For Quick Alerts
ALLOW NOTIFICATIONS  
For Daily Alerts

ಮಗುವಿಗೆ ಅಜೀರ್ಣ ಉಂಟಾಗದಿರಲು ಹೀಗೆ ಮಾಡಿ

|

ಹೆರಿಗೆ ಬಳಿಕ ಮೊದಲ ಸಲ ಮಗುವಿನ ಮುಖ ನೋಡಿದಾಗ ತಾಯಿಯ ಮನಸ್ಸಿನಲ್ಲಿ ತನ್ನ ಜೀವನ ಸಾರ್ಥಕ ಎನ್ನುವ ಭಾವನೆ ಮೂಡುವುದು. ಸುಂದರ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಾಯಿ ಏನೇನೋ ಕನಸುಗಳನ್ನು ಕಟ್ಟಿಕೊಳ್ಳುವಳು. ಆದರೆ ಮೊದಲ ಸಲ ಅಥವಾ ಎರಡನೇ ಹೆರಿಗೆ ಆಗಿರಬಹುದು, ಶಿಶುವಿನ ಲಾಲನೆ ಪಾಲನೆ ಎನ್ನುವುದು ತುಂಬಾ ಕಠಿಣ ಕೆಲಸವಾಗಿರುವುದು.

ಮಗುವಿಗೆ ಒಂದು ವರ್ಷವಾಗುವ ತನಕ ಅದನ್ನು ಒಂದು ಹೂವಿನಿಂತಲೂ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಅದರಲ್ಲೂ ಕೆಲವೊಂದು ಸಲ ಮಗು ಅತ್ತಾಗ, ಅದು ಯಾಕಾಗಿ ಅಳುತ್ತಿದೆ ಎನ್ನುವ ತಿಳಿವಳಿಕೆಯು ತಾಯಿಯಲ್ಲಿ ಇರಬೇಕು. ಇಲ್ಲವಾದಲ್ಲಿ ಖಂಡಿತವಾಗಿಯೂ ಎಡವಟ್ಟಾಗುವುದು. ಹೆಚ್ಚಾಗಿ ಶಿಶುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತದ್ದು ಅಜೀರ್ಣದ ಸಮಸ್ಯೆ.

baby digestion

ಸಣ್ಣ ಶಿಶುವಿನ ಜೀರ್ಣಕ್ರಿಯೆ ವ್ಯವಸ್ಥೆಯು ಅಷ್ಟೊಂದು ಪ್ರಬಲವಾಗಿ ಇಲ್ಲದೆ ಇರುವ ಕಾರಣದಿಂದಾಗಿ ಅಜೀರ್ಣ ಸಮಸ್ಯೆಯು ಸಾಮಾನ್ಯವಾಗಿರುವುದು. ಇಂತಹ ಸಮಯದಲ್ಲಿ ಮಗು ತುಂಬಾ ಅಳಲು ಆರಂಭಿಸುವುದು. ಮಗು ಅಜೀರ್ಣಕ್ಕೆ ಒಳಗಾಗಿ ಹೊಟ್ಟೆ ನೋವಿನಿಂದ ಅಳಬಹುದು. ಹೀಗಾಗಿ ಮಗುವಿನ ಅಜೀರ್ಣ ಸಮಸ್ಯೆ ನಿವಾರಣೆ ಮಾಡಲು ಏನು ಮಾಡಬೇಕು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಶಿಶುವಿಗೆ ಮಸಾಜ್

ಶಿಶುವಿಗೆ ಮಸಾಜ್

ಶಿಶುವಿಗೆ ಮಸಾಜ್ ಮಾಡಿದರೆ ಅದರಿಂದ ಜೀರ್ಣಕ್ರಿಯೆ ಸಮಸ್ಯೆಯು ನಿವಾರಣೆ ಆಗುವುದು. ಮಗುವಿನ ಹೊಕ್ಕಳಿನ ಬಳಿ ಮಸಾಜ್ ಮಾಡಲು ಆರಂಭಿಸಿ, ಗಡಿಯಾರ ತಿರುಗುವ ಕ್ರಮದಲ್ಲಿ ಕೆಳಮುಖವಾಗಿ ಮಸಾಜ್ ಮಾಡಿ. ಒಂದು ಬೆರಳಿನಿಂದ ಆರಂಭಿಸಿ, ಅಂಗೈಯಿಂದ ಮಸಾಜ್ ಮಾಡಿ. ನಯವಾಗಿ ಕೆಳಭಾಗಕ್ಕೆ ಒತ್ತಿರಿ. ಮಗುವಿನ ಕಾಲುಗಳನ್ನು ಮೇಲೆ ಕೆಳಗೆ ಮಾಡುವ ಮೂಲಕವು ಜೀರ್ಣಕ್ರಿಯೆಗೆ ಸಹಕಾರಿ ಆಗಿರಲಿದೆ.

ಬಿಸಿ ಶಾಖ

ಬಿಸಿ ಶಾಖ

ಮಗುವಿಗೆ ಬಿಸಿ ಶಾಖವೆಂದರೆ ಅದು ದೊಡ್ಡವರಿಗೆ ನೀಡುವಂತಹ ಶಾಖದಂತಲ್ಲ. ಇದಕ್ಕೆ ಬೇರೆಯೇ ಕ್ರಮವಿದೆ. ನೀವು ಒಂದು ಪಿಂಗಾಣಿ ಬಿಸಿ ನೀರು ತೆಗೆದುಕೊಳ್ಳಿ. ಒಂದು ಸ್ವಚ್ಛ ಬಟ್ಟೆ ಕೂಡ ತೆಗೆದುಕೊಳ್ಳಿ.

ಏನು ಮಾಡಬೇಕು

ಸ್ವಚ್ಛ ಬಟ್ಟೆಯನ್ನು ಬಿಸಿ ನೀರಿನ ಪಾತ್ರೆಗೆ ಹಾಕಿ. ಬಟ್ಟೆಯನ್ನು ಅದ್ದಿಕೊಳ್ಳಿ ಮತ್ತು ಬಿಸಿ ಶಾಖವನ್ನು ಮಗುವಿನ ಹೊಟ್ಟೆಯ ಮೇಲಿಡಿ. ಒಂದು ನಿಮಿಷ ಹಾಗೆ ಬಿಡಿ ಮತ್ತು ಬಳಿಕ ತೆಗೆಯಿರಿ. 2-3 ಸಲ ನೀವು ಹೀಗೆ ಮಾಡಿ.

ಇದನ್ನು ಎಷ್ಟು ಸಲ ಮಾಡಬೇಕು?

ಮಗುವಿನ ಪರಿಸ್ಥಿತಿಯು ಸುಧಾರಣೆ ಆಗುವ ತನಕ ನೀವು ಪ್ರತಿದಿನವೂ 1-2 ಸಲ ಹೀಗೆ ಮಾಡಬಹುದು.

ಇದು ಹೇಗೆ ಕೆಲಸ ಮಾಡುವುದು?

ಬಿಸಿ ಶಾಖವು ಹೊಟ್ಟೆಯನ್ನು ಶಮನಗೊಳಿಸುವುದು ಹಾಗೂ ಶಾಂತವಾಗಿಡುವುದು. ಇದು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ತಡೆಯುವುದು.

ಮಗುವಿಗೆ ಹಾಲುಣಿಸುವ ಭಂಗಿ ಬದಲಾಯಿಸಿ

ಮಗುವಿಗೆ ಹಾಲುಣಿಸುವ ಭಂಗಿ ಬದಲಾಯಿಸಿ

ಮಗುವಿಗೆ ಹಾಲುಣಿಸುವ ಭಂಗಿ ಬದಲಾಯಿಸಿಕೊಂಡರೆ ಆಗ ಖಂಡಿತವಾಗಿಯೂ ಆಮ್ಲೀಯ ಹಿಮ್ಮುಖ ಹರಿವಿನ ಸಮಸ್ಯೆಯು ನಿವಾರಣೆ ಆಗುವುದು. ಹಾಲು ಹಿಂದಕ್ಕೆ ಬರದಂತೆ ಮಗುವಿಗೆ ಹಾಲುಣಿಸುವ ವೇಳೆ ಸ್ವಲ್ಪ ಎತ್ತರವಾಗಿ ಹಿಡಿದುಕೊಳ್ಳಬೇಕಾಗಿದೆ. ಹಾಲುಣಿಸಿದ ಬಳಿಕ ಮಗುವನ್ನು 30 ನಿಮಿಷಗಳ ಕಾಲ ಹಾಗೆ ಮೇಲಕ್ಕೆ ಎತ್ತಿ ಹಿಡಿಯಬೇಕಾಗಿದೆ.

ಮೊಸರು

ಮೊಸರು

ಏನು ಬೇಕು?

ತೆಳುವಾಗಿಸಿಕೊಂಡಿರುವ ಮೊಸರು

ಏನು ಮಾಡಬೇಕು?

ಶುದ್ಧ ನೀರಿನಿಂದ ಮೊಸರನ್ನು ತೆಳು ಮಾಡಿಕೊಳ್ಳಿ.

ಇದನ್ನು ಮಗುವಿಗೆ ಸ್ವಲ್ಪ ಸ್ವಲ್ಪ ನೀಡಿ.

ಸೂಚನೆ: ಈ ಮನೆಮದ್ದನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು.

ಇದನ್ನು ಎಷ್ಟು ಸಲ ನೀಡಬೇಕು?

ಅಜೀರ್ಣ ಸಮಸ್ಯೆಯು ಮಗುವಿಗೆ ಕಾಡಿದ ವೇಳೆ ನೀವು ಈ ಮನೆಮದ್ದನ್ನು ನೀಡಬಹುದಾಗಿದೆ.

ಇದು ಹೇಗೆ ಕೆಲಸ ಮಾಡುವುದು?

ಶಿಶುಗಳಲ್ಲಿ ಇರುವಂತಹ ಜಠರಗರುಳಿನ ಸಮಸ್ಯೆಯ ಲಕ್ಷಣಗಳನ್ನು ಮೊಸರಿನಂತಹ ಕೆಲವು ಹಾಲಿನ ಉತ್ಪನ್ನಗಳು ಕಡಿಮೆ ಮಾಡುವುದು ಎಂದು ಹೇಳಲಾಗಿದೆ.

ತೇಗು ಬರಿಸುವುದು

ತೇಗು ಬರಿಸುವುದು

ಮಗುವಿಗೆ ಹಾಲುಣಿಸಿದ ಬಳಿಕ ತೇಗು ಬರಿಸುವಂತೆ ಮಾಡುವುದು ಅಜೀರ್ಣ ಸಮಸ್ಯೆ ನಿವಾರಣೆಗೆ ಮತ್ತೊಂದು ಒಳ್ಳೆಯ ಮದ್ದು. ತೇಗು ಬರಿಸುವಂತೆ ಮಾಡಿದರೆ ಆಗ ಮಗು ಕುಡಿದ ಹಾಲನ್ನು ವಾಂತಿ ಮಾಡುವಂತಹ ಸಮಸ್ಯೆಯು ಇರದು.

ಎದೆ ಹಾಲು

ಎದೆ ಹಾಲು

ಮಗುವಿಗೆ ಆರು ತಿಂಗಳ ತನಕ ಎದೆಹಾಲು ನೀಡುವುದು ಅತೀ ಅಗತ್ಯವಾಗಿರುವುದು. ಆರು ತಿಂಗಳ ಬಳಿಕವಷ್ಟೇ ನೀವು ಮಗುವಿಗೆ ಘನ ಆಹಾರ ನೀಡಬಹುದಾಗಿದೆ. ಇದರ ಬಳಿಕವೂ ಎದೆ ಹಾಲಿನ ಜತೆಗೆ ಸ್ವಲ್ಪ ಸ್ವಲ್ಪವೇ ಘನ ಆಹಾರ ನೀಡಬಹುದು. ಎರಡು ವರ್ಷದ ತನಕ ಮಗುವಿಗೆ ಎದೆ ಹಾಲು ನೀಡಿದರೆ ತುಂಬಾ ಒಳ್ಳೆಯದು. ಎದೆ ಹಾಲು ಮಗುವಿನ ಜೀರ್ಣಕ್ರಿಯೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.

ಇದೆಲ್ಲವೂ ಮಗುವಿನ ಅಜೀರ್ಣ ಸಮಸ್ಯೆ ನಿವಾರಣೆ ಮಾಡಲು ನೀಡಿರುವಂತಹ ಕೆಲವೊಂದು ಮನೆಮದ್ದುಗಳಾಗಿವೆ. ಇನ್ನು ಕೆಲವೊಂದು ವಿಧಾನಗಳನ್ನು ಶಿಶುಗಳ ಜೀರ್ಣಕ್ರಿಯೆ ಸುಧಾರಣೆ ಮಾಡಲು ಪಾಲಿಸಬಹುದು.

English summary

How To Improve Your Baby Digestion

Digestion problem is very common for babies. here are certain tips to reduce stomach pain and improve digestion in babies. Take a look.
X
Desktop Bottom Promotion