For Quick Alerts
ALLOW NOTIFICATIONS  
For Daily Alerts

ಮಗುವಿಗೆ ಗುಡ್‌ ಟಚ್ ಹಾಗೂ ಬ್ಯಾಡ್‌ ಟಚ್‌ ಬಗ್ಗೆ ಯಾವ ರೀತಿ ತಿಳಿಸಬೇಕು?

|

ಮಗು ಜನಿಸಿದಾಗ ತಂದೆ-ತಾಯಿಗೆ ಎಷ್ಟೊಂದು ಖುಷಿಯಾಗುತ್ತದೋ, ಅಷ್ಟೇ ಆತಂಕ ಕೂಡ ಇರುವುದು ಸಹಜ. ಮಗುವನ್ನು ಎಲ್ಲಾ ರಿತಿಯಿಮಂಲೂ ಸುರಕ್ಷಿತ ಮಾಡಬೇಕೆಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ, ಆದರೆ ಒಂದು ಚಿಕ್ಕ ನಿರ್ಲಕ್ಷ್ಯ ಮಕ್ಕಳ ಬದುಕನ್ನು ಹಾಳು ಮಾಡಬಹುದು. ಹೌದು ಎಷ್ಟೋ ಮಕ್ಕಳು ಲೈಂಗಿಕವಾಗಿ ಶೋಷಣೆಗೆ ಒಳಗಾಗುತ್ತಾರೆ, ಆ ವಯಸ್ಸಿನಲ್ಲಿ ಅವರಿಗೆ ಅದರ ಅರಿವು ಇರುವುದಿಲ್ಲ, ಆದ್ದರಿಂದ ಅವರು ಸುಲಭವಾಗಿ ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ.

How to Teach Bad Touch To Your Child

ಲೈಂಗಿಕ ಶೋಷಣೆಗೆ ಒಳಗಾಗುವ ಮಕ್ಕಳಲ್ಲಿ ಅಪರಿಚಿತರಿಗಿಂತ ಪರಿಚಿತರಿಂದಲೇ ಶೋಷನೆಗೊಳಗಾದವರ ಸಂಖ್ಯೆ ಹೆಚ್ಚು. ಮಕ್ಕಳಿಗೆ ಚಾಕಲೇಟ್ ಅಥವಾ ಮತ್ತಿತರ ಆಸೆ ತೋರಿಸಿ ಬಳಸಿಕೊಳ್ಳಬಹುದು ಅಥವಾ ಆಟ ಆಡುವಾಗ ಅವರ ಖಾಸಗಿ ಭಾಗವನ್ನು ಕೆಟ್ಟದಾಗಿ ಮುಟ್ಟಬಹುದು, ಆದರೆ ಮಕ್ಕಳಿಗೆ ಈ ಕುರಿತು ಏನೂ ತಿಳಿದಿರುವುದಿಲ್ಲ, ಅದರಿಂದ ಅವರು ಅದರ ಕುರಿತು ಪೋಷಕರಿಗೆ ಹೇಳದೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಆದ್ದರಿಂದ ಪೋಷಕರು ಮಗುವಿಗೆ ಬ್ಯಾಡ್‌ ಟಚ್‌ ಬಗ್ಗೆ ತಿಳಿಸಬೇಕು. ಬ್ಯಾಡ್ ಟಚ್‌ ಎಂದರೇನು, ಯಾರಾದರೂ ಕೆಟ್ಟದಾಗಿ ವರ್ತಿಸಿದರೆ ಏನು ಮಾಡಬೇಕು ಎಂದೆಲ್ಲಾ ಮಗುವಿಗೆ ತಿಳಿಸಿಕೊಡಬೇಕು. ಮಗು 3 ವರ್ಷ ಇರುವಾಗ ಮಗುವಿಗೆ ಈ ಕುರಿತು ತಿಳಿಸಿ. ಮಗು ಗಂಡಾಗಿರಲಿ, ಹೆಣ್ಣಾಗಿರಲಿ ಗುಡ್‌ ಟಚ್‌-ಬ್ಯಾಡ್‌ ಟಚ್‌ ಇವುಗಳ ಬಗ್ಗೆ ತಿಳಿಸಲೇಬೇಕು, ಮಗುವಿಗೆ 3 ವರ್ಷ ಇರುವಾಗ ನೀವು ಹೇಳಿಕೊಟ್ಟದ್ದನ್ನು ತಿಳಿದುಕೊಳ್ಳುವ ಸಾಮರ್ಥ್ಯ ಮಗುವಿಗೆ ಇರುತ್ತದೆ.

ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದನ್ನು ತಡೆಗಟ್ಟಲು ಪೋಷಕರು ಮಗುವಿಗೆ ಈ ಅಂಶಗಳನ್ನು ಹೇಳಿಕೊಡಲೇಬೇಕು:

ಮಗು ನಿಮ್ಮೊಂದಿಗೆ ಪ್ರತಿಯೊಂದು ವಿಷಯ ಹಂಚಿಕೊಳ್ಳುವಂತೆ ನಡೆದುಕೊಳ್ಳಿ

ಮಗು ನಿಮ್ಮೊಂದಿಗೆ ಪ್ರತಿಯೊಂದು ವಿಷಯ ಹಂಚಿಕೊಳ್ಳುವಂತೆ ನಡೆದುಕೊಳ್ಳಿ

ಏನಾದರೂ ಹೇಳಿದರೆ ಅಮ್ಮ/ಅಪ್ಪ ಹೊಡೆಯುತ್ತಾರೆ, ಬೈಯ್ಯುತ್ತಾರೆ ಎಂಬ ಭಯವಿದ್ದರೆ ಅವರು ನಿಮ್ಮೊಂದಿಗೆ ಏನೂ ಹಂಚಿಕೊಳ್ಳುವುದಿಲ್ಲ. ಅವರು ನಿಮ್ಮ ಬಳಿ ಬಂದು ಏನೇ ವಿಷಯವಿದ್ದರೂ ಹೇಳುವಂತಿರಬೇಕು, ಅಷ್ಟೊಂದು ಕನೆಕ್ಷನ್ ಅವರ ಜೊತೆಗಿರಬೇಕು.

 ಮಗುವಿನ ದೇಹದ ಭಾಗಗಳ ಬಗ್ಗೆ ತಿಳಿಸಿಕೊಡಿ

ಮಗುವಿನ ದೇಹದ ಭಾಗಗಳ ಬಗ್ಗೆ ತಿಳಿಸಿಕೊಡಿ

ಮಗುವಿಗೆ ದೇಹದ ಪ್ರತಿಯೊಂದು ಭಾಗದ ಬಗ್ಗೆ ತಿಳಿಸಿ, ಜೊತೆಗೆ ಖಾಸಗಿ ಭಾಗ ಯಾವುದು? ಎಮದು ತಿಳಿಸಿ, ಆ ಭಾಗವನ್ನು ಬೇರೆಯವರು ಮುಟ್ಟಲು ಬಿಡಬಾರದೆಂದು ಹೇಳಿ. ನೀವು ಇಲ್ಲದ ಹೊತ್ತಿನಲ್ಲಿ ಬೇರೆಯವರು ನಿನ್ನನ್ನು ತಬ್ಬಿಲು, ಮುತ್ತ ಕೊಡಲು ಬಿಡಬೇಡ ಎಂದು ಹೇಳಿ. ನೀವು ಹೀಗೆ ಹೇಳಿದಾಗ ಮಗು ಏಕೆ ಮಾಡಬಾರದು? ಎಂದು ಕೇಳಬಹುದು. ಹಾಗೇ ಪ್ರಶ್ನೆ ಕೇಳಿದಾಗ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸಬೇಡಿ, ಹಾಗಂತ ಲೈಂಗಿಕ ದೌರ್ಜನ್ಯದ ಬಗ್ಗೆ ಮಗುವಿಗೆ ಹೇಳಲು ಸಾಧ್ಯವಿಲ್ಲ, ಬದಲಿಗೆ ಅವರು ಹಾಗೇ ಮುಟ್ಟಿದಾರೆ ಕೆಡಕು ಆಗುತ್ತದೆ ಅಥವಾ ಅದು ತುಂಬಾ ಕೆಟ್ಟದು ಎಂದು ತಿಳಿಸಿ. ಒಟ್ಟಿನಲ್ಲಿ ನಿಮ್ಮ ಉತ್ತರ ಅವರಿಗೆ ತೃಪ್ತಿ ನೀಡುವಂತಿರಬೇಕು.

ಸೇಫ್‌ ಟಚ್‌ ಯಾವುದು ಎಂಬುವುದನ್ನು ತಿಳಿಸಿ

ಸೇಫ್‌ ಟಚ್‌ ಯಾವುದು ಎಂಬುವುದನ್ನು ತಿಳಿಸಿ

ಅಮ್ಮ, ಅಪ್ಪ, ವೈದ್ಯರು ಇವರೆಲ್ಲ ಮುಟ್ಟುವುದು ಸೇಫ್‌ ಎಂದು ತಿಳಿಸಿ, ಬೇರೆಯವರು ಮಗುವಿನ ಬಟ್ಟೆ ಅಥವಾ ಒಳ ಉಡುಪು ಬಿಚ್ಚಲು ಬಂದಾಗ ಬಿಡಬೇಡಿ ಎಂದು ತಿಳಿಸಿ.

ನೋ ಹೇಳಲು ಕಲಿಸಿ, ಆ ಸ್ಥಳದಲ್ಲಿ ನಿಲ್ಲಬೇಡಿ ಎಂದು ತಿಳಿಸಿ

ನೋ ಹೇಳಲು ಕಲಿಸಿ, ಆ ಸ್ಥಳದಲ್ಲಿ ನಿಲ್ಲಬೇಡಿ ಎಂದು ತಿಳಿಸಿ

ಯಾರಾದರೂ ಮಗುವನ್ನು ಮುಟ್ಟಿದಾಗ ಆ ಟಚ್‌ ಬ್ಯಾಡ್ ಟಚ್‌ ಆಗಿದ್ದರೆ ನೋ ಹೇಳು ಎಂದು ಮಗುವಿಗೆ ಹೇಳಿ, ಅಷ್ಟು ಮಾತ್ರವಲ್ಲ ಆ ಸ್ಥಳದಲ್ಲಿ ನಿಲ್ಲದೆ ಕೂಡಲೇ ಸುರಕ್ಷಿತ ಜಾಗದ ಕಡೆಗೆ ಅಂದರೆ ನಿಮ್ಮ ಬಳಿ ಅಥವಾ ಅಜ್ಜ-ಅಜ್ಜಿ ಅಥವಾ ಸುರಕ್ಷಿತ ಅನಿಸುವ ಕಡೆ ಓಡಲು ಹೇಳಿ.

 ಮಗು ಕಂಫರ್ಟ್ ಆಗಿರುವ ವ್ಯಕ್ತಿಯೊಂದಿಗೆ ಮಾತ್ರ ಬೆರೆಯಲು ಬಿಡಿ

ಮಗು ಕಂಫರ್ಟ್ ಆಗಿರುವ ವ್ಯಕ್ತಿಯೊಂದಿಗೆ ಮಾತ್ರ ಬೆರೆಯಲು ಬಿಡಿ

ಕೆಲವರ ಬಳಿ ಮಗು ಹೋಗುವುದಿಲ್ಲ, ಅವರ ಜೊತೆ ಹೋಗಿ ಆಟವಾಡು ಎಂದು ಒತ್ತಾಯ ಮಾಡಬೇಡಿ. ಮಗು ಅವರ ಬಳಿ ಕಂಫರ್ಟ್ ಆಗಿದ್ದರೆ ಮಾತ್ರ ಆಟವಾಡಲು ಬಿಡಿ. ಆ ವ್ಯಕ್ತಿ ನಿಮಗೆ ಎಷ್ಟೇ ಕ್ಲೋಸ್ ಆಗಿರಲಿ ಮಗು ಅವರ ಬಳಿ ಹೋಗಲು ಹಿಂಜರಿಯುತ್ತಿದೆ ಎಂದಾದರೆ ಗಮನ ಹರಿಸಿ, ಮಗುವನ್ನು ಅವರ ಜೊತೆ ಒಂಟಿಯಾಗಿ ಬಿಡಲೇಬೇಡಿ.

 ಮಗುವಿಗೆ ಗುಡ್ ಟಚ್‌, ಬ್ಯಾಡ್‌ ಟಚ್‌ ಯಾವಾಗ ಕಲಿಸಬೇಕು?

ಮಗುವಿಗೆ ಗುಡ್ ಟಚ್‌, ಬ್ಯಾಡ್‌ ಟಚ್‌ ಯಾವಾಗ ಕಲಿಸಬೇಕು?

ಸ್ನಾನ ಮಾಡಿಸುವಾಗ, ಬಟ್ಟೆ ಬದಲಾಯಿಸುವಾಗ ಖಾಸಗಿ ಭಾಗದ ಕುರಿತು ತಿಳಿಸಿ, ಗುಡ್‌ ಟಚ್ ಯಾವುದು, ಬ್ಯಾಡ್‌ ಟಚ್‌ ಯಾವುದು ಎಂಬ ವೀಡಿಯೋ ಬರುತ್ತೆ ಅದನ್ನು ತೋರಿಸಿ.

 ಪೋಷಕರೇ ಈ ವಿಷಯಗಳನ್ನು ಗಮನಿಸಿ

ಪೋಷಕರೇ ಈ ವಿಷಯಗಳನ್ನು ಗಮನಿಸಿ

ಡೊಡ್ಡವರ ನಡವಳಿಕೆ

* ಡೊಡ್ಡವರು ನಿಮ್ಮ ಮಗುವಿನ ಜೊತೆ ಸಮಯ ಕಳೆಯುತ್ತಿದ್ದರೆ ಅವರ ನಡವಳಿಕೆ ಸಂಶಯ ಉಂಟು ಮಾಡುತ್ತಿದ್ದರೆ ಎಚ್ಚರವಹಿಸಿ.

* ನಿಮ್ಮ ಮಗು ಅವರ ಬಳಿ ಹೋಗಲು ಹೆದರುತ್ತಿದ್ದರೆ ಎಚ್ಚರವಹಿಸಿ (ಮೊದಲು ಅವರೊಂದಿಗೆ ಆಟ ಆಡುತ್ತಿದ್ದ ಮಗು ಇತ್ತೀಚೆಗೆ ಹೋಗಲು ಹೆದರುತ್ತಿದ್ದರೆ ನೀವು ಮಗುವಿನ ಬಳಿ ಕೇಳಿ ತಿಳಿದುಕೊಳ್ಳಲೇಬೇಕು)

ಮಗುವಿನಲ್ಲಿ ಗಮನಿಸಬೇಕಾದ ಅಂಶಗಳು

ಕೆಲವರನ್ನು ನೋಡಿದಾಗ ಅಳುವುದು (ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆಲ ಮಕ್ಕಳು ಬೇರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ, ಆದರೆ ತಾವೇನು ಮಾಡುತ್ತಿದ್ದೇವೆ ಎಂಬ ತಿಳುವಳಿಕೆ ಇಲ್ಲದೆ ಅವರಿಂದ ತಪ್ಪಾಗಿರುತ್ತದೆ, ಆದ್ದರಿಂದ ಮಕ್ಕಳು ಜೊತೆ ಸೇರಿ ಆಡುವಾಗಲೂ ಆ ಮಕ್ಕಳ ವರ್ತನೆ ಗಮನಿಸಿ)

* ಕೆಲವೊಂದು ಮನೆಗೆ ಹೋಗಿ ಆಡಲು ಭಯ ಪಡುವುದು

* ಏನೋ ವಿಷಯ ಬಚ್ಚಿಡುತ್ತಿದೆ ಎಂದನಿಸಿದಾಗ

* ಅದರ ಗೊಂಬೆ ಜೊತೆ ತುಂಬಾ ಒರಟಾಗಿ ವರ್ತಿಸುತ್ತಿದ್ದರೆ

* ಕೆಲ ವ್ಯಕ್ತಿ ಜೊತೆ ಸಮಯ ಕಳೆದರೆ ಅಥವಾ ಅವರನ್ನು ನೋಡಿದರೆ ರಾತ್ರಿ ಬೆಚ್ಚಿ ಬಿದ್ದು ಅಳುವುದು

* ತುಂಬಾ ಮಂಕಾಗಿರುವುದು

* ದೇಹದ ಮೇಲೆ ಕಲೆಗಳಿದ್ದರೆ

ನೀವು ಮಗುವಿನ ಬಳಿ ಕೇಳಿ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.

 ಟ್ರಿಕ್ಕಿ ಸಮಯ

ಟ್ರಿಕ್ಕಿ ಸಮಯ

ಕೆಲವೊಮ್ಮೆ ಮಕ್ಕಳಿಗೆ ಬ್ಯಾಡ್ ಟಚ್ ಗುಡ್‌ ಟಚ್‌ ಅನಿಸಲಾರಂಭಿಸಿದರೆ ಆಗ ಪೋಷಕರ ಬಳಿ ಹೇಳುವುದಿಲ್ಲ, ಇಂಥ ಸಂದರ್ಭದಲ್ಲೂ ತುಂಬಾ ಎಚ್ಚರವಹಿಸಬೇಕು. ನಿಮ್ಮ ಮಗ/ಮಗಳಿಗೆ ಆ ವ್ಯಕ್ತಿ ಬಂದಾಗ ತುಂಬಾ ಖುಷಿಯಾಗುವುದು,ಅವರು ಗಿಫ್ಟ್ಸ್‌ ಮುಂತಾದವುಗಳನ್ನು ತರುವುದು, ಮಗು-ಅವರು ಇಬ್ಬರೇ ರೂಂನಲ್ಲಿ ಸಮಯ ಕಳೆಯುವುದು ಮಾಡುತ್ತಿದ್ದರೆ ಎಚ್ಚರವಹಿಸಿ.

ಕೋಣೆಯಲ್ಲಿ ಬಾಗಿಲು ಹಾಕಿ ಇಬ್ಬರನ್ನು ಆಡಲು ಬಿಡಲೇಬೇಡಿ, ಅಲ್ಲದೆ ಇಂಥ ಸಂದರ್ಭದಲ್ಲಿ ತುಂಬಾ ಟ್ರಿಕ್ಕಿಯಾಗಿ ಹ್ಯಾಂಡಲ್‌ ಮಾಡಬೇಕು, ಮಗ/ಮಗಳ ಹತ್ರ ಅವರ ಜೊತೆ ಆಡಬೇಡ ಎಂದರೆ ಕೇಳುವುದಿಲ್ಲ, ಅಲ್ಲದೆ ಮಕ್ಕಳು ನಿಮ್ಮ ಹಿಂದೆಯೇ ಸಂಚು ಮಾಡಬಹುದು. ಹೀಗೆ ಕಂಡು ಬಂದರೆ ನಿಧಾನಕ್ಕೆ ಮಗುವಿಗೆ ಈ ಕುರಿತು ತಿಳಿ ಹೇಳಲು ಪ್ರಯತ್ನಿಸಬೇಕು.

ಕೊನೆಯದಾಗಿ: ಮಕ್ಕಳಿಗೆ ಗುಡ್‌ ಟಚ್-ಬ್ಯಾಡ್‌ ಟಚ್‌ ಬಗ್ಗೆ ತಿಳಿದರಬೇಕು. ಪೋಷಕರು ಹಾಗೂ ಮಕ್ಕಳ ನಡುವೆ ಸಂವಹನ ಚೆನ್ನಾಗಿರಬೇಕು. ಯಾರ ಮೇಲಾದರೂ ನಿಮಗೆ ಸಂಶಯವಿದ್ದರೆ ಅವರ ಜೊತೆ ಆಡಲು ಬಿಡಬೇಡಿ.

English summary

How To Teach Good And Bad Touch To Your Child in Kannada

How to Teach Good And Bad Touch To Your Child in Kannada, Read on...
X
Desktop Bottom Promotion