For Quick Alerts
ALLOW NOTIFICATIONS  
For Daily Alerts

ಮಗುವಿಗೆ ಬಾಟಲಿ ಹಾಲು ಕೊಡುತ್ತಿದ್ದೀರಾ?

|

ಹೆಚ್ಚಿನ ಪೋಷಕರು ಮಗುವಿಗೆ 5-6 ತಿಂಗಳು ತುಂಬುತ್ತಿದ್ದಂತೆ ಬಾಟಲಿ ಹಾಲನ್ನು ಕುಡಿಯಲು ಅಭ್ಯಾಸ ಮಾಡಿಸುತ್ತಾರೆ, ಹೊರಗಡೆ ದುಡಿಯುವ ಮಹಿಳೆಯಾದರೆ ತಾನು ಕೆಲಸಕ್ಕೆ ಹೋಗುವಾಗ ಮಗುವಿಗೆ ತೊಂದರೆಯಾಗಬಾರದೆಂದು ಬಾಟಲಿ ಹಾಲನ್ನು ಮಗುವಿಗೆ 3-4 ತಿಂಗಳು ಆದಾಗಲೇ ಅಭ್ಯಾಸ ಮಾಡಿಸುತ್ತಾರೆ.

ಮಕ್ಕಳು ಮೊದಮೊದಲು ಕುಡಿಯಲು ನಿರಾಕರಿಸಿದರೂ ನಂತರ ಕುಡಿಯಲು ಪ್ರಾರಂಭಿಸುತ್ತವೆ. ಮಕ್ಕಳಿಗೆ ಬಾಟಲಿಯಲ್ಲಿ ಹಾಲು ಕೊಡುವಾಗ, ಹಾಲು ತುಂಬುವ ಬಾಟಲಿ ಬಗ್ಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಇಲ್ಲಿ ನಾವು ಹಾಲು ಬಾಟಲಿನ ಶುಚಿತ್ವದ ಬಗ್ಗೆ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳೇನು ಎಂದು ಇಲ್ಲಿ ಹೇಳಾಗಿದೆ ನೋಡಿ:

Baby Bottle Hygiene Tips

ಹಾಲಿನ ಬಾಟಲಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಬೇಕು
ಹಾಲು ಬಾಟಲಿನಲ್ಲಿ ಸೂಕ್ಷ್ಮಾಣು ಜೀವಿಗಳಿರುತ್ತವೆ, ಆದ್ದರಿಂದ ಪ್ರತೀಬಾರಿ ಬಾಟಲಿಗೆ ಹಾಲು ತುಂಬುವ ಮುನ್ನ ಬಾಟಲಿಯನ್ನು ಚೆನ್ನಾಗಿ ತೊಳೆದು 2-3 ನಿಮಿಷ ಬಿಸಿ ನೀರಿನಲ್ಲಿ ಕುದಿಸಿ, ನಂತರ ಅದರಲ್ಲಿ ಹಾಲನ್ನು ತುಂಬಿ.

ಹಾಲನ್ನು ತುಂಬಿಡಬೇಡಿ
ಹಾಲನ್ನು ಕುಡಿಯಲು ಕೊಡುವಾಗಷ್ಟೇ ತುಂಬಿ, ಮೊದಲೇ ತುಂಬಿಡಬೇಡಿ, ಅಲ್ಲದೆ ಫುಲ್ ಬಾಟಲಿ ತುಂಬಿಸಬೇಡಿ, ಮಗುವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತುಂಬಿಡಿ.

ಹಾಲು ಕುಡಿಸಿದ ಬಳಿಕ ತೊಳೆದು ಡ್ರೈಯಾಗಿಡಿ
ಮಗುವಿಗೆ ಹಾಲು ಕುಡಿಸಿದ ಬಳಿಕ ಬಾಟಲಿಯನ್ನು ಹಾಗೇ ಇಡುವ ಬದಲು ಚೆನ್ನಾಗಿ ತೊಳೆದು, ಒರೆಸಿ ಇಡಿ. ಹಾಗೇ ಇಟ್ಟರೆ ಅದರಲ್ಲಿದ್ದ ಹಾಲು ಹಾಳಾದರೆ , ಆ ಬಾಟಲಿನಲ್ಲಿ ಮಗುವಿಗೆ ಹಾಲು ಕುಡಿಸಿದರೆ ಮಗುವಿಗೆ ಹೊಟ್ಟೆ ನೋವು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಬಾಟಲಿ ಶುದ್ಧವಾಗಿರಲಿ.

ನಿಪ್ಪಲ್ ಅನ್ನು ಶುಚಿಗೊಳಿಸಬೇಕು
ಬಾಟಲ್ ಅನ್ನು ಶುದ್ಧ ಗೊಳಿಸಿದರೆ ಮಾತ್ರ ಸಾಲದು ಅದರ ನಿಪ್ಪಲ್ ಅನ್ನು ಶುಚಿಗೊಳಿಸಬೇಕು, ಎರಡು ದಿನಕ್ಕೆ ಒಮ್ಮೆ ಸ್ಕ್ರಬ್ ಮಾಡಿ ತೊಳೆಯಬೇಕು. ಬಾಟಲಿಯನ್ನು ಶುದ್ಧವಾಗಿ ಇಡದಿದ್ದರೆ ಮಗುವಿಗೆ ಅನಾರೋಗ್ಯ ಉಂಟಾಗುವುದು, ಆದ್ದರಿಂದ ಬಾಟಲಿನ ಶುಚಿತ್ವದ ಬಗ್ಗೆ ಎಚ್ಚರ.

Read more about: baby milk ಮಗು ಹಾಲು
English summary

Baby Bottle Hygiene Tips

Your baby is too young and sensitive. So, you have to maintain proper hygiene in every way to ensure good health of the baby.As you feed through a bottle, make sure you follow the hygiene tips.
X
Desktop Bottom Promotion