Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೂಕ್ತ ಆಹಾರ ಕ್ರಮ: ಮಗುವಿನ ಜ್ಞಾಪಕ ಶಕ್ತಿ ಹೆಚ್ಚಿಸಲು ಅತ್ಯಗತ್ಯ
ಪ್ರತಿಯೊಬ್ಬ ತಾಯಿಯು ಬುದ್ಧಿವಂತ ಮಗುವನ್ನು ಪಡೆಯಬೇಕೆಂಬ ಕನಸನ್ನು ಹೊತ್ತು ಕೊಂಡಿರುತ್ತಾಳೆ. ನೋಡಲು ಸುಂದರವಾಗಿರಬೇಕು ಮತ್ತು ಮಗು ಚುರುಕಾಗಿರಬೇಕು ಎಂಬ ಬಯಕೆ ಯಾರಿಗೆ ತಾನೇ ಇರುವುದಿಲ್ಲ. ಒಂದು ವೇಳೆ ತಾಯಿಯು ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲವಾದಲ್ಲಿ, ಅಂದರೆ ಫೊಲಿಕ್ ಆಮ್ಲ, ವಿಟಮಿನ್ ಡಿ, ಕಬ್ಬಿಣಾಂಶ ಇತ್ಯಾದಿ ಪೂರಕ ಆಹಾರಗಳನ್ನು ಸೇವಿಸದೆ ಇದ್ದಲ್ಲಿ, ನಿಮಗೆ ಹುಟ್ಟುವ ಮಗುವು ಮಾನಸಿಕವಾಗಿ ಅಸ್ವಸ್ಥನಾಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಮಗುವಿಗಾಗಿಯಾದರು ಸರಿ ನೀವು ಸರಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮಗುವಿನ ಮತ್ತು ನಿಮ್ಮ ಆರೋಗ್ಯದ ದೃಷ್ಟಿಯಿಂದ ತೀರಾ ಅತ್ಯಗತ್ಯ. ಈ ಪೂರಕ ಆಹಾರಗಳು ನಿಮ್ಮ ಮಗುವಿನ ಐಕ್ಯೂವನ್ನು ಹೆಚ್ಚಿಸುತ್ತವೆ. ಜೊತೆಗೆ ನೀವು ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಯನ್ನು ಸಹ ಹೆಚ್ಚಿಸಬಹುದು. ಏಕೆಂದರೆ ನಿಮ್ಮ ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀವು ಸೇವಿಸುವುದರಿಂದ ಸಹಜವಾಗಿ ನಿಮ್ಮ ಮಗುವಿನ ಬುದ್ಧಿಶಕ್ತಿಯಲ್ಲಿ ಗಣನೀಯವಾದ ಬದಲಾವಣೆಗಳನ್ನು ಕಾಣಬಹುದು. ಗರ್ಭಿಣಿಯರು ಮಿಸ್ ಮಾಡಲೇಬಾರದ ಹಣ್ಣುಗಳು ಯಾವುದು ಗೊತ್ತೇ?
ನೀವು ಇವುಗಳನ್ನು ಸೇವಿಸಿದಾಗ ನಿಮ್ಮ ಮಗು ಜನಿಸಿದಾಗ ಅದರ ಮೆದುಳಿನ ತೂಕವು ಸಾಮಾನ್ಯವಾದದ್ದಕಿಂತ 25% ಅಧಿಕ ಬೆಳವಣಿಗೆಯನ್ನು ಹೊಂದಿರುತ್ತದೆ. ನಿಮ್ಮ ಮಗು ಎರಡು ವರ್ಷ ಪ್ರಾಯಕ್ಕೆ ಬಂದಾಗ, ಅದರ ಮೆದುಳು 75% ಬೆಳವಣಿಗೆಯನ್ನು ಕಾಣುತ್ತದೆ. ಇಲ್ಲಿ ಒಂದು ವಿಚಾರವನ್ನು ನೀವು ನೆನಪಿನಲ್ಲಿಡಬೇಕು, ಅದೇನೆಂದರೆ ನಿಮ್ಮ ಮಗುವಿನ ಮೊದಲ ಎರಡು ವರ್ಷಗಳ ಮೆದುಳಿನ ಬೆಳವಣಿಗೆಯು ತುಂಬಾ ಮುಖ್ಯ ಎಂಬುದನ್ನು ನೀವು ಮರೆಯಬಾರದು. ಬನ್ನಿ ಗರ್ಭಾವಧಿಯಲ್ಲಿ ನೀವು ಯಾವ ಬಗೆಯ ಆಹಾರವನ್ನು ಸೇವಿಸಬೇಕು ಎಂದು ಒಂದು ನೋಟ ಹರಿಸೋಣ ಬನ್ನಿ.
ಮೊಟ್ಟೆಗಳು ಮತ್ತು ಚೀಸ್
ಎಲ್ಲಾ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಡಿ ಇರುತ್ತದೆ. ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಈ ವಿಟಮಿನ್‌ನ ಪಾತ್ರ ಅತ್ಯಧಿಕ. ಅಧ್ಯಯನಗಳ ಪ್ರಕಾರ ವಿಟಮಿನ್ ಡಿಯನ್ನು ಕಡಿಮೆ ಸೇವಿಸುವ ಮಹಿಳೆಯರು ಮೆದುಳಿನ ಬೆಳವಣಿಗೆ ಕಡಿಮೆ ಇರುವ ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ ಎಂದು ತಿಳಿದುಬಂದಿದೆ. ಸೂರ್ಯನ ಬೆಳಕಿನ ಜೊತೆಗೆ ನೀವು ವಿಟಮಿನ್ ಡಿಯನ್ನು ಸಹ ಸೇವಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಮೊಟ್ಟೆ, ಚೀಸ್, ಲಿವರ್ ಮುಂತಾದ ಮಾಂಸಾಹಾರಿ ಆಹಾರಗಳಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇವುಗಳನ್ನು ಸೇವಿಸುವುದು ಒಳ್ಳೆಯದು. ಶಿಶುವಿನ ಆರೋಗ್ಯಕ್ಕಾಗಿ ಪ್ರೋಟೀನ್ ಭರಿತ ಆಹಾರಗಳ ವೈಶಿಷ್ಟ್ಯವೇನು?
ಮೀನು ಮತ್ತು ಓಯಿಸ್ಟರ್
ಇವುಗಳಲ್ಲಿ ಐಯೋಡಿನ್ ಅಧಿಕ ಪ್ರಮಾಣದಲ್ಲಿರುತ್ತದೆ. ಐಯೋಡಿನ್ ಕೊರತೆ, ಅದರಲ್ಲಿ ವಿಶೇಷವಾಗಿ ಮೊದಲ 12 ವಾರಗಳಲ್ಲಿ ಐಯೋಡಿನ್ ಕೊರತೆಯು ಮಗುವಿನ ಐಕ್ಯೂ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕಾಗಿ ನೀವು ಗರ್ಭಿಣಿಯಾಗಿರುವಾಗ ತಪ್ಪದೆ ಐಯೋಡಿನ್ ಅನ್ನು ಸೇವಿಸಿ. ಇದಕ್ಕಾಗಿಯೇ ಐಯೋಡಿನ್ ಯುಕ್ತ ಉಪ್ಪು ನಿಮಗೆ ದೊರೆಯುತ್ತದೆ. ಇದರ ಜೊತೆಗೆ ಮೀನು, ಓಯಿಸ್ಟರ್, ಮೊಟ್ಟೆಗಳು, ಮೊಸರು, ಇತ್ಯಾದಿಗಳಲ್ಲಿ ಐಯೋಡಿನ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವುಗಳನ್ನು ಸೇವಿಸಿ.
ಪಾಲಕ್ ಮತ್ತು ದಂಟು
ಇವುಗಳಲ್ಲಿ ಫೋಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆ. ಫೋಲಿಕ್ ಆಮ್ಲವು ಮಗುವಿನಲ್ಲಿ ಮೆದುಳಿನ ಕೋಶಗಳನ್ನು ಬೆಳೆಯಲು ಸಹಾಯ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಫೋಲಿಕ್ ಆಮ್ಲವನ್ನು ಸೇವಿಸುವ ಗರ್ಭಿಣಿಯರು ಅದರಲ್ಲಿಯೂ ಗರ್ಭಿಣಿಯಾಗುವ 4 ವಾರ ಮೊದಲು ಮತ್ತು ಗರ್ಭಿಣಿಯಾದ 8 ವಾರಗಳ ನಂತರ ಫೋಲಿಕ್ ಆಮ್ಲವನ್ನು ಸೇವಿಸುವವರು ಆಟಿಸಂ ಇರುವ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ತೀರಾ ಕಡಿಮೆಯಂತೆ. ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?
ಮೊಟ್ಟೆಗಳು
ಮೊಟ್ಟೆಗಳಲ್ಲಿ ಅಮೈನೋ ಆಮ್ಲ ಕೊಲೈನ್ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೆದುಳಿನ ಬೆಳವಣಿಗೆಗೆ ಮತ್ತು ಸ್ಮರಣೆ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.ಗರ್ಭಿಣಿ ಸ್ತ್ರೀಯರು ಪ್ರತಿದಿನ ಕನಿಷ್ಠ ಎರಡು ಮೊಟ್ಟೆಗಳನ್ನು ಸೇವಿಸಬೇಕು. ಇದರಿಂದ ಅವರ ದೇಹಕ್ಕೆ ಅಗತ್ಯವಾದ ಕೊಲೈನ್ ದೊರೆಯುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಕಬ್ಬಿಣಾಂಶ ಹೆಚ್ಚಿಗೆ ಇರುತ್ತದೆ. ಇದು ಮಗುವು ಜನಿಸುವಾಗ ಅದರ ತೂಕವನ್ನು ಸಹ ಹೆಚ್ಚಿಸುತ್ತದೆ. ಕಡಿಮೆ ತೂಕ ಇರುವ ಮಗುವು ಕಡಿಮೆ ಐಕ್ಯೂವನ್ನು ಸೂಚಿಸುತ್ತದೆ.



Click it and Unblock the Notifications



