For Quick Alerts
ALLOW NOTIFICATIONS  
For Daily Alerts

ಮಗುವಿನ ಕಿವಿಗಳನ್ನು ಶುಚಿಗೊಳಿಸುವ ಟಿಪ್ಸ್‌ಗಳು

By Hemanth P
|

ಮಗುವಿನ ಲಾಲನೆ ಪಾಲನೆ ಮಾಡುವುದು ತುಂಬಾ ಕಠಿಣ. ಅದರಲ್ಲೂ ಮಗುವಿನ ಕಿವಿಗಳನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟದ ಕೆಲಸ. ಕಿವಿಯಲ್ಲಿ ಮೇಣ ಉತ್ಪತ್ತಿಯಾಗುವುದನ್ನು ತಡೆಯುವ ಸಲುವಾಗಿ ಮತ್ತು ಸತ್ತ ಕೋಶಗಳನ್ನು ತೆಗೆಯಲು ನೀವು ಮಗುವಿನ ಕಿವಿಗಳನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ಕಿವಿಯಲ್ಲಿ ಮೇಣ ಉತ್ಪತ್ತಿಯಾಗುವುದರಿಂದ ಕಿವಿಯ ಸೋಂಕಿಗೆ ಕಾರಣವಾಗದು ಅಥವಾ ಮಗುವಿನ ಶ್ರವಣಕ್ಕೆ ಯಾವುದೇ ಹಾನಿಯಾಗದು. ಕಿವಿಯ ಮೇಣ ಸಾಮಾನ್ಯ ಪದಾರ್ಥವಾಗಿದ್ದು, ಇದು ಸೂಕ್ಷ್ಮಜೀವಿ ಮತ್ತು ಹೊರಗಿನ ವಸ್ತುಗಳು ಒಳಗಿನ ಕಿವಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ನಿಮ್ಮ ಮಗುವಿನ ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ಮೇಣ ಉತ್ಪತ್ತಿಯಾಗುತ್ತಿದ್ದರೆ ಆಗ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಅನುಭವಿ ವೈದ್ಯರು ಮಗುವಿನ ಕಿವಿಗಳಲ್ಲಿರುವ ಮೇಣ ತೆಗೆದು ಅದನ್ನು ವೃತ್ತಿಪರ ರೀತಿಯಲ್ಲಿ ಸ್ವಚ್ಛಗೊಳಿಸಬಹುದು. ಮಗುವಿನ ಕಿವಿಗಳನ್ನು ಸ್ವಚ್ಛಗೊಳಿಸಲು ಕ್ಯೂ ಟಿಪ್ಸ್ ಬಳಸಬೇಡಿ. ಇದು ಮಗುವಿಗೆ ತುಂಬಾ ಅಪಾಯಕಾರಿಯಾಗಲಿದೆ. ನೀವು ಮಗುವಿನ ಕಿವಿ ಸ್ವಚ್ಛಗೊಳಿಸುವಾಗ ಯಾವುದಾದರು ಹಾನಿಯಾಗಿ ಅದರಿಂದ ಗಂಭೀರ ಸಮಸ್ಯೆಯಾಗಬಹುದು. ಇದರಿಂದ ಸೋಂಕು ಉಂಟಾಗಬಹುದು. ಅವೈಜ್ಞಾನಿಕ ವಿಧಾನದಿಂದ ನಿಮ್ಮ ಮಗುವಿನ ಕಿವಿ ಸ್ವಚ್ಛಗೊಳಿಸಿದಾಗ ಕಿವಿ ತಮಟೆ ಹರಿದುಹೋಗಿ ಶ್ರವಣಶಕ್ತಿ ಕಳಕೊಳ್ಳಬಹುದು. ಮಗುವಿನ ಕಿವಿ ಸ್ವಚ್ಛಗೊಳಿಸುವಾಗ ಕೆಲವೊಂದು ಪ್ರಾಮುಖ್ಯ ಮತ್ತು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಮಗುವಿನ ಕಿವಿ ಸುರಕ್ಷಿತವಾಗಿ ಸ್ವಚ್ಛಗೊಳಿಸಲು ನೆರವಾಗುವ ಕೆಲವೊಂದು ಪ್ರಮುಖ ಟಿಪ್ಸ್ ಗಳು.

Tips To Clean Your Baby's Ears Safely

ಸ್ನಾನದ ಸಮಯದಲ್ಲಿ ಸ್ವಚಗೊಳಿಸಿ
ಮಗುವಿನ ಕಿವಿ ಸ್ವಚ್ಛಗೊಳಿಸಲು ಸ್ನಾನದ ಸಮಯ ಅತ್ಯುತ್ತಮ. ತೇವಾಂಶವಿದ್ದಾಗ ಮಗುವಿನ ಕಿವಿ ಸ್ವಚ್ಛಗೊಳಿಸುವುದು ತುಂಬಾ ಸುಲಭ. ಒದ್ದೆ ಬಟ್ಟೆ ಬಳಸಿಕೊಂಡು ನೀವು ಕಿವಿಯ ಹೊರಗಿನ ಭಾಗ ಸ್ವಚ್ಛಗೊಳಿಸಿ. ಇದರ ಬಳಿಕ ಕಿವಿಯ ಒಳಗಿನ ಭಾಗ ಸ್ವಚ್ಛಗೊಳಿಸಿ ಮತ್ತು ಹರಿಯುವ ಮೇಣವನ್ನು ಒರೆಸಿಕೊಳ್ಳಿ.

ಬೆಚ್ಚಗಿನ ಬಟ್ಟೆಯಿಂದ ತೆಗೆಯಿರಿ
ಮಗುವಿಗೆ ಸ್ನಾನ ಮಾಡಿಸುವಾಗ ಬೆಚ್ಚಗಿನ ಬಟ್ಟೆಯಿಂದ ಕಿವಿ ಒರೆಸಿ. ಇದನ್ನು ನಿಯಮಿತವಾಗಿ ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಕಿವಿಗಳನ್ನು ಸ್ವಚ್ಛವಾಗಿಡಬಹುದು. ಇದು ಸತ್ತ ಜೀವಕೋಶ ಮತ್ತು ಮೇಣ ತೆಗೆಯುತ್ತದೆ.

ಕಾಟನ್ ಸ್ವಾಬ್ಸ್ ಬೇಡ
ಮಗುವಿನ ಕಿವಿಯೊಳಗೆ ನೀವು ಹತ್ತಿಯ ಸ್ವಾಬ್ ಹಾಕಬಾರದು. ಮಗುವಿನ ಕಿವಿ ಸ್ವಚ್ಛಗೊಳಿಸುವ ಪ್ರಮುಖ ಟಿಪ್ಸ್ ಎಂದರೆ ಮಗುವಿನ ಕಿವಿಯ ಆಳಕ್ಕೆ ಯಾವುದೇ ವಸ್ತು ಹಾಕಬಾರದು. ಹೀಗೆ ಮಾಡುವುದರಿಂದ ಮಗುವಿನ ಕಿವಿ ತಮಟೆಗೆ ಹಾನಿಯಾಗಬಹುದು. ಇದರ ಪರಿಣಾಮ ಹಲವಾರು ಸಮಸ್ಯೆಗಳು ಉಂಟಾಗಬಹುದು.

ಇಯರ್ ಡ್ರಾಪ್ಸ್
ಮಗುವಿನ ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ಮೇಣ ಉತ್ಪತ್ತಿಯಾಗುತ್ತಿದ್ದರೆ ಆಗ ಮಗುವಿನ ಕಿವಿ ಸ್ವಚ್ಛಗೊಳಿಸುವ ಕೆಲವೊಂದು ಟಿಪ್ಸ್ ಗಳು ಕೆಲಸ ಮಾಡದಿದ್ದಾಗ ಅಂತಹ ಸಮಯದಲ್ಲಿ ಇಯರ್ ಡ್ರಾಪ್ಸ್ ಬಳಸಬೇಕು. ಮಗುವಿನ ಕಿವಿಗೆ ಯಾವುದೇ ರೀತಿಯ ಡ್ರಾಪ್ಸ್ ಹಾಕುವ ಮೊದಲು ನೀವು ತಜ್ಞ ವೈದ್ಯರೊಬ್ಬರ ಸಲಹೆ ಪಡೆಯುವುದು ತುಂಬಾ ಮುಖ್ಯ.

ಸ್ವತಃ ವೈದ್ಯರಾಗಬೇಡಿ
ಯಾವುದೇ ವೈದ್ಯಕೀಯ ಬೆಂಬಲವಿಲ್ಲದ ಕೆಲವೊಂದು ಮದ್ದನ್ನು ಉಪಯೋಗಿಸುವುದು ಕೆಲವರ ಅಭಿಪ್ರಾಯ. ಇಂತಹ ಯಾವುದನ್ನೂ ನೀವು ಪ್ರಯತ್ನಿಸಬೇಡಿ, ಇದರಿಂದ ಮಗುವಿನ ಕಿವಿಗೆ ಹಾನಿಯಾಗಬಹುದು. ಇದರಿಂದ ಕಿವಿಯಲ್ಲಿ ಸೋಂಕು ಉಂಟಾಗಬಹುದು. ನಿಮಗೆ ಯಾವುದೇ ಸಮಸ್ಯೆಯಿದ್ದರೆ ಆಗ ವೈದ್ಯರನ್ನು ಭೇಟಿಯಾಗಿ.

ಒಣಗಿರುವಾಗ ಸ್ವಚ್ಛಗೊಳಿಸಬೇಡಿ
ಮಗುವಿನ ಕಿವಿ ಒಣಗಿದ್ದಾಗ ಅದನ್ನು ಸ್ವಚ್ಛಗೊಳಿಸಲು ಹೋಗಬೇಡಿ. ಇದರಿಂದ ಚರ್ಮಕ್ಕೆ ಕಿರಿಕಿರಿಯಾಗಬಹುದು ಮತ್ತು ಗಾಯವಾಗಬಹುದು. ಮಗುವಿನ ಕಿವಿ ಸ್ವಚ್ಛಗೊಳಿಸಲು ಒದ್ದೆ ಬಟ್ಟೆ ಬಳಸಿ. ಅತ್ಯಂತ ಪರಿಣಾಮಕಾರಿ ಟಿಪ್ಸ್ ಎಂದರೆ ಮಗುವಿಗೆ ಸ್ನಾನ ಮಾಡಿಸುವಾಗ ಕಿವಿ ಸ್ವಚ್ಛಗೊಳಿಸಿ.

ತುಂಬಾ ಎಚ್ಚರಿಕೆ ವಹಿಸಿ
ನೀವು ಮಗುವಿನ ಕಿವಿ ಸ್ವಚ್ಛಗೊಳಿಸುವಾಗ ಮಗು ಸಂಪೂರ್ಣವಾಗಿ ಸಹಕರಿಸದೆ ಇರಬಹುದು. ಇಂತಹ ಸಮಯದಲ್ಲಿ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಮಗು ಪ್ರತಿಯೊಂದು ಕ್ಷಣ ತನ್ನ ತಲೆ ಅಲ್ಲಾಡಿಸಬಹುದು. ಇದರಿಂದ ಆಕಸ್ಮಿಕ ಗಾಯವಾಗುವುದನ್ನು ತಡೆಯಲು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

English summary

Tips To Clean Your Baby's Ears Safely

Simple things like cleaning the ears will also become complicated issues, when you are doing it for your baby.
Story first published: Monday, January 6, 2014, 15:37 [IST]
X
Desktop Bottom Promotion