Just In
Don't Miss
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಫೇಸ್ಲಿಫ್ಟ್ ವರ್ಷನ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಆಪ್ತರಿಗೆ ಮಗುವಾದಾಗ ಶುಭ ಕೋರಲು ಇಲ್ಲಿವೆ ಗ್ರೀಟಿಂಗ್ಸ್
ಯಾವುದೇ ಕುಟುಂಬಕ್ಕಾಗಲೀ ಹೊಸ ಮಗುವಿನ ಆಗಮನವು ಹೊಸ ಸಂರೋಷ, ಹುರುಪನ್ನು ತಂದುಕೊಡುತ್ತದೆ. ಗಂಡ-ಹೆAಡತಿಯರು ಪೋಷಕರಾದಾಗ ಮಾತ್ರ ಅವರ ಸ್ಥಾನಕ್ಕೆ ಬೆಲೆ ಬರುವುದು. ಅಂತಹ ಸಮಯ ಎಲ್ಲರ ಜೀವನದಲ್ಲೂ ಅತ್ಯಮೂಲ್ಯವಾದದು. ಯಾವುದೇ ದಂಪತಿಗಳಿಗೆ ಮಗುವಾದಾಗ,ಅವರಿಗೆ ಶುಭಾಶಯ ಕೋರುವುದು ಹೇಗೆ ಎಂಬುದು ಎಲ್ಲರ ಮನದಲ್ಲೂ ಸಾಮಾನ್ಯವಾಗಿ ಮೂಡುವ ಪ್ರಶ್ನೆ. ಹೆಣ್ಣಾಗಲೀ ಅಥವಾ ಗಂಡಾಗಲೀ ಮಗು ಕುಟುಂಬದ ನಗುವಿನ ಕೇಂದ್ರಬಿAದುವಾಗಿರುತ್ತದೆ. ಎಲ್ಲರಲ್ಲೂ ಸಂತಸ ಮೂಡಿಸಿರುತ್ತದೆ. ಈ ಸಂಭ್ರಮವನ್ನು ಹೇಳಿಕೊಳ್ಳುವುದು ಹೇಗೆ ಎಂಬ ಸಮಸ್ಯೆ ಎಲ್ಲರಿಗೂ ಇರುತ್ತದೆ. ಅಂತಹವರಿಗೆ ನಾವು ಕೆಲವೊಂದು ಶುಭಾಶಯದ ಮಾದರಿಗಳನ್ನು ಪ್ರಸ್ತುತಪಡಿಸಿದ್ದೇವೆ.
ಹೊಸ ಮಗುವಿನ ಆಗಮನಕ್ಕೆ ಸಂದೇಶಗಳು:
1. ಹೊಸ ಮಗುವಿನ ಆಗಮನಕ್ಕೆ ಅಭಿನಂದನೆಗಳು !! ನಿಮ್ಮ ಕುಟುಂಬಕ್ಕೆ ಇದೊಂದು ಅದ್ಭುತ ಸಮಯ. ಈ ಸಂದರ್ಭವು ಸಾಕಷ್ಟು ವಿನೋದ, ಪ್ರೀತಿ ಮತ್ತು ಮುದ್ದಾಟಗಳಿಂದ ತುಂಬಿರಲಿ ಎಂದು ನಾವು ಭಾವಿಸುತ್ತೇವೆ. ಎಲ್ಲಾ ಒಳ್ಳೆಯದಾಗಲಿ.
2. ಅಭಿನಂದನೆಗಳು !! ನಿಮ್ಮ ಹೊಸ ಮಗುವಿನ ಆಗಮನದಿಂದ ಹೆತ್ತವರೆಂಬ ಪದವಿ ಪಡೆದಿದೀರಾ. ನಿಮ್ಮ ಕುಟುಂಬದಲ್ಲಿ ಮತ್ತಷ್ಟು ಸಂತೋಷ ಹಾಗೂ ನಗು ತುಂಬಿರಲಿ ಎಂದು ಶುಭ ಹಾರೈಸುತ್ತೇನೆ.
3. ಇದೊಂದು ಅತ್ಯಂತ ದೊಡ್ಡ ಸಂತಸದ ಸುದ್ದಿ. ನಿಮ್ಮ ಪಾಪು ಸುರಕ್ಷಿತವಾಗಿ ಈ ಭೂಮಿಗೆ ಬಹಳ ಸಂತೋಷವಾಗಿದೆ. ಹೆಮ್ಮೆಯ ಪೋಷಕರ ಪಾತ್ರಕ್ಕೆ ಕಾಲಿಟ್ಟಿರುವ ನಿಮಗೆ ಪ್ರೀತಿಯ ಅಭಿನಂದನೆಗಳು.
4. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಸುರಕ್ಷಿತ ಆಗಮನಕ್ಕೆ ಅಭಿನಂದನೆಗಳು!! ಮಗುವಿನ ಬಾಲ್ಯವು ಸಾಕಷ್ಟು ಸಂತೋಷದಿAದ ತುಂಬಿರಲಿ ಮತ್ತು ಅದ್ಭುತ ನೆನಪುಗಳನ್ನು ಕೊಡಲಿ. ಒಳ್ಳೆಯದಾಗಲಿ
5. ಪೋಷಕರಾಗಲು ಬಯಸುವ ಪ್ರೀತಿಯ ದಂಪತಿಗಳಿಗೆ ಮಗುವಿಗಿಂತ ದೊಡ್ಡ ಉಡುಗೊರೆ ಇಲ್ಲ! ನಿಮಗೆ ಆ ಇದೀಗ ಉಡುಗೊರೆ ದೊರೆತಿದೆ. ಅಭಿನಂದನೆಗಳು!
6. ವಿದಾಯ ಟಮ್ಮಿ. ಹಲೋ ಮಮ್ಮಿ! ನಿಮಗೆ ಮತ್ತು ನಿಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಚೀರ್ಸ್.
7. ನಿಮ್ಮ ಹೊಸ ಮತ್ತು ಆರೋಗ್ಯಕರ ಮಗುವಿನ ಸುರಕ್ಷಿತ ಆಗಮನಕ್ಕೆ ಅಭಿನಂದನೆಗಳು. ಯಾವುದೇ ರೀತಿಯಲ್ಲಿ ಯಾವಾಗ ಬೇಕಾದರೂ ನಾನು ಯಾವುದೇ ರೀತಿಯಲ್ಲಿ ಸಹಾಯ ಮಾಡಬಹುದೇ ಎಂದು ನನಗೆ ತಿಳಿಸಿ. ಪ್ರೀತಿಯಿಂದ ನಿಮ್ಮವರು...
8. ಇದು ಅದ್ಭುತ ಸುದ್ದಿ !! ನಿಮ್ಮಿಬ್ಬರಿಗಾಗಿ ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಬಾಲ್ಯವು ಅದ್ಭುತ ಮತ್ತು ದೀರ್ಘಕಾಲೀನ ನೆನಪುಗಳನ್ನು ತರುತ್ತದೆ ಎಂದು ಭಾವಿಸುತ್ತೇವೆ. ಈ ಪಯಣವನ್ನು ಚೆನ್ನಾಗಿ ಅನುಭವಿಸಿ, ಆನಂದಿಸಿ.
9. ಪೇರೆಂಟ್‌ವುಡ್‌ಗೆ ಸ್ಯಾಗತ, ಚೈಲ್ಡ್ವುಡ್‌ಗೆ ಹೇಳಿ ಬೈ ಬೈ! ಜೀವನದ ಅತ್ಯಂತ ಸುಂದರ ಸವಾಲಿಗೆ ಸಿದ್ಧರಾಗಿ, ಅದರಿಂದ ಬರುವ ಅದ್ಭುತ ಕ್ಷಣಗಳನ್ನು ಅನುಭವಿಸಿ, ಇದರಿಂದ ನೀವು ಉತ್ತಮ ಪೋಷಕರಾಗುತ್ತೀರಿ, ಅಭಿನಂದನೆಗಳು
10. ನವಮಾಸಗಳು ಕಳೆದುಹೋದವು. ಮತ್ತು ಈ ದಿನ ನೀವೋರ್ವ ಅಮೂಲ್ಯ ಮಾಣಿಕ್ಯನನ್ನು ನಿಮ್ಮ ಜೀವನಕ್ಕೆ ಬರಮಾಡಿಕೊಂಡಿರುವಿರಿ. ನಿಮ್ಮ ಸಂತಸವನ್ನು ನಾನೂ ಹಂಚಿಕೊಳ್ಳುವೆ ಹಾಗೂ ನಿಮ್ಮ ಕುಟುಂಬಕ್ಕೆ ಈ ರೋಮಾಂಚಕ ಸೇರ್ಪಡೆಯನ್ನು ನೀವು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ನಿಮಗೆ ನಿಮ್ಮ ಕುಟುಂಬಕ್ಕೆ ಶುಭ ಹಾರೈಕೆಗಳು