For Quick Alerts
ALLOW NOTIFICATIONS  
For Daily Alerts

ಈ 8 ಔಷಧಿಗಳನ್ನು ಎಳೆಯಮಕ್ಕಳಿಗೆ ಕೊಡಬೇಡಿ

By Super
|

ಅಂಬೆಗಾಲಿಡುವ ಮಕ್ಕಳು ಮತ್ತು ಶಿಶುಗಳಿಗೆ ಔಷಧಿ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಪ್ರತಿರೋಧಕ ಶಕ್ತಿಯು ಶಿಶುಗಳಿಗೆ ಇನ್ನೂ ಕಮ್ಮಿಯಿರುವುದರಿಂದ ಔಷಧಿಗಳು ಅವುಗಳಿಗೆ ಸೂಕ್ಷ್ಮ ಜೀವಾಣುಗಳು ಮತ್ತೂ ದುರ್ಬಲತೆಯನ್ನು ಹೆಚ್ಚುಮಾಡುತ್ತದೆ. ಆದರೂ, ಪೋಷಕರು, ಅವರಿಗೆ ಒಂದು ನೈಸರ್ಗಿಕ ಔಷಧ ಅಥವಾ ಗಿಡಮೂಲಿಕೆಯ ಔಷಧಿಗಳನ್ನು ನೀಡುವುದರಲ್ಲೂ ಸಹ ಬಹಳಷ್ಟು ಎಚ್ಚರದಿಂದ ಇರಬೇಕು.

ನಿಮ್ಮ ಅಂಬೆಗಾಲಿಡುವ ಮಕ್ಕಳು ಅನೇಕವೇಳೆ ಶೀತ ಮತ್ತು ಕೆಮ್ಮುಗಳಿಗೆ ಸುಲಭವಾಗಿ ಒಳಗಾಗುವ ಸಾಧ್ಯತೆಗಳು ಹೆಚ್ಚು. ಆದರೆ 6 ವರ್ಷಗಳಿಗೆ ಒಳಗಿರುವ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ಕೊಡುವುದು ಅತ್ಯಂತ ಅಪಾಯಕಾರಿ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(American Academy of Pediatrics) ಪ್ರಕಾರ, ಶಿಶುಗಳಿಗೆ ಔಷಧಿಗಳ ಪ್ರಯೋಗವು ನಿರರ್ಥಕವಾಗುವುದಲ್ಲದೆ ಮಿತಿಮೀರಿದ ಸೇವನೆಯಾಗಿ ಪರಿಣಮಿಸಬಹುದು.

1. ಆಸ್ಪಿರಿನ್ (Aspirin)

1. ಆಸ್ಪಿರಿನ್ (Aspirin)

ನಿಮ್ಮ ವೈದ್ಯರ ಸೂಚನೆಗಳ ಮೇರೆ ಹೊರತುಪಡಿಸಿ, ಆಸ್ಪಿರಿನ್ ಅಥವಾ ಆಸ್ಪಿರಿನ್ ಹೊಂದಿರುವ ಔಷಧಿಗಳನ್ನು ಮಕ್ಕಳಿಗೆ ನಿಷೇಧಿಸಿ. ಆಸ್ಪಿರಿನ್ ಸೇವನೆಯಿಂದ ರೇಯೆ ರೋಗಲಕ್ಷಣ ಬಂದು ಮೂತ್ರಕೋಶ(Kidney) ಮತ್ತು ಮೆದುಳುಗಳಿಗೆ ಹಾನಿಯಾಗಬಲ್ಲದು.

ಔಷಧಿ ಅಂಗಡಿಗಳಲ್ಲಿ ದೊರಕುವ ಔಷಧಿಗಳಲ್ಲಿ ಆಸ್ಪಿರಿನ್ ಇಲ್ಲದೇಇರುವುದೆಂದು ಊಹೆಮಾಡಬೇಡಿ ಹಾಗೂ ಅವುಗಳ ಲೇಬಲ್ಮೇಲೆ ಬರೆದಿರುವುದನ್ನು ಗಂಭೀರವಾಗಿ ಓದಬೇಕು. ಆಸ್ಪಿರಿನ್ನನ್ನು ಕೆಲವೊಮ್ಮೆ ಸ್ಯಾಲಿಸಿಲಿಕ್ ಅಥವಾ ಅಸಿಟಿಲ್ಸ್ಯಾಲಿಸಿಲಿಕ್ ಆಸಿಡ್ ಎಂದು ಬರೆದಿರುತ್ತಾರೆ. ಜ್ವರಕ್ಕೆ ಪ್ಯಾರಾಸೆಟಮಾಲ್ ಅಥವಾ ಇಬುಪ್ರೋಫೆನ್ ಇರುವ ಔಷಧಿಯನ್ನು 6 ವರ್ಷದ ಮೇಲಿರುವ ಮಕ್ಕಳಿಗೆ ಕೊಡಬಹುದು.

2. ಕೆಮ್ಮು ಮತ್ತು ಶೀತಕ್ಕೆ ಮುಕ್ತವಾಗಿ ಮಾರಾಟವಾಗುವ ಔಷಧಿಗಳು

2. ಕೆಮ್ಮು ಮತ್ತು ಶೀತಕ್ಕೆ ಮುಕ್ತವಾಗಿ ಮಾರಾಟವಾಗುವ ಔಷಧಿಗಳು

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಸಿಯನ್ಸ್ ಸದಸ್ಯರಾದ ಮಕ್ಕಳ ವೈದ್ಯರು(Pediatrician) ಶಿಶುಗಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ಕೊಡುವುದನ್ನು ನಿಷೇಧಿಸುತ್ತಾರೆ. ಈ ಔಷಧಿಗಳ ಬಳಕೆಯಿಂದ ಸಾಮಾನ್ಯವಾಗಿ ವಾಸಿಯಾಗುವುದಿಲ್ಲ ಹಾಗೂ ಮಿತಿಮೀರಿದ ಸೇವನೆಯಿಂದ ಅಪಾಯಕಾರಿಯೂ ಹೌದು.

ಈ ಔಷಧಿಗಳ ಪರಿಣಾಮವನ್ನು ಗಮನಿಸಬೇಕಾದ ಅಂಶಗಳೆಂದರೆ ಅರೆನಿದ್ರಾವಸ್ತೆ, ಹೊಟ್ಟೆ ನೋವು, ಗುಳ್ಳೆ(ದದ್ದು), ಹೃದಯ ಬಡಿತವನ್ನು ಹೆಚ್ಚಿಸುವುದು.

ಪ್ರತಿವರ್ಷವೂ ಮನೆಯಲ್ಲಿ ಕೆಮ್ಮು ಮತ್ತು ಶೀತಕ್ಕೆ ಔಷಧಿ ತೆಗೆದುಕೊಳ್ಳುವುದರಿಂದ ಸಾವಿರಾರು ಶಿಶುಗಳು ಆಸ್ಪತ್ರೆಗೆ ಸೇರಿಸಲಾಗುತ್ತಿದೆ.

3. ವಾಕರಿಕೆ-ವಿರೋಧಿ ಔಷಧಿಗಳು

3. ವಾಕರಿಕೆ-ವಿರೋಧಿ ಔಷಧಿಗಳು

ವೈದ್ಯರ ನಿರ್ದಿಷ್ಟವಾದ ಶಿಫಾರಿಸು ಇಲ್ಲದೆ ವಾಕರಿಕೆ-ವಿರೋಧಿ ಔಷಧಿಗಳನ್ನು ಕೊಡಬೇಡಿ. ಸಾಧಾರಣವಾಗಿ ವಾಕರಿಕೆ ರೋಗಲಕ್ಷಣಗಳು ಶಿಶುಗಳಲ್ಲಿ ತಾತ್ಕಾಲಿಕವಾಗಿರುತ್ತದೆ ಮತ್ತು ಅವರ ಶರೀರವು ಔಷಧಿಯ ಸೇವನೆ ಇಲ್ಲದೆಯೇ ನಿಭಾಯಿಸಲು ಸಾಧ್ಯವಾಗುತ್ತದೆ. ಇನ್ನೊಂದುರೀತಿಯಲ್ಲಿ ನೋಡಿದರೆ, ವಾಕರಿಕೆ-ವಿರೋಧಿ ಔಷಧಿಗಳು ಇಲ್ಲದ ತೊಂದರೆಗಳಿಗೆ ಕಾರಣವಾಗಬಹುದು. ಶಿಶುವು ವಾಂತಿಮಾಡುತಿದ್ದರೆ ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ದ್ರವದ ಪದಾರ್ಥಗಳನ್ನು ನೀಡಿ.

4. ವಯಸ್ಕರ ಔಷಧಿ

4. ವಯಸ್ಕರ ಔಷಧಿ

ವಯಸ್ಕರ ಔಷಧಿಯನ್ನು ಸಣ್ಣ ಪ್ರಮಾಣದಲ್ಲಿ ಸಣ್ಣಮಕ್ಕಳಿಗೆ ಕೊಡಲೇಬೇಡಿ. ಆದಲ್ಲದೆ ಶಿಶುಗಳ ಔಷಧಿಯಲ್ಲಿ ಮಕ್ಕಳಿಗೆ ಕೊಡುವ ಔಷಧಿಗಳಿಗಿಂತ ಸಾಮಾನ್ಯವಾಗಿ ದಟ್ಟವಾದ ಸಾಂದ್ರತೆ ಇರುತ್ತದೆ. ಇದರಿಂದಾಗಿ ನೀವು ಬಹಳ ಎಚ್ಚರಿಕೆಯಿಂದಿರಬೇಕು.

5. ಬೇರೆ ಮಗುವಿಗೆ ಶಿಫಾರಸುಮಾಡಿರುವ ಔಷಧಿ

5. ಬೇರೆ ಮಗುವಿಗೆ ಶಿಫಾರಸುಮಾಡಿರುವ ಔಷಧಿ

ತನ್ನ ಸಹೋದರನೂ ಸೇರಿ ಬೇರೆ ಮಕ್ಕಳಿಗೆ ಶಿಫಾರಸು ಮಾಡಿರುವ ಔಷಧಿಗಳನ್ನು, ಪರಿಣಾಮಕಾರಿಯಲ್ಲದಿದ್ದರೂ ನಿಮ್ಮ ಮಕ್ಕಳಿಗೆ ಅಪಾಯಕಾರಿಯಾಗಿರುತ್ತದೆ. ನಿಮ್ಮ ಮಗುವಿಗೆ ಶಿಫಾರಸು ಮಾಡಿದ ಔಷಧಿಯನ್ನೇ ಕೊಡಿ.

6. ಹಳೆಯ ಕಾಲಾವಧಿ ಮೀರಿದ ಔಷಧಿಗಳು

6. ಹಳೆಯ ಕಾಲಾವಧಿ ಮೀರಿದ ಔಷಧಿಗಳು

ನಿಮ್ಮ ಕಾಲಾವಧಿ ಮೀರಿದ ಔಷಧಿಗಳನ್ನು ತಕ್ಷಣವೇ ತೆಗೆದು ಬಿಸಾಕಿ. ಬಣ್ಣ ಬದಲಾಗಿರುವ ಔಷಧಿಗಳನ್ನೂ ಸಹ ತೆಗೆದು ಬಿಸಾಕಿ. ಕಾಲಾವಧಿ ಮೀರಿದ ಔಷಧಿಗಳು ಕೆಲಸಮಾಡುವುದಿಲ್ಲ ಮತ್ತು ಅಪಾಯಕಾರಿಯೂ ಆಗಿರುತ್ತವೆ.

7. ಅಧಿಕ ಅಸೆಟಾಮಿನೋಫೆನ್

7. ಅಧಿಕ ಅಸೆಟಾಮಿನೋಫೆನ್

ಅಸೆಟಾಮಿನೋಫೆನ್ ಇರುವ ಹಲವಾರು ರೀತಿಯ ಔಷಧಿಗಳು ಜ್ವರ ಮತ್ತು ನೋವನ್ನು ಕಡಿಮೆಮಾಡುತ್ತದೆ. ಆದರೆ ಈ ಔಷಧಿಗಳನ್ನು ಶಿಶುಗಳಿಗೆ ಕೊಡುವ ಮುನ್ನ ಜ್ವರದ ಔಷಧಿಯಿಂದ ದೂರ ಮಾಡಿ. ನಿಮಗೆ ಖಚಿತವಾಗಿ ತಿಳಿಯದಿದ್ದರೆ, ತಕ್ಷಣವೇ ಔಷಧಿ ಮಾರಿದ ಅಂಗಡಿಯವನ್ನಾದರೂ(Pharmacist) ಅಥವಾ ವೈದ್ಯರನ್ನಾದರೂ ಕೇಳಿ.

8. ಮೆಲ್ಲುವ ಔಷಧಿ (ಮಾತ್ರೆ)

8. ಮೆಲ್ಲುವ ಔಷಧಿ (ಮಾತ್ರೆ)

ಮೆಲ್ಲುವ ಔಷಧಿಗಳು ಕೆಲವು ಮಕ್ಕಳಿಗೆ ಗಂಟಲಲ್ಲಿ ಸಿಕ್ಕಿಕೊಂಡು ಉಸಿರು ಕಟ್ಟುವ ಸಾಧ್ಯತೆಗಳಿವೆ. ನಿಮ್ಮ ಮಕ್ಕಳು ಗಟ್ಟಿ ಅಹಾರ ಸೇವಿಸುವವರಾಗಿದ್ದರೆ ಮತ್ತು ನೀವು ಆ ಮಕ್ಕಳಿಗೆ ಮಾತ್ರೆ ಕೊಡಬೇಕೆಂದಿದ್ದರೆ, ಅದನ್ನು ಪುಡಿಮಾಡಿ ಮೆತ್ತಗಿರುವ ಆಹಾರದಲ್ಲಿ ಮಿಶ್ರಣಮಾಡಿ ಕೊಡಬಹುದೇ ಎಂದು ನಿಮ್ಮ ವೈದ್ಯರು ಅಥವಾ ಔಷಧಿ ವಿತರಣೆಮಾಡಿದ ಅಂಗಡಿಯವನಲ್ಲಿ ವಿಚಾರಿಸಿ ಮುಂದುವರಿಸಿ.

English summary

8 Drugs That Should be Avoided Given to Babies

Your toddler is often susceptible to colds and coughs. But giving cough and cold medicines in children under 6 years old is very dangerous. According to the American Academy of Pediatrics, the drug administration has not been proven effective in infants and cause an overdose.
X
Desktop Bottom Promotion