For Quick Alerts
ALLOW NOTIFICATIONS  
For Daily Alerts

ಕೆಲಸದ ಮಧ್ಯೆಯೂ ಎದೆಹಾಲುಣಿಸುವ ಸಮಸ್ಯೆ ನಿಭಾಯಿಸುವುದು ಹೇಗೆ?

|

ಎದೆ ಹಾಲು ಕುಡಿಸುವ ಪ್ರಕ್ರಿಯೆಯು ತಾಯಿ ಮತ್ತು ಮಗು ಇಬ್ಬರಿಗು ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಎದೆ ಹಾಲು ಮಗುವಿಗೆ ಬೇಕಾಗಿರುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಹೊಂದಿರುತ್ತದೆ. ಮಗುವಿನ ಬೆಳವಣಿಗೆಗೆ ಇದು ಅಗತ್ಯವು ಸಹ ಹೌದು. ಆದರೆ ಈ ಆಧುನಿಕ ಕಾಲದಲ್ಲಿ ಹಲವಾರು ತಾಯಂದಿರು ಯಾವುದಾದರು ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆಗ ಅವರು ತಮ್ಮ ತಾಯ್ತನ ಮತ್ತು ವೃತ್ತಿಯೆರಡನ್ನು ಸಮವಾಗಿ ನಿಭಾಯಿಸಲು ಕಷ್ಟಪಡುತ್ತಿರುತ್ತಾರೆ. ಈ ಕಷ್ಟ ಎದುರಾಗುವುದು ನೀವು ಪುನಃ ಕೆಲಸಕ್ಕೆ ಹಿಂದಿರುಗಿದಾಗ. ಬಹುತೇಕ ಕಂಪನಿಗಳು ತಾಯಂದಿರಿಗೆ 3 ತಿಂಗಳುಗಳ ಕಾಲ ಹೆರಿಗೆ ರಜೆಯನ್ನು ನೀಡುತ್ತವೆ.

ಈ ಮೂರು ತಿಂಗಳುಗಳಲ್ಲಿ ಮಗುವು ತನ್ನ ಸಾಮಾನ್ಯ ದಿನಚರಿಗೆ ಬರಲು ಸಾಕಾಗುತ್ತದೆ. ಆದರೆ ಈ ಅವಧಿಯ ನಂತರವು ಸಹ ಮಗುವಿಗೆ ಎದೆ ಹಾಲು ಅಗತ್ಯವಾಗಿ ಕುಡಿಸಬೇಕಾಗಿರುತ್ತದೆ. ಅದರಲ್ಲೂ ಕೆಲಸಕ್ಕೆ ಮಗುವನ್ನು ಎತ್ತಿಕೊಂಡು ಹೋಗಿ ಮಗುವಿಗೆ ಹಾಲನ್ನು ಕುಡಿಸುವುದು ತುಸು ಕಷ್ಟಕರವಾದ ಕೆಲಸವಾಗಿರುತ್ತದೆ. ಆದರೆ ನಿಮಗೆ ಗೊತ್ತಿರಬಹುದು, ಬಹುತೇಕ ತಾಯಂದಿರು ಇದನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಇದಕ್ಕೆ ನಿಮಗೆ ಬೇಕಾಗಿರುವುದು ಒಂದು ಸಣ್ಣ ಪ್ರಮಾಣದ ಯೋಜನೆ ಮಾತ್ರ. ಮಗುವಿಗೆ ಹಾಲುಣಿಸಿದ ನಂತರವೂ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವುದು ಹೇಗೆ?

ಕೆಲಸದ ಸ್ಥಳದಲ್ಲಿ ಎದೆಹಾಲು ಕುಡಿಸುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಮಾನಸಿಕರಾಗಿ ಸಿದ್ಧರಾದಲ್ಲಿ, ಈ ಪರಿಸ್ಥಿತಿಯನ್ನು ಅಗತ್ಯವಾಗಿ ನಿಭಾಯಿಸಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಕೇವಲ ಅಲ್ಪಾವಧಿಯಲ್ಲಿ ಮುಗಿದು ಹೋಗುವ ಪ್ರಕ್ರಿಯೆ. ನಿಮ್ಮ ಮಗು ಬೆಳೆಯುವವರೆಗೆ ಮಾತ್ರ ನೀವು ಅದಕ್ಕೆ ಹಾಲನ್ನು ಕುಡಿಸುತ್ತೀರಿ. ಇದು ಎಲ್ಲರಿಗು ಗೊತ್ತಿರುವ ವಿಚಾರ. ಬನ್ನಿ ಕೆಲಸದ ಸ್ಥಳದಲ್ಲಿ ಮಕ್ಕಳಿಗೆ ಹಾಲು ಕುಡಿಸಲು ಅಗತ್ಯವಾಗಿರುವ ಕೆಲವೊಂದು ಅಂಶಗಳನ್ನು ನಾವು ಗಮನಿಸೋಣ.

ಮಾಲೀಕರಿಗೆ ಮಾಹಿತಿ ನೀಡಿ

ಮಾಲೀಕರಿಗೆ ಮಾಹಿತಿ ನೀಡಿ

ಹೌದು, ಮೊದಲು ನೀವು ಕೆಲಸ ಮಾಡುವಲ್ಲಿ ನಿಮ್ಮ ಮಾಲೀಕರಿಗೆ ಅಥವಾ ಮೇಲಧಿಕಾರಿಗಳಿಗೆ ತಿಳಿಸಿ. ಇದರಿಂದ ಅವರು ನಿಮ್ಮ ಮತ್ತು ಮಗುವಿಗೆ ಅಪಾಯಕಾರಿಯಾದ ಯಾವುದೇ ರಾಸಾಯನಿಕಗಳು ಅಥವಾ ಇನ್ನಿತರ ಅಪಾಯಕಾರಿ ಕೆಲಸಗಳನ್ನು ನಿಮಗೆ ನೀಡುವುದಿಲ್ಲ. ಜೊತೆಗೆ ನಿಮಗೆ ಒತ್ತಡವನ್ನುಂಟು ಮಾಡುವ ಕೆಲಸಗಳನ್ನು ಸಹ ಕಡಿಮೆ ಮಾಡುತ್ತಾರೆ. ಜೊತೆಗೆ ನಿಮ್ಮ ಮಗುವಿಗೆ ನೀವು ಯಾವುದೇ ಅಡ್ಡಿಯಿಲ್ಲದೆ ಹಾಲನ್ನು ಕುಡಿಸಲು ಬೇಕಾಗುವ ಸ್ಥಳವನ್ನು ಸಹ ಅವರು ನಿಮಗೆ ಸೂಚಿಸಬಹುದು.

ಖಾಸಗಿ ಕೋಣೆ

ಖಾಸಗಿ ಕೋಣೆ

ಒಂದು ಬೀಗವಿರುವ ಕೋಣೆಯು ನಿಮ್ಮ ಮಗುವಿಗೆ ಅಗತ್ಯವಾದ ಹಾಲನ್ನು ಕುಡಿಸಲು ಬೇಕಾದ ಖಾಸಗಿತನವನ್ನು ಒದಗಿಸುತ್ತದೆ. ಯಾವುದೇ ಕಾರಣಕ್ಕು ಇದಕ್ಕಾಗಿ ಶೌಚಾಲಯಕ್ಕೆ ಎತ್ತಿಕೊಂಡು ಹೋಗಬೇಡಿ. ಇದು ನಿಮ್ಮ ಹಾಲನ್ನು ಕಲುಷಿತಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒಂದು ಖಾಸಗಿ ಕೋಣೆಯನ್ನು ನಿಮಗೆ ಒದಗಿಸುವಂತೆ ನಿಮ್ಮ ಮಾಲೀಕರನ್ನು ನೀವು ಕೋರಬಹುದು ಅಥವಾ ನಿಮ್ಮ ಕ್ಯಾಬಿನ್ ಅನ್ನು ಕೆಲ ಹೊತ್ತು ಲಾಕ್ ಮಾಡಿಕೊಳ್ಳಲು ಸಹ ನೀವು ಕೋರಬಹುದು.

ಒಂದು ಸ್ವಚ್ಛವಾದ ಫ್ರಿಡ್ಜ್

ಒಂದು ಸ್ವಚ್ಛವಾದ ಫ್ರಿಡ್ಜ್

ನಿಮ್ಮ ಎದೆಹಾಲನ್ನು ಸಂಗ್ರಹಿಸಿ ಫ್ರಿಡ್ಜ್‌ನಲ್ಲಿಟ್ಟು ಸಹ ನಿಮ್ಮ ಮಗುವಿಗೆ ಅದನ್ನು ನೀಡಬಹುದು. ಇದಕ್ಕಾಗಿ ಒಂದು ಸ್ವಚ್ಛವಾಗಿರುವ ಫ್ರಿಡ್ಜ್ ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ. ಇದರಿಂದ ಎದೆ ಹಾಲು ಸಹ ಸುರಕ್ಷಿತವಾಗಿರುತ್ತದೆ, ನಿಮ್ಮ ಸ್ತನಗಳು ಬಿಗಿಯಾಗುವುದನ್ನು ತಪ್ಪಿಸಬಹುದು ಹಾಗು ಕೆಲಸದ ಕಡೆಗೆ ನಿಮ್ಮ ಗಮನವನ್ನು ನೀಡಬಹುದು. ಫ್ರಿಡ್ಜ್‌ನ ಉಷ್ಣಾಂಶ ಏಕರೂಪದಲ್ಲಿರುತ್ತದೆಯೇ ಎಂಬುದನ್ನು ಗಮನಿಸಿ ಮತ್ತು ಅದರ ಸ್ವಚ್ಛತೆಗು ಆಧ್ಯತೆ ನೀಡಿ.

ವಿರಾಮ

ವಿರಾಮ

ಇದು ನಿಮ್ಮ ಕೆಲಸದಲ್ಲಿ ನೀವು ಎದೆಹಾಲು ಕುಡಿಸಲು ಇರುವ ಸಮಸ್ಯೆಗಳಲ್ಲಿ ಒಂದಾಗಿದೆ. ವಿರಾಮದ ನಡುವೆ ಕೆಲವೊಂದು ಸಣ್ಣ ವಿರಾಮಗಳನ್ನು ನಿಮಗೆ ನೀಡುವಂತೆ ಮೇಲಧಿಕಾರಿಗಳನ್ನು ಕೋರಿಕೊಳ್ಳಿ. ಆಗ ಆ ಬಿಡುವಿನಲ್ಲಿ ನೀವು ಎದೆ ಹಾಲು ಕುಡಿಸಬಹುದು. ತುಂಬಾ ಸಮಯ ನೀವು ಎದೆ ಹಾಲು ನೀಡದಿದ್ದಲ್ಲಿ ನಿಮ್ಮ ಸ್ತನಗಳು ಬಿಗಿಯಾಗುತ್ತವೆ. ಇದರಿಂದ ಇನ್‍ಫೆಕ್ಷನ್‍ಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ನಿಮ್ಮ ಮನೆ ಹತ್ತಿರದಲ್ಲಿದ್ದರೆ, ಈ ಬಿಡುವಿನಲ್ಲಿ ನೀವು ಬೇಗ ಮನೆಗೆ ಹೋಗಿ ಹಾಲು ಕುಡಿಸಿ ಬರಬಹುದು.

ಯೋಜನೆ

ಯೋಜನೆ

ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಆರಾಮವಾಗಿ ಕೆಲಸ ಮಾಡಲು ಆದ್ಯತೆ ನೀಡಿ. ನಮಗೆ ಗೊತ್ತು ಈ ಎಲ್ಲಾ ಕೆಲಸಗಳು ತಾಳ್ಮೆಯನ್ನು ಕೋರುತ್ತವೆ. ಇವೆಲ್ಲ ಒಂದು ಸಲ ಸರಿ ಹೋಗುವವರೆಗೆ ತಾಳ್ಮೆ ಕಾಯ್ದುಕೊಳ್ಳಿ. ಯಾವುದೇ ಕಾರಣಕ್ಕು ಮಾನಸಿಕ ಶಾಂತಿಯನ್ನು ಕಳೆದುಕೊಳ್ಳಬೇಡಿ. ಇದೆಲ್ಲ ಸರಿ ಹೋದ ಮೇಲೆ, ನಿಮ್ಮ ಕಾರ್ಯಗಳು ಮತ್ತು ಜವಾಬ್ದಾರಿಗಳು ಸುಗಮವಾಗುತ್ತವೆ. ಮಕ್ಕಳು ಮತ್ತು ಬಾಣಂತಿಯರ ಕುರಿತಾಗಿ ಇನ್ನು ನಮ್ಮ ಸಮಾಜದಲ್ಲಿ ಒಂದು ಮಾನವೀಯ ಭರವಸೆ ಇದೆ ನಂಬಿ, ನಿಶ್ಚಿಂತೆಯಾಗಿರಿ.

English summary

How To Face Breastfeeding Problems At Work

Breastfeeding is very important for both the mother and child. Breast milk has got all the nutrients in the right proportion for the child. It is very important for the development of the child. But, in the modern times, when almost all women have a professional life, it is difficult to maintain a balance. 
Story first published: Saturday, January 17, 2015, 18:53 [IST]
X
Desktop Bottom Promotion