For Quick Alerts
ALLOW NOTIFICATIONS  
For Daily Alerts

ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಸೂಪರ್ ಸಾನಿಕ್ ಬೂಮ್ , ಏನಿದು?

|

ಇವತ್ತು ಬೆಂಗಳೂರು ಒಂದು ಶಬ್ದ ಕೇಳಿ ಬೆಚ್ಚಿ ಬೀಳುತ್ತಿದೆ. ಜನರು ನಾವು ಅಂಥ ಶಬ್ದ ಇದುವರೆಗೆ ಕೇಳಿಯೇ ಇಲ್ಲ.. ಅದು ಪಟಾಕಿ ಶಬ್ದವಲ್ಲ, ಎಷ್ಟೇ ದೊಡ್ಡ ಶಬ್ದ ಬರುವ ಪಟಾಕಿ ಸಿಡಿಸಿದರೂ ಅಂಥ ಶಬ್ದ ಬರುವುದಿಲ್ಲ, ಅದೇನು ಶಬ್ದ ಎಂದು ಆತಂಕ ವ್ಯಕ್ತ ಪಡಿಸಿದ್ದರು.

ಆದರೆ ಇದೀಗ ವಿಜ್ಞಾನಿಗಳು ಆ ಶಬ್ದದ ಬಗ್ಗೆ ಭಯ ಬೇಡ, ಅದು ಸೂಪರ್‌ ಸಾನಿಕ್ ವಿಮಾನದ ಶಬ್ದ ಎಂದು ಹೇಳಿದ್ದಾರೆ. ಕನ್ನಡ ನ್ಯೂಸ್‌ ಚಾನಲ್‌ಗೆ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಮಾತನಾಡುತ್ತ ಅದು ಸೂಪರ್ ಸಾನಿಕ್ ವಿಮಾನ ಹಾರಾಟದಿಂದ ಉಂಟಾದ ಶಬ್ದ, ಆದ್ದರಿಂದ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.

ಸೂಪರ್ ಸಾನಿಕ್ ವಿಮಾನದ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿ

ಸೂಪರ್ ಸಾನಿಕ್ ವಿಮಾನದ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿ

ಸೂಪರ್ ಸಾನಿಕ್ ವಿಮಾನ ಸಾಮಾನ್ಯವಾಗಿ ಅತೀ ಎತ್ತರದಲ್ಲಿ ಹಾರಾಟ ನಡೆಸುತ್ತದೆ, ಅದು ಇಂದು ಕೆಳಭಾಗದಲ್ಲಿ ಹಾರಾಟ ನಡೆಸಿರಬಹುದು, ಹಾಗಾಗಿ ನಿಮಗೆ ಶಬ್ದ ಕೇಳಿರುತ್ತದೆ. ಜನರು ಆಕಾಶದಲ್ಲಿ ನೋಡಿದಾಗ ಏನು ಕಾಣಲಿಲ್ಲ ಎಂದು ಹೇಳಿದಾಗ ಅದು ಗಾಳಿಯ ವೇಗಕ್ಕಿಂತ ಅಧಿಕ ವೇಗದಲ್ಲಿ ಚಲಿಸುವುದರಿಂದ ಕಣ್ಣಿಗೆ ಕಾಣಿಸುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ವಿಮಾನ ಹೇಗೆ ಹಾರಾಡುತ್ತದೆ?

ವಿಮಾನ ಹೇಗೆ ಹಾರಾಡುತ್ತದೆ?

ವಿಮಾನವು ಹಾರುತ್ತಿರುವಾಗ ಅದು ನಾಲ್ಕು ಬಲಗಳಿಂದ ಕೆಲಸ ಮಾಡುತ್ತದೆ-ಮೇಲೆ ಮತ್ತು ಕೆಳಗೆ ಹಿಂದೆ ಮತ್ತು ಮುಂದೆ-ಎಲ್ಲವೂ ಏಕ ಕಾಲದಲ್ಲಿ ನಡೆಯುತ್ತದೆ. ವಿಮಾನದ ತೂಕವು ನೇರವಾಗಿ ಕೆಳಕ್ಕೆ ಎಳೆಯುವಾಗ ಮೇಲಕ್ಕೆ ಎತ್ತುವ ಬಲವು ಅದನ್ನು ಸರಿದೂಗಿಸುತ್ತದೆ. ಎತ್ತುವಿಕೆಯು ರೆಕ್ಕೆಗಳಿಂದ ಮಾಡಲ್ಪಟ್ಟ ಅವು ಗಾಳಿಯ ಮುಖಾಂತರ ನುಗ್ಗುತ್ತದೆ. ಪ್ರೊಪೆಲ್ಲರುಗಳಿಂದ ಉಂಟಾಗುವ ನೂಕುವಿಕೆಯು ಆಕಾಶದಲ್ಲಿ ವಿಮಾನವನ್ನು ಮುಂದಕ್ಕೆ ತಳ್ಳುತ್ತದೆ.

ಸೂಪರ್‌ ಸಾನಿಕ್ ವಿಮಾನದ ವೈಶಿಷ್ಠ್ಯವೇನು?

ಸೂಪರ್‌ ಸಾನಿಕ್ ವಿಮಾನದ ವೈಶಿಷ್ಠ್ಯವೇನು?

ನುಗ್ಗುವಿಕೆಗೆ ವಿರುದ್ದವಾಗಿ ಎಳೆಯುವಿಕೆ ಎಂಬ ಹಿಂಭಾಗದ ಬಲವು ಕೆಲಸ ಮಾಡುತ್ತದೆ. ಈ ಬಲವು ವಿಮಾನದ ಮುನ್ನುಗ್ಗುವ ಬಲವನ್ನು ಎದುರಿಸುತ್ತದೆ.ಎಳೆಯುವಿಕೆಯನ್ನುವಿಮಾನದ ಶರೀರದ ಆಕಾರದ ಮೇಲೆ ಸರಿಪಡಿಸುತ್ತದೆ .ವಿಮಾನದ ಹಾರಾಟದ ಸಮಯದಲ್ಲಿಈ ಬಲಗಳು ಒಂದು ಸಮತೋಲನವನ್ನು ಕಾಪಾಡುವುದರಿಂದ ವಿಮಾನವು ಗಾಳಿಯಲ್ಲಿ ಹಾರುತ್ತದೆ. ಆದರೆ ಸೂಪರ್ ಸಾನಿಕ್ ವಿಮಾನದ ವೇಗ ಇತರ ವಿಮಾನಗಳಿಗಿಂತ ತುಂಬಾ ಅಧಿಕವಾಗಿರುತ್ತದೆ. ವಿಮಾನ ಚಲಿಸುವಾಗ ಗಾಳಿಯ ಸುಳಿಗಳು ವಿಮಾನದ ಮುಂದೆ ಹಾಗೂ ಹಿಂದೆ ಉಂಟಾಗುತ್ತದೆ, ಹಿಂಭಾಗದ ಗಾಳಿಯ ಸುಳಿ ಮುಂದೆ ಬಂದಾಗ ವಿಮಾನ ಸೀಳಿಕೊಂಡು ಹೋಗುವ ತುಂಬಾ ಶಬ್ದ ಉಂಟಾಗುವುದು.

ಸೂಪರ್ ಸಾನಿಕ್ ವಿಮಾನದ ಗರ್ಜನೆ

ಸೂಪರ್ ಸಾನಿಕ್ ವಿಮಾನದ ಗರ್ಜನೆ

ಧ್ವನಿಯ ವೇಗದ ಸಮೀಪ ಅಥವಾ ಮೇಲೆ ಹಾರುತ್ತಿರುವ ವಿಮಾನವು ತಲ್ಲಣದ ತರಂಗಗಳನ್ನು ಉಂಟುಮಾಡುತ್ತದೆ. ತಲ್ಲಣ ತರಂಗಗಳು ಒತ್ತಡದ ತರಂಗಗಳಾಗಿದ್ದು ಚಲಿಸುತ್ತಿರುವ ವಿಮಾನದಿಂದ ಹೊರಗೆ ಚಲಿಸುತ್ತವೆ. ಈ ತರಂಗಗಳು ಭೂಮಿಯನ್ನು ತಲುಪಿದಾಗ ಕೆಲವು ಸಲ ಅವು ಗಟ್ಟಿಯಾದ ಸಿಡಿತಗಳು ಅಥವಾ ಸೋನಿಕ್ ಗರ್ಜನೆಗಳಾಗಿ ಕೇಳುತ್ತವೆ.

ಇಂದು ಬೆಂಗಳೂರಿನಲ್ಲಿ ಕೇಳಿ ಬಂದಿದ್ದು ಕೂಡ ಅಂಥದ್ದೇ ಶಬ್ದವಾಗಿದೆ.

Read more about: life ಜೀವನ
English summary

What is ‘Sonic Boom' how it happened

Ever heard a loud boom which made the windows of your house rattle? Blr today experienced that.this happened duper super sonic boom.
Story first published: Wednesday, May 20, 2020, 19:53 [IST]
X
Desktop Bottom Promotion