For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿಗೆ ಕಾಸ್ಟ್ಯೂಮ್ ಐಡಿಯಾ

|

ಕೃಷ್ಣ ಜನ್ಮಾಷ್ಟಮಿಯೆಂದು ಚಿಕ್ಕ ಮಕ್ಕಳಿಗೆ ಕೃಷ್ಣನ ರೀತಿಯಲ್ಲಿ ವೇಷ ಮಾಡಿ, ಬಹಳ ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುವುದು. ಕೆಲವೊಂದು ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ದಿನ ಮಕ್ಕಳಿಗೆ ಕೃಷ್ಣನ ರೀತಿಯಲ್ಲಿ ಫ್ಯಾನ್ಸಿ ಡ್ರೆಸ್ ಮಕ್ಕಳನ್ನು ಕರೆದುಕೊಂಡು ಬರಲು, ಮಕ್ಕಳ ಡೈರಿಯಲ್ಲಿ ಬರೆದು ಕಳಿಸುತ್ತಾರೆ.

ನೀವು, ಮಗುವಿಗೆ ಕೃಷ್ಣ ಜನ್ಮಾಷ್ಟಮಿ ದಿನದಂದು ಅಲಂಕಾರ ಮಾಡಲು ಕಾಸ್ಟ್ಯೂಮ್ ಗಳನ್ನು ಕೊಳ್ಳಲು ಹೋಗಬೇಕು ಎಂದು ಯೋಚಿಸುತ್ತಿದ್ದರೆ, ಇಲ್ಲಿ ನಾವು ನಿಮ್ಮ ಮಗುವನ್ನು ಮುದ್ದು ಕೃಷ್ಣನ ರೂಪದಲ್ಲಿ ನೋಡಲು ಏನೆಲ್ಲಾ ವಸ್ತುಗಳನ್ನು ಕೊಳ್ಳಬೇಕೆಂಬ ಕಾಸ್ಟ್ಯೂಮ್ ಐಡಿಯಾ ನೀಡಿದ್ದೇವೆ ನೋಡಿ:

Baby Krishna Costumes For Janmashtami

ಧೋತಿ ಅಥವಾ ಪಂಚೆ
ಧೋತಿ ಕೊಳ್ಳುವಾಗ ರೇಷ್ಮೆಯ ಬಟ್ಟೆಯ ಧೋತಿ ಕೊಳ್ಳಿ. ಅದರ ಬಾರ್ಡರ್ ಜರಿಯಿಂದ ಕೂಡಿರಲಿ. ನಿಮಗೆ ಧೋತಿಯನ್ನು ಸರಿಯಾಗಿ ಉಡಿಸಲು ಬರದಿದ್ದರೆ ರೆಡಿ ಮೇಡ್ ಸಿಗುತ್ತದೆ, ಅದನ್ನು ಕೊಳ್ಳಿ, ಒಟ್ಟಿನಲ್ಲಿ ನಿಮ್ಮ ಬಾಲಕೃಷ್ಣ ಕೃಷ್ಣನ ವೇಷದಲ್ಲಿ ಕಂಫರ್ಟ್ ಆಗಿರಲಿ.

ಕಿರೀಟ
ಕಿರೀಟ ಅನೇಕ ವಿನ್ಯಾಸದಲ್ಲಿ ದೊರೆಯುತ್ತದೆ. ಆದರೆ ನೋಡಲು ಆಕರ್ಷಕವಾಗಿರುವ, ಅಧಿಕ ಭಾರವಿಲ್ಲದ ಕಿರೀಟಕೊಳ್ಳಿ. ವಿನ್ಯಾಸ ಚೆನ್ನಾಗಿದೆಯೆಂದು ಸ್ವಲ್ಪ ಕಲ್ಲುಗಳು ಅಧಿಕವಿರುವ ಕಿರೀಟ ಕೊಂಡರೆ ಮಗುವಿಗೆ ತಲೆ ಭಾರವಾಗಬಹುದು.

ನವಿಲುಗಿರಿ
ಪುಟ್ಟದಾದ ಆಕರ್ಷಕವಾದ ನವಿಲು ಗಿರಿಯನ್ನು ಕೊಳ್ಳಿ. ನವಿಲು ಗಿರಿ ಇಲ್ಲದಿದ್ದರೆ ಕೃಷ್ಣನ ವೇಷ ಪೂರ್ಣವಾಗುವುದಿಲ್ಲ.

ಆಭರಣಗಳು

ನಿಮ್ಮ ಬಾಲ ಕೃಷ್ಣನನ್ನು ಆಭರಣಗಳಿಂದ ಅಲಂಕರಿಸಿ. ಕೊಳಲು ಕೈಯಲ್ಲಿ ಹಿಡಿಯಲು ಒಂದು ಕೊಳಲು ಇರಲಿ. ಮಗುವಿಗೆ ಕೃಷ್ಣನ ಡ್ರೆಸ್ ಮಾಡಿ, ಕೈಯಲ್ಲಿ ಕೊಳಲು ಕೊಟ್ಟರೆ ನಿಮ್ಮ ಬಾಲಕೃಷ್ಣ ಸಾಕ್ಷಾತ್ ಕೃಷ್ಣನಂತೆ ಕಂಗೊಳಿಸುತ್ತಾನೆ.

English summary

Baby Krishna Costumes For Janmashtami

So Krishna costumes are something that parents can take a look at before Janmashtami. It is important to know the salient features of a baby Krishna outfit first. Here are some of the main elements of Krishna costumes for kids.
Story first published: Monday, August 26, 2013, 18:04 [IST]
X
Desktop Bottom Promotion