For Quick Alerts
ALLOW NOTIFICATIONS  
For Daily Alerts

ಜ್ವರ ಬಂದ ಮಕ್ಕಳಿಗೆ ಪಥ್ಯ ಆಹಾರಕ್ರಮ

|
Foods To Feed Kids during Fever
ಚಳಿಗಾಲದಲ್ಲಿ ಶೀತ,ಕೆಮ್ಮು , ಜ್ವರದಂತಹ ಸಮಸ್ಯೆಗಳು ಮಕ್ಕಳಲ್ಲಿ ಸಾಮಾನ್ಯ. ಅದರಲ್ಲೂ ಜ್ವರ ಬಂತು ಅಂದರೆ ಮಕ್ಕಳು ಊಟ ಸರಿಯಾಗಿ ಮಾಡುವುದಿಲ್ಲ. ಹಾಗಂತ ಮಕ್ಕಳು ತಿನ್ನದೆ ಇದ್ದರೆ ಸುಸ್ತು ಹೆಚ್ಚಾಗುವುದು, ಆದ್ದರಿಂದ ಈ ಕೆಳಗಿನ ಆಹಾರಗಳನ್ನು ಮಕ್ಕಳಿಗೆ ಜ್ವರ ಬಂದಾಗ ಕೊಡುವುದು ಸೂಕ್ತವಾಗಿದೆ.

1. ದಾಲಿಯಾ: ದಾಲಿಯಾವನ್ನು(ಓಟ್ಸ್ ರೀತಿಯ ನುಚ್ಚುಗೋಧಿ ಅಂಗಡಿಯಲ್ಲಿ ದೊರೆಯುತ್ತದೆ) ತರಕಾರಿ ಮತ್ತು ತುಪ್ಪ, ರುಚಿಗೆ ತಕ್ಕ ಉಪ್ಪು ಹಾಕಿ ದ್ರವ ರೂಪದಲ್ಲಿ ಬೇಯಿಸಿ ಕೊಡಬಹುದಾಗಿದೆ.

2. ಚಿಕ್ಕನ್: ಚಿಕ್ಕನ್ ಮತ್ತು ತರಕಾರಿಯನ್ನು ಬೇಯಿಸಿ ಅದಕ್ಕೆ ಕರಿಮೆಣಸು ಮತ್ತು ಬೆಣ್ಣೆಯನ್ನು ಬೆರೆಸಿ ಮಕ್ಕಳಿಗೆ ತಿನ್ನಲು ಸುಲಭವಾಗಿರುವಂತೆ ಮಾಡಿಕೊಡಬಹುದಾಗಿದೆ, ಮಕ್ಕಳಿಗೆ ಚಿಕ್ಕನ್ ಸೂಪ್ ಕೂಡ ಕೊಡಬಹುದು.

3.ಪಾಲಾಕ್ ಸೊಪ್ಪು :
ಪಾಲಾಕ್ ಸೊಪ್ಪು, ಕರಿಮೆಣಸು, ಬೆಣ್ಣೆ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ ಅದರ ಸೂಪ್ ಅನ್ನು ತಿನ್ನಲು ಕೊಡಬಹುದಾಗಿದೆ.

4. ಹಾಲಿನ ಉತ್ಪನ್ನಗಳು:
ಜ್ವರ ಬಂದಾಗ ಹಾಲನ್ನು ಕುಡಿಯಲು ಕೊಡುವುದು ಒಳ್ಳೆಯದಲ್ಲ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು , ಬೇಕರಿ ತಿಂಡಿಗಳನ್ನು ತಿನ್ನವುದು ಒಳ್ಳೆಯದಲ್ಲ. ಹಾಲಿನ ಪದಾರ್ಥಗಳ ಸೇವನೆಯಿಂದ ಮಕ್ಕಳು ವಾಂತಿ ಮಾಡಿಕೊಳ್ಳಬಹುದು.

5. ಬ್ರೆಡ್ : ಜ್ವರ ಬಂದಾಗ ಬ್ರೆಡ್ ಕೂಡ ತಿನ್ನಲು ಕೊಡಬಹುದಾಗಿದೆ.

English summary

Foods To Feed Kids during Fever | Children And Unhealthy | ಮಕ್ಕಳಿಗೆ ಜ್ವರ ಬಂದಾಗ ತಿನ್ನಿಸಬಹುದಾದ ಆಹಾರಗಳು | ಮಕ್ಕಳು ಮತ್ತು ಅನಾರೋಗ್ಯ

Kids and toddlers are very fussy about eating, on top of that when they have high temperature they become all the more reluctant to eat.Here are some fever food ideas for your you to feed your your kid when he/she has fever. Take a look.
Story first published: Tuesday, November 8, 2011, 17:07 [IST]
X
Desktop Bottom Promotion