For Quick Alerts
ALLOW NOTIFICATIONS  
For Daily Alerts

ಸೀರೆಯಲ್ಲಿ ನಾರಿಯ ಈ ಹುಲಾ ಹೂಪ್ಸ್ ನೃತ್ಯ ನೋಡಿದವರೆಲ್ಲಾ ಫುಲ್‌ ಫಿದಾ

|

ಸೀರೆ ಭಾರತೀಯ ನೀರೆಯರ ಉಡುಗೆ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ ಕೂಡ ಹೌದು. ಆದರೆ ಯುವ ಪೀಳಿಗೆಯಲ್ಲಿ ಹೆಚ್ಚಿನವರಿಗೆ ಸೀರೆ ಉಡುವುದು ಇಷ್ಟವಿರುತ್ತದೆ ಆದರೆ ಉಡಲು ಬರಲ್ಲ, ಉಟ್ಟರೆ ಸರಿಯಾಗಿ ನಡೆದಾಡಲು ಬರುವುದಿಲ್ಲ. ಅಂಥವರ ನಡುವೆ ಇಲ್ಲೊಬ್ಬ ತರುಣಿ ಅದ್ಭುತ ಡ್ಯಾನ್ಸ್‌ ಮಾಡುವ ಮೂಲಕ ದೊಡ್ಡ-ದೊಡ್ಡ ಸೆಲೆಬ್ರಿಟಿಗಳ ಗಮನವನ್ನು ಕೂಡ ತನ್ನತ್ತ ಸೆಳೆದಿದ್ದಾರೆ.

ಅಷ್ಟಕ್ಕೂ ಆಕೆ ಸೀರೆಯಲ್ಲಿ ಮಾಡಿರುವುದು ಹುಲಾ ಹೂಪ್‌ ಡ್ಯಾನ್ಸ್. ಈಕೆಯ ಡ್ಯಾನ್ಸ್ ನೋಡಿದವರು ಸೀರೆಯಲ್ಲಿ ಇಷ್ಟೊಂದು ಕಂಫರ್ಟ್ ಆಗಿ ಡ್ಯಾನ್ಸ್ ಮಾಡಬಹುದಾ ಎಂದು ಅಚ್ಚರಿ ಪಡುವುದರ ಜೊತೆಗೆ ಈಕೆಯ ಪ್ರತಿಭೆಗೆ ಶಹಬಾಷ್ ಎಂತಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ಸಂಚಲವನ್ನೇ ಮೂಡಿಸಿದೆ.

ಏಷ್ನಾ ಕುಟ್ಟಿ ಎಂಬ ಯುವತಿ ಸಸುರಾಲ್ ಗೇಂಡಾ ಪೂಲ್ ಎಂಬ ಹಾಡಿಗೆ ಈ ರೀತಿ ಹೂಪ್ಸ್ ಡ್ಯಾನ್ಸ್ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಈಕೆ ಈ ಹಿಂದೆ ಕೂಡ ಅನೇಕ ಅದ್ಭುತವಾದ ಹೂಪ್ಸ್ ಡ್ಯಾನ್ಸ್ ನೃತ್ಯವನ್ನು ಪೋಸ್ಟ್ ಮಾಡಿದ್ದು ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಸೀರೆಯ ಎರಡು ನೃತ್ಯ ಪೋಸ್ಟ್ ಮಾಡಿದ್ದು ಸೀರೆಯಲ್ಲಿ ಈ ನಾರಿಯ ನೃತ್ಯ ನೋಡಿದವರು ಫುಲ್‌ ಫಿದಾ ಅಗಿದ್ದಾರೆ.

ಆನಂದ್‌ ಮಹೇಂದ್ರ ಅವರು ಈ ವೀಡಿಯೋ ನೋಡಿ ಇಷ್ಟಪಟ್ಟಿದ್ದು ಸ್ಟಾರ್‌ವೊಬ್ಬರು ಹುಟ್ಟಿದ್ದಾರೆ ಎಂದು ಹೊಗಳಿದ್ದಾರೆ. ಅನೇಕರು ಈಕೆಯ ವೀಡಿಯೋವನ್ನು ಮೆಚ್ಚಿಕೊಂಡಿದ್ದು #sareeflow ಎಂಬ ಹ್ಯಾಷ್ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

English summary

Video of Woman Hula Hooping in a Saree and Sneakers to Genda Phool Goes Viral

Video of Woman Hula Hooping in a Saree and Sneakers to Genda Phool Goes Viral
X