For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಈ ಮಾತುಗಳನ್ನು ತಪ್ಪಿಯೂ ಹೇಳಬೇಡಿ!

|
4 Things You Should Not Say With Your Kids
ಪೋಷಕರು ಮಕ್ಕಳಲ್ಲಿ ಮಾತನಾಡುವಾಗ ಆಲೋಚಿಸಿ ಮಾತನಾಡಬೇಕು. ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು , ನಿಮ್ಮ ಮಾತುಗಳಗಳು ತುಂಬಾ ಹರಿತವಾಗಿದ್ದರೆ ಆ ಸೂಕ್ಷ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ. ಮಕ್ಕಳು ಮಾಡುವ ತಪ್ಪುಗಳನ್ನು ತಾಳ್ಮೆಯಿಂದ ತಿಳಿ ಹೇಳಬೇಕು, ಬೈಯ್ದು ಹೇಳುವುದಕ್ಕಿಂತ, ಪ್ರೀತಿಯಿಂದ ಹೇಳಿದರೆ ಮಕ್ಕಳು ತಿದ್ದಿಕೊಳ್ಳುವುದು ಜಾಸ್ತಿ.

ಮಕ್ಕಳ ಮತ್ತು ನಿಮ್ಮ ಸಂಬಂಧ ಸುಂದರವಾಗಿರಬೇಕೆಂದರೆ ಮಕ್ಕಳ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು. ನಿಮಗೆ ಮಕ್ಕಳನ್ನು ಕಂಡರೆ ಆಗುವುದಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮೊಳಕೆಯೊಡೆಯಲು ಬಿಡಬಾರದು. ಸುಮ್ಮನೆ ಯಾವಾಗಲು ಬೈಯುವುದು, ಹೊಡೆಯುವುದು ಮಾಡುತ್ತಿದ್ದರೆ ಇವರು ಯಾವಾಗಲೂ ಹೀಗೆನೆ ನನ್ನ ಕಂಡರೆ ಆಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಬೆಳೆಸಿಕೊಂಡು ಬಿಡುತ್ತಾರೆ. ಅಲ್ಲದೆ ಮುಂದೆ ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳಲು ಪ್ರಯತ್ನಿಸಿದರೂ ಕೇರ್ ಮಾಡುವುದಿಲ್ಲ. ಅದರಲ್ಲೂ ಮಕ್ಕಳೊಂದಿಗೆ ಈ ಕೆಳಗಿನಂತೆ ಯಾವತ್ತೂ ಹೇಳಬೇಡಿ.

1. ನನಗೆ ನಿಮ್ಮ ಮಾತು ಕೇಳಲು ಪುರುಸೊತ್ತು ಇಲ್ಲ: ನಿಮಗೆ ತುಂಬಾ ಕೆಲಸದ ಒತ್ತಡವಿರುತ್ತದೆ ನಿಜ. ಆದರೆ ನಿಮ್ಮ ಮಕ್ಕಳಿಗೆ ಅದು ಗೊತ್ತಿರುವುದಿಲ್ಲ. ಅವುಗಳು ಶಾಲೆಯಲ್ಲಿ ನಡೆದ ಪ್ರತಿಯೊಂದು ವಿಷಯವನ್ನು ನಿಮಗೆ ಹೇಳಲು ಇಷ್ಟಪಡುತ್ತಾರೆ. ಆಗ ನನಗೆ ಪುರುಸೊತ್ತು ಇಲ್ಲ, ನೀ ಸುಮ್ಮನೆ ಹೋಗು ಅಂತ ಮಾತ್ರ ಹೇಳಬೇಡಿ, ಆ ರೀತಿ ಮಾಡಿದರೆ ಮಗುವಿನ ಮನಸ್ಸಿಗೆ ತುಂಬಾ ನೋವಾಗುತ್ತದೆ, ಮುಂದೆ ಮಕ್ಕಳು ಏನನ್ನೂ ನಿಮಗೆ ಹೇಳಲು ಇಷ್ಟಪಡುವುದಿಲ್ಲ. ಆ ರೀತಿಯಾದರೆ ಮಕ್ಕಳು ಏನು ಮಾಡುತ್ತಿದ್ದರೆ ಎಂದು ತಿಳಿಯುವುದಿಲ್ಲ, ಕೆಲವೊಮ್ಮೆ ಕೆಟ್ಟ ಹಾದಿಯನ್ನು ಕೂಡ ತುಳಿಯಬಹುದು. ಆದ್ದರಿಂದ ಮಕ್ಕಳು ಹೇಳುವುದನ್ನು ಕೇಳಿ, ಆಗ ಮಕ್ಕಳಿಗೆ ನಿಮ್ಮಲ್ಲಿ ಆತ್ಮೀಯತೆ ಹೆಚ್ಚಾಗುವುದು.

2. ವಯಸ್ಸಿಗೆ ತಕ್ಕ ರೀತಿ ಇರು: ಮಕ್ಕಳು ಪೋಷಕರ ಹತ್ತಿರ ಬಾಲಿಷವಾಗಿಯೇ ಆಡುತ್ತಾರೆ. 10 ವರ್ಷದ ಮಗಳು 5 ವರ್ಷದ ಹುಡುಗಿ ತರ ಆಡುತ್ತಿದ್ದರೆ ನಿನ್ನ ವಯಸ್ಸುಗೆ ತಕ್ಕ ಹಾಗೆ ಇರಲು ಕಲಿ ಅತ ಬೈಯುವುದು ಸರಿಯಲ್ಲ. ಮಕ್ಕಳು ಏನಾದರೂ ಮಾಡಿ, ಅದು ನಿಮಗೆ ತುಂಬಾ ಕಿರಿಕಿರಿಯನ್ನು ಉಂಟು ಮಾಡಿದ್ದರೂ ಆ ಕ್ಷಣ ಪ್ರತಿಕ್ರಿಯೆಸಲು ಹೋಗಬೇಡಿ. ನಂತರ ನಿಧಾನಕ್ಕೆ ಹೇಳಿ ನೀನು ಮಾಡುವುದು ಸರಿಯಿಲ್ಲ ಅಂತ ಅವು ತಿದ್ದಿ ಕೊಳ್ಳುತ್ತವೆ.

3. ನಿನಗೇನು ಅರ್ಥವಾಗಲ್ವಾ?: ಮಕ್ಕಳಿಗೆ ಏನಾದರೂ ಪಾಠ ಹೇಳಿ ಕೊಡುವಾಗ ತುಂಬಾ ಸಲ ಹೇಳಿ ಕೊಟ್ಟರೂ ಪುನಃ ತಪ್ಪು ಮಾಡುವಾಗ ನಿನಗೇನು ಅರ್ಥವಾಗಲ್ವಾ? ಅಂತ ಕೇಳ ಬೇಡಿ. ಮಕ್ಕಳಿಗೂ ತಂದೆ, ತಾಯಿ ಹತ್ತಿರ ಭೇಷ್ ಅನ್ನಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಮಕ್ಕಳಿಗೆ ಮತ್ತೊಮ್ಮೆ ಟ್ರೈ ಮಾಡು ಅಂತ ಹೇಳಬೇಕೆ ಹೊರತು ಇನ್ನೂ ಅರ್ಥವಾಗಿಲ್ವಾ? ಅಂತ ಕೇಳಬೇಡಿ.

4. ನಿನ್ನ ಬಿಟ್ಟು ಹೋಗುತ್ತೇನೆ: ಮಕ್ಕಳಿಗೆ ಈ ಮಾತು ಯಾವತ್ತಿಗೂ ಹೇಳಬೇಡಿ. ನಿಮ್ಮ ಬಿಟ್ಟು ಹೋಗಿ ಬಿಡುತ್ತೇನೆ, ನೀನು ನನಗೆ ಬೇಡ ಎಂದು ಹೇಳಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಲಾರಂಭಿಸುತ್ತಾರೆ. ಮಕ್ಕಳು ಹೋಂ ವರ್ಕ್ ಮಾಡದಿದ್ದಾಗ ಅಥವಾ ಮಾರ್ಕ್ಸ್ ತುಂಬಾ ತೆಗೆಯದಿದ್ದಾಗ ಕೆಲ ಪೋಷಕರು ಈ ರೀತಿ ಮಕ್ಕಳನ್ನು ಭಯಪಡಿಸುತ್ತಾರೆ. ಆದರೆ ಆ ರೀತಿ ಮಾಡುವುದು ತುಂಬ ತಪ್ಪು. ಮಕ್ಕಳೊಂದಿಗೆ ಆತ್ನೀಯವಾಗಿ ವರ್ತಿಸಿ ಆಗ ಅವರು ನೀವು ಹೇಳಿದಂತೆ ಕೇಳುವುದು.

English summary

4 Things You Should Not Say With Your Kids | Tips For Parents | ಮಕ್ಕಳಿಗೆ ಹೇಳಲೇಬಾರದು 4 ವಿಷಯಗಳು | ಪೋಷಕರಿಗೆ ಕೆಲ ಸಲಹೆಗಳು

How parents communicate with their kids directly impacts the parent-child relationship. And it's the simple statements parents make, usually in a moment of frustration with their young children, which can cause the most damage later on.
Story first published: Friday, June 15, 2012, 10:08 [IST]
X
Desktop Bottom Promotion