For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಜ್ವರ ಬಂದಾಗ ಏನು ಮಾಡಬೇಕು? ಯಾವ ಚಿಕಿತ್ಸೆ ಒಳ್ಳೆಯದು?

|

ಗರ್ಭಿಣಿಯಾಗಿದ್ದಾಗ ಒಂದು ಚಿಕ್ಕ ಶೀತ-ಕೆಮ್ಮು ಬಂದರೆ ಕಷ್ಟವಾಗುತ್ತೆ, ಏಕೆಂದರೆ ಹೊಟ್ಟೆಯಲ್ಲಿರುವ ಮಗುವಿಗೆ ಯಾವುದೇ ಅಪಾಯ ಉಂಟಾಗಬಾರದು ಎಂದು ಔಷಧ, ಆ್ಯಂಟಿ ಬಯೋಟಿಕ್ ನೀಡಲ್ಲ. ತುಂಬಾ ಮೈಲ್ಡ್ ಔಷಧ ನೀಡಲಾಗುವುದು. ಅದೇ ಗರ್ಭಿಣಿಯಾಗಿದ್ದಾಗ ಜ್ವರ ಬಂದರೆ ಜ್ವರಕ್ಕೆ ಔಷಧಿ ತೆಗೆದುಕೊಳ್ಳಬೇಕೆ, ಬೇಡ್ವೆ ಎಂಬ ಪ್ರಶ್ನೆ ಕಾಡುವುದು ಸಹಜ.

ಗರ್ಭಿಣಿಯಾಗಿದ್ದಾಗ ಜ್ವರ ಬಂದರೆ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಗರ್ಭಿಣಿಯರಿಗೆ ಜ್ವರ ಏಕೆ ಬರುತ್ತದೆ?
ಅನೇಕ ಕಾರಣಗಳಿಗೆ ಜ್ವರ ಬರಬಹುದು. ಮನೆಯಲ್ಲಿ ಯಾರಿಗಾದರೂ ಜ್ವರ ಇದ್ದರೆ ಅವರ ಮೂಲಕ ಕೂಡ ಹರಡಬಹುದು. ದೇಹದ ಉಷ್ಣಾಂಶ 100 ಡಿಗ್ರಿ F ಇದ್ದರೆ ಅದನ್ನು ಜ್ವರ ಎಂದು ಪರಿಗಣಿಸಲಾಗುವುದು.

ಗರ್ಭಾವಸ್ಥೆಯಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ವೈರಲ್ ಸೋಂಕಿನ ಅಪಾಯ ಅಧಿಕ. ಹೀಗಾಗಿ ಗರ್ಭಾವಸ್ಥೆಯಲ್ಲಿ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು. ಕೆಲವೊಮ್ಮೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಜ್ವರ ಬರುತ್ತದೆ, ಜ್ವರ ಬಂದರೆ ಏನು ಮಾಡಬೇಕು ಎಂದು ನೋಡೋಣ:

ಜ್ವರ ಬಂದ ತಕ್ಷಣ ಏನು ಮಾಡಬೇಕು?
ಜ್ವರ ಬಂದಾಗ ಮನೆಯಲ್ಲಿ ಇರುವ ಪ್ಯಾರಾಸಿಟಮೋಲ್‌ ಅಥವಾ ಮತ್ಯಾವುದೋ ಮಾತ್ರೆ ನುಂಗುವುದು, ಮನೆಮದ್ದು ಮಾಡುವುದು ಮಾಡಲಿಕ್ಕೆ ಹೋಗಲೇಬಾರದು. ಇನ್ನು ಎರಡು ಮೂರು ದಿನ ನೋಡುವ, ಜ್ವರ ಕಡಿಮೆಯಾಗದಿದ್ದರೆ ಮತ್ತೆ ವೈದ್ಯರ ಬಳಿ ಹೋಗುವ ಎಂಬ ಮನೋಸ್ಥಿತಿಯೂ ಬೇಡ. ಬೇರೆಯವರು ಜ್ವರ ಬಂದರೆ ಹೀಗೆಲ್ಲಾ ಮಾಡಬಹುದು, ಆದರೆ ಗರ್ಭಿಣಿಯರು ಜ್ವರ ಬಂದ ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ, ಅವರು ನಿಮಗೆ ಸೂಕ್ತವಾಗುವ ಔಷಧ ಅಥವಾ ಸಲಹೆ ಸೂಚನೆ ನೀಡುತ್ತಾರೆ.

ಇನ್ನು ಮೊದಲ ತ್ರೈಮಾಸಿಕದಲ್ಲಿ ಹೊಟ್ಟೆ ಬಂದಿರುವುದಿಲ್ಲ, ಆಗ ನಿಮ್ಮ ಪ್ರಸೂತಿ ತಜ್ಞರ ಬಳಿಯಲ್ಲದೆ ಬೇರೆಯವರ ಬಳಿ ಚಿಕಿತ್ಸೆಗೆ ಹೋದರೆ ನೀವು ಗರ್ಭಿಣಿ ಎಂಬುವುದನ್ನು ಹೇಳಿ, ಅವರು ನಿಮಗೆ ಮಗುವಿಗೆ ಹಾನಿಯುಂಟಾಂಥ ಔಷಧ ಸೂಚಿಸುತ್ತಾರೆ, ಗರ್ಭಾವಸ್ಥೆಯಲ್ಲಿ ಏನೇ ಸಮಸ್ಯೆ ಬರಲಿ ನಿಮ್ಮನ್ನು ಪರೀಕ್ಷಿಸುತ್ತಿರುವ ವೈದ್ಯರನ್ನು ಕಾಣುವುದೇ ಸೂಕ್ತ, ಅವರು ನಿಮಗೆ ಅಗ್ಯತ ಬಿದ್ದರೆ ಬೇರೆ ವೈದ್ಯರನ್ನು ಸೂಚಿಸಬಹುದು, ನೀವಾಗಿ ತೀರ್ಮಾನಕ್ಕೆ ಬರಬೇಡಿ.

ಜ್ವರ ಬಂದಾಗ ಏನು ಮಾಡಬೇಕು?
* ಮೈ ಉಷ್ಣತೆ ಕಡಿಮೆಯಾಗಲು ಸ್ಪಾಂಜ್ ಬಾತ್‌ ತೆಗೆದುಕೊಳ್ಳಿ
* ಸಾಕಷ್ಟು ನೀರು ಕುಡಿಯಿರಿ
* ಸಾಧ್ಯವಾದರೆ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ
* ಸೂಪ್ ತೆಗೆದುಕೊಳ್ಳಿ

Fever During Pregnancy

ಗರ್ಭಾವಸ್ಥೆಯಲ್ಲಿ ಯಾವ ಸಮಯದಲ್ಲಿ ಜ್ವರ ಹೆಚ್ಚಾಗಿ ಬರುತ್ತದೆ?
ಜ್ವರ ಯಾವುದೇ ತಿಂಗಳಿನಲ್ಲಿ ಬರಬಹುದು, ಜ್ವರ ಬಂದ ತಕ್ಷಣ ವೈದ್ಯರಿಗೆ ತೋರಿಸಿ. ತೀವ್ರ ಜ್ವರ ಬಂದ್ರೆ ಕಷ್ಟ. ಒಂದು ವೇಳೆ ಜ್ವರ ಅಧಿಕವಾದರೆ ಗಾಬರಿಯಾಗಬೇಡಿ, ನೀವು ಗಾಬರಿಯಾದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಮಗುವಿಗೆ ಏನೂ ತೊಂದರೆಯಾಗದಂತೆ ವೈದ್ಯರು ನೋಡಿಕೊಳ್ಳುತ್ತಾರೆ. ನೀವು ಅವರು ನೀಡಿರುವ ಔಷಧಗಳನ್ನು ತೆಗೆದುಕೊಳ್ಳಿ, ಅವರ ಸಲಹೆ ಸೂಚನೆಗಳನ್ನು ಪಾಲಿಸಿ.

ಜ್ವರ ಬರುವುದನ್ನು ತಡೆಗಟ್ಟಬಹುದೇ?
ಗರ್ಭಿಣಿಯಾಗಿದ್ದಾಗ ಸ್ವಲ್ಪ ಮುನ್ನೆಚ್ಚರಿಕೆವಹಿಸಿದರೆ ಈ ರೀತಿಯ ಅಪಾಯ ತಡೆಗಟ್ಟಬಹುದು. ವೈರಲ್‌ ಸೋಂಕು ತುಂಬಾ ಇದ್ದ ಸಮಯದಲ್ಲಿ ತುಂಬಾನೇ ಎಚ್ಚರಿಕೆವಹಿಸಿ. ಗರ್ಭಿಣಿ ಇರುವ ಮನೆಯವರು ಎಚ್ಚರಿಕೆವಹಿಸಬೇಕು. ತಮಗೆ ಜ್ವರ ಬಂದರೆ ಅವಳಿಂದ ಅಂತರ ಕಾಯ್ದುಕೊಳ್ಳಬೇಕು.
* ಆರೋಗ್ಯಕರ ಆಹಾರ ಸೇವಿಸಿ, ವಿಟಮಿನ್ ಸಿ ಇರುವ ಆಹಾರ ಸೇವಿಸಿ, ಇವುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಜ್ವರವಿದ್ದಾಗ ಪೋಷಕಾಂಶವಿರುವ ಆಹಾರ ಸೇವಿಸಿ
* ಸಾಕಷ್ಟು ನೀರು ಕುಡಿಯಿರಿ: ನೀರಿನಂಶ ಕಡಿಮೆಯಾದರೆ ಅಪಾಯ, ಆದರೆ ತುಂಬಾ ನೀರು ಕುಡಿಯಿರಿ
* ತಾಜಾ ಜ್ಯೂಸ್‌ ಕುಡಿಯಿರಿ: ಸಕ್ಕರೆ ಹಾಕಬೇಡಿ, ಹೊರಗಡೆಯ ಜ್ಯೂಸ್‌, ರೆಡಿ ಜ್ಯೂಸ್‌ ಸೇವಿಸಬೇಡಿ.
* ಚಿಕನ್ ಸೂಪ್ ಕುಡಿಯುವುದು ಒಳ್ಳೆಯದು
* ತುಂಬಾ ಸಿಹಿ ಪದಾರ್ಥ ಸೇವಿಸಬೇಡಿ, ಜ್ಯೂಸ್‌ಗೆ ಸಕ್ಕರೆ ಹಾಕಿ ಕುಡಿಯಬೇಡಿ.

* ಕಿವಿ ಹಣ್ಣುಗಳನ್ನು ಸೇವಿಸಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ಸೇಬು ಸೇವಿಸಿ
* ವಿಟಮಿನ್‌ ಸಿ ಅಧಿಕವಿರುವ ಆಹಾರಗಳನ್ನು ಸೇವಿಸಿ: ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಸೇವಿಸಿ
* ಮೊಟ್ಟೆ ಸೇವಿಸಿ: ಮೊಟ್ಟೆ ಚೆನ್ನಾಗಿ ಬೇಯಿಸಿ ತಿನ್ನಿ.
* ಬೇಳೆ, ಕಾಟೇಜ್ ಸಾಸ್‌, ತರಕಾರಿ ಸೂಪ್‌ ಇವುಗಳನ್ನು ಸೇವಿಸಿ.
ಈ ಬಗೆಯ ಆಹಾರಗಳು ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.

English summary

Fever During Pregnancy: Symptoms, Causes & Treatment in Kannada

Fever During Pregnancy: What are the causes, how to prevent it, read on...
X
Desktop Bottom Promotion