For Quick Alerts
ALLOW NOTIFICATIONS  
For Daily Alerts

ಹೆರಿಗೆ ಸಹಜವಾಗಲು ಈ ಟಿಪ್ಸ್‌ಗಳನ್ನು ತಪ್ಪದೆ ಪಾಲಿಸಿ

|

ನಿಮ್ಮದು ಸಹಜ ಹೆರಿಗೆಯೇ ಎಂದು ಅಚ್ಚರಿಯಿಂದ ಕೇಳುವ ದಿನಗಳು ಈಗ ಆರಂಭವಾಗಿದೆ, ಏಕೆಂದರೆ ಎಲ್ಲೆಡೆ ಸಿಸೇರಿಯನ್‌ ಹೆಚ್ಚಾಗಿದೆ. ಮನಸ್ಸಿನಲ್ಲಿ ನಾರ್ಮಲ್ ಡೆಲಿವರಿ ಆಗಬೇಕು ಎಂಬ ಆಸೆ ಇದ್ದರೂ ಅದರಿಂದ ಎದುರಾಗುವ ತೊಂದರೆಗಳನ್ನು ಮತ್ತು ಹೆರಿಗೆ ಸಮಯದಲ್ಲಿ ಅಪಾರವಾದ ನೋವು ಅನುಭವಿಸಬೇಕು ಎಂಬ ಭಯದಿಂದ ಗರ್ಭಿಣಿ ಮಹಿಳೆಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ.

ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ತುಂಬಾ ಹಣ ಖರ್ಚಾಗುತ್ತದೆ. ಆದರೆ ಇಲ್ಲೂ ಕೂಡ ಕೆಲವು ತೊಂದರೆಗಳು ಇದ್ದೇ ಇರುತ್ತವೆ. ಸಿಸೇರಿಯನ್‌ನಿಂದ ದೀರ್ಘಕಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು ತುಂಬಾನೆ ಇದೆ. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಸರಿಯಾಗಿ ಗಮನ ವಹಿಸದಿದ್ದರೆ ಹೆರಿಗೆ ಸಮಯದಲ್ಲಿ ಮಹಿಳೆಯ ಪ್ರಾಣ ಹೋಗುವ ಸಾಧ್ಯತೆ ಸಹ ಇರುತ್ತದೆ, ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇದೆ. ಕೆಲವೊಮ್ಮೆ ರಕ್ತ ಸ್ರಾವ ಕಡಿಮೆ ಆಗುವಂತಹ ಔಷಧಿಗಳನ್ನು ಸರಿಯಾಗಿ ನೀಡಿದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ಇದರ ಬಗ್ಗೆ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ತಿಳಿದುಕೊಳ್ಳಬೇಕು.

ಸಹಜ ಹೆರಿಗೆ ಬಯಸುವ ಗರ್ಭಿಣಿಯರು ಅನುಸರಿಸಬೇಕಾದ ಕೆಲವು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ:

1 ಗರ್ಭಾವಸ್ಥೆಗೆ ಮುಂಚೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

1 ಗರ್ಭಾವಸ್ಥೆಗೆ ಮುಂಚೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ವೈದ್ಯಕೀಯ ತಂಡ ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಬಗೆಯ ತೊಂದರೆಗಳು ಮತ್ತು ಗರ್ಭಾವಸ್ಥೆಯಲ್ಲಿ ಹಾಗು ಹೆರಿಗೆಯ ಸಮಯದಲ್ಲಿ ಎಂತಹ ಸಂದರ್ಭಗಳು ಎದುರಾಗಬಹುದು ಎಂಬ ಬಗ್ಗೆ ತರಗತಿಗಳನ್ನು ನಡೆಸುತ್ತಾರೆ. ಒಂದು ವೇಳೆ ನಿಮಗೆ ನಿಮ್ಮ ಹತ್ತಿರದಲ್ಲಿ ಈ ಸೌಲಭ್ಯವಿದ್ದರೆ ಇದನ್ನು ಉಪಯೋಗಿಸಿಕೊಳ್ಳಿ. ಇಲ್ಲವೆಂದರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ. ಗರ್ಭಾವಸ್ಥೆಗೆ ತಲುಪುವ ಮುಂಚೆ ಗರ್ಭಾವಸ್ಥೆಯ ಸಮಯದಲ್ಲಿ ಅನುಸರಿಸಬೇಕಾದ ಆಹಾರ ಪದ್ಧತಿ, ವ್ಯಾಯಾಮ, ನೋವು ರಹಿತ ಹೆರಿಗೆ ಇತ್ಯಾದಿಗಳ ಬಗ್ಗೆ ಸಂಪೂರ್ಣ ಅರಿವು ಮೂಡಿಸಿಕೊಳ್ಳಿ.

2 ನಿಯಮಿತವಾದ ವ್ಯಾಯಾಮ

2 ನಿಯಮಿತವಾದ ವ್ಯಾಯಾಮ

ಗರ್ಭಿಣಿಯರು ಗರ್ಭಾವಸ್ಥೆಯ ಸಮಯದಲ್ಲಿ ತಮ್ಮ ದೇಹಕ್ಕೆ ಎಷ್ಟು ಕೆಲಸ ಕೊಡಬೇಕು. ಯಾವಾಗಲೂ ಒಂದು ಕಡೆ ಸುಮ್ಮನೆ ಕೂರುವುದರಿಂದ ದೇಹದ ರೋಗ - ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕೈಲಾದ ಸಣ್ಣ ಪುಟ್ಟ ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು ಸರಳವಾದ ವ್ಯಾಯಾಮ ಮಾಡಬೇಕು. ಪ್ರಮುಖವಾಗಿ ಸೊಂಟದ ಭಾಗದ ಮಾಂಸ ಖಂಡಗಳು ಸಲೀಸಾಗುವಂತೆ ಮತ್ತು ಹೆರಿಗೆಯ ಸಮಯದಲ್ಲಿ ಕಂಡು ಬರುವ ನೋವನ್ನು ಸಹಿಸಿಕೊಳ್ಳುವಂತೆ ಅನುಕೂಲವಾಗುವ ವ್ಯಾಯಾಮಗಳು ಈ ಸಮಯದಲ್ಲಿ ಬಹಳ ಮುಖ್ಯ.

3 ಆರೋಗ್ಯಕರ ಆಹಾರ ಪದ್ಧತಿ ಮರೆಯಬೇಡಿ

3 ಆರೋಗ್ಯಕರ ಆಹಾರ ಪದ್ಧತಿ ಮರೆಯಬೇಡಿ

ಗರ್ಭಿಣಿ ಆಗುವುದಕ್ಕೆ ಮುಂಚೆ ಸೇವಿಸುವ ಆಹಾರಕ್ಕೆ ಮಿತಿ ಇರುವುದಿಲ್ಲ. ಕಣ್ಣಿಗೆ ಬೇಕಾದ ಆಹಾರ ಜಂಕ್ ಫುಡ್ ಗಳನ್ನು ಸೇವಿಸುವುದು ಅಭ್ಯಾಸವಾಗಿರುತ್ತದೆ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಹಲವಾರು ಆಹಾರಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ತಾಜಾ ಹಣ್ಣು ತರಕಾರಿ ಹೆಚ್ಚಾಗಿ ಸೇವಿಸಬೇಕು. ಹೆಚ್ಚು ಬೆಂದ ತರಕಾರಿಗಳಲ್ಲಿ ಯಾವುದೇ ಪೌಷ್ಟಿಕಾಂಶ ಇರುವುದಿಲ್ಲ. ದೇಹವನ್ನು ತಂಪಾಗಿಸಿಕೊಳ್ಳಲು ಹೆಚ್ಚಿನ ದ್ರವಾಹಾರಗಳನ್ನು ತೆಗೆದುಕೊಂಡು ಆರೋಗ್ಯಕರವಾದ ತೂಕ ನಿರ್ವಹಣೆಗೆ ಅತಿಯಾದ ಕೊಬ್ಬಿನ ಅಂಶಗಳನ್ನು ಉಂಟು ಮಾಡುವ ಆಹಾರಗಳನ್ನು ದೂರ ಇಡಬೇಕು.

4 ಮಾನಸಿಕ ಒತ್ತಡದಿಂದ ದೂರವಿರಿ

4 ಮಾನಸಿಕ ಒತ್ತಡದಿಂದ ದೂರವಿರಿ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಸಾಕಷ್ಟು ಸಮಸ್ಯೆಗಳು ಕಂಡು ಬರುವುದರಿಂದ ಮಾನಸಿಕವಾಗಿ ತೊಂದರೆ ಉಂಟಾಗುತ್ತದೆ. ಜೊತೆಯಲ್ಲಿ ಮನೆಯಲ್ಲಿನ ಸಮಸ್ಯೆ ಏನಾದರೂ ಇದ್ದರೆ ಅದನ್ನೂ ತಲೆಗೆ ಹಚ್ಚಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಮಾನಸಿಕವಾಗಿ ಒಬ್ಬ ಗರ್ಭಿಣಿ ಮಹಿಳೆಯು ನೊಂದರೆ ಅದರ ಪ್ರಭಾವ ನೇರವಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ಉಂಟಾಗುತ್ತದೆ ಎಂದು ಹೇಳುತ್ತಾರೆ.

5 ಚೆನ್ನಾಗಿ ಕಣ್ತುಂಬ ನಿದ್ರೆ ಮಾಡಿ

5 ಚೆನ್ನಾಗಿ ಕಣ್ತುಂಬ ನಿದ್ರೆ ಮಾಡಿ

ವೈದ್ಯರು ಹೇಳುವ ಹಾಗೆ ಒಬ್ಬ ಆರೋಗ್ಯವಂತ ವ್ಯಕ್ತಿ 8 ರಿಂದ 10 ಗಂಟೆಗಳ ಕಾಲ ಪ್ರತಿ ರಾತ್ರಿ ನಿದ್ರೆ ಮಾಡಲೇಬೇಕು. ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು ನಡೆಯಬಾರದು ಎಂದು ಸೂಚಿಸುತ್ತಾರೆ. ಇದು ಗರ್ಭಿಣಿಯರಿಗೂ ಅನ್ವಯವಾಗುತ್ತದೆ. ತಮ್ಮ ಮಾನಸಿಕ ತೊಳಲಾಟದಿಂದ ದೂರವಾಗಲು, ತಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ರಾತ್ರಿಯ ಸಮಯದಲ್ಲಿ ಗರ್ಭಿಣಿಯರು ಚೆನ್ನಾಗಿ ನಿದ್ರೆ ಮಾಡಬೇಕು.

6. ಹೆಚ್ಚು ನೀರು ಕುಡಿಯಿರಿ

6. ಹೆಚ್ಚು ನೀರು ಕುಡಿಯಿರಿ

ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿ ದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣದ ಸಮಸ್ಯೆಯಿಂದ ದೂರ ಮಾಡುವುದರ ಜೊತೆಗೆ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ದ್ರವ ಅಂಶಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಡುವ ಮೂತ್ರನಾಳದ ಸೋಂಕು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂದು ಹೇಳುತ್ತಾರೆ.

English summary

How to have normal Delivery In kannada

Here we are discussing about How to have normal Delivery In kannada. Read more.
Story first published: Friday, December 2, 2022, 19:15 [IST]
X
Desktop Bottom Promotion