For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಪ್ರೇಮ: ಕಾರಣಗಳು, ತೊಂದರೆ, ತಡೆಗಟ್ಟುವುದು ಹೇಗೆ?

|

ಹದಿಹರೆಯದ ಪ್ರೇಮ ಹೇಗೆ ಅಂಕುರಿಸುತ್ತದೆ? ಉತ್ತರ ಕ್ಲಿಷ್ಟವಾಗಿದೆ ಹಾಗೂ ಸಾಮಾನ್ಯವಾಗಿ ಪರಿಸ್ಥಿತಿಯನ್ನು ಬಹಳವೇ ಜಟಿಲಗೊಳಿಸುತ್ತದೆ. ಆದರೆ ಸಾಮಾನ್ಯವಾಗಿ ಬಹುತೇಕ ಪ್ರೇಮ ಅಂಕುರಿಸಲು ಕಾರಣ ಹೀಗಿದೆ.

ಪ್ರೇಮಕ್ಕೆ ಇದೆಲ್ಲಾ ಕಾರಣ ಇರಬಹುದು

ಪ್ರೇಮಕ್ಕೆ ಇದೆಲ್ಲಾ ಕಾರಣ ಇರಬಹುದು

ಸಾಮಾನ್ಯವಾಗಿ ಪ್ರೌಢಶಾಲೆಯ ಹಂತದಲ್ಲಿಯೇ ಹೆಚ್ಚಿನ ಪ್ರೇಮ ಪ್ರಕರಣಗಳು ಪ್ರಾರಂಭಗೊಳ್ಳುತ್ತವೆ. ಸರಳ ಕಾರಣಗಳಲ್ಲಿ ಲೈಂಗಿಕ ಆಕರ್ಷಣೆ, ಜೊತೆಯಲ್ಲಿ ಸಂಭ್ರಮಿಸುವುದು, ಭಾವನಾತ್ಮಕವಾಗಿ ಅರಿತುಕೊಳ್ಳುವುದು, ಸಮಾಜದಲ್ಲಿ ಬೆರೆಯುವುದು, ಸೂಕ್ಷ್ಮ ಪರಿಗಣನೆ, ದೈಹಿಕ ವಾತ್ಸಲ್ಯ, ಸ್ನೇಹ ಭಾವನೆ ಮತ್ತು ಪ್ರಣಯ ಉತ್ಸಾಹ ಇವೆಲ್ಲವೂ ಓರ್ವ ವ್ಯಕ್ತಿಯನ್ನು ಕೇವಲ ನಿಮಗಾಗಿಯೇ ಇರುವಂತಹ ಭಾವನೆ ಮೂಡಿಸಲು ಕಾರಣವಾಗುತ್ತವೆ.

ಇಂದಿನ ದಿನಗಳಲ್ಲಿ ಪ್ರೇಮದಲ್ಲಿ ಜೋಡಿಯಾಗಿರುವುದು ಮತ್ತು ಪರಸ್ಪರರಲ್ಲಿ ಅನುರಕ್ತರಾಗಿರುವುದು ಹದಿಹರೆಯದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಒಬ್ಬರ ಮನಸ್ಸಿನಲ್ಲಿ ಇನ್ನೊಬ್ಬರು ಗಾಢವಾಗಿ ಆವರಿಸಿಕೊಂಡಿರುತ್ತಾರೆ. ಜೀವನ ಪರ್ಯಂತ ಇದೇ ವ್ಯಕ್ತಿ ಜೀವನ ಸಂಗಾತಿಯಾಗಬೇಕೆಂದು ಹಂಬಲಿಸುತ್ತಾರೆ. ಹೆಚ್ಚು ಹೆಚ್ಚು ಸಮಯವನ್ನು ತಮ್ಮ ಸ್ನೇಹಿತರಿಂತಲೂ ಇವರು ಈ ವ್ಯಕ್ತಿಯೊಂದಿಗೆ ಕಳೆಯುತ್ತಾರೆ ಹಾಗೂ ಇವರ ಪ್ರತಿ ಅತೀವವಾದ ಸಂವೇದನೆಯನ್ನು ಪ್ರಕಟಿಸುತ್ತಾರೆ. ಇಬ್ಬರಲ್ಲಿ ಯಾರಿಗಾದರೂ ನೋವಾದರೆ ಇನ್ನೊಬ್ಬರು ಮಾನಸಿಕ ವೇದನೆಯನ್ನು ಅನುಭವಿಸುತ್ತಾರೆ. ಇವರ ಅನ್ಯೋನ್ಯತೆ ಎಷ್ಟು ಹೆಚ್ಚುತ್ತದೆಂದರೆ ಇದುವರೆಗೆ ಆತ್ಮೀಯರಾಗಿದ್ದ ವ್ಯಕ್ತಿಗಳೆಲ್ಲರಿಗಿಂತ ಹೆಚ್ಚು ಆತ್ಮೀಯತೆಯನ್ನು ಇವರು ಪ್ರಕಟಿಸುತ್ತಾರೆ.

ಪಾಲಕರಿಗೆ ತಿಳಿದಾಗ

ಪಾಲಕರಿಗೆ ತಿಳಿದಾಗ

ತಮ್ಮ ಮಗ ಅಥವಾ ಮಗಳು ಪ್ರೇಮದಲ್ಲಿದ್ದಾಳೆಂದು ತಿಳಿದ ಬಳಿಕ ಅವರೊಂದಿಗೆ ವ್ಯವಹರಿಸುವಾಗ ಇರುವ ಸಂಕೀರ್ಣತೆಯನ್ನು ವಿಚಾರಿಸಲು ಎದುರಾಗುವ ಉದ್ವಿಗ್ನತೆಗಳನ್ನು ಪೋಷಕರು ಗಮನದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಪ್ರೇಮಕ್ಕೆ ಹಲವಾರು ಅಡೆತಡೆಗಳು ಈ ಹಂತದಿಂದ ಪ್ರಾರಂಭವಾಗುತ್ತವೆ ಹಾಗೂ ಈ ಸಂಬಂಧ ಮುಂದುವರೆಸುವುದರಿಂದ ಎದುರಾಗುವ ಅಪಾಯಗಳು ಮತ್ತು ತೊಂದರೆಗಳ ಬಗ್ಗೆ ವಿವರಣೆ ನೀಡಲಾಗುತ್ತದೆ.

ಸಾಮಾನ್ಯವಾಗಿ ಪ್ರೌಢಶಾಲೆಯಲ್ಲಿದ್ದಾಗಲೇ ಪೋಷಕರು ತಮ್ಮ ಮಕ್ಕಳ ಹದಿಹರೆಯದ ಪ್ರೇಮದ ಬಗ್ಗೆ ಅರಿತುಕೊಳ್ಳುತ್ತಾರೆ. ಆದರೆ ಈ ಪ್ರೀತಿ ಮುಂದೆ ಗಹನವಾಗಬಹುದು ಎಂದು ಅವರು ಊಹಿಸಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅವರು ತಮ್ಮ ಮಕ್ಕಳ ಆಯ್ಕೆಯನ್ನು ಪುರಸ್ಕರಿಸುವುದಿಲ್ಲ. ಬದಲಿಗೆ ಆ ವ್ಯಕ್ತಿಯ ಬಗ್ಗೆ ಅನುಮಾನಗಳನ್ನು ಹೊಂದುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳೆಲ್ಲಾದರೂ ಲೈಂಗಿಕ ಆಕರ್ಷಣೆಗೆ ಒಳಗಾಗಿ ಮುಂದುವರೆದುಬಿಟ್ಟರೆ ಎಂಬ ಆತಂಕಕ್ಕೂ ಒಳಗಾಗುತ್ತಾರೆ. ಆದರೆ ಪ್ರೀತಿಯ ಉತ್ಕಟತೆ ಹೆಚ್ಚಿದ್ದರೆ ಪೋಷಕರ ವಿರೋಧವೂ ಪ್ರೀತಿಯನ್ನು ಇನ್ನಷ್ಟು ಭುಗಿಲೆಬ್ಬಿಸಬಹುದು.

ಹೆಚ್ಚಿನ ಸಂದರ್ಭದಲ್ಲಿ ಪ್ರೇಮಿಗಳು ತಮ್ಮ ಬಂಧುಬಾಂಧವರೊಂಗಿದೆ ತಮ್ಮ ಪ್ರೇಮಿ ಬೆರೆತುಕೊಳ್ಳುವಂತೆ ಹಾಗೂ ಪೋಷಕರ ಮನ ಗೆಲ್ಲುವ ಪ್ರಯತ್ನ ಮಾಡುತ್ತಾರೆ. ಈ ಮೂಲಕ ತಮ್ಮ ಪ್ರೇಮದ ಬಗ್ಗೆ ಸದಭಿಪ್ರಾಯ ಪಡೆಯುವಂತೆ ಮಾಡುತ್ತಾರೆ. ಇನ್ನೂ ಹಲವು ಹದಿಹರೆಯದ ಪ್ರೇಮ ಸಂಬಂಧಗಳಲ್ಲಿ, ದಂಪತಿಗಳ ನಡುವೆ ಇರುವ ಭಾವನಾತ್ಮಕ ಅನ್ಯೋನ್ಯತೆಯನ್ನು ದೃಢೀಕರಿಸಲು ಲೈಂಗಿಕ ಅನ್ಯೋನ್ಯತೆಯನ್ನೂ ಪ್ರಯತ್ನಿಸಲಾಗುತ್ತದೆ. ಸಾಮಾನ್ಯವಾಗಿ ಪೋಷಕರೇ ತಮ್ಮ ಮಕ್ಕಳ ನೆರವಿಗೆ ಬಂದು ಪರಿಸ್ಥಿತಿಯನ್ನು ಅರಿಯಲು ಯತ್ನಿಸುವುದು ಹಾಗೂ ಮಕ್ಕಳ ಮನ ಗೆಲ್ಲುವುದು ಅಗತ್ಯವಾಗಿದೆ. ಈ ಮೂಲಕ ಮುಂದೆ ಎದುರಾಗಬಹುದಾದ ಪ್ರೀತಿಯ ಸಂಕೀರ್ಣತೆಗಳು ಮತ್ತು ಗೊಂದಲಗಳನ್ನು ತಡೆಯಬಹುದು.

ಯಾವುದೇ ಪೋಷಕರಿಗೆ ಇಷ್ಟವಾಗದ ವಿಷಯವೆಂದರೆ ಈ ಪ್ರೀತಿಯ ಮೂಲಕ ಬರುವ ಫಲಿತಾಂಶಗಳು. ಉದಾಹರಣೆಗೆ, ಇಬ್ಬರ ಪ್ರೀತಿ ಹೆಚ್ಚುತ್ತಿದ್ದಂತೆಯೇ ಇವರು ಹಲವಾರು ಅಗತ್ಯ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಲು ನೆಪಗಳನ್ನು ಹುಡುಕತೊಡಗುತ್ತಾರೆ ಹಾಗೂ ಸಮಾಜದ ಕಣ್ಣಿಗೆ ಗುರಿಯಾಗುತ್ತಾರೆ. ತಮ್ಮ ಪ್ರೀತಿ ಗಟ್ಟಿಗೊಳ್ಳಬೇಕಾದರೆ ಹೀಗೆಲ್ಲಾ ಸುತ್ತಾಡುವುದು ಅತಿ ಅಗತ್ಯ ಎಂದು ಇಬ್ಬರ ಮನದಲ್ಲಿಯೂ ಇರುತ್ತದೆ. ಪರಸ್ಪರ ಅನ್ಯೋನ್ಯತೆಯನ್ನು ಪ್ರಕಟಿಸುವ ಮೂಲಕ ಪ್ರೀತಿ ಮತ್ತು ಬದ್ದತೆಯನ್ನು ಇವರು ಪ್ರಕಟಿಸುತ್ತಾರೆ.

ಪ್ರೇಮದಲ್ಲಿದ್ದರೆ ಆಗುವ ಸಮಸ್ಯೆಗಳು

ಪ್ರೇಮದಲ್ಲಿದ್ದರೆ ಆಗುವ ಸಮಸ್ಯೆಗಳು

ಸಾಮಾನ್ಯವಾಗಿ ಈ ಪ್ರೀತಿ ಎಷ್ಟು ನಾಜೂಕು ಎಂದರೆ ಪ್ರೇಮಿಯ ಚಿಕ್ಕ ತಪ್ಪು ಅಥವಾ ಕೆಟ್ಟ ಇರಾದೆಯ ಬಗ್ಗೆ ಅರಿವಾದ ತಕ್ಷಣ ಈ ಪ್ರೀತಿ ಮುರಿದು ಬೀಳುತ್ತದೆ. ಪ್ರೀತಿ ಕುಸಿದಾಕ್ಷಣ, ಅಸಹಾಯಕ, ದ್ರೋಹಭಾವನೆ, ಕೈಬಿಡಲಾದ ಅಥವಾ ತಿರಸ್ಕರಿಸಲಾದ ನೋವನ್ನು ಅನುಭವಿಸತೊಡಗುತ್ತಾರೆ. ಅದರಲ್ಲೂ ಯುವತಿಯರೇ ಈ ದುಃಖಕ್ಕೆ ಹೆಚ್ಚು ಬಲಿಯಾಗುತ್ತಾರೆ ಮತ್ತು ಹೆಚ್ಚು ಖಿನ್ನತೆಯಿಂದ ಪ್ರತಿಕ್ರಿಯಿಸಬಹುದು. ಈ ಖಿನ್ನತೆ ಕೆಲವರಿಗೆ ಅಪಾಯಕಾರಿ ನಿರ್ಣಯಗಳನ್ನು ಪಡೆಯಲು ಪ್ರೇರಣೆ ನೀಡಬಹುದು. "ನಾನು ಅವನಿಲ್ಲದೆ ಬದುಕಲು ಸಾಧ್ಯವಿಲ್ಲ!" "ನಾನು ಮತ್ತೆ ಪ್ರೀತಿಸುವುದಿಲ್ಲ!" ಎಂಬ ಹೇಳಿಕೆಗಳೂ ಬರಬಹುದು.

ಇದಕ್ಕೆ ತದ್ವಿರುದ್ಧವಾಗಿ, ಕಠಿಣವಾದ, ನೋಯಿಸುವ ಭಾವನೆಗಳನ್ನು ನಿಗ್ರಹಿಸಲು ಮತ್ತು ಏಕಾಂಗಿಯಾಗಿರಲು ಹೆಚ್ಚು ಒಗ್ಗಿಕೊಂಡಿರುವ ಯುವಕರು ಹೆಚ್ಚು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಬಹುದು. ನಷ್ಟವನ್ನು ನೋವಿನಿಂದ ಕೋಪಕ್ಕೆ ತಿರುಗಿಸುವ ಮೂಲಕ ಅದನ್ನು ನಿರ್ವಹಿಸಲು ಅವರು ಹೆಚ್ಚು ಒಲವು ತೋರಬಹುದು. ಅವರು ಅದರ ಬಗ್ಗೆ ಏನಾದರೂ ಮಾಡಲು ನಿರ್ಧರಿಸಬಹುದು, ತಾನು ಅನುಭವಿಸಿದ ನೋವಿಗೆ ಪ್ರತಿಯಾಗಿ ಪ್ರೇಮಿಯನ್ನು ಮರಳಿ ಪಡೆಯಲು, ನಿಯಂತ್ರಣವನ್ನು ಮತ್ತೆ ಸಾಧಿಸಲು, ಸಾಮಾಜಿಕ ಸಹಾನುಭೂತಿ ಪಡೆಯಲು ಪ್ರಯತ್ನಿಸಬಹುದು. ಕೆಲವೊಮ್ಮೆ ತದ್ವಿರುದ್ದವಾಗಿ ಕೆಟ್ಟದಾಗಿ, ಅವರು ಇತರ ವ್ಯಕ್ತಿಗೆ ಹಾನಿ ಮಾಡುವ ಅಪಾಯವನ್ನೂ ಹೊಂದಿರುತ್ತಾರೆ. "ಅವಳು ನನ್ನನ್ನು ನೋಯಿಸಲು ಹೊರಟಿದ್ದಳು!" "ಅದಕ್ಕೆ ಸರಿಯಾದ ಬೆಲೆ ತೆರುತ್ತಾಳೆ!" ಎಂದೆಲ್ಲಾ ಪ್ರತಿಕ್ರಿಯಿಸುತ್ತಾರೆ.

ಪೋಷಕರಿಗೆ ಮಾರ್ಗಸೂಚಿ

ಪೋಷಕರಿಗೆ ಮಾರ್ಗಸೂಚಿ

* ಮಕ್ಕಳ ಚಲನವಲನಗಳ ಮೇಲೆ ಸದಾ ನಿಗಾ ಇಟ್ಟಿರಿ

* ಹೆಚ್ಚಿನ ಬಿಡುವಿನ ಸಮಯವನ್ನು ಮಕ್ಕಳ ಜತೆ ಕಳೆಯಿರಿ

* ಸ್ನೇಹಪರ ವಾತಾವರಣ ಕಲ್ಪಿಸಿ, ಅವರ ಯಾವುದೇ ಭಾವನೆ ನಿಮ್ಮ ಹಂಚಿಕೊಳ್ಳವಂತಿರಲಿ.

* ನಿಮ್ಮ ಹದಿಹರೆಯದ ಮಕ್ಕಳು ಪ್ರೀತಿಯಲ್ಲಿ ಬೀಳುವುದು ಮತ್ತು ಇದರ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ.

* ಏನೋ ಮಕ್ಕಳು, ದುಡುಕಿದ್ದಾರೆ, ಇರಲಿ ಬಿಡಿ ಎಂದು ಸಡಿಲ ಬಿಡದಿರಿ.

* ಪ್ರೌಢಶಾಲೆಯಲ್ಲಿರುವ ನಿಮ್ಮ ಮಗ ಅಥವಾ ಮಗಳು ಪ್ರೀತಿಯ ಸಂಬಂಧದಲ್ಲಿ ಸಿಲುಕಿಕೊಂಡರೆ, ಖಿನ್ನತೆಯ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆ ಎದುರಾಗುವ ಯಾವುದೇ ಚಿಹ್ನೆಗಳು ಕಾಣಬರುತ್ತಿವೆಯೇ ಎಂದು ನೀವು ಗಮನಿಸಿ.

* ತಕ್ಷಣವೇ ಸೂಕ್ತ ಕ್ರಮವನ್ನು ಕೈಗೊಳ್ಳಿ.

* ಪ್ರೀತಿಯನ್ನು ನೇರವಾಗಿ ನಿರಾಕರಣೆ ಮಾಡಬೇಡಿ. ಆತನ/ಅವಳ ನಡವಳಿಕೆ, ಹಿನ್ನಲೆ ಗಮನಿಸಿ ನಂತರ ಅದರ ಬಗ್ಗೆ ಅರಿವು ನೀಡಿ.

* ಪ್ರೀತಿ ದ್ವೇಷವಾಗಿ ಪರಿವರ್ತನೆಯಾಗದಂತೆ ಎಚ್ಚರವಹಿಸಿ, ಇದರಿಂದ ನಿಮ್ಮ ಮಗಳ/ಮಗನ ಜೀವನಕ್ಕೆ ಹಾನಿಯಾಗಬಹುದು.

English summary

Adolescence Love: Reasons, Problems And Prevention

When teenagers fall in love, what have they fallen into? The answer is, into a depth of caring more complex and compelling than they have known before. From what little I’ve seen in counseling, the majority of dating adolescents in high school do not fall in love. They don’t experience in a single relationship that magical match that includes: sexual attraction, mutual enjoyment, emotional knowing, social compatibility, sensitive consideration, physical affection, friendship feeling, and romantic excitement all combining to create a sense of caring, commitment, and completeness that make the other person the only one for you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more