For Quick Alerts
ALLOW NOTIFICATIONS  
For Daily Alerts

ನವಜಾತ ಶಿಶು ಸಂರಕ್ಷಣಾ ದಿನ: ಮಕ್ಕಳ ಅಕಾಲಿಕ ಸಾವು ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿವು

|

2020ರ ಸ್ಟಾಟಿಸ್ಟಾ ವರದಿ ಪ್ರಕಾರ ಭಾರತದಲ್ಲಿ ಪ್ರತೀ ಸಾವಿರ ನವಜಾತ ಶಿಶುಗಳಲ್ಲಿ 27 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಗು ಜನಿಸಿದ ಮೇಲೆ ಅನೇಕ ಅನೇಕ ಕಾರಣಗಳಿಂದಾಗಿ ನವಜಾತ ಇಶುಗಳು ಸಾವನ್ನಪ್ಪುತ್ತಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ನವಜಾತ ಶಿಶುವಿನ ಆರೋಗ್ಯ, ಆರೈಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರತೀವರ್ಷ ನವೆಂಬರ್ 7ಕ್ಕೆ ನವಜಾತ ಶಿಶುವಿನ ಸಂರಕ್ಷಣಾ ದಿನವನ್ನು ಆಚರಿಸಲಾಗುವುದು.

Infant Protection Day 2022

ಕೆಲ ನವಜಾತ ಶಿಶುಗಳು ಪೋಷಕಾಂಶ ಕೊರತೆ, ಸರಿಯಾಗಿ ಆರೈಕೆ ಮಾಡದೇ ಇರುವುದು, ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪುತ್ತಿವೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮಕ್ಕಳಿಗೆ ಸೂಕ್ತ ಸಮಯಕ್ಕೆ ಚುಚ್ಚು ಮದ್ದು ನೀಡಲಾಗುತ್ತಿದೆಯೇ? ಮಗುವಿನ ಆರೈಕೆ ಹೇಗಿದೆ ಎಂಬುವುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತರನ್ನು ನಿಯೋಜಿಸಿದೆ.

ಜನಿಸಿದ ಮಗು ಸಾವನ್ನಪ್ಪದಿರಲು ಸರಕಾರ ಅನೇಕ ಅನೇಕ ಕ್ರಮಗಳನ್ನು ಕೈಗೊಂಡಿದೆ, ಇದರ ಬಗ್ಗೆ ತಿಳಿದುಕೊಳ್ಳುವುದರಿಂದ ನವಜಾತ ಶಿಶುಗಳ ಸಾವಿನ ಸಂಖ್ಯೆ ತಗ್ಗಿಸಬಹುದು:

 ಜನನಿ ಸುರಕ್ಷಾ ಯೋಜನೆ:

ಜನನಿ ಸುರಕ್ಷಾ ಯೋಜನೆ:

ನುರಿತ ತಜ್ಞರ ಮುಖಾಂತರ ಹೆರಿಗೆ ಮಾಡಿಸುವುದರಿಂದ ಮಗು ಹುಟ್ಟುವಾಗ ತೊಂದರೆಯಾಗುವುದನ್ನು ತಪ್ಪಿಸಬಹುದು.

ಅನಾರೋಗ್ಯಕರ ನವಜಾತ ಶಿಶುವಿನ ಆರೈಕೆಗೆ ವ್ಯವಸ್ಥೆ: ಎಲ್ಲಾ ಸೌಕರ್ಯವಿರುವ ಅಂದ್ರೆ SNCUs,NBSUs, NBCCs ವ್ಯವಸ್ಥೆ ಇರುವ ಕಡೆ ಹೆರಿಗೆಯಾದರೆ ಮಗುವಿಗೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಕೂಡಲೇ ಚಿಕಿತ್ಸೆ ನೀಡಲು ಸಹಕಾರಿ. ಹಲವು ಸರಕಾರಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಇವೆ.

ತಾಯಿಗೆ ಮಗುವಿನ ಆರೈಕೆ ಬಗ್ಗೆ ಮಾಹಿತಿ ನೀಡುವುದು: ವೈದ್ಯಯರು ಹಾಗೂ ANMs ಅವರು ಮಗುವಿನ ಆರೈಕೆ ಬಗ್ಗೆ ತಾಯಿಗೆ ಮಾಹಿತಿ ನೀಡುತ್ತಾರೆ. ಮಗುವಿಗೆ ದಿನದಲ್ಲಿ ಎಷ್ಟು ಬಾರಿ ಹಾಲುಣಿಸಬೇಕು, ಯಾವಾಗ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಈ ಎಲ್ಲಾ ಬಗ್ಗೆ ಮಾಹಿತಿ ನೀಡಲಾಗುವುದು.

ಲಸಿಕೆ

ಲಸಿಕೆ

* ಮಗುವಿಗೆ ಯಾವ ಸಮಯದಲ್ಲಿ ಯಾವ ಲಸಿಕೆ ಹಾಕಿಸಬೇಕು ಎಂಬುವುದರ ಬಗ್ಗೆ ಚಾರ್ಟ್ ನೀಡಲಾಗುವುದು, ಅಲ್ಲದೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ನೀಡಲಾಗುತ್ತಿದೆಯೇ ಎಂಬುವುದನ್ನು ಸ್ಥಳೀಯ ಆರೋಗ್ಯ ಇಲಾಖೆ ಗಮನಿಸುತ್ತಿರುತ್ತದೆ.

ತಾಯಿ ಹಾಗೂ ಮಗುವಿನ ಟ್ರ್ಯಾಕಿಂಗ್ ಸಿಸ್ಟಮ್ (MCTS): ಮಹಿಳೆ ಗರ್ಭಿಣಿಯಾಗಿದ್ದಾಗಲೇ ತಾಯಿಕಾರ್ಡ್ ನೀಡಲಾಗುವುದು, ಅಲ್ಲದೆ ಗರ್ಭಿಣಿಯರಿಗೆ ಪೋಷಕಾಂಶಕಾಂಶದ ಆಹಾರ ನೀಡಲಾಗುವುದು. ಮಗುವಿನಲ್ಲಿ ಪೋಷಕಾಂಶದ ಕೊರತೆ ಉಂಟಾಗದಿರಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ.

ನವಜಾತ ಶಿಶುವಿನ ಸಾವಿನ ಸಂಖ್ಯೆ ತಗ್ಗಿಸಲು ಮಹಿಳೆ ಗರ್ಭಿಣಿಯಾದಾಗಲೇ ಇನ್‌ಫ್ಲುಯೆಂಜಾ ಮುಂತಾದ ಲಸಿಕೆ ನೀಡಲಾಗುವುದು.

 ಸ್ತನಪಾನದ ಬಗ್ಗೆ ಜಾಗೃತಿ

ಸ್ತನಪಾನದ ಬಗ್ಗೆ ಜಾಗೃತಿ

ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟಾಗದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನಪಾನ ಅವಶ್ಯಕ. ಆದ್ದರಿಂದ ಸ್ತನಪಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸ್ತನಮಾನದಿಂದ ನವಜಾತ ಶಿಶುಗಳ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು.

English summary

Infant Protection Day 2022 : Measures taken to Reduce Infant Mortality Rate; Know details in Kannada

Infant Protection Day 2022 : What are the measures taken to reduce infant mortality rate, why breastfeeding must for babies read on....
X
Desktop Bottom Promotion