For Quick Alerts
ALLOW NOTIFICATIONS  
For Daily Alerts

ಪುರುಷರಿಗಾಗಿ ಇರುವ ಗರ್ಭನಿರೋಧಕಗಳು

By Hemanth Amin
|

ವೈವಾಹಿಕ ಸಂಬಂಧದಲ್ಲಿ ಯುವ ದಂಪತಿ ಹೆಚ್ಚಾಗಿ ಕೇಳುವ ಸಲಹೆಯೆಂದರೆ ಅದು ಸಂತಾನ ನಿಯಂತ್ರಣ. ಮದುವೆ ಅಥವಾ ಇನ್ನಿತರ ಸಂಬಂಧವಾಗಿರಬಹುದು, ಯೋಜಿತಲ್ಲದ ಗರ್ಭಧಾರಣಿ ತಪ್ಪಿಸಲು ಮತ್ತು ಕೆಲವೊಂದು ಲೈಂಗಿಕ ಸಂಬಂಧಿ ರೋಗಗಳನ್ನು ತಡೆಯಲು ಮೊದಲ ಆಯ್ಕೆಯೇ ಗರ್ಭನಿರೋಧಕ. ಗರ್ಭಧಾರಣೆ ತಡೆಯಲು ಮಹಿಳೆಯರು ಮತ್ತು ಪುರುಷರಿಗೆ ಭಾರೀ ಪ್ರಮಾಣದಲ್ಲಿ ಗರ್ಭನಿರೋಧಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭನಿರೋಧಕ ಬಳಕೆ ದಂಪತಿಯಲ್ಲಿ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ.
ಗರ್ಭಧಾರಣೆ ತಡೆಗಟ್ಟಲು ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕ ಆಯ್ಕೆಗಳು ಲಭ್ಯವಿದೆ. ಗರ್ಭಧಾರಣೆ ತಡೆಯಲು ಪುರುಷರು ಇಂದ್ರಿಯನಿಗ್ರಹ, ಕಾಂಡೋಮ್, ಸಂತಾನಹರಣ ಮತ್ತು ವಾಪಸಾತಿ ತಂತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿಯೊಂದು ವಿಧಾನವು ತನ್ನದೇ ಆದ ಪರಿಣಾಮ ಮತ್ತು ಉಪಯೋಗಗಳನ್ನು ಹೊಂದಿದೆ. ಸಂತಾನ ನಿಯಂತ್ರಣಕ್ಕೆ ಎಲ್ಲಾ ಗರ್ಭನಿರೋಧಕಗಳು ಶೇ. 100ರಷ್ಟು ಸುರಕ್ಷಿತವಲ್ಲ. ಅನಿಯೋಜಿತ ಗರ್ಭಧಾರಣೆ ತಡೆಯಲು ಸ್ವಲ್ಪ ಮಟ್ಟದ ಅಪಾಯ ಇದ್ದೇ ಇರುತ್ತದೆ. ಇದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಮತ್ತು ಇಂತಹ ವಿಧಾನಗಳ ವಿಫಲವಾಗುವ ಬಗ್ಗೆ ತಿಳಿಯಲು ತಯಾರಿರಬೇಕು.

Best contraceptives for men
ಪುರುಷರಿಗಾಗಿ ಇರುವ ಪ್ರತಿಯೊಂದು ಗರ್ಭನಿರೋಧಕವು ತನ್ನದೇ ಆದ ತಾಂತ್ರಿಕ ಸಲಹೆಗಳೊಂದಿಗೆ ಬರುತ್ತದೆ ಮತ್ತು ಇದು ಪರಿಣಾಮಕಾರಿಯಾಗಲು ತಜ್ಞರ ಸಲಹೆ ಪಡೆಯಬೇಕು. ಕಾಂಡೋಮ್ ನಂತಹ ಗರ್ಭನಿರೋಧಕಗಳು ಉತ್ಪಾದನಾ ದೋಷ ಅಥವಾ ಲೈಂಗಿಕ ಕ್ರಿಯೆ ವೇಳೆ ಒಡೆದು ಹೋಗುವುದರಿಂದ ಶೇ. 3ರಷ್ಟು ವೈಫಲ್ಯವಾಗುತ್ತದೆ. ಇಂತಹ ಮುನ್ನೆಚ್ಚರಿಕೆಯನ್ನು ಪ್ಯಾಕೇಟ್ ಮೇಲೆ ಬರೆದಿರುತ್ತಾರೆ ಮತ್ತು ಇದರಿಂದಾಗುವ ದುರದೃಷ್ಟಕರ ದುಷ್ಪರಿಣಾಮಗಳಿಗೆ ತಯಾರಿರಬೇಕು. ಇತರ ಗರ್ಭನಿರೋಧಕ ವಿಧಾನಗಳಾದ ಔಟರ್ ಕೋರ್ಸ್ ಅಥವಾ ವಾಪಸ್ ತೆಗೆಯುವುದು ತುಂಬಾ ಅಪಾಯಕಾರಿ ಮತ್ತು ಇದರ ಪರಿಣಾಮ ತುಂಬಾ ಕಡಿಮೆ.

ಪುರುಷರಿಗಾಗಿ ಇರುವ ಗರ್ಭನಿರೋಧಕಗಳ ವಿವರಗಳು.
ಇಂದ್ರಿಯ ನಿಗ್ರಹ
ಇಂದ್ರಿಯ ನಿಗ್ರಹವು ಶೇ. 100ರಷ್ಟು ಪರಿಣಾಮಕಾರಿಯಾಗುವ ಗರ್ಭನಿರೋಧಕ. ಈ ವಿಧಾನವು ಹೇಳಿದಷ್ಟು ಸುಲಭವಲ್ಲ. ಗರ್ಭಧಾರಣೆ ತಡೆಯಲು ಸಂಬಂಧದಲ್ಲಿರುವ ಇಬ್ಬರಲ್ಲಿಯೂ ಹೆಚ್ಚಿನ ಇಚ್ಛಾಶಕ್ತಿ ಬೇಕಾಗುತ್ತದೆ. ನಿಕಟ ಸಂಭೋಗವು ಯಾವುದೇ ಆರೋಗ್ಯಕರ ಸಂಬಂಧದ ಅವಿಭಾಜ್ಯ ಅಂಗ. ಇದನ್ನು ತಡೆಯಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಸಂಗಾತಿಯೊಂದಿಗೆ ನೇರ ಸಂಭೋಗ ತಡೆಯಲು ಆಟಿಕೆಗಳನ್ನು ಅವಲಂಬಿಸಬಹುದು ಅಥವಾ ಪರಸ್ಪರ ಹಸ್ತಮೈಥುನದಿಂದ ನೇರ ಮೈಥುನ ತಡೆಯಬಹುದು.

ಕಾಂಡೋಮ್
ಗರ್ಭನಿರೋಧಕಗಳಲ್ಲಿ ಜನಪ್ರಿಯವಾಗಿರುವ ಕಾಂಡೋಮ್ ಗಳನ್ನು ಪಡೆಯುವುದು ಮತ್ತು ಬಳಸುವುದು ಸುಲಭ. ಮುನ್ನೆಚ್ಚರಿಕೆ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿದರೆ ಅದು ವಿಫಲವಾಗುವ ಸಾಧ್ಯತೆ ತುಂಬಾ ಕಡಿಮೆ. ಕಾಂಡೋಮ್ ಗಳನ್ನು ಬಳಸಿ ಲೈಂಗಿಕ ಕ್ರಿಯೆ ಆನಂದಿಸಬಹುದು. ಇದರಿಂದಾಗಿ ಕಾಂಡೋಮ್ ಇಂದು ಹೆಚ್ಚು ಜನಪ್ರಿಯವಾಗಿದೆ. ಎಲ್ಲಾ ಸಮಯಗಳಲ್ಲಿ ಇದು ಸಿಗುವ ಮತ್ತು ಯಾವುದೇ ಸಮಸ್ಯೆಯಿಲ್ಲದೆ ತೆಗೆದುಕೊಂಡು ಹೋಗಬಹುದಾದ ಕಾರಣ ಸಂಗಾತಿಗಳಿಗೆ ಇದು ಒಳ್ಳೆಯ ಆಯ್ಕೆ.

ಔಟರ್ ಕೋರ್ಸ್
ತಮ್ಮ ಸಂಗಾತಿ ಗರ್ಭಧರಿಸುವುದನ್ನು ತಡೆಯಲು ಪುರುಷರು ಬಳಸಬಹುದಾದ ಗರ್ಭನಿರೋಧಕವೆಂದರೆ ಅದು ಔಟರ್ ಕೋರ್ಸ್. ನೈಜ ಮೈಥುನಕ್ಕಿಂತ ಈ ಸಂಭೋಗದಲ್ಲಿ ಹೆಚ್ಚಿನ ಪ್ರೀತಿ ಬೇಕಾಗುತ್ತದೆ. ನೈಜ ಮೈಥುನ ಮತ್ತು ಆ ಪ್ರದೇಶದಲ್ಲಿ ವೀರ್ಯ ಹೋಗುವುದನ್ನು ತಡೆದರೆ ಆಗ ಶೇ. 100ರಷ್ಟು ಗರ್ಭಧಾರಣೆ ತಡೆಯಬಹುದು.

ವಾಪಸ್ ಪಡೆಯುವ ವಿಧಾನ
ಇದನ್ನು ಪುಲ್ ಔಟ್ ವಿಧಾನವೆಂದೂ ಕರೆಯಲಾಗುತ್ತದೆ. ಇದು ವಿಫಲವಾಗುವ ಸಾಧ್ಯೆ ಶೇ. 4ರಷ್ಟು. ವೀರ್ಯ ಹೊರಚಿಮ್ಮುವ ಸಮಯ ಬಂದಾಗ ಹೊರತೆಗೆದು ಹೊರಗಡೆ ವೀರ್ಯ ಸ್ಖಲಿಸಬೇಕು. ಇದರಿಂದ ವೀರ್ಯ ಗರ್ಭದೊಳಗೆ ಹೋಗಿ ಫಲ ನೀಡುವುದು ತಪ್ಪುತ್ತದೆ. ಈ ವಿಧಾನದಲ್ಲಿ ಹೆಚ್ಚಿನ ಅಪಾಯ ಮತ್ತು ವಿಫಲವಾಗುವ ಸಾಧ್ಯಯೂ ಇದೆ.

ಸಂತಾನಹರಣ
ಸಂತಾನಹರಣ ಒಂದು ರೀತಿಯ ಶಸ್ತ್ರಚಿಕಿತ್ಸೆ. ಇದು ರೇತ್ರನಾಳವನ್ನು ಕಡಿದು, ಮುಚ್ಚುವುದು ಅಥವಾ ಬ್ಲಾಕ್ ಮಾಡುವುದು. ಕೆಲವೊಂದು ಸಲ ಇದು ವಿಫಲವಾಗಬಹುದು. ಆದರೆ ಯಾವಾಗಲೂ ಅಲ್ಲ. ಸಂತಾನಹರಣವು ಇತರ ಸಂತಾನಶಕ್ತಿಹರಣದಂತೆ ಒಂದು ಶಾಸ್ವತ ಜನನ ನಿಯಂತ್ರಕ. ಭವಿಷ್ಯದಲ್ಲಿ ಮುಂದೆ ಮಗು ಬೇಡವೆಂದು ಪುರುಷರು ನಿರ್ಧರಿಸಿದರೆ ಆಗ ಮಾತ್ರ ಇಂತಹ ಶಸ್ತ್ರಚಿಕಿತ್ಸೆ ಮಾಡಬಹುದು.

ಸುರಕ್ಷಿತ ಅವಧಿ
ಸುರಕ್ಷಿತ ಅವಧಿಗಾಗಿ ಋತುಚಕ್ರದ ಅವಧಿಯನ್ನು ಕಂಡುಹಿಡಿಯುವುದು ಮತ್ತು ಮಾಸಿಕ ಋತುಚಕ್ರದ ಫಲವತ್ತಾದ ಅವಧಿಯಲ್ಲಿ ಸಂಭೋಗದಿಂದ ದೂರ ಉಳಿಯುವುದರಿಂದ ಗರ್ಭಧಾರಣೆ ಅಪಾಯ ತಪ್ಪಿಸಬಹುದಾಗಿದೆ. ಈ ಫಲವತ್ತಾದ ಅವಧಿಯಲ್ಲಿಯೂ ಕಾಂಡೋಮ್ ಅಥವಾ ಇತರ ಗರ್ಭನಿರೋಧಕ ವಿಧಾನಗಳನ್ನು ಬಳಸಿ ಸಂಭೋಗ ನಡೆಸಬಹುದು.

English summary

Best contraceptives for men

Birth control is one of the most sought after advises from young couples in a relationship. Married or otherwise, contraceptive will always be at the top of their mind to avoid unplanned pregnancy and to some extent prevent STD's. There are various contraceptives for women and men that help in preventing pregnancy to a large extent.
Story first published: Thursday, November 28, 2013, 9:52 [IST]
X
Desktop Bottom Promotion