Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಲಾವಾರಸದ ಮೇಲೆ ಮನುಷ್ಯ ಬಿದ್ದರೆ? ಅಬ್ಬಾ ಎಂಥ ಭಯಾನಕ ಜ್ವಾಲೆ! : ವೀಡಿಯೋ ವೈರಲ್
ನಾವು-ನೀವೆಲ್ಲಾ ಲಾವರಸದ ಬಗ್ಗೆ ಓದಿದ್ದೇವೆ.... ಫಿಲ್ಮ, ಡಾಕ್ಯೂಮೆಂಟರಿ, ಯೂಟ್ಯೂಬ್ ಇವುಗಳಲ್ಲಿ ವೀಡಿಯೋ ಕೂಡ ನೋಡಿರುತ್ತೀರ. ಆ ಜ್ವಾಲಾಮುಖಿ ಉಕ್ಕಿ ಬರುವ ದೃಶ್ಯ ನೋಡುವಾಗ ಮೈ ಝಂ ಅನಿಸುವುದು. ಬೆಂಕಿಯ ಜ್ವಾಲೆಗಳು ಉಕ್ಕಿ ಬರುವುದನ್ನು ನೋಡುವಾಗ ಇದರಲ್ಲಿ ಮನುಷ್ಯ ಸಿಕ್ಕಿಕೊಂಡರೆ? ಅಬ್ಬಾ! ಊಹಿಸಲೂ ಸಾಧ್ಯವಿಲ್ಲ ಅಲ್ವಾ.. ಆದರೆ ಮನುಷ್ಯ ಜ್ವಾಲಾಮುಖಿ ಒಳಗಡೆ ಸಿಲುಕಿದರೆ ಏನಾಗುತ್ತಾನೆ ಎಂಬ ವೀಡಿಯೋ ಈಗ ತುಂಬಾನೇ ವೈರಲ್ ಆಗುತ್ತಿದೆ...

ಏನು? ಮನುಷ್ಯ ಜ್ವಾಲಾಮುಖಿಯೊಳಗೆ ಸಿಲುಕಿಕೊಂಡಿರುವ ವೀಡಿಯೋನಾ? ಎಂದು ಗಾಬರಿಯಾಗಬೇಡಿ, ಮನುಷ್ಯ ಜ್ವಾಲಾಮುಖಿಯೊಳಗೆ ಸಿಲುಕಿದರೆ ಏನಾಗಬಹುದು ಎಂಬ ವೀಡಿಯೋ ಮಾಡಿದ್ದಾರೆ, ಆದರೆ ನಿಜವಾಗಲೂ ಯಾರೂ ಲಾವಾರಸದಲ್ಲಿ ಸಿಲುಕಿಕೊಂಡಿಲ್ಲ.
ಇದು ಹಳೆಯ ವೀಡಿಯೋ ಮತ್ತೊಮ್ಮೆ ಸದ್ದು ಮಾಡುತ್ತಿದೆ, ಈ ವೀಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಲಾವಾರಸ ಉಕ್ಕಿದಾಗ ಇದು ವಿಷ ಅನಿಲ ಉತ್ಪತ್ತಿ ಮಾಡುತ್ತದೆ, ಈ ಅನಿಲ ಅಸ್ತಮಾ ರೋಗಿಗಳಿಗೆ ತುಂಬಾನೇ ಅಪಾಯಕಾರಿಯಾಗಿದೆ.
ಮನುಷ್ಯ ಒಂದು ವೇಳೆ ಲಾವಾರಸ ಮೇಲೆ ಬಿದ್ದರೆ ಏನಾಗಬಹುದು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಈ ವೀಡಿಯೋ ಮಾಡಲಾಗಿತ್ತು. ಪರೀಕ್ಷೆ ಮಾಡುವ ಸಲುವಾಗಿ ಒಂದು ಕಾರ್ಡ್‌ಬೋರ್ಡ್ ಬಾಕ್ಸ್‌ಗೆ ಹಸಿ ತ್ಯಾಜ್ಯ ತುಂಬಿ 30 ಕೆಜಿ ತೂಗುವ ಬಾಕ್ಸ್ ಅನ್ನು 80 ಮೀಟರ್ ಎತ್ತರದಿಂದ ಹಾಕಲಾಯಿತು. ಅದು ಕೆಳಗೆ ಬಂದು ಲಾವಾರಸಕ್ಕೆ ತಾಗಿದಾಗ ಮೊದಲಿಗೆ ಬೆಂಕಿಯ ಸಣ್ಣ ಜ್ವಾಲೆ ಹೊತ್ತಿಕೊಂಡಿತು, ನೋಡು-ನೋಡುತ್ತಿದ್ದಂತೆ ಆ ಜ್ವಾಲೆ ತುಂಬಾನೇ ದೊಡ್ಡದಾಗಿ ಆ ವಸ್ತುವನ್ನು ದಹಿಸಿ ಬೂದಿ ಮಾಡಿತು.
ಮನುಷ್ಯಕೂಡ ಲಾವಾರಸದ ಮೇಲೆ ಬಿದ್ದರೆ ಇದುವೇ ಪರಿಸ್ಥಿತಿ, ಬದುಕಿ ಬರುವ ಸಾಧ್ಯತೆ ಏನೇ ಮಿರಾಕಲ್ ನಡೆದರೂ ಸಾಧ್ಯವಿಲ್ಲ ಎಂದು ಈ ವೀಡಿಯೋ ನೋಡಿದಾಗ ತಿಳಿಯುತ್ತದೆ. ಈ ವೀಡಿಯೋ ನೋಡಿ ನಿಮಗೇನಿಸಿತ್ತು?



Click it and Unblock the Notifications


