For Quick Alerts
ALLOW NOTIFICATIONS  
For Daily Alerts

ಮಗು ಯಾವತ್ತೂ ಸುಮ್ ಸುಮ್ನೆ ಅಳುವುದಿಲ್ಲ, ನೆನಪಿರಲಿ...

ಒಮ್ಮೊಮ್ಮೆ ಮಗು ರಚ್ಚೆ ಹಿಡಿದು ಅತ್ತುಬಿಡುತ್ತದೆ. ಮನೆಯವರೆಲ್ಲರೂ ಸಮಾಧಾನ ಮಾಡಿದರೂ ತನ್ನ ಅಳುವನ್ನು ಇದು ನಿಲ್ಲಿಸುವುದೇ ಇಲ್ಲ. ತಾಯಿಯ ಆರೈಕೆ, ಅಪ್ಪುಗೆ ಕೂಡ ಅದಕ್ಕೆ ಸಮಾಧಾನ ತರುವುದೇ ಇಲ್ಲ.

By Suma
|

ಮಗುವಿನ ನಗು, ಕೇಕೆ ಹಾಕುವಿಕೆ, ಅದರ ತೊದಲು ನುಡಿಯಿಂದ ತಾಯಿಯ ಮುಖದಲ್ಲಿ ಸಂತಸ ನೆಲೆಗೊಳ್ಳುತ್ತದೆ. ಮಗುವಿನ ತುಂಟತನವೆಂದರೆ ಅದು ಎಲ್ಲರಿಗೂ ಇಷ್ಟವಾಗಿರುವಂತಹದ್ದು. ಮನೆಯಲ್ಲಿ ಮಕ್ಕಳ ಕಲರವ ಇಲ್ಲವೆಂದರೆ ಆ ಮನೆಯಲ್ಲಿ ಜೀವಂತಿಕೆಯೇ ಇರುವುದಿಲ್ಲ. ಹೀಗೆ ಮಕ್ಕಳ ತುಂಟಾಟವನ್ನು ಆಸ್ವಾದಿಸದೇ ಇರುವವರು ಯಾರೂ ಇಲ್ಲ. ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಶಿಕ್ಷಿಸಲು ಮುಂದಾಗದಿರಿ

ಆದರೆ ಒಮ್ಮೊಮ್ಮೆ ಮಗು ರಚ್ಚೆ ಹಿಡಿದು ಅತ್ತುಬಿಡುತ್ತದೆ. ಮನೆಯವರೆಲ್ಲರೂ ಸಮಾಧಾನ ಮಾಡಿದರೂ ತನ್ನ ಅಳುವನ್ನು ಇದು ನಿಲ್ಲಿಸುವುದೇ ಇಲ್ಲ. ತಾಯಿಯ ಆರೈಕೆ, ಅಪ್ಪುಗೆ ಕೂಡ ಅದಕ್ಕೆ ಸಮಾಧಾನ ತರುವುದೇ ಇಲ್ಲ. ಒಮ್ಮೊಮ್ಮೆ ಮಗು ಹಸಿವಾದಾಗ ಅತ್ತರೆ ಇನ್ನು ಕೆಲವೊಮ್ಮೆ ಕಾಯಿಲೆಗಳು ಉಂಟುಮಾಡುವ ತೊಂದರೆಗಳಿಂದ ಕೂಡ ಅಳಬಹುದು. ಹಾಗಿದ್ದರೆ ಇಲ್ಲಿ ನಿಮ್ಮ ಮಗುವಿನ ಅಳು ನಿಲ್ಲಿಸಲು ಸಹಕಾರಿಯಾಗಿರುವ ಟಿಪ್ಸ್‌ಗಳನ್ನು ನೀಡುತ್ತಿದ್ದು ಏನವುಗಳು ಎಂಬುದನ್ನು ಕಂಡುಕೊಳ್ಳಿ....


ಹಸಿವಾಗುತ್ತಿರಬೇಕು...

ಹಸಿವಾಗುತ್ತಿರಬೇಕು...

ಒಮ್ಮೊಮ್ಮೆ, ಮಕ್ಕಳಿಗೆ ಹಸಿವಾದಾಗ ಕೂಡ ಅವರು ಅಳುತ್ತಾರೆ. ಊಟದ ಸಮಯದಲ್ಲಿ ನಿಮ್ಮ ಮಗು ಅಳುತ್ತಿದೆ ಎಂದಾದಲ್ಲಿ ಅವರಿಗೆ ಆಹಾರ ತಿನ್ನಿಸಿ.

ಕೈ ಬೆರಳನ್ನು ಚೀಪುತ್ತಿದ್ದರೆ...

ಕೈ ಬೆರಳನ್ನು ಚೀಪುತ್ತಿದ್ದರೆ...

ನಿಮ್ಮ ಮಗು ಹೆಬ್ಬೆಟ್ಟನ್ನು ಚೀಪುತ್ತಿದೆ ಎಂದಾದಲ್ಲಿ, ನೀವು ಮಗುವಿಗೆ ಹಾಲುಣಿಸಬಹುದಾಗಿದೆ. ಮಗುವಿಗೆ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳಿ.

ತಾನು ಒಬ್ಬಂಟಿ ಎಂದೆನಿಸಿದಾಗ....

ತಾನು ಒಬ್ಬಂಟಿ ಎಂದೆನಿಸಿದಾಗ....

ಒಮ್ಮೊಮ್ಮೆ ತಾನು ಒಬ್ಬಂಟಿ ಎಂದನಿಸಿದಾಗ ಕೂಡ ಮಗು ಅತ್ತುಬಿಡುತ್ತದೆ. ಆ ಸಮಯದಲ್ಲಿ ನಿಮ್ಮ ಮಗುವನ್ನು ಅಪ್ಪಿಕೊಳ್ಳಿ, ಮತ್ತು ತಾವು ಸುಭದ್ರವಾಗಿದ್ದೇವೆ ಎಂದನ್ನಿಸುವಂತೆ ಮಾಡಿ.

ಒಂದು ರೌಂಡ್ ಸುತ್ತಾಡಿಸಿ ಬನ್ನಿ....

ಒಂದು ರೌಂಡ್ ಸುತ್ತಾಡಿಸಿ ಬನ್ನಿ....

ಮಗುವನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುವುದರಿಂದ ಕೂಡ ಮಗುವಿನ ಅಳುವನ್ನು ನಿಲ್ಲಿಸಬಹುದಾಗಿದೆ. ಮಗುವಿಗೆ ಬೇಸರವಾದಾಗ ಕೂಡ ಅದು ಅಳುತ್ತದೆ. ಮಗುವನ್ನು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ.

ಆಟಿಕೆಗಳನ್ನು ನೀಡಿ

ಆಟಿಕೆಗಳನ್ನು ನೀಡಿ

ಮಗು ಅಳುತ್ತಿದೆ ಎಂದಾದಲ್ಲಿ ಅದಕ್ಕೆ ಆಟಿಕೆಗಳನ್ನು ನೀಡಿ. ಕೈಯಲ್ಲಿ ಹಿಡಿದುಕೊಳ್ಳಲು ಆಟಿಕೆಗಳನ್ನು ನೀಡಿ.

ಕೊಠಡಿಯ ಹವಾಮಾನ.....

ಕೊಠಡಿಯ ಹವಾಮಾನ.....

ಕೆಲವೊಮ್ಮೆ ಕೊಠಡಿಯ ಹವಾಮಾನ ಕೂಡ ಕಾರಣವಾಗಿರುತ್ತದೆ. ನಿಮ್ಮ ಮಗುವಿಗೆ ಕೊಠಡಿ ಹೆಚ್ಚು ತಂಪು ಮತ್ತು ಹೆಚ್ಚು ಬಿಸಿಯನ್ನು ಉಂಟುಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿ.

ವೈದ್ಯರ ಬಳಿಗೆ....

ವೈದ್ಯರ ಬಳಿಗೆ....

ಮೇಲೆ ತಿಳಿಸಿದ ಯಾವುದೇ ಸಲಹೆಗಳು ಪ್ರಯೋಜನಕಾರಿಯಾಗುತ್ತಿಲ್ಲ ಎಂದಾದಲ್ಲಿ, ನಿಮ್ಮ ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಜೀರ್ಣಕ್ರಿಯೆ ಸಮಸ್ಯೆಗಳಿದ್ದಲ್ಲಿ ಕೂಡ ಮಗು ಅಳುತ್ತದೆ.

English summary

What To Do When Your Baby Cries

Crying is your baby's way of telling you that he or she is going through some kind of discomfort. During the first few years, babies tend to cry a lot. But when a parent tries to understand the needs of the baby, the frequency of the crying could be reduced. Also, when the baby starts grasping language, the need to cry may reduce.
X
Desktop Bottom Promotion