For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಬೆಡ್ ವೆಟ್ ಮಾಡುವುದನ್ನು ತಡೆಯಬೇಕೆ?

By Super
|

ನಿಮ್ಮ ಮಗು ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಿದ್ದರೆ (ಹಾಸಿಗೆಯಲ್ಲಿ ಮೂತ್ರ ಮಾಡುವ) ನೀವು ಸಾಕಷ್ಟು ಪರಿಹಾರಗಳನ್ನು ಕೇಳಿರುತ್ತೀರಿ.

ಸಂಜೆ 6 ಗಂಟೆಯ ನಂತರ ದ್ರವ ರೂಪದ ಪದಾರ್ಥ ಸೇವಿಸುವುದರಲ್ಲಿ ಮಿತಿಯಿರಲಿ. ಆರೆಂಜ್ ಜ್ಯೂಸ್ / ಕಿತ್ತಳೆ ರಸವನ್ನು ಕುಡಿಯುವುದನ್ನು ತಪ್ಪಿಸಿ. ಖಾರದ ಅಡುಗೆಗಳನ್ನು ಸೇವಿಸದಿರಿ ಹೀಗೆ ಇನ್ನೂ ಹತ್ತು ಹಲವು ಸಲಹೆಗಳನ್ನೂ ಪಡೆದಿರುತ್ತೀರಿ. ಆದರೆ ಈ ಸಲಹೆಗಳನ್ನು ಪಾಲಿಸಿದ ನಿಮಗೆ ನಿಮ್ಮ ಮಗುವಿನಲ್ಲಿ ಪರಿಣಾಮಕಾರಿ ಬದಲಾವಣೆಗಳೇನಾದರೂ ಕಂಡುಬಂದಿದೆಯೇ? ಅವರ ಈ ವರ್ತನೆಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆಯೇ? ನಿಮ್ಮ ಮಗು ಸಂಕೋಚದ ಮನೋಭಾವದಿಂದ ಹೊರಬಂದಿದೆಯೇ?

ನಿಮ್ಮ ಮಗುವನ್ನು ಹಾಸಿಗೆ ಒದ್ದೆ ಮಾಡಿಕೊಳ್ಳುವ ಸಮಸ್ಯೆಯಿಂದ ನಿವಾರಿಸಲು ಸಾಕಷ್ಟು ಪರಿಶ್ರಮವನ್ನು ಪಟ್ಟಿರುತ್ತೀರಿ. ಆದರೆ ನೆನಪಿನಲ್ಲಿಡಿ. ನೀವು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಶೀಘ್ರವಾಗಿ ಪಡೆಯುವುದಕ್ಕಾಗಿ ಅನಾವಶ್ಯಕವಾಗಿ ಮಕ್ಕಳ ಆಹಾರದಲ್ಲಿ ಹಿಡಿತಹಾಕುವುದು, ಬದಲಾವಣೆ ತರುವುದು ಮಾಡಿದರೆ ನಿಮ್ಮ ಅಥವಾ ನಿಮ್ಮ ಮಗುವಿನ ಮುಖದಲ್ಲಿ ಈ ಸಮಸ್ಯೆಯಿಂದ ದೂರವಾಗಿ ಮುಖದಲ್ಲಿ ನಗು ಕಾಣಲು ಸಾಧ್ಯವಿಲ್ಲ.

ಕೆಲವು ಪ್ರಮುಖವಾದ ಆಹಾರಗಳ ವಿಷಯಕ್ಕೆ ಬಂದಾಗ ವೈದ್ಯರು ಅವುಗಳ ಪರಿಣಾಮಗಳಿಂದ ಎಚ್ಚರವಾಗಿರುವಂತೆ ಹೇಳುತ್ತಾರೆ. ಬೆಡ್ ವೆಟ್ಟಿಂಗ ಅಥವಾ nocturnal enuresis (ನಿದ್ದೆಯಲ್ಲಿ ಹಾಸಿಗೆ ತೇವ ಮಾಡಿಕೊಳ್ಳುವುದು) ಉಂಟು ಮಾಡುವ ಆಹಾರಗಳ ಬಗ್ಗೆ ಹೆಚ್ಚಿನ ಪುರಾವೆಗಳಿಲ್ಲದಿದ್ದರಿಂದ ಜಾಗೃತಿ ಅನಿವಾರ್ಯ.

ಮಸಾಲಾ ಆಹಾರ ಮತ್ತು ಬೆಡ್ ವೆಟ್ಟಿಂಗ್ : ಮಿಥ್ಯ

ಮಸಾಲಾ ಆಹಾರ ಮತ್ತು ಬೆಡ್ ವೆಟ್ಟಿಂಗ್ : ಮಿಥ್ಯ

ಮಸಾಲಾ ಆಹಾರಗಳಿಗೂ ಬೆಡ್ ವೆಟ್ಟಿಂಗ್ ಗೂ ಏನಿದೆ ಸಂಬಂಧ? ಮಸಾಲಾಯುಕ್ತ ಆಹಾರಗಳನ್ನು ಸೇವಿಸಿದರೆ ಬೆಡ್ ವೆಟ್ಟಿಂಗ್ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬುದನ್ನು ಇದುವರೆಗೂ ನಂಬುತ್ತಿದ್ದೀರೆ? ಹಾಗಾದರೆ ಈ ಮಿಥ್ಯ ವಿಚಾರವನ್ನು ನಿಮ್ಮ ಮನದಿಂದ ಹೊರದೂಡಲು ಇದೇ ಸರಿಯಾದ ಸಮಯ. ಮಸಾಲೆ ಮಿಶ್ರಿತ ಆಹಾರಗಳು ನಿಮ್ಮ ಮಗುವಿನ ಬೆಡ್ ವೆಟ್ಟಿಂಗ್ ಗೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎನ್ನುತ್ತಾರೆ ತಜ್ಞರು!

ಹೆಚ್ಚು ಖಾರದ ಆಹಾರಗಳನ್ನು ಸೇವಿಸಿದರೆ ಮೂತ್ರಕೋಶದಲ್ಲಿ ಉರಿ ಪ್ರಾರಂಭವಾಗಿ ಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತದೆ ಎಂಬ ಕಾರಣವು ಸುಳ್ಳೇ ಆದರೂ ಕೆಲವು ಜನರು ಈ ಕಾರಣಕ್ಕೆ ಖಾರವನ್ನು ತಿನ್ನುವುದನ್ನು ನಿಲ್ಲಿಸುತ್ತಾರೆ ಹಾಗೂ ಕೆಲವು ವೈದ್ಯರೂ ಕೂಡ ಇಂತಹ ಸಮಸ್ಯೆ ಇರುವವರಿಗೆ ಖಾರ ತಿನ್ನುವುದನ್ನು ವಿರೋಧಿಸುತ್ತಾರೆ. ಆದರೆ ಯಾವ ಸಂಶೋಧನೆಯೂ ಇದುವರೆಗೆ ಮಸಾಲಾ ಆಹಾರಗಳಿಗೂ ಹಾಸಿಗೆ ತೇವಗೊಳ್ಳುವಿಕೆಗೂ ಯಾವುದೇ ರೀತಿಯ ಸಂಬಂಧ ಇರುವುದಕ್ಕೆ ಪುರಾವೆಗಳನ್ನೊದಗಿಸಿಲ್ಲ.

ಸಿಟ್ರಸ್ ಮತ್ತು ಬೆಡ್ ವೆಟ್ಟಿಂಗ್ – ಇನ್ನೊಂದು ಮಿಥ್ಯ

ಸಿಟ್ರಸ್ ಮತ್ತು ಬೆಡ್ ವೆಟ್ಟಿಂಗ್ – ಇನ್ನೊಂದು ಮಿಥ್ಯ

ಮಸಾಲೆ ಆಹಾರ, ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ಮತ್ತು ನಿಂಬೆಹಣ್ಣು - ತಮ್ಮ ಆಮ್ಲತೆ (ಎಸಿಡಿಟಿ) ಕಾರಣದಿಂದ ಮೂತ್ರಕೋಶ ಉದ್ರೇಕಾರಿಗಳಿಗೆ ಕಾರಣವಾಗಬಹುದು. ಆದ್ದರಿಂದ ಕೇವಲ ಈ ಕಾರಣಕ್ಕೆ ನೀವು ನಿಮ್ಮ ಮಗು ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದನ್ನು ವಿರೋಧಿಸಬಹುದು.

ಆದರೆ, ಬಿಸಿ ಮತ್ತು ಮಸಾಲೆ ಆಹಾರದೊಂದಿಗೆ, ಸಿಟ್ರಸ್ ಆಹಾರ ಅಲರ್ಜಿ ಅಪರೂಪದ ಸಂದರ್ಭಗಳಲ್ಲಿ ಹೊರತುಪಡಿಸಿ ಸಿಟೆಸ್ ಹಣ್ಣುಗಳನ್ನು ತಿನ್ನುವುದಕ್ಕೂ ಮತ್ತು ಮಕ್ಕಳು ಹಾಸಿಗೆಯನ್ನು ಒದ್ದೆ ಮಾಡಿಕೊಳ್ಳುವುದಕ್ಕೂ ಯಾವುದೇ ರೀತಿಯ ಸಂಬಂಧವನ್ನು ಯಾವ ವೈದ್ಯಕೀಯ ಸಂಶೋಧನೆಯೂ ಪ್ರಮಾಣೀಕರಿಸಿಲ್ಲ.

ಕೆಫೀನ್ ಮತ್ತು ಬೆಡ್ ವೆಟ್ಟಿಂಗ್ - ಸತ್ಯ

ಕೆಫೀನ್ ಮತ್ತು ಬೆಡ್ ವೆಟ್ಟಿಂಗ್ - ಸತ್ಯ

ಕೆಫೀನ್ ನನ್ನು ಆಹಾರ ಅಥವಾ ಪಾನೀಯ ರೂಪದಲ್ಲಿ ಸೇವಿಸಿದರೆ ಇದು ಹೆಚ್ಚು ಮೂತ್ರ ಉತ್ಪಾದಿಸಲು ಮೂತ್ರಕೋಶವನ್ನು ಪ್ರಚೋದಿಸುತ್ತದೆ ಅಂದರೆ, ಒಂದು ಮೂತ್ರವರ್ಧಕದಂತೆ ವರ್ತಿಸುತ್ತದೆ. ಆದ್ದರಿಂದ, ಬೆಡ್ ವೆಟ್ಟಿಂಗ್ ಪರಿಹಾರಕ್ಕಾಗಿ ಅಪರಾಹ್ನದ ಅಂತ್ಯದಲ್ಲಿ ಮತ್ತು ಸಂಜೆ ಕೆಫೀನ್ ಸೇವನೆಯನ್ನು ತಪ್ಪಿಸಬೇಕೆಂದು ಹಲವು ತಜ್ಞರು ಶಿಫಾರಸು ಮಾಡುತ್ತಾರೆ.

ಕೇವಲ ನಿಮ್ಮ ಮಗುವಿಗಾಗಿ ಕೆಫೀನ್ ವಿರೋಧಿಸಲು ಕಾಫಿ ಕುಡಿಯದಿರುವುದೇ ಉತ್ತಮ. ಚಹಾ, ಕೋಲಾಸ್, ಮತ್ತು ಶಕ್ತಿ ಪಾನೀಯಗಳು ಹೆಚ್ಚಾಗಿ ಕೆಫೀನ್ ಅನ್ನು ಹೊಂದಿರುತ್ತವೆ. ಮತ್ತು ಅನೇಕ ಮಕ್ಕಳ ಪ್ರೀತಿದಾಯಕವಾದ ಆಹಾರ, ಚಾಕಲೇಟ್. ಇದೂ ಸಹ ನಿಕಟವಾಗಿ ಕೆಫೀನ್ ಗೆ ಸಂಬಂಧಿಸಿದ ಒಂದು ರಾಸಾಯನಿಕವನ್ನು ಹೊಂದಿದೆ. ಆದ್ದರಿಂದ ನೀವು ಚಾಕಲೇಟ್ ಮತ್ತು ಬ್ರೌನಿಗಳು ಅಥವಾ ಚಾಕಲೇಟ್ ಐಸ್ ಕ್ರೀಂ ಖಾದ್ಯಗಳ ಬಗ್ಗೆ ಹೆಚ್ಚು ಎಚ್ಚರದಿಂದಿರಿ.

ಮಲಗುವ ಮೊದಲು ದ್ರವ ಸೇವನೆ ಮತ್ತು ಬೆಡ್ ವೆಟ್ಟಿಂಗ್ - ಸತ್ಯ

ಮಲಗುವ ಮೊದಲು ದ್ರವ ಸೇವನೆ ಮತ್ತು ಬೆಡ್ ವೆಟ್ಟಿಂಗ್ - ಸತ್ಯ

ಮೂತ್ರಕೋಶದಲ್ಲಿ ತುಂಬಾ ದ್ರವ ಇರುವುದರಿಂದ ನಿಮ್ಮ ಮಗು ಹಾಸಿಗೆಯಲ್ಲಿ ಒದ್ದೆ ಮಾಡುತ್ತದೆ ಎನ್ನುವ ಒಂದೇ ಕಾರಣವಲ್ಲ.ಇದನ್ನೇ ಇನ್ನೊಂದು ರೀತಿಯಲ್ಲಿ ಯೋಚಿಸಿದರೆ - ಮಕ್ಕಳು ಹಾಸಿಗೆಯಲ್ಲಿ ಮಲಗುವ ಮೊದಲು ಅಧಿಕ ನೀರನ್ನು ಕುಡಿದರೆ ಮೂತ್ರ ಮಾಡಿಸುವುದರಿಂದ ಹಾಸಿಗೆ ಒದ್ದೆಯಾಗುವದನ್ನು ಹೆಚ್ಚು ತಪ್ಪಿಸಬಹುದು.

ಆದಾಗ್ಯೂ ನಿಮ್ಮ ಮಗು ಹಾಸಿಗೆಗೆ ಹೋಗುವ ಮುನ್ನ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿದರೆ ಮುತ್ರಕೋಶದಲ್ಲಿ ನೀರು ತುಂಬುವುದೂ ನಿಧಾನವಾಗುತ್ತದೆ ಎನ್ನುವುದು ಸಾಮಾನ್ಯ ವಿಷಯ. ಆದ್ದರಿಂದ ನಿಮ್ಮ ಮಗು ಹಾಸಿಗೆಯಲ್ಲು ಮೂತ್ರಮಾಡಲು ತಪ್ಪಿಸಲು ನೀವು ಅವರನ್ನು ಎಬ್ಬಿಸಿ ಮೂತ್ರ ಮಾಡಿಸಬಹುದು.

ಬೆಡ್ ವೆಟ್ಟಿಂಗ್ ಕಾರಣವಾದ ಆಹಾರವನ್ನು ಹುಡುಕಲು ಟಿಪ್ಸ್

ಬೆಡ್ ವೆಟ್ಟಿಂಗ್ ಕಾರಣವಾದ ಆಹಾರವನ್ನು ಹುಡುಕಲು ಟಿಪ್ಸ್

ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಬೇರೆ ಬೇರೆಯಾಗಿರುತ್ತಾರೆ. ನೀವು ಮತ್ತು ನಿಮ್ಮ ಮಗು ಇಬ್ಬರೂ ನಿಮ್ಮದೇ ಆದ ರೀತಿಯಲ್ಲಿ ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುವುದಕ್ಕೆ ಕಾರಣವಾದ ಆಹಾರವನ್ನು ತಿಳಿಯಲು ಬಯಸಬಹುದು.

ಬೆಡ್ ವೆಟ್ ತಡೆಯಲು ಟಿಪ್ಸ್

ಬೆಡ್ ವೆಟ್ ತಡೆಯಲು ಟಿಪ್ಸ್

ತಜ್ಞರು ಬೆಡ್ ವೆಟ್ಟಿಂಗ್ ಆದ ದಿನ ಸಮಯವನ್ನು ಸಾಮಾನ್ಯವಾಗಿ ದಾಖಲೆ ಇಡಲು ಹೇಳುತ್ತಾರೆ. ಇದು ಅವರ ವೈದ್ಯಕೀಯ ಚಿಕಿತ್ಸೆಗೆ ಸಾಕಷ್ಟು ಅನುಕೂಲವಾಗುತ್ತದೆ.

ಕೆಲವು ಮಕ್ಕಳು ತಮ್ಮ ಬೆಡ್ ವೆಟ್ಟಿಂಗ್ ಗೆ ಕಾರಣವಾದ ಪ್ರಚೋದರ ಆಹಾರಗಳ್ಯಾವವು? ರಾತ್ರಿಯಿಡಿ ತೇವಮುಕ್ತರಾಗಲು ಏನು ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ತಿಳಿಯಲು ಬಯಸುತ್ತಾರೆ ಇದು ಅವರ ಬಗ್ಗೆ ಅವರು ತಿಳಿಯಲು ಸಹಾಯಕವಾಗಬಹದು. ಸಹಾಯಕವಾಗುವಂತಹ ಎರಡು ಅಂಶಗಳು :

ಮಕ್ಕಳಿಗೆ ತಮ್ಮ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ಅಲ್ಲದೇ ಮಕ್ಕಳು ತಮ್ಮ ಬೆಡ್ ವೆಟ್ಟಿಂಗ್ ಸಮಸ್ಯೆಯ ಕಾರಣವನ್ನು ಅರಿತು ಅದರಿಂದ ಹೊರಬರಲು ತಾವೇ ಸ್ವತಃ ಪ್ರಯತ್ನಿಸಬಹುದು.

ಅವರು ಬೆಡ್ ವೆಟ್ಟಿಂಗ್ ಪ್ರಚೋದಕ ಆಹಾರವನ್ನು ಕಂಡು ಹಿಡಿದರೆ ಅದರಿಂದ ದೂರವುಳಿಯಬಹುದು. ಅಂತಹ ಆಹಾರವನ್ನು ಸೇವಿಸದೇ ಇರಬಹುದು.

ಬೆಡ್ ವೆಟ್ಟಿಂಗ್ ತಡೆಯಲು ಯೋಜನೆಗಳು

ಬೆಡ್ ವೆಟ್ಟಿಂಗ್ ತಡೆಯಲು ಯೋಜನೆಗಳು

ನಿಮ್ಮ ಮಗುವನ್ನು ಹಾಸಿಗೆ ಒದ್ದೆ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯತ್ನ ಮಾಡಿದ್ದಲ್ಲಿ ಸಂಜೆ ಸವಿಯುವ ಕೆಲವು ಆಹಾರಗಳನ್ನು ತಪ್ಪಿಸಲು ನಿರ್ಧಾರ ಮಾಡಬಹುದು. ಆದರೆ ಆಹಾರ ಬದಲಾವಣೆಗಳು ನಿಮ್ಮ ಮಗುವಿನ ಬೆಡ್ ವೆಟ್ಟಿಂಗ್ ವರ್ತನೆಗೆ ಶಿಕ್ಷೆಯಾಗದಿರಲಿ!

ಬೆಡ್ ವೆಟ್ ಮಾಡುವುದನ್ನು ತಡೆಯಲು ಟಿಪ್ಸ್

ಬೆಡ್ ವೆಟ್ ಮಾಡುವುದನ್ನು ತಡೆಯಲು ಟಿಪ್ಸ್

ಹಾಸಿಗೆ ತೇವಮಾಡಿಕೊಳ್ಳುವ ಹಲವಾರು ಮಕ್ಕಳು, ವಿಶೇಷವಾಗಿ ಹಿರಿಯ ಮಕ್ಕಳು ಸಂಕೋಚ ಮತ್ತು ನಾಚಿಕೆಗೊಳಗಾಗಿರುತ್ತಾರೆ. ಮತ್ತು, ಕೆಲವೊಮ್ಮೆ, ಪೋಷಕರು ಹೆಚ್ಚು ಹತಾಶೆಗೊಂಡು ತೋರಿಕೆಗೆ ಮಾತ್ರ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿ ಕೊನೆಗೆ ಕೋಪಗೊಳ್ಳುತ್ತಾರೆ. ಇದು ಮಕ್ಕಳಲ್ಲಿ ಮಾನಸಿಕವಾಗಿ ವೇದನೆಯನ್ನು ಉಂಟು ಮಾಡಬಹುದು ಮತ್ತು ಅವರು ಹಾಸಿಗೆ ತೇವ ಮಾಡುವ ಸಾಧ್ಯತೆಗಳೂ ಹೆಚ್ಚಬಹುದು. ಆದ್ದರಿಂದ ನಿಮ್ಮ ಪ್ರಯತ್ನ ಮಕ್ಕಳಲ್ಲಿ ಆತಂಕಕ್ಕೆ ಕಾರಣವಾಗಬಲ್ಲದು.

ಆದ್ದರಿಂದ, ಇದು ನಿಮ್ಮ ಮಗುವಿಗೆ, ನೀವು ಪ್ರಯತ್ನಿಸುತ್ತಿರುವ ತಂತ್ರಗಳು ಅವರ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿರುವುದೇ ಹೊರತು ಅವರ ವರ್ತನೆಯ ಪರಿಣಾಮವಲ್ಲ ಎಂಬುದನ್ನು ಮಕ್ಕಳಿಗೆ ಮೊದಲು ಮನವರಿಕೆ ಮಾಡಿ. ಇದರಿಂದ ಅವರ ಮನಸ್ಸಿನಲ್ಲೂ ಗೊಂದಲಗಳಿರುವುದಿಲ್ಲ.

English summary

Dinner and Nighttime Snacks That Can Cause Wet Nights

If you have a child who wets the bed, you’ve probably heard lots of rumors about nutritional bedwetting solutions.
X
Desktop Bottom Promotion