For Quick Alerts
ALLOW NOTIFICATIONS  
For Daily Alerts

ಮಗು ಪದೇ ಪದೇ ಅಳಲು ಕಾರಣಗಳೇನು?

By Poornima Hegde
|

ಮಗು ಅಳುತ್ತದೆ, ತನಗೆ ಏನೋ ಬೇಕು ಎಂದು ಹೇಳಲು ಅಳುತ್ತದೆಯೋ ಅಥವಾ ತನಗೆ ಏನು ಬೇಕು ಎಂದು ಹೇಳಲಾಗದೆ ಅಳುತ್ತದೆಯೋ ಅಥವಾ ತನಗೆ ಬೇಕಾದ್ದು ಏನೆಂದು ಯಾರಿಗೂ ತಿಳಿಯುತ್ತಿಲ್ಲ ಎಂದು ಅಳುತ್ತದೆಯೋ ದೇವರೇ ಬಲ್ಲ. ಆದರೆ ಈ ಅಳುವಿನ ಒಂದು ಒಳ್ಳೆಯ ಅಂಶ ಎಂದರೆ ಮಗು ತನಗೆ ಏನು ಬೇಕೆಂದು ಹೇಳಲು ಅತ್ತಾಗ ತೊಂಬತ್ತೊಂಬತ್ತು ಶೇಕಡಾ ಬಾರಿ ತಾಯಿಗೆ ಅದೇನೆಂದು ಅರ್ಥವಾಗುತ್ತದೆ ಹಾಗೂ ಅದನ್ನು ಮಗುವಿನ ಕೈಗೆ ಇಟ್ಟಾಗ ಅಳು ನಿಲ್ಲುತ್ತದೆ.

ಶಿಶು ತಜ್ಞ ಡಾ. ಶಾ ಹೇಳುವಂತೆ 'ಮಗು ತನಗೆ ಏನಾದರೂ ಬೇಕಾದಾಗ ಅಳುತ್ತದೆ ಮತ್ತು ತಾಯಿ ಅದನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಇದರಿಂದ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವೂ ಗಟ್ಟಿಯಾಗುತ್ತದೆ.' ಮಗು ಅತ್ತಾಗ ಅದಕ್ಕೇನಾದರೂ ಬೇಕು ಎಂದು ಎಲ್ಲರಿಗೂ ಅರ್ಥವಾಗುತ್ತದೆ ಹಾಗೂ ನಾವೆಲ್ಲಾ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಲು ತಲೆಕೆಡಿಸಿಕೊಳ್ಳುತ್ತಿರಬೇಕಾದರೆ ಒಂದು ವಿಷಯವನ್ನು ಮರೆತೇ ಬಿಡುತ್ತೇವೆ.

ಮಗು ಅಳುತ್ತಿದೆ ಹಾಗೂ ತನಗೆ ಬೇಕಾದ್ದು ಸಿಕ್ಕಾಗ ಸುಮ್ಮನಾದರೆ ಮಗುವಿನ ಆರೋಗ್ಯ ಸರಿಯಾಗಿದೆ ಎಂದು ಅರ್ಥ. ಅದು ಹೇಗೆ ಎಂಬ ಆಶ್ಚರ್ಯವೇ? ಇಲ್ಲಿದೆ ಉತ್ತರ ಮೊದಲ ಅಳುವಿನ ಮಹತ್ವ: ಇದು ತಾಯಿ ಕೇಳಲು ಕಾತುರರಾಗಿರುವ ಜಗತ್ತಿನ ಅತ್ಯಂತ ಪ್ರೀತಿಯ ಧ್ವನಿ. ಇದು ಮಗುವಿನ ಆಗಮನದ ಸೂಚನೆಯಷ್ಟೆ ಅಲ್ಲ.

5 reasons why crying is actually good for your baby!

ನಿಮ್ಮ ಮನೆಯ ಖುಷಿಯ ದಿನಗಳ ಸೂಚನೆ ಕೂಡ. ಮಗು ಪ್ರತಿ ಸಲ ಅತ್ತಾಗ ಮಗುವಿನ ಶ್ವಾಸಕೋಶಗಳ ಬೆಳವಣಿಗೆಗೆ ಪೂರಕ ಎಂದು ಹಲವು ಮಂದಿ ತಂದೆ ತಾಯಿ ಅಂದುಕೊಂಡಿರಬಹುದು ಆದರೆ ಇದು ಪ್ರತಿ ಬಾರಿಗಿಂತ ಮೊದಲ ಅಳುವಲ್ಲಿ ಹೆಚ್ಚು ಪ್ರಸ್ತುತ. ಬೇರೆ ಸಂದರ್ಭಗಳಲ್ಲಿ ಏನೋ ಅಗತ್ಯದ ಸೂಚನೆಯಷ್ಟೇ ಎಂದು ಡಾ. ಶಾ ಹೇಳುತ್ತಾರೆ. ಮೊದಲ ಅಳು ಮಗುವಿನ ಆರೋಗ್ಯದ ಸೂಚಕ ಮತ್ತು ಎಲ್ಲವೂ ಸರಿಯಾಗಿದೆ ಎಂಬ ನಿರಾಳತೆಯ ಸಂದರ್ಭ.

ಮಕ್ಕಳ ಹಲ್ಲು ಹುಟ್ಟವಾಗಿನ ನೋವಿಗೆ ಪರಿಹಾರ

ಸಂವಹನದಲ್ಲಿ ಸಹಕಾರಿ: ಮಗು ಅಳಲೇ ಇಲ್ಲಾ ಎಂದಾದರೆ ಮಗುವಿಗೆ ಏನು ಬೇಕು ಎಂದು ನಿಮಗೆ ಗೊತ್ತೇ ಆಗದು. ಅಳುವಿನ ಕಾರಣಗಳು ಬೇರೆ ಬೇರೆಯಾಗಿರಬಹುದು ಮತ್ತು ಬೇರೆ ಬೇರೆ ರೀತಿಯ ಅಳುವಿನ ಸೂಚನೆಗಳು ಬೇರೆ ಬೇರೆಯಾಗಿರಬಹುದು. ವಿವಿಧ ಧ್ವನಿಯ ಅಳುಗಳು ವಿವಿಧ ರೀತಿಯ ಅಸೌಖ್ಯವನ್ನು ಹೇಳುತ್ತವೆ.

ಎತ್ತರದ ದನಿಯಲ್ಲಿ ಅತ್ತರೆ ಅಗತ್ಯ ಬಹಳವೇ ಪ್ರಮುಖ ಎಂದು ತಿಳಿಯಬೇಕು. ಹೀಗೆ ಮಗುವಿನ ಜೊತೆಗೆ ಇರುವವರು ಮಗುವಿನ ಅಳುವನ್ನೂ ಇನ್ನೊಬ್ಬರ ಮಾತಿನಂತೆ ಸುಲಭವಾಗಿ ಗ್ರಹಿಸಬಹುದು. ಒಂದು ಅಳು ಅಗತ್ಯಗಳನ್ನು ಸರಿಯಾಗಿ ಹೇಳುತ್ತದೆ. ಮಗು ಅತ್ತಾಗ ಸಾಮಾನ್ಯವಾದ ಬೇಡಿಕೆಗಳೆಂದರೆ ಹಸಿವು, ಡಯ್ಪರ್ ಬದಲಾವಣೆ, ಚಳಿ ಅಥವಾ ಸೆಕೆಯಾಗುತ್ತಿರಬಹುದು, ಏನೋ ಆರಾಮದಾಯಕ ಅನ್ನಿಸದೇ ಇರಬಹುದು ಅಥವಾ ನಿಮ್ಮ ಗಮನನವನ್ನು ಬೇಡುತ್ತಿರಬಹುದು. ಅತ್ತಾಗ ಮಗುವಿನ ಕಡೆಗೆ ನೋಡಿದರೆ ಏನು ಬೇಕಾಗಿದೆ ಎಂದು ಹೇಳಬಹುದು. ಇದು ಮಗುವಿನ ಭಾಷೆ ಎಂದು ಡಾ. ಶಾ ಹೇಳುತ್ತಾರೆ.

ಮಗುವಿನ ಮಾನಸಿಕ ಆರೋಗ್ಯಕ್ಕೆ ನೆರವು ನೀಡುತ್ತದೆ: ಮಗು ಅತ್ತಾಗ ನೀವು ಮಾಡುವ ಸಮಾಧಾನ ಮಗು ಒಬ್ಬಂಟಿ ಅಲ್ಲ ಎನ್ನುವ ಸೂಚನೆಯನ್ನು ಅದಕ್ಕೆ ಕೊಡುತ್ತದೆ. 'ಬಹಳಷ್ಟು ಮಂದಿ ಮಗು ಅತ್ತಾಗ ಎಲ್ಲಾ ಸಂದರ್ಭಗಳಲ್ಲಿ ಅದರ ಕಡೆ ಗಮನ ಕೊಡದೇ ಇರಲು ಸಲಹೆ ಮಾಡಬಹುದು,

ಇದು ಶಿಸ್ತು ಕಲಿಸಲು ಪೂರಕ ಎನ್ನುವ ವಾದ ಅವರದ್ದಾಗಿರಬಹುದು. ಆದರೆ ಮಗುವನ್ನು ಹೆಚ್ಚು ಸಮಾಧಾನ ಪಡಿಸಿದಷ್ಟೂ ನೀವು ಮಗುವಿನ ಜೊತೆ ಇದ್ದೀರಿ ಅದರ ಅಗತ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ ಮಗು ಒಬ್ಬಂಟಿ ಅಲ್ಲ ಎಂದು ಅದಕ್ಕೆ ಮನವರಿಕೆ ಮಾಡಿದಂತೆ. ಇಂತಹ ಪರಿಸ್ಥಿತಿಗಳಲ್ಲಿ ಬೆಳೆದ ಮಗು ಮಾನಸಿಕವಾಗಿ ಹೆಚ್ಚು ಆರೋಗ್ಯಕರವಾಗಿರುತ್ತದೆ. ಬೆಳೆಯುತ್ತಿರುವ ಹುಡುಗ ಹುಡುಗಿಯರ ಮಾನಸಿಕ ಆರೋಗ್ಯ ಸರಿಯಾಗಿರದೇ ಇದ್ದಲ್ಲಿ ಮಗುವಾಗಿದ್ದಾಗ ಸಿಗದ ಆರೈಕೆಯೂ ಕಾರಣವಾಗಿರಬಹುದು ಎಂದು ಡಾ. ಶಾ ಹೇಳುತ್ತಾರೆ.

ಸ್ನಾಯುಗಳ ಬಲವರ್ಧನೆಗೆ ಸಹಕಾರಿ: ಮಗು ಅತ್ತಾಗ ಕೇವಲ ಕಣ್ಣೀರು ಬರುವುದಿಲ್ಲ ಅದರ ಇಡಿ ದೇಹವೇ ಅಳುವಿನ ಜೊತೆಗೆ ಬದಲಾಗುತ್ತಾ ಇರುತ್ತದೆ. ಕೈ ಕಾಲುಗಳನ್ನು ತಿರುವುತ್ತಾ ಹೊರಳಾಡಿ ಅಳುತ್ತದೆ ಈ ಎಲ್ಲಾ ಕ್ರಿಯೆಗಳು ಮಗುವಿನ ಸ್ನಾಯುಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಸಹಕಾರಿ. ಆದರೆ ಇದರ ಜೊತೆಗೆ ಡಾ. ಶಾ ಇನ್ನೊಂದು ಎಚ್ಚರಿಕೆ ನೀಡುತ್ತಾರೆ ಸ್ನಾಯುಗಳಿಗೆ ಸಹಕಾರಿ ಎಂದು ಬಹಳ ಹೊತ್ತು ಮಗುವನ್ನು ಹಾಗೆಯೇ ಅಳಲು ಬಿಟ್ಟರೆ ಮಗುವಿನ ಅಳುವಿನ ಕಾರಣ ತಿಳಿಯದೇ ಹೋಗಬಹುದು ಮಗುವಿಗೆ ಔಷಧೀಯ ಚಿಕಿತ್ಸೆ ಬೇಕಾದಲ್ಲಿ ಸಿಗದೇ ಹೋಗಬಹುದು. ಎನ್ನುತ್ತಾರೆ,

ಮಗುವಿನ ತಲೆ ಚಪ್ಪಟೆಯಾಗದಂತೆ ತಡೆಯಲು ಸಲಹೆ

ಭಾವನೆಗಳನ್ನು ಭಾರವನ್ನು ಕಳಚುವ ಸಾಧನ: ಮಗುವಿಗೂ ಕೂಡ ಅಳು ಭಾವನೆಗಳ ಭಾರವನ್ನು ಇಳಿಸುವ ಸಾಧನವೇ. ಮಗುವೇನೋ ಆಸೆ ಪಡುತ್ತದೆ ಆದರೆ ನೀವು ಮಗುವಿನ ಆರೋಗ್ಯದ ದೃಷ್ಟಿಯಿಂದ ಅದನ್ನು ನಿರಾಕರಿಸುತ್ತೀರಿ ಆಗ ಮಗುವಿಗೆ ಅಳದೇ ಮತ್ಯಾವುದೇ ದಾರಿಯಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಅತ್ತಾಗ ಹೆಚ್ಚು ಗಾಬರಿಯಾಗದಿರಿ ಇದು ತನ್ನ ಭಾವನೆಗಳನ್ನು ಹೊರಹಾಕುವ ಒಂದು ದಾರಿಯಷ್ಟೇ, ಈ ಸಮಯದಲ್ಲಿ ಮಗುವಿನ ಬಳಿ ಹೆಚ್ಚು ಮಾತನಾಡಿ ಹಾಗು ಅವರ ಗಮನವನ್ನು ಬೇರೆಡೆಗೆ ಪರಿವರ್ತಿಸಿ. ಇದು ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಾಯಕ ಎಂದು ಡಾ. ಶಾ ಹೇಳುತ್ತಾರೆ.

English summary

5 reasons why crying is actually good for your baby!

Often you don’t know why your little one is in tears and disturbed to the core. But the good thing about crying is that baby’s indication about his needs and mother’s instincts work together.
X
Desktop Bottom Promotion