For Quick Alerts
ALLOW NOTIFICATIONS  
For Daily Alerts

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

By deepak
|

ಎಳೆ ಮಕ್ಕಳ ತ್ವಚೆಯು ಅತ್ಯಂತ ಸೂಕ್ಷ್ಮವಾದುದು. ಸುಮ್ಮನೆ ಒಂದು ಗುಳ್ಳೆ ಅಥವಾ ತರಚಿದ ಗಾಯ ಆದರೂ ಸಹ ಅವರಿಗೆ ಅದರಿಂದ ಭಾರೀ ಕಿರಿಕಿರಿಯುಂಟಾಗುತ್ತದೆ. ಒಮ್ಮೆ ನೆನಪಿಸಿಕೊಳ್ಳಿ ಹಸುಗೂಸುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿರುತ್ತದೆ. ಆದರೆ ಇವುಗಳು ಬಹುತೇಕ ನಿರಪಾಯಕಾರಿ ಮತ್ತು ಕೆಲವೇ ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಮಾಯವಾಗುವ ಗುಣಗಳನ್ನು ಹೊಂದಿರುತ್ತವೆ. ಇಲ್ಲಿ ನಾವು ನಿಮಗಾಗಿ ಎಳೆ ಮಕ್ಕಳನ್ನು ಸಾಮಾನ್ಯವಾಗಿ ಕಾಡುವ ಕೆಲವೊಂದು ಸಮಸ್ಯೆಗಳನ್ನು ನಿಮಗಾಗಿ ವಿವರಿಸುತ್ತಿದ್ದೇವೆ ಓದಿ ತಿಳಿದುಕೊಳ್ಳಿ:

ಡೈಪರ್ ಗುಳ್ಳೆ:
ತಪ್ಪಿಸಿಕೊಳ್ಳಲಾಗದ ಈ ಗುಳ್ಳೆಗಳು ನಿಮ್ಮ ಮಗುವನ್ನು ( ಮತ್ತು ನಿಮ್ಮನ್ನು) ರಾತ್ರಿಯಿಡೀ ಜಾಗರಣೆ ಇರುವಂತೆ ಮಾಡುತ್ತವೆ. ಅದಕ್ಕಾಗಿ ನಿಮ್ಮ ಮಗುವಿನ ಡೈಪರ್ ಪ್ರದೇಶವನ್ನು ಸದಾ ಗಮನಿಸುತ್ತಾ ಇರಿ. ಒಂದು ವೇಳೆ ಆ ಭಾಗದಲ್ಲಿ ಕೆಂಪಗಿನ ಗುರುತುಗಳು ಮತ್ತು ನೋವು ಕಂಡು ಬಂದಲ್ಲಿ ತತ್‍ಕ್ಷಣಕ್ಕೆ ಡೈಪರ್ ರಾಷ್ ಕ್ರೀಮ್ ಹಚ್ಚಿ ಹಾಗು ಆ ಭಾಗಕ್ಕೆ ಚೆನ್ನಾಗಿ ಗಾಳಿಯಾಡಿ, ಆದಷ್ಟು ಬೇಗ ಒಣಗಲು ಅವಕಾಶ ಮಾಡಿಕೊಡಿ. ನಿಮ್ಮ ಮಗುವಿಗೆ ಹಾಕುವ ಡೈಪರ್ ಆದಷ್ಟು ಬಿಗಿಯಾಗಿಯೂ ಇರಬಾರದು ಮತ್ತು ತುಂಬಾ ಹೊತ್ತು ಮಗುವಿಗೆ ಹಾಕಿರಬಾರದು. ಈ ವಿಚಾರವಾಗಿ ತುಸು ಜಾಗ್ರತೆಯನ್ನು ವಹಿಸಿ. ಈ ಡೈಪರ್‌ಗಳನ್ನು ಆಗಾಗ್ಗೆ ಬದಲಿಸುತ್ತ ಇರಿ ಮತ್ತು ಅಗತ್ಯವಾದಾಗ ಡೈಪರ್ ರಾಷ್ ಕ್ರೀಮ್ ಹಚ್ಚಿ.

8 Common skin problems in babies

ಡೈಪರ್ ರಾಶಸ್ ಹೋಗಲಾಡಿಸಲು 12 ಮನೆಮದ್ದುಗಳು!

ಮಕ್ಕಳ ಮೊಡವೆಗಳು:
ಮಗುವಿನ ಮುಖದ ಮೇಲೆ ಕಾಣಿಸಿಕೊಳ್ಳುವ ಪುಟ್ಟ ಮೊಡವೆಗಳು ಅಂತಹ ಅಘಾತಕಾರಿ ವಿಚಾರವಲ್ಲ. ಇದು ಎಲ್ಲಾ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಚಾರವೇ. ಇದು ತನ್ನ ಪಾಡಿಗೆ ತಾನೇ ವಾಸಿಯಗುತ್ತದೆ. ಆದ್ದರಿಂದ ಇದರ ಮೇಲೆ ಏನಾದರು ಲೇಪಿಸುವುದನ್ನು ನಿಲ್ಲಿಸಿ.

ಜನನ ಕಾಲದ ಗುರುತುಗಳು:
ಜನನ ಕಾಲದ ಗುರುತುಗಳು ಅಥವಾ ಬರ್ತ್ ಮಾರ್ಕ್‌ಗಳು ಮಗುವಿನಲ್ಲಿ ಜನನ ಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಕೆಲವು ತಿಂಗಳು ಅಥವಾ ವಾರಗಳವರೆಗೆ ಕಾಣಿಸಿಕೊಳ್ಳುವುದೂ ಇದೆ.

ಕಜ್ಜಿ:
ಅಸ್ತಮಾ ಅಥವ ಅಲರ್ಜಿಯನ್ನು ಹೊಂದಿರುವ ಕುಟುಂಬಗಳಲ್ಲಿ ಜನಿಸಿದ ಮಗುವಿನಲ್ಲಿ ಕಜ್ಜಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸದಾ ನವೆ ಮತ್ತು ತುರಿಕೆಯನ್ನುಂಟು ಮಾಡುವ ಈ ಗುಳ್ಳೆಗಳು ಮೊದಲು ಎದೆಯ ಮೇಲೆ ಅಥವಾ ಕೈಗಳ ಮೇಲೆ ಕಾಣಿಸಿಕೊಳ್ಳುತ್ತವೆ. ನಂತರ ಇದು ಒಣಗಿ ಪೊರೆಯಂತೆ ಕಳಚಿ ಬೀಳುತ್ತದೆ. ಈ ಬಗೆಯ ಗುಳ್ಳೆಗಳು ನಾವು ಮಗುವಿಗಾಗಿ ಬಳಸುವ ಸೋಪ್, ಲೋಷನ್ ಅಥವಾ ಮಗುವಿನ ಬಟ್ಟೆಯನ್ನು ಒಗೆಯುವ ಡಿಟರ್ಜೆಂಟ್‍ಗಳಿಂದ ಸಹ ಉಂಟಾಗುವ ಅಲರ್ಜಿಗಳಿಂದ ಕಂಡು ಬರುತ್ತವೆ.

ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

ಒಣತ್ವಚೆ:
ಇದು ಸಾಮಾನ್ಯವಾಗಿ ಹುಟ್ಟಿದ ಪ್ರತಿ ಮಕ್ಕಳಲ್ಲಿ ಕಂಡು ಬರುತ್ತದೆ. ಆಗ ತಾನೇ ಹುಟ್ಟಿದ ಮಕ್ಕಳಲ್ಲಿ ತ್ವಚೆಯು ವಿಪರೀತವಾಗಿ ಒಣಗಿರುತ್ತದೆ. ಇದರಿಂದಾಗಿ ಮುಂದಿನ ಕೆಲ ದಿನಗಳವರೆಗೆ ಈ ತ್ವಚೆಯು ಪೊರೆ ಪೊರೆಯಾಗಿ ಕಳಚಿಕೊಂಡು ಬರುತ್ತಿರುತ್ತದೆ. ಇದು ಸ್ವಲ್ಪ ದಿನಗಳಲ್ಲಿ ನಿಂತು ಹೋಗುತ್ತದೆ. ಒಂದು ವೇಳೆ ನೀವು ಇದರ ಕುರಿತಾಗಿ ಚಿಂತೆ ಮಾಡುತ್ತಿದ್ದಲ್ಲಿ ನಿಮ್ಮ ಮಕ್ಕಳ ವೈಧ್ಯರನ್ನು ಸಂಪರ್ಕಿಸಿ ಹಾಗು ಅವರು ನೀಡುವ ಔಷಧಗಳನ್ನು ಬಳಸಿ.

ಬೆವರು ಸಾಲೆ:
ನೇರಳೆ ಬಣ್ಣದ ಮುಳ್ಳು ಮುಳ್ಳಿನಂತಹ ಈ ಗುಳ್ಳೆಗಳು ಅಧಿಕವಾದ ಬೆವರು ಮತ್ತು ಬಿಸಿಲಿನ ಪರಿಣಾಮವಾಗಿ ಕಂಡು ಬರುತ್ತವೆ. ಇವು ಕುತ್ತಿಗೆ, ಡೈಪರ್ ಪ್ರದೇಶ ಮತ್ತು ಕಂಕುಳಲ್ಲಿ ಕಂಡು ಬರುತ್ತವೆ. ಅದಕ್ಕಾಗಿ ನಿಮ್ಮ ಮಗುವನ್ನು ಆದಷ್ಟು ತಂಪಾಗಿ ಮತ್ತು ಒಣ ವಾತಾವರಣದಲ್ಲಿ ಇಡಿ. ನಿಮ್ಮ ಮಗುವಿಗೆ ಹತ್ತಿಯ ಬಟ್ಟೆಗಳನ್ನೇ ತೊಡಿಸಿ, ಇವು ಸಡಿಲವಾಗಿರಬೇಕು ಎಂಬುದನ್ನು ಮರೆಯಬೇಡಿ. ನಿಮ್ಮ ಮಗುವಿನ ತ್ವಚೆಯ ಮೇಲೆ ಹೆಚ್ಚಿನ ಪೌಡರ್ ಹಾಕಬೇಡಿ. ಏಕೆಂದರೆ ಪೌಡರ್‌ನಲ್ಲಿರುವ ಸಣ್ಣ ಸಣ್ಣ ಕಣಗಳನ್ನು ನಿಮ್ಮ ಮಗುವು ಉಸಿರಾಡಬಹುದು. ಇದು ಮಗುವಿಗೆ ಅಸೌಖ್ಯವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ನಿಮ್ಮ ಮಗುವಿಗೆ ನಾಲ್ಕರಿಂದ ಆರು ತಿಂಗಳು ಆಗುವವರೆಗೆ ಪೌಡರ್ ಹಾಕಲು ಹೋಗಬೇಡಿ.

ಬಿಳಿ ಗುಳ್ಳೆಗಳು:
ಮಿಲಿಯ ಎಂದು ಸಹ ಕರೆಯಲ್ಪಡುವ ಈ ಸಣ್ಣ ಬಿಳಿಯ ಗುರುತುಗಳು ಸಾಮಾನ್ಯವಾಗಿ ಮೂಗಿನ ಮೇಲೆ ಕಂಡು ಬರುತ್ತವೆ. ಇದು ತ್ವಚೆಯಲ್ಲಿರುವ ಎಣ್ಣೆ ಗ್ರಂಥಿಗಳನ್ನು ಮುಚ್ಚಿ ಹಾಕುವುದರಿಂದ ಕಂಡು ಬರುತ್ತದೆ. ಒಮ್ಮೆ ಈ ಗ್ರಂಥಿಗಳು ಹೊರ ಬಂದರೆ ಸಾಕು, ಈ ಗುಳ್ಳೆಗಳು ಕೆಲವೇ ದಿನಗಳಲ್ಲಿ ತಮ್ಮ ಪಾಡಿಗೆ ತಾವು ಕಣ್ಮರೆಯಾಗುತ್ತವೆ.

ಯೀಸ್ಟ್ ಇನ್‍ಫೆಕ್ಷನ್:
ಮಕ್ಕಳು ಸಹ ಯೀಸ್ಟ್ ಇನ್‍ಫೆಕ್ಷನ್‍ಗೆ ಒಳಗಾಗುತ್ತಾರೆ. ಇದು ಸಾಮಾನ್ಯವಾಗಿ ಮಕ್ಕಳಿಗೆ ಆಂಟಿ ಬಯೋಟಿಕ್ ನೀಡಿದ ನಂತರ ಕಂಡು ಬರುತ್ತದೆ. ಇದರಿಂದ ನಾಲಿಗೆ ಮತ್ತು ಬಾಯಿಯಲ್ಲಿ ಊತಗಳು ಕಂಡು ಬರುತ್ತವೆ. ಜೊತೆಗೆ ಟೊಮಾಟೊದಂತೆ ಕೆಂಪಗಿರುವ ಡೈಪರ್ ಗುಳ್ಳೆಗಳು ಮತ್ತು ಸಣ್ಣ ಮೊಡವೆಯಂತಹ ಕೆಂಪು ಗುಳ್ಳೆಗಳು ಸಹ ಕಂಡು ಬರುವುದುಂಟು. ಇದು ಕಂಡು ಬಂದಲ್ಲಿ ನಿಮ್ಮ ವೈಧ್ಯರ ಸಲಹೆಯಂತೆ ಔಷಧೋಪಚಾರ ಮಾಡಿ.

ನೀವು ಸದಾ ನೆನಪಿನಲ್ಲಿಡಬೇಕಾದ ಅಂಶಗಳು:
ನಿಮ್ಮ ಮಗುವಿನ ಬಟ್ಟೆಗಳನ್ನು ತೊಳೆಯಲು ಮೈಲ್ಡ್ ಡಿಟರ್ಜೆಂಟ್‍ಗಳನ್ನು ಬಳಸಿ. ತಲೆದಿಂಬು, ಹಾಸಿಗೆ ಬಟ್ಟೆ, ಬ್ಲಾಂಕೆಟ್‍ಗಳನ್ನು ಸಹ ಪ್ರತ್ಯೇಕವಾಗಿ ತೊಳೆಯಿರಿ. ನಿಮ್ಮ ಮಗುವಿಗಾಗಿ ಡೈ, ಸುವಾಸನೆ, ಪ್ತಾಲೇಟ್‍ಗಳಿಂದ ಮತ್ತು ಪರಬೆನ್‍ಗಳಿಂದ ಮುಕ್ತವಾದ ಸ್ಕಿನ್ ಕೇರ್ ಉತ್ಪನ್ನಗಳನ್ನು ಖರೀದಿಸಿ. ಏಕೆಂದರೆ ಇವುಗಳೆಲ್ಲವು ನಿಮ್ಮ ಮಗುವಿನ ತ್ವಚೆಗೆ ಕಿರಿಕಿರಿಯನ್ನು ಉಂಟು ಮಾಡಬಹುದು.

ಮಕ್ಕಳ ಸಾಮಾನ್ಯ ಆಹಾರ ಸೇವಿಸುವ ಅವಧಿಗಳು

ಮಗುವಿಗೆ ಸ್ನಾನವಾದ ನಂತರ ಬೇಬಿ ಲೋಷನ್ ಹಚ್ಚಿ. ಆಗ ಮಗುವಿನ ತ್ವಚೆಯು ಇನ್ನೂ ಮೃದುವಾಗಿ,ಸ್ವಲ್ಪ ಒದ್ದೆಯಿಂದ ಕೂಡಿರುತ್ತದೆ. ಮಗುವಿನ ಹಗಲಿನ ಸಮಯದಲ್ಲಿ ಡೈಪರ್‌ಗಳನ್ನು ಆಗಾಗ ಬದಲಿಸುತ್ತ ಇರಿ. ಇದರಿಂದ ಗುಳ್ಳೆಗಳಾಗುವುದನ್ನು ತಪ್ಪಿಸಬಹುದು. ಇದಲ್ಲದೆ ರಾತ್ರಿಯ ಸಮಯದಲ್ಲೂ ಸಹ ಕನಿಷ್ಠ ಎರಡು ಬಾರಿ ನಿಮ್ಮ ಮಗುವಿನ ಡೈಪರ್‌ಗಳನ್ನು ಬದಲಾಯಿಸಿ.

ಇತ್ತೀಚಿನ ಅಧ್ಯಯನಗಳ ಪ್ರಕಾರ ಬಾಡಿ ಮಸಾಜ್ ಹಸುಗೂಸುಗಳಿಗೆ ಒಳ್ಳೆಯದಂತೆ. ಅದಕ್ಕಾಗಿ ಬೇಬಿ ಆಯಿಲ್‍ನಿಂದ ನಿಮ್ಮ ಮಗುವಿಗೆ ಮಸಾಜ್ ಮಾಡಿ. ಇದರಿಂದ ನಿಮ್ಮ ಮಗುವಿಗೆ ವಿಶ್ರಾಂತಿಯಷ್ಟೇ ಅಲ್ಲದೆ ಅದರ ತ್ವಚೆಯು ಸಹ ಆರೋಗ್ಯಕರವಾಗುತ್ತದೆ. ಇದರ ಜೊತೆಗೆ ಈ ಮಸಾಜ್ ನಿಮ್ಮ ಮಗುವಿಗೆ ಒಳ್ಳೆಯ ನಿದ್ದೆಯನ್ನು ಸಹ ತರುತ್ತದೆ.

English summary

8 Common skin problems in babies

A baby's skin is so delicate that even a slight scratch or rash is known to make them very irritable. Remember that newborns are quite prone to rashes and most are harmless and disappear on their own within a few days. Here's looking at some common skin problems in babies:
Story first published: Friday, June 27, 2014, 14:56 [IST]
X
Desktop Bottom Promotion