ಮಗು ಬಯಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು

Posted By: Lekhaka
Subscribe to Boldsky

ಇಂದಿನ ಪುರುಷರು ಹಾಗೂ ಮಹಿಳೆಯರು ತುಂಬಾ ಚಿಂತೆಗೀಡು ಮಾಡುವ ವಿಚಾರವೆಂದರೆ ಮಕ್ಕಳಿಲ್ಲದೆ ಇರುವುದು. ಸಂತಾನಭಾಗ್ಯ ಇಲ್ಲದೆ ಇರುವಂತಹವರ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಸಂತಾಹೀನತೆಗೆ ಹಲವಾರು ರೀತಿಯ ಕಾರಣಗಳು ಇವೆ. ಅನುವಂಶೀಯ ಅಸ್ವಸ್ಥತೆಗಳು, ಬೊಜ್ಜು ಮತ್ತು ಮದ್ಯಪಾನದ ದಾಸರಾಗಿರುವುದು. ಬದಲಾಗಿರುವಂತಹ ಜೀವನಶೈಲಿ ಕೂಡ ಸಂತಾನಹೀನತೆಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತಿದೆ. ಸಂತಾನಹೀನತೆಯಲ್ಲಿ ಮಧುಮೇಹವು ಪ್ರಮುಖ ಪಾತ್ರ ವಹಿಸುವುದು ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ದೇಹವು ಇನ್ಸುಲಿನ್ ಉತ್ಪಾದಿಸಲು ವಿಫಲವಾಗುವುದು ಮತ್ತು ಕೋಶಗಳು ಇನ್ಸುಲಿನ್ ನ್ನು ಹೀರಿಕೊಳ್ಳಲು ವಿಫಲವಾಗಿರುವುದೇ ಇದಕ್ಕೆ ಕಾರಣ.

ಹಿಂದೆ 45-50 ಹರೆಯದ ದಾಟಿದ ಮೇಲೆ ಮಧುಮೇಹ ಕಾಣಿಸಿಕೊಳ್ಳುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಹದಿಹರೆಯ ದವರಲ್ಲೇ ಇದು ಸಾಮಾನ್ಯವೆನ್ನುವಂತಾಗಿದೆ. ಮಧುಮೇಹವು ಜೀವಹಾನಿ ಉಂಟು ಮಾಡುವುದಿಲ್ಲ. ಆದರೆ ಇದು ದೇಹದಲ್ಲಿ ಇತರ ಕೆಲವೊಂದು ಕಾಯಿಲೆ ಉಂಟು ಮಾಡಿ ಸಂತಾನಹೀನತೆಗೆ ಕಾರಣವಾಗುವುದು.

ಮಧುಮೇಹ ಮತ್ತು ಪುರುಷರಲ್ಲಿನ ಸಂತಾನಹೀನತೆಗೆ ಪರಸ್ಪರ ಸಂಬಂಧವಿದೆಯೆಂದು ತಿಳಿದುಬಂದಿದೆ. ಮಧುಮೇಹಿಗಳು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಮಗುವನ್ನು ಬಯಸುತ್ತಾ ಇರುವಂತಹ ದಂಪತಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಯ್ದುಕೊಳ್ಳುವುದು ಅತೀ ಅಗತ್ಯ. ಪುರುಷರ ಫಲವತ್ತತೆ ಮೇಲೆ ಪರಿಣಾಮ ಉಂಟುಮಾಡುವ ಮಧುಮೇಹದ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು ಎಂದು ತಿಳಿಯುವ.... 

ಅರೋಗ್ಯಕರ ಆಹಾರ

ಅರೋಗ್ಯಕರ ಆಹಾರ

ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವ ಮಧುಮೇಹವು ವೀರ್ಯ ಗಣತಿ ಕಡಿಮೆ ಮಾಡುವುದು ಎಂದು ತಿಳಿದುಬಂದಿದೆ. ಇದರಿಂದ ಪುರುಷರಿಗೆ ಮಕ್ಕಳಾಗುವುದಿಲ್ಲವೆಂದಲ್ಲ, ಆದರೆ ಆರೋಗ್ಯಕರ ಆಹಾರ ಕ್ರಮ ಪಾಲಿಸಬೇಕು.

ಹೆಚ್ಚಿನ ಉಷ್ಣತೆ ಕಡೆಗಣಿಸಿ

ಹೆಚ್ಚಿನ ಉಷ್ಣತೆ ಕಡೆಗಣಿಸಿ

ಪುರುಷರ ಫಲವತ್ತತೆ ಮೇಲೆ ಮಧುಮೇಹ ಬೀರುವಂತಹ ಪರಿಣಾಮವೆಂದರೆ ಅದು ವೀರ್ಯದ ಗುಣಮಟ್ಟ ಕಡಿಮೆ ಮಾಡುವುದು, ವೀರ್ಯ ಕುಂದಿಸುವುದು ಮತ್ತು ಮೆಟೊಕಾಂಡ್ರಿಯಾ ಹಾನಿ ಉಂಟು ಮಾಡುವುದು. ಇದರಿಂದ ಹೆಚ್ಚಿನ ಉಷ್ಣತೆಯಿಂದ ಆದಷ್ಟು ಮಟ್ಟಿಗೆ ದೂರವಿರಿ.

ಭಾವನಾತ್ಮಕ ಪ್ರೋತ್ಸಾಹ

ಭಾವನಾತ್ಮಕ ಪ್ರೋತ್ಸಾಹ

ಮಧುಮೇಹ ಇರುವ ಪುರುಷರಲ್ಲಿ ಕಾಮಾಸಕ್ತಿಯು ಕಡಿಮೆಯಾಗುವುದು. ಇದರಿಂದ ಮಹಿಳೆ ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಇಂತಹ ಸಮಯದಲ್ಲಿ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು ಅಥವಾ ಸಮಾಲೋಚಕರೊಂದಿಗೆ ಮಾತನಾಡಬೇಕು. ಇದರಿಂದ ಗರ್ಭ ಧರಿಸಲು ನೆರವಾಗಬಹುದು.

ನಿಶ್ಯಕ್ತಿ ನಿವಾರಿಸಿ

ನಿಶ್ಯಕ್ತಿ ನಿವಾರಿಸಿ

ಮಧುಮೇಹವಿರುವ ಪುರುಷರಿಗೆ ಯಾವಾಗಲೂ ಸಂಭೋಗದ ವೇಳೆ ನಿಶ್ಯಕ್ತಿಯು ಕಾಡುತ್ತಲಿರುವುದು. ಮಧುಮೇಹಿಗಳಿಗೆ ಇದು ಕೊನೆಯ ಪ್ರಯತ್ನವಲ್ಲ ಮತ್ತು ಕೆಲವೊಂದು ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸಮಸ್ಯೆ ನಿವಾರಿಸಬಹುದು.

ಹಾರ್ಮೋನು ಸಮತೋಲನ ಕಾಪಾಡಿ

ಹಾರ್ಮೋನು ಸಮತೋಲನ ಕಾಪಾಡಿ

ಇನ್ಸುಲಿನ್ ಎಂದರೆ ಮೇಧೋಜೀರಕ ಗ್ರಂಥಿಗಳು ಬಿಡುಗಡೆ ಮಾಡುವಂತಹ ಹಾರ್ಮೋನುಗಳು ಮತ್ತು ಮಧುಮೇಹವೆಂದರೆ ಇನ್ಸುಲಿನ್ ಮಟ್ಟದಲ್ಲಿ ಅಸಮತೋಲವಾಗುವುದು. ಇದು ಸಂತಾನೋತ್ಪತ್ತಿಯ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದು ಮತ್ತು ಹಾರ್ಮೋನು ಮಟ್ಟವನ್ನು ವೈದ್ಯಕೀಯ ನೆರವಿನಿಂದ ಕಾಪಾಡುವುದು ಅತೀ ಅಗತ್ಯ.

ವ್ಯಾಯಾಮ

ವ್ಯಾಯಾಮ

ಮಧುಮೇಹಿಗಳು ಹೆಚ್ಚಾಗಿ ಬೊಜ್ಜು ದೇಹ ಹೊಂದಿರುವರು ಮತ್ತು ಇದು ಕೂಡ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವುದು. ದೈನಂದಿನ ವ್ಯಾಯಾಮವು ಸಂತಾನೋತ್ಪತ್ತಿ ಸಾಧ್ಯತೆ ಹೆಚ್ಚಿಸುವುದು.

ವೈದ್ಯಕೀಯ ನೆರವು

ವೈದ್ಯಕೀಯ ನೆರವು

ಮಧುಮೇಹವು ನರಕ್ಕೆ ಹಾನಿಯನ್ನು ಉಂಟು ಮಾಡಬಹುದು. ಇದರಿಂದ ವೀರ್ಯವು ನೇರವಾಗಿ ಮೂತ್ರಕೋಶದೊಳಗೆ ಹೋಗಬಹುದು. ಇದು ಮಧುಮೇಹ ಇರುವ ಪುರುಷರಲ್ಲಿ ಸಂತಾನೋತ್ಪತ್ತಿ ಮೇಲೆ ಪರಿಣಾಮ ಉಂಟು ಮಾಡುವುದು. ಸರಿಯಾದ ವೈದ್ಯಕೀಯ ನೆರವಿನಿಂದ ಈ ಸಮಸ್ಯೆ ನಿವಾರಣೆ ಮಾಡಬಹುದು.

ಆ್ಯಂಟಿಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು

ಆ್ಯಂಟಿಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು

ಮಧುಮೇಹ ಮತ್ತು ಪುರುಷರ ಫಲವತ್ತತೆಯು ಒಂದಕ್ಕೊಂದು ಸಂಬಂಧ ಹೊಂದಿದೆ. ಸಕ್ಕರೆ ಮಟ್ಟದಲ್ಲಿ ಹೆಚ್ಚಳವಾದರೆ ಆಗ ಫ್ರೀ ರ್ಯಾಡಿಕಲ್ ಕೂಡ ಹೆಚ್ಚಾಗುವುದು. ಇದರಿಂದ ಅನುವಂಶಿಕ ಹಾನಿಯಾಗಬಹುದು ಮತ್ತು ಫಲವತ್ತತೆ ಮೇಲೆ ಪರಿಣಾಮವಾಗುವುದು. ಮಗು ಬಯಸುವಿರಾದರೆ ಮೊದಲು ನೀವು ಆ್ಯಂಟಿಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ.

ಸಂಗಾತಿಯನ್ನು ಅರಿತುಕೊಳ್ಳುವುದು

ಸಂಗಾತಿಯನ್ನು ಅರಿತುಕೊಳ್ಳುವುದು

ಮಧುಮೇಹ ಇರುವಂತಹ ಪುರುಷರಿಗೆ ನಿಮಿರುವಿಕೆ ಕಾಪಾಡಲು ತುಂಬಾ ಕಷ್ಟವಾಗುವುದು. ಈ ಸಮಸ್ಯೆ ನಿವಾರಣೆ ಮಾಡಲು ಸಂಗಾತಿ ಜತೆಗೆ ಸರಿಯಾಗಿ ಮಾತನಾಡಿ. ಸಂವಹನವು ಸರಿಯಾಗಿದ್ದರೆ ಸಮಸ್ಯೆ ಬಗೆಹರಿಯುವುದು.

ಸಂಶೋಧನೆಗಳ ಪ್ರಕಾರ

ಸಂಶೋಧನೆಗಳ ಪ್ರಕಾರ

ಈ ಬಗ್ಗೆ ನಡೆಸಿದ ಸಂಶೋಧನೆಗಳ ಪ್ರಕಾರ ಮಧುಮೇಹ ನಿಜವಾಗಿಯೂ ಪುರುಷರ ಸಂತಾನಫಲ ಕಡಿಮೆಗೊಳಿಸುತ್ತದೆ, ಎಂದು ಖಚಿತಪಡಿಸಲಾಗಿದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವ ಈ ಸ್ಥಿತಿಗೆ sperm apoptosis ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ವೀರ್ಯಾಣುಗಳ ಒಳಗಣ ಡಿ ಎನ್ ಎ ರಚನೆಯೇ ತುಂಡಾಗಿರುತ್ತದೆ.

ಮಧುಮೇಹ ಪುರುಷನ ದಾಂಪತ್ಯ ಜೀವನವನ್ನು ಇನ್ನೂ ಯಾವ ರೀತಿ ಬಾಧಿಸುತ್ತದೆ?

ಮಧುಮೇಹ ಪುರುಷನ ದಾಂಪತ್ಯ ಜೀವನವನ್ನು ಇನ್ನೂ ಯಾವ ರೀತಿ ಬಾಧಿಸುತ್ತದೆ?

ಮಧುಮೇಹಿಗಳು ಕಾಮಕೂಟದಲ್ಲಿ ಮೊದಲಿನಷ್ಟು ಚಟುವಟಿಕೆಯಿಂದ ಪಾಲ್ಗೊಳ್ಳಲು ಸಾಧ್ಯವಾಗದೇ ಇರಬಹುದು. ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಹಾಗೂ ಉದ್ರೇಕತೆಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಸಾಧ್ಯವಾಗದೆಯೂ ಹೋಗಬಹುದು.

ಟೈಪ್ 1 ಅಥವಾ ಟೈಪ್ 2 ಮಧುಮೇಹ? ಇವೆರಡರಲ್ಲಿ ಯಾರಿಗೆ ಹೆಚ್ಚು ಬಾಧಿಸುತ್ತದೆ?

ಟೈಪ್ 1 ಅಥವಾ ಟೈಪ್ 2 ಮಧುಮೇಹ? ಇವೆರಡರಲ್ಲಿ ಯಾರಿಗೆ ಹೆಚ್ಚು ಬಾಧಿಸುತ್ತದೆ?

ಒಂದು ಸಂಶೋಧನೆಯ ಪ್ರಕಾರ ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರ ವೀರ್ಯಾಣುಗಳು ಹೆಚ್ಚು ಘಾಸಿಗೊಳಗಾಗಿರ ಬಹುದು. ಅಲ್ಲದೇ ಈ ವ್ಯಕ್ತಿಗಳ ವೀರ್ಯಾಣುಗಳ ಸಂಖ್ಯೆಯ ಪ್ರಮಾಣವೂ ಕಡಿಮೆಯಾಗಿರಬಹುದು.

ಇದನ್ನು ಸಂಶೋಧಕರು ಕಂಡುಕೊಂಡಿದ್ದಾದರೂ ಹೇಗೆ?

ಇದನ್ನು ಸಂಶೋಧಕರು ಕಂಡುಕೊಂಡಿದ್ದಾದರೂ ಹೇಗೆ?

ಇತ್ತೀಚಿನ ಸಂಶೋಧನೆಯೊಂದರಲ್ಲಿ ಸಾಮಾನ್ಯ ಜೀವನ ನಡೆಸುತ್ತಿರುವ 25-45 ವರ್ಷ ವಯಸ್ಸಿನ ಮಧುಮೇಹಿ ಪುರುಷರ ಆರೋಗ್ಯವನ್ನು ಅಭ್ಯಸಿಸಲಾಗಿತ್ತು. ಮಧುಮೇಹಿಗಳಲ್ಲಿ ಈ ಬಗೆಯ ವಿರೂಪ ಡಿ ಎನ್ ಎ ಇರುವ ವೀರ್ಯಾಣುಗಳು ಮಧುಮೇಹಿಗಳಲ್ಲಿಯೇ ಕಂಡುಬಂದಿತ್ತು.

English summary

Male Fertility: Precautions For Diabetic Men

The connections between male fertility and diabetes are just coming to light. Precautions must be taken if you are diabetic and trying for a baby. Diabetic patients should take extra care to keep their blood sugar levels normal before trying for a baby. Here, we may discuss the precautions that have to be taken to avoid the effects of diabetes on male fertility.