For Quick Alerts
ALLOW NOTIFICATIONS  
For Daily Alerts

ಸಿಹಿಯಾದ ಸಕ್ಕರೆ, ಮಕ್ಕಳ ಆರೋಗ್ಯಕ್ಕೆ ಕಹಿಯಾಗಬಹುದು!

By Manu
|

ಪ್ರತಿ ಪಾಲಕರೂ ತಮ್ಮ ಮಕ್ಕಳಿಗೆ ಅತ್ಯುತ್ತಮ ಆಹಾರ, ಬಟ್ಟೆ, ವಿದ್ಯೆ, ಸಂಸ್ಕೃತಿಗಳು ದೊರಕಬೇಕೆಂದು ಬಯಸುತ್ತಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಕ್ಕಳ ಬಟ್ಟೆಗಳು ಹಿರಿಯರ ಬಟ್ಟೆಗಿಂತಲೂ ಬಲು ದುಬಾರಿ. ಅಂತೆಯೇ ಮಕ್ಕಳ ಸಿದ್ಧ ಆಹಾರಗಳು ಸಹಾ. ಮಕ್ಕಳಿಗೆ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಮತ್ತು ಅವಶ್ಯಕ ಪೋಷಕಾಂಶಗಳಿರುವ ಸಮತೋಲನ ಆಹಾರವನ್ನೂ ಯಾವುದೇ ದರ ಕೊಟ್ಟು ಖರೀದಿಸಲು ಪಾಲಕರು ಹಿಂದೆ ಮುಂದೆ ನೋಡುವುದಿಲ್ಲ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

Is sugar is bad for the baby?, then how to avoid sugar in baby food

ಆದರೆ ಇವೇ ಗುಣಗಳಿರುವ ಆಹಾರವನ್ನು ಮಕ್ಕಳು ಸುಲಭವಾಗಿ ಸೇವಿಸುವುದಿಲ್ಲ ಎಂಬ ಕೊರತೆಯನ್ನು ಸಕ್ಕರೆ ಅಥವಾ ಉಪ್ಪು ಸೇರಿಸಿ ಮಕ್ಕಳು ಇಷ್ಟಪಟ್ಟು ಕುಡಿಯುವಂತೆ ಇದರ ಪರಿಕರಗಳನ್ನು ಹೊಂದಿಸಲಾಗಿರುತ್ತದೆ. ಆದರೆ ಅಗತ್ಯಕ್ಕೂ ಹೆಚ್ಚಿರುವ ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿವೆ. ಅದರಲ್ಲೂ ಇನ್ನೂ ಒಂದು ವರ್ಷ ತುಂಬಿರದ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಸಕ್ಕರೆ ಅಥವಾ ಉಪ್ಪನ್ನು ನೀಡುವಂತೆಯೇ ಇಲ್ಲ. ಸಿಹಿ ತಿನ್ನುವ ಅದಮ್ಯ ಬಯಕೆ-ಕೊಂಚ ಮಿತವಾಗಿರಲಿ!

ಆದರೆ ಸಿಹಿಯಾಗಿರುವ ಹಣ್ಣುಗಳು, ಖರ್ಜೂರ, ಹಣ್ಣಿನ ರಸ ಮೊದಲಾದವುಗಳನ್ನು ನೀಡಬಹುದು. ಹೆಚ್ಚಿನ ಸಮಯದಲ್ಲಿ ಸಕ್ಕರೆ ಹೆಚ್ಚಿರುವ ಸಿದ್ಧ ಆಹಾರ ಅಥವಾ ಮಕ್ಕಳಿಗೆಂದೇ ತಯಾರಿಸಲಾದ ಇನ್ಫೆಂಟ್ ಫಾರ್ಮುಲಾ ಆಹಾರಗಳಲ್ಲಿಯೂ ಸಕ್ಕರೆಯ ಪ್ರಮಾಣ ಹೆಚ್ಚಿದ್ದು ಇದರ ರುಚಿ ಕಂಡ ಮಕ್ಕಳು ಇದೇ ಬೇಕೆಂದು ಹಠ ಹಿಡಿಯುತ್ತಾರೆ. ಹಾಗೂ ಇದು ಒಗ್ಗಿದಂತೆಯೇ ನೈಸರ್ಗಿಕ ಹಣ್ಣು ಹಂಪಲು, ಮನೆಯೂಟವನ್ನು ಬೇಡ ಎನ್ನಲು ಪ್ರಾರಂಭಿಸುತ್ತಾರೆ.

ಮಕ್ಕಳ ಆಹಾರದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದಷ್ಟೂ ಸ್ಥೂಲಕಾಯ ಆವರಿಸುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಎಂದಿಗೂ ಮಕ್ಕಳ ಸಿದ್ಧ ಆಹಾರ ಅಥವಾ ಇನ್ಸ್ಟಂಟ್ ಆಹಾರವನ್ನು ಖರೀದಿಸುವ ಮುನ್ನ ಇದರ ಪರಿಕರಗಳನ್ನು ಪರಿಶೀಲಿಸಿ ಇದರಲ್ಲಿ ಸಕ್ಕರೆಯ ಅಂಶ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಎಷ್ಟೋ ಸಲ ಮಕ್ಕಳು ತಿನ್ನುತ್ತಿಲ್ಲ ಎಂಬ ಕಾರಣಕ್ಕೆ ಆಹಾರದಲ್ಲಿ ಕೊಂಚ ಬಿಳಿ ಸಕ್ಕರೆ ಬೆರೆಸಿ ತಿನ್ನಿಸುವ ತಾಯಂದಿರಿಗೆ ತಮ್ಮ ಕೈಯಾರೆ ವಿಷವನ್ನು ಉಣಿಸುತ್ತಿರುವುದೇ ಗೊತ್ತಿರುವುದಿಲ್ಲ. ಅಷ್ಟೇ ಅಲ್ಲ, ಅಗತ್ಯಕ್ಕೂ ಹೆಚ್ಚು ಉಪ್ಪು ಸಹಾ ಮಕ್ಕಳ ಆರೋಗ್ಯಕ್ಕೆ ಮಾರಕ.

ಮಕ್ಕಳಿಗೆ ಇಷ್ಟವಾದ ಸಕ್ಕರೆ ಅವರಿಗೆ ಶತ್ರು ಹೇಗಾಯಿತು?
* ಬಿಳಿ ಸಕ್ಕರೆ ಸಂಸ್ಕರಿತ ಕಂದು ಸಕ್ಕರೆಯ ರೂಪಾಂತರವಾಗಿದ್ದು ಇದಕ್ಕಾಗಿ ಕೆಲವು ರಾಸಾಯನಿಕಗಳನ್ನು ಸಕ್ಕರೆಯನ್ನು ಬೆಳ್ಳಗಾಗಿಸಲು ಉಪಯೋಗಿಸಲಾಗುತ್ತದೆ. ಇದರ ಪ್ರಮುಖ ಪರಿಕರ ಎಂದರೆ ಸುಟ್ಟ ಮೂಳೆಗಳು. ಈ ರಾಸಾಯನಿಕಗಳು ಮಕ್ಕಳಿಗೆ ಅಪಾಯಕಾರಿಯಾಗಿವೆ. ಆದ್ದರಿಂದ ಸಿಹಿ ಸೇರಿಸಲೇಬೇಕಾದ ಅನಿವಾರ್ಯ ಸಂದರ್ಭದಲ್ಲಿ ಕಂದು ಸಕ್ಕರೆ ಅಥವಾ ನೈಸರ್ಗಿಕ ವಿಧಾನದಿಂದ ತಯಾರಿಸಲಾದ ಬೆಲ್ಲವನ್ನೇ ಬಳಸುವುದು ಉತ್ತಮ.


* ಇನ್ನೊಂದು ಸಂಶೋಧನೆಯಲ್ಲಿ ಮಕ್ಕಳು ಬಿಳಿಸಕ್ಕರೆ ಹೆಚ್ಚು ಹೆಚ್ಚಾಗಿ ತಿಂದಷ್ಟೂ ಅವರ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಇದರಿಂದ ಇವರಿಗೆ ಸೋಂಕುರೋಗಗಳು ಆವರಿಸುವ ಸಾಧ್ಯತೆ ಹೆಚ್ಚುತ್ತದೆ.
* ಕೆಲವು ಚಿಕಿತ್ಸಾಲಯಗಳಲ್ಲಿ ಕಂಡುಕೊಂಡಂತೆ ಮಕ್ಕಳಿಗೆ ಸಕ್ಕರೆಯನ್ನು ಹೆಚ್ಚು ಹೆಚ್ಚಾಗಿ ನೀಡಿದಷ್ಟೂ ಭವಿಷ್ಯದಲ್ಲಿ ಹೃದಯದ ರೋಗ ಬಾಧಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಅತಿಯಾದ ಸಕ್ಕರೆ ಸೇವನೆ ರೋಗಕ್ಕೆ ಮುಕ್ತ ಆಹ್ವಾನ
* ಮಕ್ಕಳ ಆಹಾರದಲ್ಲಿ ಸಕ್ಕರೆ ಹೆಚ್ಚಿದ್ದಷ್ಟೂ ಹಲ್ಲುಗಳಲ್ಲಿ ಕುಳಿಗಳು ಬೀಳುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಸಕ್ಕರೆ ತಿಂದ ಬಳಿಕ ಬಾಯಿಯಲ್ಲಿ, ಹಲ್ಲುಗಳ ಸಂಧಿಯಲ್ಲಿ ಉಳಿಯುವ ಸಕ್ಕರೆ ಬ್ಯಾಕ್ಟೀರಿಯಾಗಳಿಗೆ ಪ್ರಶಸ್ತವಾದ ತಾಣವಾಗಿದ್ದು ಇವು ಇರುವ ಹಲ್ಲುಗಳಿಗೆ ಮಾತ್ರವಲ್ಲ, ಹೊಸದಾಗಿ ಬರುವ ಹಲ್ಲುಗಳನ್ನೂ ಹುಳುಕಾಗಿಸುತ್ತವೆ.

ಹಾಗಾದರೆ ಮಕ್ಕಳಿಗೆ ಸಕ್ಕರೆ ನೀಡುವುದನ್ನು ಕಡಿಮೆ ಮಾಡುವುದು ಹೇಗೆ?
* ಯಾವುದೇ ಮಕ್ಕಳ ಆಹಾರ ಕೊಳ್ಳುವ ಮುನ್ನ ಅದರ ಪರಿಕರಗಳನ್ನು ಗಮನಿಸಿ ಹೆಚ್ಚು ಸಕ್ಕರೆ ಇದ್ದರೆ ಖರೀದಿಸಬೇಡಿ.
* ಕ್ಯಾನ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣುಗಳು ಬೇಡವೇ ಬೇಡ, ಏಕೆಂದರೆ ಇದರಲ್ಲಿ ಸಕ್ಕರೆ ಗರಿಷ್ಟ ಪ್ರಮಾಣದಲ್ಲಿರುತ್ತದೆ.
* ಸಕ್ಕರೆ ಬೆರೆಸಿದ ಜ್ಯೂಸ್ ಮತ್ತು ಇತರ ಪೇಯಗಳನ್ನು ಮಕ್ಕಳಿಗೆ ಕೊಡಬೇಡಿ.
* ಮಕ್ಕಳಿಗೆ ನೀಡುವ ಬಿಸ್ಕತ್ತು, ಕುಕ್ಕೀಸ್ ಮೊದಲಾದವುಗಳ ಮೇಲೆ ನಿಯಂತ್ರಣ ಹೇರಿ. ಸಕ್ಕರೆ ಚಹಾ, ಕಾಫಿಗೆ ಮಾತ್ರವಲ್ಲ-ಸ್ವಚ್ಛತೆಗೂ ಬೇಕು!


* ಖೀರು, ಮೊಸರು, ಮಿಲ್ಕ್ ಶೇಕ್ ಮೊದಲಾದವುಗಳಿಗೆ ಸಕ್ಕರೆಯ ಬದಲು ಹಣ್ಣಿನ ರಸವನ್ನು ಸೇರಿಸಿ ನೀಡಿ.
* ಸಂಸ್ಕರಿಸಿದ ಆಹಾರಗಳಾದ ಜಾಮ್, ಜೆಲ್ಲಿ, ಸಾಸ್, ಅತಿ ಹೆಚ್ಚು ಫ್ರುಕ್ಟೋಸ್ ಇರುವ ಕಾರ್ನ್ ಸಿರಪ್, ಮೇಪಲ್ ಸಿರಪ್, ಮಾಲ್ಟ್ ಸಿರಪ್ ಮತ್ತು ಮುಖ್ಯವಾಗಿ ಲಘುಪಾನೀಯಗಳನ್ನು ಮಕ್ಕಳಿಗೆ ನೀಡಲೇಬೇಡಿ. ಇದರಲ್ಲಿ ಅತಿಹೆಚ್ಚು ಸಕ್ಕರೆ ಇದ್ದು ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದೆ.
English summary

Is sugar is bad for the baby?, then how to avoid sugar in baby food

However, naturally sweet foods such as fruits, fruit pulp and dates can be given. When babies are fed with sugary foods they prefer less of healthy foods such as vegetables, fruits and plain milk. Sadly, parents do not realise that infant formulas also have high sugar. Therefore, parents should make it a habit to always check the food label before buying any food item for their little ones. Here’s why adding salt to your baby’s food is a terrible mistake
X
Desktop Bottom Promotion