For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗ ಬಯಸುವುದಾದರೆ ಈ 7 ಟಿಪ್ಸ್ ಪಾಲಿಸಿ

|

ಒಂದು ಮುದ್ದಾದ ಮಗು ಬೇಕೆಂದು ಅನಿಸಲಾರಂಭಿಸಿರುತ್ತದೆ, ಹೀಗೆ ಅನಿಸಲಾರಂಭಿಸಿದ ಮೇಲೆ ಆ ಕ್ಷಣ ಬೇಗನೆ ಬರಲಿ ಎಂದು ಮನಸ್ಸು ಬಯಲಾರಂಭಿಸುವುದು.

How to Get Pregnant Fast

ಗರ್ಭಧಾರಣೆಗೆ ಪ್ರಯತ್ನಿಸಿದಾಗ ಕೆಲವರಿಗೆ ತಕ್ಷಣವೇ ಫಲ ಸಿಕ್ಕರೆ ಇನ್ನು ಕೆಲವರಿಗೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ನೀವು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಈ ಟಿಪ್ಸ್ ಪಾಲಿಸುವುದರಿಂದ ನೀವು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು:

1. ಗರ್ಭಧಾರಣೆಯ ಮುನ್ನ ಚೆಕಪ್ ಮಾಡಿಸಿ

1. ಗರ್ಭಧಾರಣೆಯ ಮುನ್ನ ಚೆಕಪ್ ಮಾಡಿಸಿ

ಗರ್ಭಧಾರಣೆಗೆ ಮುನ್ನ ಸ್ತ್ರೀರೋಗ ತಜ್ಞರನ್ನು ಕಾಣಿ, ಅವರು ನಿಮಗೆ ಫಾಲಿಕ್ ಆಮ್ಲ ತೆಗೆದುಕೊಳ್ಳಲು ಸಲಹೆ ನೀಡಬಹುದು, ಇದರಿಂದ ಗರ್ಭಿಣಿಯಾದಾಗ ಮಗುವಿಗೆ ದೈಹಿಕ ನ್ಯೂನ್ಯತೆ ಉಂಟಾಗುವುದನ್ನು ತಡೆಗಟ್ಟಬಹುದು, ಮಗುವಿನ ಬೆನ್ನು ಮೂಳೆಯ ಬೆಳವಣಿಗೆಗೆ ಸಹಕಾರಿ.

ಗರ್ಭಧಾರಣೆಯ ಮೊದಲಿನ ಹಂತದಲ್ಲಿ ಫಾಲಿಕ್‌ ತುಂಬಾನೇ ಪರಿಣಾಮಕಾರಿ, ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವಾಗಲೇ ಫಾಲಿಕ್ ಆಮ್ಲ ತೆಗೆದುಕೊಳ್ಳಬೇಕು.

2. ನಿಮ್ಮ ಒವ್ಯೂಲೇಷನ್ ಸೈಕಲ್ ತಿಳಿದುಕೊಳ್ಳಿ

2. ನಿಮ್ಮ ಒವ್ಯೂಲೇಷನ್ ಸೈಕಲ್ ತಿಳಿದುಕೊಳ್ಳಿ

ಓವ್ಯೂಲೇನ್‌ ಸೈಕಲ್‌ ಅಂದರೆ ನಿಮ್ಮ ಫಲವತ್ತತೆಯ ಸಮಯ, ಅಂದರೆ ಅಂಡಾಣುಗಳು ಬಿಡುಗಡೆಯಾಗುವ ಸಮಯ. ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯಾಗುವುದು. ಮುಟ್ಟಾಗಿ 12-14 ದಿನ ನಿಮ್ಮ ಫಲವತ್ತತೆಯ ಸಮಯ. ಓವ್ಯೂಲೇಷನ್ ಸಮಯದಲ್ಲಿ ದೇಹದಲ್ಲೂ ಕೆಲವೊಂದು ಬದಲಾವಣೆಗಳು ಉಂಟಾಗುವುದು, ಮೈ ಉಷ್ಣತೆ ಹೆಚ್ಚುವುದು, ಸ್ತನಗಳಲ್ಲಿ ನೋವು,ಕಿಬ್ಬೊಟ್ಟೆ ನೋವು ಲೈಂಗಿಕ ಆಸಕ್ತಿ ಹೆಚ್ಚುವುದು ಮುಂತಾದ ಲಕ್ಷಣಗಳು ಕಂಡು ಬರುವುದು.

ನಿಮ್ಮ ಓವ್ಯೂಲೇಷನ್‌ ಸಮಯ ಯಾವಾಗ ಎಂದು ತಿಳಿದುಕೊಳ್ಳಲು ನೀವು ಓವ್ಯೂಲೇಷನ್ ಕಿಟ್ ಬಳಸಬಹುದು. ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು.

3. ಗರ್ಭಧಾರಣೆಗೆ ಅತ್ಯುತ್ತಮವಾದ ಭಂಗಿ ಯಾವುದು ಎಂಬುವುದರ ಬಗ್ಗೆ ತಲೆ ಕೆಡಿಸಬೇಡಿ

3. ಗರ್ಭಧಾರಣೆಗೆ ಅತ್ಯುತ್ತಮವಾದ ಭಂಗಿ ಯಾವುದು ಎಂಬುವುದರ ಬಗ್ಗೆ ತಲೆ ಕೆಡಿಸಬೇಡಿ

ಗರ್ಭಧಾರಣೆಗೆ ನಿರ್ದಿಷ್ಟ ಲೈಂಗಿಕ ಭಂಗಿಗಳು ಒಳ್ಳೆಯದು ಎಂದೆಲ್ಲಾ ಹೇಳುವುದನ್ನು ಕೇಳಿರಬಹುದು. ಗರ್ಭಧಾರಣೆಗೆ ಮಹಿಳೆ ಮೇಲಿದ್ದು ಪುರುಷ ಕೆಳಗಿದ್ದರೆ ಫಲವತ್ತತೆ ಸಾಧ್ಯತೆ ಹೆಚ್ಚು ಹೀಗೆ ಗರ್ಭಧಾರಣೆಗೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು ಎಂದು ಕೆಲವರು ಟಿಪ್ಸ್ ನೀಡುತ್ತಾರೆ. ಆದರೆ ಇದರ ಬಗ್ಗೆ ವೈಜ್ಞಾನಿಕವಾಗಿ ಯಾವುದೇ ವರದಿಗಳಿಲ್ಲ. ಗರ್ಭಧಾರಣೆಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರವಾದ ವೀರ್ಯಾಣು ಅಂಡಾಣುವನ್ನು ಸೇರುವುದು.

4. ಲೈಂಗಿಕ ಕ್ರಿಯೆ ಮೂಲಕ ಸ್ವಲ್ಪ ಹೊತ್ತು ಹಾಸಿಗೆಯಲ್ಲೇ ಮಲಗಿ

4. ಲೈಂಗಿಕ ಕ್ರಿಯೆ ಮೂಲಕ ಸ್ವಲ್ಪ ಹೊತ್ತು ಹಾಸಿಗೆಯಲ್ಲೇ ಮಲಗಿ

ಲೈಂಗಿಕ ಕ್ರಿಯೆ ಬಳಿಕ ಸ್ವಲ್ಪ ಹೊತ್ತು ಕಾಲುಗಳನ್ನುಎತ್ತಿ ಮೇಲೆ ಹಿಡಿಯುವುದು ಅಥವಾ ಕಾಲುಗಳನ್ನು ಗೋಡೆ ಮೇಲೆ ಇಡುವುದು ಒಳ್ಳೆಯದು ಎಂದು ಕೇಳಿರಬಹುದು. ಆದರೆ ಅದು ಸತ್ಯವಲ್ಲ.

ಲೈಂಗಿಕ ಕ್ರಿಯೆ ಬಳಿಕ ನೀವೇನೂ ಕಾಲುಗಳನ್ನು ಮೇಲಕ್ಕೆ ಎತ್ತಿ ಹಿಡಿಯಬೇಕಾಗಿಲ್ಲ. ಬದಲಿಗೆ 10-15 ನಿಮಿಷ ಬೆಡ್‌ ಮೇಲೆ ಹಾಗೇ ಮಲಗಿ. ಹೀಗೆ ಮಲಗುವುದರಿಂದ ಗರ್ಭಕೋಶದ ಒಳಗೆ ವೀರ್ಯಾಣು ತಲುಪಲು ಸಹಕಾರಿ.

5. ತುಂಬಾ ಸಲ ಲೈಂಗಿಕ ಕ್ರಿಯೆ ಮಾಡಬೇಕಾಗಿಲ್ಲ

5. ತುಂಬಾ ಸಲ ಲೈಂಗಿಕ ಕ್ರಿಯೆ ಮಾಡಬೇಕಾಗಿಲ್ಲ

ಓವ್ಯೂಲೇಷನ್‌ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚು. ಆದರೆ ಆಗಾಗ ಲೈಂಗಿಕ ಕ್ರಿಯೆ ನಡೆಸಬೇಕಾಗಿಲ್ಲ. ವೀರ್ಯಾಣು ಒಮ್ಮೆ ಮಹಿಳೆಯ ಗರ್ಭಕೋಶದ ಒಳಗೆ ಸೇರಿದರೆ 4-5 ದಿನ ಅಲ್ಲಿ ಜೀವಂತವಾಗಿರುತ್ತದೆ. ಆಗ ಅದು ಅಂಡಾಣುವಿನ ಸಂಪರ್ಕಕಕ್ಕೆ ಬಂದಾಗ ಗರ್ಭಧಾರಣೆಯಾಗುವುದು.

ಇನ್ನು ಪುರುಷರು ತುಂಬಾ ಬಿಗಿಯಾದ ಒಳ ಉಡುಪು ಧರಿಸಬಾರದು, ಇದರಿಂದ ವೀರ್ಯಾಣುಗಳ ಉತ್ಪತ್ತಿಗೆ ತೊಂದರೆಯಾಗುವುದು. ವೀರ್ಯಾಣು ಕಡಿಮೆಯಿದ್ದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು.

 6. ಮಾನಸಿಕ ಒತ್ತಡ ಕಡಿಮೆ ಮಾಡಿ

6. ಮಾನಸಿಕ ಒತ್ತಡ ಕಡಿಮೆ ಮಾಡಿ

ಇನ್ನು ಗಂಡ-ಹೆಂಡತಿ ಇಬ್ಬರೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅತಿಯಾದ ಮಾನಸಿಕ ಒತ್ತಡ ನಿಮ್ಮ ಫಲವತ್ತತೆ ಮೇಲೆ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಸ್ವಲ್ಪ ಸಮಯ ಒತ್ತಡದ ಬದುಕಿನಿಂದ ಬ್ರೇಕ್‌ ತೆಗೆದು ಇಬ್ಬರು ರಿಲ್ಯಾಕ್ಸ್ ಸಮಯ ಕಳೆಯಿರಿ.

ಧೂಮಪಾನ, ಮದ್ಯಪಾನ ಅಭ್ಯಾಸವಿದ್ದರೆ ಅವುಗಳಿಂದ ದೂರವಿರಿ.

 7. ಆರೋಗ್ಯಕರ ಜೀವನಶೈಲಿ ಪಾಲಿಸಿ

7. ಆರೋಗ್ಯಕರ ಜೀವನಶೈಲಿ ಪಾಲಿಸಿ

ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಅಧಿಕ ಮೈ ತೂಕವಿದ್ದರೆ ಕಡಿಮೆ ಮಾಡಿ, ಅದಕ್ಕೆ ವ್ಯಾಯಾಮ ಮಾಡಿ. ಹಾಗಂತ ಅತಿಯಾದ ವ್ಯಾಯಾಮ ಕೂಡ ಒಳ್ಳೆಯದಲ್ಲ. ಒಬ್ಬ ಮಹಿಳೆಯ ಆರೋಗ್ಯದಂತೆ ಮತ್ತೊಬ್ಬ ಮಹಿಳೆಯ ಆರೋಗ್ಯ ಸ್ಥಿತಿ ಇರುವುದಿಲ್ಲ, ನಿಮ್ಮ ಆರೋಗ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡಿ, ಆರೋಗ್ಯಕರ ಆಹಾರಕ್ರಮ ಪಾಲಿಸಿ. ಇವೆಲ್ಲಾ ಬೇಗನೆ ಗರ್ಭಣಿಯಾಗಲು ಸಹಾಯ ಮಾಡುವುದು.

English summary

How to Get Pregnant Fast: Tips to Conceive in Kannada

How to Get Pregnant Fast: Tips to Conceive in Kannada, read on...
Story first published: Saturday, January 15, 2022, 16:28 [IST]
X
Desktop Bottom Promotion