೆ ಹೋಲಿಸಬೇಡಿ. ಮೊದಲು ತಂದೆ ತಾಯಿಗಳು ಹೋಲಿಸುವ ಅಭ್ಯಾಸವನ್ನು ಬಿಡಬೇಕು. ಇದು ನಿಮ್ಮ ಮಗುವಿನ ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅವರ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವುಂಟಾಗುತ್ತದೆ.

ಪ್ರೋತ್ಸಾಹ ನೀಡಿ

ಪ್ರೋತ್ಸಾಹ ನೀಡಿ

ಮಕ್ಕಳನ್ನು ಸದಾಕಾಲ ಪ್ರೋತ್ಸಾಹಿಸಿ. ಇದರಿಂದ ಅವರಿಗೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತದೆ.

ಮಲಗುವಾಗ ಜೊತೆಯಿರಿ

ಮಲಗುವಾಗ ಜೊತೆಯಿರಿ

ನಿಮ್ಮ ಮಲಗುವ ಸಮಯದಲ್ಲಿ ಯಾವಾಗಲೂ ಜೊತೆಯಿರಿ. ಮಗುವನ್ನು ತಟ್ಟುತ್ತಾ ಕತೆ ಹೇಳುವುದು ಅಥವ ಲಾಲಿ ಹಾಡುವುದು ನಿಮ್ಮ ಮತ್ತು ಮಗುವಿನ ಬಾಂಧ್ಯವನ್ನು ಸುಮಧುರವಾಗಿಸುತ್ತದೆ.

English summary

Tips On Being A Good Parent To Your Kids

Do you know what it takes to be a good parent? There are some parents who think that if they are strict, loving and caring it is more than enough to bring up their little children to face the society. From these three things which have been mentioned above that is completely necessary, there are other things too which is important to be a good parent.
Story first published: Tuesday, November 26, 2013, 13:23 [IST]
X
Desktop Bottom Promotion