For Quick Alerts
ALLOW NOTIFICATIONS  
For Daily Alerts

ಸಣ್ಣ ಮಗುವಿನ ತಲೆಯಲ್ಲಿ ಬೆವರುವಿಕೆ ಜಾಸ್ತಿ ಏಕೆ ಗೊತ್ತೆ?

|

ತಮ್ಮ ಪುಟ್ಟ ಮಗುವಿನ ತಲೆಯಲ್ಲಿ ಬೆವರುವಿಕೆ ಜಾಸ್ತಿಯಾಗಿದ್ದನ್ನು ನೋಡಿ ಬಹುತೇಕ ತಂದೆ-ತಾಯಂದಿರು ಚಿಂತೆ ಗೊಳಗಾಗುತ್ತಾರೆ. ಮಗುವಿನ ತಲೆಯಲ್ಲಿ ಇಷ್ಟೇಕೆ ಬೆವರುತ್ತಿದೆ ಎಂಬುದು ತಿಳಿಯದೆ ಗೊಂದಲಕ್ಕೀಡಾಗುತ್ತಾರೆ. ಆದರೆ ಶಿಶು ನಿದ್ರಿಸುವಾಗ ಅಥವಾ ಹಾಲು ಕುಡಿಯುವಾಗ ತಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆವರುವಿಕೆ ಸಾಮಾನ್ಯವೇ ಆಗಿದೆ.

ಹೀಗಾಗಿ ಬೆವರುವಿಕೆ ನೋಡಿದ ತಕ್ಷಣ ಡಾಕ್ಟರ್ ಬಳಿಗೆ ಓಡುವ ಅಗತ್ಯವಿಲ್ಲ. ತುರ್ತಾಗಿ ಇದಕ್ಕೆ ಏನಾದರೂ ಚಿಕಿತ್ಸೆ ಮಾಡುವುದು ಬೇಕಿರುವುದಿಲ್ಲ. ಶಿಶುವಿನ ದೇಹಕ್ಕಿಂತ ತಲೆ ಬಿಸಿಯಾಗಿರುವುದನ್ನು ನೋಡಿ ಆತಂಕಗೊಳ್ಳುವುದು ಸಹ ಬೇಡ. ಏಕೆಂದರೆ ಶಿಶುಗಳ ದೇಹದ ಉಷ್ಣತೆಗಿಂತ ನೆತ್ತಿಯ ಉಷ್ಣತೆ ಹೆಚ್ಚಾಗಿರುವುದು ಸಹಜವಾಗಿದೆ. ಶಿಶುಗಳ ದೇಹಕ್ಕಿಂತ ನೆತ್ತಿಯ ಭಾಗದ ಉಷ್ಣತೆ ಹೆಚ್ಚಾಗಿರುವುದು ಏಕೆ ಎಂಬ ಕಾರಣಗಳನ್ನು ಪಾಲಕರಾದವರು ತಿಳಿದುಕೊಂಡರೆ ಆಗಾಗ ಆತಂಕದ ಕ್ಷಣಗಳನ್ನು ಎದುರಿಸುವುದು ತಪ್ಪುತ್ತದೆ. ಶಿಶುಗಳ ತಲೆಯ ಜಾಸ್ತಿ ಬೆವರುವಿಕೆಗೆ ಪ್ರಮುಖ ನಾಲ್ಕು ಕಾರಣಗಳನ್ನು ಇಲ್ಲಿ ವಿವರಿಸಲಾಗಿದ್ದು, ನೀವೂ ಓದಿಕೊಳ್ಳಿ. ಶಿಶುಗಳ ತಲೆಯಲ್ಲಿ ಜಾಸ್ತಿ ಬೆವರುವಿಕೆಗೆ ಪ್ರಮುಖ ಕಾರಣಗಳು..

ನಿಮ್ಮ ಮಗುವಿಗೆ ಜ್ವರ ಬಂದಿದೆಯಾ ನೋಡಿ

ನಿಮ್ಮ ಮಗುವಿಗೆ ಜ್ವರ ಬಂದಿದೆಯಾ ನೋಡಿ

ಬಹುತೇಕ ಶಿಶುಗಳ ದೇಹದ ಉಷ್ಣತೆಗಿಂತ ನೆತ್ತಿಯ ಭಾಗದ ಉಷ್ಣತೆ ಹೆಚ್ಚಾಗಿರುವುದು ಸಾಮಾನ್ಯವಾಗಿದೆ. ಇದು ಬಹುತೇಕ ಶಿಶುಗಳಲ್ಲಿ ಕಂಡುಬರುವ ಪ್ರಕ್ರಿಯೆಯೇ ಆಗಿದೆ. ಆದರೆ ನಿಮ್ಮ ಮಗುವಿಗೆ ಜ್ವರ ಏನಾದರೂ ಇದೆಯಾ ಎಂಬುದನ್ನು ಒಮ್ಮೆ ಪರಿಶೀಲಿಸಿ. ಗಲ್ಲ ಅಥವಾ ಗಲ್ಲದ ಕೆಳಗೆ ಕುತ್ತಿಗೆಯ ಮಧ್ಯಭಾಗದಲ್ಲಿ ಮುಟ್ಟಿ ನೋಡಿದರೆ ಜ್ವರ ಇದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಬಹುದಾಗಿದೆ. ಜ್ವರ ಇಲ್ಲವೆಂದಾದಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಶಿಶುಗಳ ದೇಹದ ಕಾರ್ಯಶೈಲಿ ದೊಡ್ಡವರ ದೇಹಕ್ಕಿಂತ ಭಿನ್ನವಾಗಿರುತ್ತದೆ. ಹೀಗಾಗಿ ನಿಮ್ಮ ಶಿಶುವಿನ ತಲೆಯ ಭಾಗ ದೇಹಕ್ಕಿಂತ ತುಸು ಹೆಚ್ಚು ಬಿಸಿ ಇದ್ದಲ್ಲಿ ಡೋಂಟ್ ವರಿ.

ಬೆವರು ಗ್ರಂಥಿಗಳು

ಬೆವರು ಗ್ರಂಥಿಗಳು

ನವಜಾತ ಶಿಶುಗಳಿಗೆ ತಲೆಯ ಭಾಗ ಬಿಟ್ಟು ದೇಹದ ಇನ್ನೆಲ್ಲೂ ಬೆವರು ಗ್ರಂಥಿಗಳು ಬೆಳವಣಿಗೆಯಾಗಿರುವುದಿಲ್ಲ. ಹೀಗಾಗಿ ಸಹಜವಾಗಿಯೇ ತಲೆಯಲ್ಲಿ ಹೆಚ್ಚು ಬೆವರುತ್ತದೆ. ನವಜಾತ ಶಿಶುಗಳ ತಲೆಯ ಭಾಗದಲ್ಲಿ ಮಾತ್ರ ಬೆವರು ಗ್ರಂಥಿಗಳು ಸಕ್ರಿಯವಾಗಿರುತ್ತವೆ. ಶಿಶುವಿನ ತಲೆಯಲ್ಲಿ ಹೆಚ್ಚು ಬೆವರುತ್ತಿದೆ ಎಂದರೆ ಮಗುವಿನ ದೇಹದ ಉಷ್ಣತೆ ಹೆಚ್ಚಾಗಿದ್ದು ಅದು ಹೊರಹೋಗುತ್ತಿದೆ ಎಂದು ಅರ್ಥ.

Most Read:ಮಗುವಿಗೆ ನೆಗಡಿ, ಕೆಮ್ಮು ಇದ್ದಾಗ ಲಸಿಕೆಯನ್ನು ಹಾಕಿಸಬಹುದೇ?

ರಾತ್ರಿ ಬೆವರುವಿಕೆ

ರಾತ್ರಿ ಬೆವರುವಿಕೆ

ಮಗು ಮಲಗಿದಾಗ ತಲೆಯಲ್ಲಿ ಹೆಚ್ಚು ಬೆವರುತ್ತಿದ್ದರೆ ಅದೂ ಸಹ ಸಹಜ ಕ್ರಿಯೆಯಾಗಿದೆ. ಶಿಶುಗಳು ದೊಡ್ಡವರಂತೆ ನಿದ್ದೆಯಲ್ಲಿ ಅತ್ತಿತ್ತ ಹೊರಳಾಡಲಾರವು. ಹೀಗಾಗಿ ಮಲಗಿದಾಗ ಶಿಶುಗಳ ತಲೆ ಒಂದೇ ಭಂಗಿಯಲ್ಲಿರುತ್ತದೆ. ಇದರಿಂದ ತಲೆಯ ಭಾಗ ಹೆಚ್ಚು ಬಿಸಿಯಾಗಿ ಅಲ್ಲಿ ಹೆಚ್ಚು ಬೆವರು ಬರಲಾರಂಭಿಸುತ್ತದೆ. ಇನ್ನು ಮಗುವಿಗೆ ಹೆಚ್ಚು ಹೊದಿಕೆಗಳನ್ನು ಸುತ್ತಿ ಮಲಗಿಸುವುದರಿಂದಲೂ ಹೆಚ್ಚು ಬೆವರು ಬರಬಹುದು. ಆದ್ದರಿಂದ ಮಗುವಿಗೆ ಯಾವತ್ತೂ ಅತಿಯಾಗಿ ಹೊದಿಕೆ ಸುತ್ತಿ ಮಲಗಿಸಬೇಡಿ. ಇದು ಒಮ್ಮೊಮ್ಮೆ ಶಿಶುವಿನ 'ಸಡನ್ ಡೆತ್ ಸಿಂಡ್ರೋಮ್' ಗೆ ಕಾರಣವಾಗಿ ಮಗುವಿನ ಪ್ರಾಣ ಹೋಗಬಹುದು.

Most Read:ಮುಟ್ಟಿನ ವೇಳೆ ಸೆಕ್ಸ್ ನಡೆಸಿದರೆ ಗರ್ಭಧರಿಸುವ ಸಂಭವವಿದೆಯಂತೆ!

 ಹಾಲೂಡಿಸುವಾಗ ಹೆಚ್ಚು ಬೆವರುವಿಕೆ

ಹಾಲೂಡಿಸುವಾಗ ಹೆಚ್ಚು ಬೆವರುವಿಕೆ

ತಾಯಂದಿರು ಸಾಮಾನ್ಯವಾಗಿ ಶಿಶುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹಾಲೂಡಿಸುತ್ತಾರೆ. ಎದೆಹಾಲು ಕುಡಿಸುವಾಗ ಮಗುವಿನ ತಲೆಯನ್ನು ಒಂದೇ ಭಂಗಿಯಲ್ಲಿರುವಂತೆ ತಾಯಂದಿರು ಹಿಡಿದಿರುತ್ತಾರೆ. ತಾಯಿಯ ಅಂಗೈಯಲ್ಲಿನ ಬಿಸಿ ಶಿಶುವಿನ ಮೃದುವಾಗ ತಲೆಗೆ ತಾಕುವುದರಿಂದಲೂ ತಲೆಯಲ್ಲಿ ಹೆಚ್ಚು ಬೆವರುವಿಕೆ ಆರಂಭವಾಗುತ್ತದೆ. ಆದಾಗ್ಯೂ ಶಿಶುವಿನ ತಲೆಯ ಭಾಗದಲ್ಲಿ ಯಾವಾಗಲೂ ಹೆಚ್ಚು ಉಷ್ಣತೆಯಿದ್ದು, ಬೆವರುವಿಕೆ ತೀರಾ ಜಾಸ್ತಿ ಅನಿಸಿದಲ್ಲಿ ತಕ್ಷಣ ವೈದ್ಯರನ್ನು ಕಂಡು ತಪಾಸಣೆ ಮಾಡಿಸಬೇಕು ಎಂಬುದನ್ನು ಮರೆಯದಿರಿ.

English summary

Why Your Baby's Head Is Sweating

Many new parents get worked up when they see that their baby's head is sweating. In fact, it comes under one of the frequently asked questions by parents. If your baby's head is sweating while sleeping or feeding, then don't rush to the doctor immediately. There is nothing to worry about urgently. Most new parents get scared when they feel their baby's head.
X
Desktop Bottom Promotion