For Quick Alerts
ALLOW NOTIFICATIONS  
For Daily Alerts

ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಒಮ್ಮೆ ಈ ಟಿಪ್ಸ್ ಅನುಸರಿಸಿ ನೋಡಿ...

ಮಗುವಿನ ಪಾದವನ್ನು ಮೆತ್ತಗೆ ಒತ್ತಿದರೆ ಸಾಕು ಅಳುತ್ತಿರುವ ಮಗು ಥಟ್ಟನೆ ಅಳುವುದನ್ನು ನಿಲ್ಲಿಸುತ್ತದೆ. ಖಂಡಿತ ಫಲಕಾರಿಯಾಗಿರುವ ಈ ವಿಧಾನದಿಂದ ನಿಮ್ಮ ಮಗುವನ್ನು ಸಾಂತ್ವಾನಪಡಿಸಬಹುದಾಗಿದೆ.....

By Jaya Subramanya
|

ಮಕ್ಕಳು ದೇವರ ಸಮಾನ ಎಂಬುದಾಗಿ ಹಿರಿಯರು ನುಡಿಯುತ್ತಾರೆ. ಹಾಗೆಯೇ ಮಕ್ಕಳಿರಲವ್ವಾ ಮನೆತುಂಬಾ ಎಂಬುದಾಗಿ ಹಿರಿಯರು ಬಾಯ್ತುಂಬಾ ಹರಸುತ್ತಾರೆ. ಮಗುವಿನ ನಗು ಮನೆಯೆಲ್ಲಾ ಹರಡಿದರೆ ಯಾರಿಗೆ ತಾನೇ ಸಂತಸವಾಗುವುದಿಲ್ಲ ಹೇಳಿ. ಮನದಲ್ಲಿ ಎಷ್ಟೇ ದುಃಖ ದುಮ್ಮಾನ ದುಗುಡಗಳಿದ್ದರೂ ನಗುತ್ತಿರುವ ಮಗುವಿನ ಮುಖವನ್ನು ನೋಡಿದಾಗ ಆ ದುಮ್ಮಾನವೆಲ್ಲಾ ಮಾಯವಾಗಿಬಿಡುತ್ತದೆ. ಹೀಗೆ ಮಗುವಿನ ನಗುವಿಗೆ ಮಕ್ಕಳ ಕೇಕೆಗೆ ಅದಮ್ಯ ಶಕ್ತಿಯಿದೆ.

baby crying

ಆದರೆ ಅಳುತ್ತಿರುವ ಮಗುವನ್ನು ಸಮಾಧಾನ ಮಾಡುವುದು ಎಂದರೆ ಅದು ಹರಸಾಹಸದ ಕೆಲಸವೇ ಸರಿ. ಚಿಕ್ಕಮಕ್ಕಳು ಯಾವ ಕಾರಣಕ್ಕೆ ನಗುತ್ತಾರೆ, ಯಾವ ಕಾರಣಕ್ಕೆ ಅಳುತ್ತಾರೆ ಎಂಬುದನ್ನು ಕಂಡುಹಿಡಿಯುವುದು ಕಷ್ಟದ ಕೆಲಸವೇ ಸರಿ. ಅದಾಗ್ಯೂ ಮಗು ಹಸಿವಿನಿಂದ ಅಳದೇ ಸುಮ್ಮನೆ ನಿಮ್ಮ ಗಮನ ಸೆಳೆಯಲು ಅಳುತ್ತಿದೆ ಎಂದಾದಲ್ಲಿ ಅದನ್ನು ಸಾಂತ್ವಾನಪಡಿಸುವುದು ಕಷ್ಟವೇ. ಆದರೆ ಈ ಕಷ್ಟವನ್ನು ಪರಿಹರಿಸುವ ಒಂದು ಸರಳ ಉಪಾಯವನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದರಿಂದ ನಿಮ್ಮ ಅಳುತ್ತಿರುವ ಕಂದಮ್ಮ ಅಳುವನ್ನು ನಿಲ್ಲಿಸುವುದು ಖಂಡಿತ. ಮಗು ಯಾವತ್ತೂ ಸುಮ್ ಸುಮ್ನೆ ಅಳುವುದಿಲ್ಲ, ನೆನಪಿರಲಿ...

ಮಗುವಿನ ಪಾದವನ್ನು ಒತ್ತಿದರೆ ಸಾಕು ಅಳುತ್ತಿರುವ ಮಗು ಥಟ್ಟನೆ ಅಳುವುದನ್ನು ನಿಲ್ಲಿಸುತ್ತದೆ. ಖಂಡಿತ ಫಲಕಾರಿಯಾಗಿರುವ ಈ ವಿಧಾನದಿಂದ ನಿಮ್ಮ ಮಗುವನ್ನು ಸಾಂತ್ವಾನಪಡಿಸಬಹುದಾಗಿದೆ. ಪುರಾತನ ಸಾಂತ್ವಾನಪಡಿಸುವ ಕ್ರಿಯೆ ಇದಾಗಿದ್ದು ಇದರಿಂದ ಮಗು ಅಳುವ ಲಕ್ಷಣಗಳನ್ನು ಸ್ತಿಮಿತಕ್ಕೆ ತರಬಹುದಾಗಿದೆ ಮತ್ತು ಅಳುವನ್ನು ನಿಯಂತ್ರಣಕ್ಕೂ ತರಬಹುದು. ಮಗುವಿನ ಪಾದದ ಯಾವ ಭಾಗವನ್ನು ಒತ್ತಬೇಕು ಎಂಬುದನ್ನೂ ನಾವಿಲ್ಲಿ ತಿಳಿಸುತ್ತಿದ್ದು 2 ಅಂಶಗಳನ್ನು ನೀವು ಪ್ರಧಾನವಾಗಿ ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಮಗು ಪದೇ ಪದೇ ಅಳಲು ಕಾರಣಗಳೇನು?

ಮಗು ಏಕೆ ಅಳುತ್ತದೆ?
ಮಗುವಿಗೆ ತನ್ನವರೊಂದಿಗೆ ಮಾತನಾಡಬೇಕು ಎಂದಾದಲ್ಲಿ ಸಂವಹನ ನಡೆಸುವ ಸಾಮರ್ಥ್ಯ ಅವರಲ್ಲಿ ಬೆಳೆಯಬೇಕು. ಹೀಗೆ ಆಗದೇ ಇದ್ದಲ್ಲಿ ಇದು ಮಗುವಿನಲ್ಲಿ ನೋವು ಮತ್ತು ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಅಂತೆಯೇ ಮಗು ತನಗೆ ಹಸಿವಾದಾಗ, ಆಯಾಸವಾದಾಗ, ಕಾಯಿಲೆಯುಂಟಾದಾಗ ಮತ್ತು ತಮ್ಮನ್ನು ಸ್ವಚ್ಛಗೊಳಿಸಬೇಕು ಎಂದು ಅವರಿಗೆ ಅನ್ನಿಸಿದಾಗ ಅಳುತ್ತಾರೆ.

ಮಗು ಹಠಾತ್ತನೇ ಅತ್ತಾಗ ತಂದೆ ಅಥವಾ ತಾಯಿಗೆ ಮಗುವನ್ನು ಹೇಗೆ ಸಮಾಧಾನ ಪಡಿಸಬೇಕು ಎಂಬುದು ಕೂಡ ತಿಳಿಯದಾಗುತ್ತದೆ. ರಚ್ಚೆ ಹಿಡಿದು ಮಗು ಅಳುತ್ತಿದೆ ಅಂದಾಗ ನಮ್ಮ ಕಣ್ಣಲ್ಲಿಯೇ ಕಣ್ಣೀರು ಬರುತ್ತದೆ. ತನಗೆ ಆಗುತ್ತಿರುವ ನೋವನ್ನು ಹೇಳಿಕೊಳ್ಳಲು ಮಗುವು ಕಷ್ಟಪಟ್ಟಾಗ ಅದು ಕಣ್ಣೀರು ರೂಪದಲ್ಲಿ ಹೊರಬರುತ್ತದೆ.

ಮಗುವಿನ ಪಾದಗಳನ್ನು ಒತ್ತುವ ವಿಧಾನ
ಮಗು ಒಂದು ಗಂಟೆಗಿಂತ ಹೆಚ್ಚು ಸಮಯ ಅಳುತ್ತಿದೆ ಎಂದಾದಲ್ಲಿ ಅದಕ್ಕೆ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲವೇ ಶೀತದಿಂದ ಉಂಟಾದ ತಲೆನೋವು ಸೈನಸ್ ಉಂಟಾಗಿರುವ ಸಾಧ್ಯತೆ ಇರುತ್ತದೆ. ಮಗುವಿನ ಕಾಲ್ಬೆರಳುಗಳನ್ನು ಅಂದರೆ ಪ್ರತೀ ಬೆರಳುಗಳನ್ನು 3 ನಿಮಿಷಕ್ಕಿಂತ ಹೆಚ್ಚು ಕಾಲ ಒತ್ತುವ ಮೂಲಕ ನಿಮ್ಮ ಮಗುವಿನ ತಲೆನೋವನ್ನು ಕಡಿಮೆ ಮಾಡಬಹುದಾಗಿದೆ.

ಮಗುವಿನ ಪಾದದ ಮಧ್ಯಭಾಗವನ್ನು ಒತ್ತುವುದರಿಂದ ಗ್ಯಾಸ್ ಸಮಸ್ಯೆಯಿಂದ ಉಂಟಾಗುವ ನೋವನ್ನು ಶಮನಗೊಳಿಸಬಹುದಾಗಿದೆ. ಹೀಗೆ ಮಾಡಿದಾಗ ಮಗು ಸಮಾಧಾನವನ್ನು ಪಡೆದುಕೊಳ್ಳುತ್ತದೆ. ಅಂತೆಯೇ ಹೀಗೆ ಮಾಡಿ ಕೂಡ ಮಗು ಅಳುವುದನ್ನು ನಿಲ್ಲಿಸುತ್ತಿಲ್ಲ ಎಂದಾದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು.....

English summary

press these points to make baby stop crying

If you are a new parent, then surely, you would be dealing with many late nights and exhausting times, trying to pacify your crying baby, right? Well, there are a few points on your baby's feet that can help them stop crying, when pressed. Now, you may be surprised to know that just pressing on a few particular spots on your baby's feet can actually help calm your baby down and stop the crying.
X
Desktop Bottom Promotion