Just In
Don't Miss
- News
ಹಲವು ಉದ್ದಿಮೆಗಳ ಮೇಲೆ ಪರಿಣಾಮ ಬೀರಿದ ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ
- Sports
ಈ ಮೂವರೇ ಮುಂದಿನ ಮೂರು ವರ್ಷ ಭಾರತದ ಟೆಸ್ಟ್ ತಂಡದ ಆಧಾರ ಸ್ತಂಭಗಳು
- Movies
ಚಾರ್ಲಿ ಪಾತ್ರದಲ್ಲಿ ನಟಿ ಅಮೃತಾ ರಾಮಮೂರ್ತಿ ಪುಟ್ಟ ಮಗು!
- Education
COMEDK Result 2022 : ಕಾಮೆಡ್ ಫಲಿತಾಂಶ ವೀಕ್ಷಿಸುವುದು ಹೇಗೆ ?
- Finance
ಜು.4ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ
- Technology
ಒನ್ಪ್ಲಸ್ ಟಿವಿ 50 Y1S ಪ್ರೊ ಲಾಂಚ್! ಡಾಲ್ಬಿ ಆಡಿಯೋ ಸೌಲಭ್ಯ!
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಮಾನವೀಯತೆ ಇಲ್ಲದ ಮೃಗಗಳ ನಡುವೆ ಇಷ್ಟು ಮುಗ್ದತೆಯೂ ಸಲ್ಲದು!
ಟ್ವಿಟರ್‌ನಲ್ಲಿ ಮಹಿಳೆಯೊಬ್ಬರು ಚಿಕ್ಕ ಪಾಪುವನ್ನು ಹಿಡಿದು ಮೆಟ್ರೋದಲ್ಲಿ ನೆಲದಲ್ಲಿ ಕುಳಿತಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಆ ವೀಡಿಯೋದಲ್ಲಿ ಆ ತಾಯಿ ಮೆಟ್ರೋದಲ್ಲಿ ಕೆಳಗಡೆ (ಫ್ಲೋರ್‌ನಲ್ಲಿ) ಮಗುವನ್ನು ಹಿಡಿದು ಕುಳಿತಿದ್ದನ್ನು ನೋಡಿದರೂ ಬೇರೆಯವರು ಆರಾಮವಾಗಿ ಸೀಟ್‌ನಲ್ಲಿ ಕುಳಿತಿರುವುದನ್ನೂ ಕಾಣುತ್ತೇವೆ.
ಇದೀಗ ಈ ವೀಡಿಯೋ ಟ್ವಿಟರ್‌ನಲ್ಲಿ IAS ಆಫೀಸರ್ ಅವಿನಾಶ್ ಶರಣ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಎಂಥ ಮನುಷ್ಯರೋ ಆ ತಾಯಿ ಹಾಗೇ ಕೂತಿರುವುದನ್ನು ನೋಡಿ ಸುಮ್ಮನೆ ಇದ್ದಾರಲ್ಲಾ ಒಂದು ಸೀಟ್ ಬಿಟ್ಟುಕೊಡುವಷ್ಟು ಮಾನವೀಯತೆ ಜನರಲ್ಲಿ ಇಲ್ಲದಾಯಿತೇ ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ಎರಡು ಮುಖ್ಯ ವಿಷಯ ಹೇಳಬೇಕು ಅನಿಸುತ್ತಿದೆ. ಒಂದು ಹೆಚ್ಚೇನು ಹೇಳಬೇಕಾಗಿಲ್ಲ, ಇಲ್ಲಿ ಜನರು ಮಾನವೀಯತೆ ಮರೆತು ಕುಳಿತಿರುವುದರಿಂದ ಅಂಥವರ ಬಗ್ಗೆ ಹೇಳದಿರುವುದೇ ಒಳ್ಳೆಯದು, ಮಾನವೀಯತೆ ಮರೆತ ಮೇಲೆ ಅವರು ಮನುಷ್ಯರು ಅಂತ ಅನಿಸಿಕೊಳ್ಳಲು ಸಾಧ್ಯವೇ?
ಆದರೆ ಎರಡನೇ ವಿಷಯ ತುಂಬಾ ಮುಖ್ಯವಾದದ್ದು
ಎಲ್ಲರೂ ಆ ತಾಯಿ ದೆಹಲಿಯ ಮೆಟ್ರೋದಲ್ಲಿ ಫ್ಲೋರ್‌ನಲ್ಲಿ ಕೂತಿದ್ದಕ್ಕೆ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಆದರೆ ಆ ತಾಯಿಯಲ್ಲಿ ಅಷ್ಟು ಮುಗ್ಧತೆ ಇರಬಾರದಿತ್ತು, ಹೌದು ಮಟ್ರೋದಲ್ಲಿ ರಿಸರ್ವ್ ಸೀಟ್‌ಗಳಿರುತ್ತೆ, ಅಲ್ಲಿ ಬೇರೆಯವರು ಆರಾಮವಾಗಿ ಕೂತಿರುತ್ತಾರೆ. ಗರ್ಭಿಣಿಯರು, ಮಗುವನ್ನು ಎತ್ತಿಕೊಂಡು ಬರುವವರು, ಅಂಗವಿಕಲರು ಆ ಸೀಟ್‌ಗಳಲ್ಲಿ ಕೂರುವ ಹಕ್ಕನ್ನು ಹೊಂದಿರುತ್ತಾರೆ, ಅಳದ ಮಗುವಿಗೆ ತಾಯಿ ಎದೆಹಾಲು ಕೊಡಲ್ಲ ಎಂಬ ಗಾದೆ ಮಾತೇ ಇದೆ, ಇನ್ನು ನಮ್ಮ ಹಕ್ಕುಗಳನ್ನು ನಾವು ಬಾಯಿ ಬಿಟ್ಟು ಕೇಳದೇ ಹೋದರೆ ಈ ಪ್ರಪಂಚದಲ್ಲಿ ಏನೂ ಸಿಗುವುದಿಲ್ಲ, ಜನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ.
ಮೊದಲು ನಾವು ಹುಷಾರಾಗಬೇಕು, ವಿದ್ಯಾಭ್ಯಾಸ ಇರಲಿ, ಇಲ್ಲದಿರಲಿಎಲ್ಲಿಗಾದರೂ ಹೋಗುವಾಗ, ಏನಾದರೂ ಮಾಡುವಾಗ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಹೀಗೆ ಜನ.... ಏನಂತೀರಿ?
आपकी डिग्री सिर्फ़ एक काग़ज़ का टुकड़ा है, अगर वो आपके व्यवहार में ना दिखे. pic.twitter.com/ZbVFn4EeAX
— Awanish Sharan (@AwanishSharan) June 18, 2022
Humanity washed ashore 💔💔
— Vishal Bhadauriya (@Vishl1212) June 18, 2022
What an absolute shame! 😭
— CS Shiva Jhawar (@ishivajhawar) June 18, 2022