For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ತೆಂಗಿನಕಾಯಿ ಅತ್ಯುತ್ತಮ ಆಹಾರ, ಏಕೆ ಗೊತ್ತೇ?

|

ಗರ್ಭಿಣಿಯಾದವರಿಗೆ ನನಗೆ ಯಾವ ಆಹಾರ ಒಳ್ಳೆಯದು, ಯಾವುದಲ್ಲ ಒಳ್ಳೆಯದಲ್ಲ ಎಂಬ ಪ್ರಶ್ನೆ ಆಗಾಗ ಮೂಡುವುದು ಸಹಜ. ಏಕೆಂದರೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡುತ್ತಾರೆ.

Pregnancy Tips

ಅದರಲ್ಲೂ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವಾಗ ಗರ್ಭಿಣಿಯ ಆಹಾರಕ್ರಮದ ಬಗ್ಗೆ ತಿಳಿಯ ಬಯಸುತ್ತಾರೆ. ನಾವಿಲ್ಲಿ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕರವಾದ ಒಂದು ಆಹಾರದ ಬಗ್ಗೆ ಹೇಳಿದ್ದೇವೆ ಅದುವೇ ಕೊಬ್ಬರಿ.

ಈ ಕೊಬ್ಬರಿಯನ್ನು ಗರ್ಭಿಣಿಯರು ಪ್ರತಿದಿನ ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನ ಪಡೆಯಬಹುದು, ಯಾವ ಹೊತ್ತಿನಲ್ಲಿ ತಿನ್ನಬೇಕು? ಹೇಗೆ ತಿನ್ನಬೇಕು ಎಂಬೆಲ್ಲಾ ವಿವರ ನೋಡೋಣ ಬನ್ನಿ:

ಗರ್ಭಿಣಿಯರು ಕೊಬ್ಬರಿ ತಿಂದರೆ ದೊರೆಯುವ ಪ್ರಯೋಜನಗಳು
ಗರ್ಭಿಣಿಯಾದಾಗ ನಾವು ತಿನ್ನುವ ಆಹಾರ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಆಹಾರಕ್ರಮದ ಕಡೆ ತುಂಬಾ ಗಮನ ನೀಡುವುದು ಒಳ್ಳೆಯದು. ಕೊಬ್ಬರಿ ತಿಂದರೆ ದೊರೆಯುವ ಪ್ರಯೋಜನಗಳ ಬಗ್ಗೆ ನೋಡೋಣ:

*ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆ ತಡೆಗಟ್ಟುತ್ತದೆ

ಕೊಬ್ಬರಿಯಲ್ಲಿ ನಾರಿನಂಶ ಅಧಿಕವಿರುತ್ತದೆ, ನಾರಿನಂಶ, ಸೋಡಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಖನಿಜಾಂಶ, ಹಾರ್ಮೋನ್ಸ್ ಹಾಗೂ ಎಂಜೈಮ್ಸ್ ಮುಂತಾದ ಪೋಷಕಾಂಶಗಳಿರುತ್ತದೆ. ಗರ್ಭಿಣಿಯರಿಗೆ ಸಾಮಾನ್ಯವಾಗಿ ರಕ್ತಹೀನತೆ, ಮೂತ್ರ ಸೋಂಕು, ಮಾರ್ನಿಂಗ್‌ ಸಿಕ್‌ನೆಸ್‌ (ಬೆಳಗ್ಗೆ ಸುಸ್ತು, ವಾಂತಿ), ಕಾಲುಗಳಲ್ಲಿ ಊತ ಕಂಡು ಬರುವುದು. ಅದನ್ನು ತಡೆಗಟ್ಟುವಲ್ಲಿ ತೆಂಗಿನಕಾಯಿ ಹಾಗೂ ಕೊಬ್ಬರಿ ಸಹಕಾರಿಯಾಗಿದೆ.

* ಎದೆಹಾಲಿನ ಉತ್ಪತ್ತಿ ಹೆಚ್ಚಿಸುತ್ತದೆ

ಇದರಲ್ಲಿರುವ ಕೊಬ್ಬಿನಂಶ ನಮ್ಮ ದೇಹದಲ್ಲಿರುವ ಬೇಡದ ಕೊಬ್ಬಿನಂಶ ಕರಗಿಸಲು ಸಹಕಾರಿಯಾಗಿದೆ. ತೆಂಗಿನಕಾಯಿ ಹಾಲು ಮಗುವಿನ ಬೆಳವಣಿಗೆಗೆ ಸಹಕಾರಿ ಅಲ್ಲದೆ ಎದೆ ಹಾಲು ಉತ್ಪತ್ತಿಗೂ ಸಹಾಯ ಮಾಡುತ್ತದೆ.

* ತೆಂಗಿನೆಣ್ಣೆ ಕೂಡ ತುಂಬಾ ಒಳ್ಳೆಯದು

ನೀವು ಗರ್ಭಾವಸ್ಥೆಯಲ್ಲಿ ತೆಂಗಿನೆಣ್ಣೆ ಬಳಸಿದರೆ ತುಂಬಾ ಒಳ್ಳೆಯದು. ನ್ಯೂಟ್ರಿಷಿಯನಿಸ್ಟ್‌ ಕೂಡ ಇದೇ ಸಲಹೆ ನೀಡುತ್ತಾರೆ. ಸೋನಂ ಕಪೂರ್ ಇತ್ತೀಚೆಗೆ ಗರ್ಭಾವಸ್ಥೆಯಲ್ಲಿ ತಾವು ಪಾಲಿಸುತ್ತಿದ್ದ ಡಯಟ್‌ ಚಾರ್ಟ್‌ ಶೇರ್‌ ಮಾಡಿದ್ದರು, ಅದರಲ್ಲಿ ಅವರು ಬೆಳಗ್ಗೆ 1 ಚಮಚ ತೆಂಗಿನೆಣ್ಣೆ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

* ಸ್ಕ್ರ್ಯಾಚ್‌ ತಡೆಗಟ್ಟುತ್ತೆ

ತೆಂಗಿನಕಾಯಿ ತಿಂದರೆ ತ್ವಚೆಯನ್ನು ಒಳಗಿನಿಂದ ಪೋಷಣೆ ಮಾಡುತ್ತದೆ, ತೆಂಗಿನೆಣ್ಣೆ ದೇಹವನ್ನು ಹೊರಗಿನಿಂದ ಪೋಷಣೆ ಮಾಡುತ್ತಾರೆ. ಇದರಿಂದ ಗರ್ಭಾವಸ್ಥೆಯಲ್ಲಿ ಹೊಟ್ಟೆ ದೊಡ್ಡದಾಗುತ್ತಿದ್ದಂತೆ ಸ್ಕ್ರ್ಯಾಚ್‌ ಬೀಳುತ್ತೆ, ಅದನ್ನು ತಡೆಗಟ್ಟಲು ಸಹಕಾರಿಯಾಗಿದೆ.

* ಇನ್ನು ಗರ್ಭಿಣಿಯರು ಎಳನೀರು ಅಥವಾ ತೆಂಗಿನಕಾಯಿ ನೀರು ಕೂಡ ಕುಡಿಯಬಹುದು.

* ಮಲಬದ್ಧತೆ ತಡೆಗಟ್ಟುತ್ತೆ: ಇನ್ನು ಮಲಬದ್ಧತೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ತೆಂಗಿನ ಕಾಯಿ ಹೇಗೆ ಬಳಸಬೇಕು?

ತೆಂಗಿನಕಾಯಿಯನ್ನು ನೀವು ಪಲ್ಯ ಮಾಡುವಾಗ ತುರಿದು ಹಾಕಿ ಬಳಸಬಹುದು. ಇನ್ನು ಕೊಬ್ಬರಿಯನ್ನು ಬೆಳಗ್ಗೆ ಒಂದು ತುಂಡು ತಿನ್ನಬಹುದು. ಕೊಬ್ಬರಿಯನ್ನು ಬೆಲ್ಲದ ಜೊತೆ ತಿಂದರೆ ತುಂಬಾನೇ ರುಚಿ. ತೆಂಗಿನಕಾಯಿಯನ್ನು ಅಡುಗೆಯಲ್ಲಿ ಬಳಸಬಹುದು.

ತೆಂಗಿನಕಾಯಿ ಅಥವಾ ಕೊಬ್ಬರಿಯಿಂದ ಅಡ್ಡಪರಿಣಾಮ ಇದೆಯೇ?
* ದಿನಾ ಒಂದು ಚಿಕ್ಕ ತುಂಡು ತಿನ್ನುವುದರಿಂದ ಏನೂ ತೊಂದರೆಯಿಲ್ಲ, ಆದರೆ ತುಂಬಾ ತಿನ್ನಬೇಡಿ.

* ಇನ್ನೂ ತುಂಬಾ ದಪ್ಪಗಿದ್ದು ಮಧುಮೇಹ, ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ.
* ಇನ್ನು ನಿಮಗೆ ತೆಂಗಿನಕಾಯಿ ಅಲರ್ಜಿ ಇದ್ದರೆ ಸೇವಿಸಬೇಡಿ.

ಗರ್ಭಿಣಿಯರು ಎಳನೀರು ತೆಗೆದುಕೊಳ್ಳಬಹುದೇ? ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?

* ತಪ್ಪು ಕಲ್ಪನೆ: ಎಳನೀರು ಕುಡಿದರೆ ಮಗು ಬೆಳಗ್ಗೆ ಹುಟ್ಟುತ್ತದೆ

* ಮಗುವಿನ ತ್ವಚೆ ಬಣ್ಣ ವಂಶವಾಹಿಯಾಗಿ ಬರುವುದು. ಆಹಾರ ಪದಾರ್ಥಗಳು ಮಗುವಿನ ಬಣ್ಣ ಬದಲಾಯಿಸಲ್ಲ

* ತಪ್ಪು ಕಲ್ಪನೆ:ಎಳನೀರು ಕುಡಿದರೆ ಮಗುವಿನ ಕೂದಲು ಸೊಂಪಾಗಿ ಬೆಳೆಯುತ್ತದೆ

ಎಳನೀರಿನಲ್ಲಿ ಪೋಷಕಾಂಶ ಮಗುವಿನ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೂದಲು ಸೊಂಪಾಗಿ ಬೆಳೆಯುವುದಕ್ಕೂ ಅದಕ್ಕೂ ಸಂಬಂಧವಿಲ್ಲ.

* ತಪ್ಪು ಕಲ್ಪನೆ: ಎಳನೀರು ಕುಡಿದರೆ ಅಸಿಡಿಟಿ ಉಂಟಾಗುತ್ತದೆ
ಎಳನೀರಿನಿಂದ ಅಸಿಡಿಟಿ ಉಂಟಾಗುವುದಿಲ್ಲ.

ಕೊನೆಯದಾಗಿ: ಗರ್ಭಾವಸ್ಥೆಯಲ್ಲಿ ತೆಂಗಿನಕಾಯಿ ತಿನ್ನುವುದು, ಕೊಬ್ಬರಿ ತಿನ್ನುವುದು, ತೆಂಗಿನೆಣ್ಣೆ ಸೇವನೆ, ಎಳನೀರು ಎಲ್ಲವೂ ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ನಿಮಗೆ ಏನಾದರೂ ಸಂಶಯವಿದ್ದರೆ ನಿಮ್ಮ ವೈದ್ಯರ ಬಳಿ ಖಚಿತ ಪಡಿಸಿ.

English summary

Health Benefits Of Coconut during Pregnancy in Kannada

Pregnancy Tips: Health Benefits Of eating coconut during pregnancy, read on....
X
Desktop Bottom Promotion