For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳ ಹಠಮಾರಿತನಕ್ಕೆ ನೀವೂ ಕಾರಣ!

|

ನಿಮ್ಮ ಮಕ್ಕಳು ತುಂಬಾ ಹಠಮಾರಿಗಳಾ? ಪ್ರತಿಯೊಂದು ಮಾತಿಗೂ ಪ್ರತ್ಯುತ್ತರ ಕೊಡಲು ಆರಂಭಿಸಿದ್ದಾರಾ? ಇನ್ನೊಬ್ಬರೊಂದಿಗೆ ನಿಷ್ಠುರವಾಗಿ ವರ್ತಿಸುತ್ತಾರಾ? ಇದಕ್ಕೆಲ್ಲ ಮಕ್ಕಳನ್ನು ದೂಷಿಸಬೇಕಿಲ್ಲ, ಇದಕ್ಕೆ ನೀವೂ ಕಾರಣರಾಗಿರಬಹುದು.

ಮಕ್ಕಳಲ್ಲಿನ ಈ ಕಠೋರತೆಗೆ ಕುಟುಂಬದ ವಾತಾವರಣವೇ ಕಾರಣ ಎಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ ಮನೋವಿಜ್ಞಾನಿ ಅರಂಟ್ಜಾಜು ಬೆಲ್ಲಿಡೊ.

ಕುಟುಂಬದಲ್ಲಿ ನಿರಂತರವಾಗಿ ನಡೆಯುವ ಜಗಳ, ಕಲಹ, ಅಸಂಬದ್ಧ ಮಾತು ಕತೆಗಳು ಮಕ್ಕಳನ್ನು ಈ ರೀತಿ ವರ್ತಿಸುವಂತೆ ಮಾಡುತ್ತವೆ ಎಂದಿದ್ದಾರೆ. ಕುಟುಂಬದ ವಾತಾವರಣ ಮಕ್ಕಳಲ್ಲಿನ ನಡವಳಿಕೆಗೆ ಪ್ರಚೋದಕಗಳಿದ್ದಂತೆ ಎಂದೂ ತಿಳಿಸಿದ್ದಾರೆ.

ಕುಟುಂಬದ ವಾತಾವರಣಕ್ಕೂ, ಮಕ್ಕಳ ನಡತೆಗೂ ನೇರ ಸಂಬಂಧವಿದೆ. ಕುಟುಂಬ ಮತ್ತು ಸಂಬಂಧಗಳ ನಡುವಿನ ಅಂಶ ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೆ ತೀಕ್ಷ್ಣ ಪರಿಣಾಮ ಬೀರುತ್ತದೆ ಎಂದಿದ್ದಾರೆ.

251 ಕುಟುಂಬದ ಮಕ್ಕಳ ನಡವಳಿಕೆಯನ್ನು ಪರೀಕ್ಷಿಸಿದಾಗ ಈ ಅಂಶ ತಿಳಿದುಬಂದಿದೆ. ಮಕ್ಕಳ ಕುಟುಂಬ ಸದಸ್ಯರು, ಸ್ನೇಹಿತರನ್ನೂ ಸಂಶೋಧನೆಗೆ ಒಳಪಡಿಸಿದ್ದು, ಮಕ್ಕಳ ಮೇಲೆ ಕುಟುಂಬದ ವಾತಾವರಣ ಹೆಚ್ಚು ಪ್ರಭಾವ ಬೀರುತ್ತದೆ ಎಂದು ತಿಳಿದುಬಂದಿದೆ.

ಹಾಗೆಯೇ, ಪೋಷಕರ ನಿರ್ಲಕ್ಷ್ಯ, ಕುಟುಂಬದಲ್ಲಿ ಅತೃಪ್ತ ಭಾವ, ಓದಿನ ಕುರಿತಂತೆ ಪೋಷಕರು ಅತಿಯಾದ ಒತ್ತಡ ಹೇರುವುದು ಕೂಡ ಮಕ್ಕಳು ಹಠಮಾರಿಗಳಾಗಲು ಪ್ರಚೋದನೆಯಿದ್ದಂತೆ ಎಂದು ಮನೋವಿಜ್ಞಾನಿಗಳು ಎಚ್ಚರಿಸಿದ್ದಾರೆ.

English summary

Kids Behaviour | Child Aggressiveness comes from Family Environment | ಮಕ್ಕಳ ನಡವಳಿಕೆ | ಮಕ್ಕಳಲ್ಲಿನ ಕಠೋರತೆಗೆ ಕುಟುಂಬದ ವಾತಾವರಣವೂ ಕಾರಣ

Children who are aggressive in nature usually come from the families with frequent conflicts, warns a leading psychologist, Arantzazu Bellido in her research.
Story first published: Saturday, September 17, 2011, 13:39 [IST]
X