For Quick Alerts
ALLOW NOTIFICATIONS  
For Daily Alerts

ಗರ್ಭನಿರೋಧಕ ಮಾತ್ರೆಯಿಂದ ಮುಟ್ಟನ್ನು ಮುಂದೂಡಬಹುದೇ?

By Manu
|

ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ವಿಶ್ವದಾದ್ಯಂತ 80 ಶೇಖಡಾಕ್ಕಿಂತಲೂ ಹೆಚ್ಚು ಮಹಿಳೆಯರು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾರೆ. ಭಾರತದಲ್ಲಿಯೂ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಮಹಿಳೆಯರ ಸಂಖ್ಯೆ ಬಹಳಷ್ಟಿದೆ. ಇದು ಮಾಸಿಕ ಋತುಚಕ್ರದ ದಿನಗಳನ್ನು ಮುಂದೂಡಲು ಸುರಕ್ಷಿತ ಎಂಬ ಕಾರಣಕ್ಕೇ ಇದರ ಹೆಚ್ಚಿನ ಬಳಕೆಯಾಗುತ್ತಿದೆ. ಸ್ತ್ರೀರೋಗ ತಜ್ಞರೂ ಮಹಿಳೆಯ ಆರೋಗ್ಯ, ಋತುಚಕ್ರ ಮೊದಲಾದವುಗಳನ್ನು ಪರಿಶೀಲಿಸಿ ಈ ಗುಳಿಗೆಗಳನ್ನು ಶಿಫಾರಸ್ಸು ಮಾಡುತ್ತಾರೆ. ಆದರೆ ಇವುಗಳ ಬಳಕೆಗೂ ಮುನ್ನ ಇದರ ಬಗ್ಗೆ ಸೂಕ್ತ ಮಾಹಿತಿಗಳನ್ನು ಪಡೆದಿರುವುದು ಇದನ್ನು ಬಳಸುವ ಮಹಿಳೆಯರಿಗೆ ಅಗತ್ಯವಾಗಿದೆ.

ಇನ್ನೊಂದು ಕಡೆಯಲ್ಲಿ ಈ ಗುಳಿಗೆಗಳ ನಿಯಮಿತ ಬಳಕೆಯಿಂದ ಈ ಕ್ಷಣಕ್ಕೆ ಗರ್ಭವನ್ನು ತಡೆಯಬಹುದಾದರೂ ನಾಳೆ ಸಂತಾನ ಬೇಕು ಎಂದು ಇದರ ಬಳಕೆ ನಿಲ್ಲಿಸಿದ ಬಳಿಕ ಪಡೆಯುವ ಗರ್ಭಧಾರಣೆಯಲ್ಲಿ ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

Can You Delay Your Periods With Birth Control Pills?

ಅಷ್ಟೇ ಅಲ್ಲ, ತಾಯಿಯಾಗುವವಳ ಮೆದುಳು ಮತ್ತು ಹೃದಯದ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಈ ಪುಟ್ಟ ಗುಳಿಗೆಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಗುಣವಿದ್ದು ಮುಂದೆಂದಾದರೂ ಹೃದಯಾಘಾತ ಮತ್ತು ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವು ವಿಧದ ಗರ್ಭನಿರೋಧಕ ಗುಳಿಗೆಗಳಿವೆ. ಇವುಗಳ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಿ ಕಂಡುಕೊಂಡ ಉತ್ತರಗಳ ಸಮೀಕ್ಷೆಯ ಬಳಿಕ ಇವುಗಳಲ್ಲಿ ನಾಲ್ಕು ಮಾತ್ರ ಕಡಿಮೆ ಹಾನಿಕರ, ಅಂದರೆ ಸರಿಸುಮಾರು ಸುರಕ್ಷಿತ ಎಂದು ಸಾಬೀತುಪಡಿಸಲಾಗಿದೆ.

ಈ ನಾಲ್ಕು ಬಗೆಯ ಗುಳಿಗೆಗಳೆಂದರೆ:
ಸಾಂಪ್ರಾದಾಯಿಕ ಗುಳಿಗೆಗಳು: (Traditional Birth Control)
ಇವು 28 ಗುಳಿಗೆಗಳ ಪ್ಯಾಕೆಟ್ಟುಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವುಗಳ ಪೈಕಿ 21 ಅಥವಾ 22 ಗುಳಿಗೆಗಳು ಫಲಕಾರಿಯಾಗಿದ್ದು ಉಳಿದವು ಅಲ್ಪವಾದ ಪರಿಣಾಮ ಬೀರುತ್ತವೆ. ಈ ಗುಳಿಗೆಗಳಲ್ಲಿರುವ ಔಷಧಿಗಳ ಪರಿಣಾಮದಿಂದ ಅಂಡಾಣು ಬಿಡುಗಡೆಯ ಹಾರ್ಮೋನು ತಡವಾಗಿ ಋತುಚಕ್ರವೂ ಮುಂದೂಡಲ್ಪಡುತ್ತದೆ.

ಸಿಬಿಸಿ ಗುಳಿಗೆಗಳು (The CBC Pills)
ಈ ಗುಳಿಗೆಗಳನ್ನು ಸತತವಾಗಿ ಮೂರು ತಿಂಗಳ ಕಾಲ ಸೇವಿಸಬೇಕು. ಸಾಂಪ್ರಾದಾಯಿಕ ವಿಧಾನದಂತಲ್ಲದೇ ಇದರಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಿಶ್ರಣವಾಗಿದ್ದು ಅಂಡಾಣು ಬಿಡುಗಡೆಯಾಗುವುದನ್ನು ತಡೆಗಟ್ಟುತ್ತದೆ. ಪ್ರತಿ ಇಪ್ಪತ್ತೆಂಟು ದಿನಗಳಿಗೆ ಸರಿಯಾದ ಮತ್ತು ನಿಯಮಿತವಾದ ಋತುಚಕ್ರವಿರುವ ಮಹಿಳೆಯರು ಈ ಗುಳಿಗೆಗಳನ್ನು ಸೇವಿಸಲು ಉತ್ತಮ ಆಯ್ಕೆಯಾಗಿದೆ.

ಏಕಹಂತದ ಗುಳಿಗೆಗಳು(Monophasic Birth Control Pills)
ಈ ಗುಳಿಗೆಗಳಲ್ಲಿ ಇತರ ದಿನಗಳಂತೆಯೇ ಇರುವಂತೆ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ಋತುಚಕ್ರದ ದಿನಗಳನ್ನೂ ಇತರ ದಿನಗಳಂತೆಯೇ ಮಾಡಲು ಅಂದರೆ ಋತುಚಕ್ರದ ದಿನಗಳನ್ನು ಮುಂದೂಡಲು ಸಾಧ್ಯವಿದೆ.

ಬಹುಹಂತದ ಗುಳಿಗೆಗಳು (Multiphasic Birth Control Pills)
ಈ ಗುಳಿಗೆಗಳನ್ನು ಸೇವಿಸುವ ಮೂಲಕ ಪ್ರತಿ ವಾರವೂ ಹಾರ್ಮೋನುಗಳ ಪ್ರಮಾಣ ಮತ್ತು ವಿಧ ಬೇರೆಬೇರೆಯಾಗಿರುವ ಮೂಲಕ ಋತುಚಕ್ರದ ದಿನಗಳನ್ನು ಮುಂದೆ ಹಾಕಲಾಗುತ್ತದೆ.

ಋತುಚಕ್ರದ ದಿನಗಳನ್ನು ಮುಂದೆ ಹಾಕುವುದರಿಂದ ಏನು ಪ್ರಯೋಜನ?
ಋತುಚಕ್ರದ ದಿನಗಳನ್ನು ಮುಂದೆ ಹಾಕುವ ಮೂಲಕ ಗರ್ಭಾಶಯದ ಕ್ಯಾನ್ಸರ್ ಮತ್ತು ಗರ್ಭನಾಳದ ಕ್ಯಾನ್ಸರ್ ಬರುವುದರಿಂದ ತಡೆಗಟ್ಟಬಹುದು. ಕೆಲವು ಮಹಿಳೆಯರಿಗೆ ಈ ದಿನಗಳ ಹಿಂದಿನ ಮತ್ತು ಬಳಿಕದ ದಿನಗಳಲ್ಲಿ ಅಪಾರವಾದ ಮತ್ತು ಅತ್ಯುಗ್ರ ರೂಪದ ಮೈಗ್ರೇನ್ ತಲೆನೋವು ಆವರಿಸುತ್ತದೆ.


ಏಕೆಂದರೆ ಇವರ ದೇಹದಲ್ಲಿ ಹಾರ್ಮೋನುಗಳ ಬಿಡುಗಡೆ ಮತ್ತು ಏರುಪೇರು ನೋವಿನ ರೂಪದಲ್ಲಿ ಸ್ಪಂದಿಸುತ್ತದೆ. ಈ ಗುಳಿಗೆಗಳ ಮೂಲಕ ಹಾರ್ಮೋನುಗಳನ್ನು ನೀಡುವ ಮೂಲಕ ಈ ದಿನಗಳನ್ನು ಮುಂದೂಡುವ ಮೂಲಕ ಈ ನೋವಿನಿಂದ ಪಾರಾಗಬಹುದು. ಕೊಂಚ ತಡವಾಗಿ ಆಗುವ ಸ್ರಾವದಲ್ಲಿ ತಲೆನೋವು ಇಲ್ಲದಿರುವುದು ಸಂಶೋಧನೆಗಳಿಂದ ಕಂಡುಬಂದಿದೆ. ಅಲ್ಲದೇ ಈ ವಿಧಾನದಿಂದ ರಕ್ತಹೀನತೆ ಆವರಿಸುವುದರಿಂದಲೂ ತಡೆಯಬಹುದು.

ಗುಳಿಗೆಗಳಿಂದ ದಿನಗಳ ಏರುಪೇರಿನ ಅಡ್ಡಪರಿಣಾಮಗಳೇನು?
ತಡವಾದ ಋತುಚಕ್ರದ ಪರಿಣಾಮವಾಗಿ ರಕ್ತಸ್ರಾವವೂ ಹೆಚ್ಚಾಗುವುದನ್ನು ಕಂಡುಕೊಳ್ಳಲಾಗಿದೆ. ಆದರೆ ಇದು ಮೊದಲ ಕೆಲವು ತಿಂಗಳುಗಳಿಗೆ ಸೀಮಿತವಾಗಿದ್ದು ನಂತರ ಇದು ದೇಹಕ್ಕೆ ಒಗ್ಗಿಕೊಳ್ಳುತ್ತದೆ. ಸದ್ಯಕ್ಕೆ ಇದೊಂದೇ ಅಡ್ಡಪರಿಣಾಮವನ್ನು ಕಂಡುಕೊಳ್ಳಲಾಗಿದೆ.

English summary

Can You Delay Your Periods With Birth Control Pills?

Birth control pills are commonly used today by more than 80 percent of women. In India alone, women pop in birth control medications since it is considered to be the safest drug to postpone a period. Gynecologists too suggest that birth control pills are safe and depending on your health and menses cycle it is important for every woman to understand the effects and results of this little p
X
Desktop Bottom Promotion