For Quick Alerts
ALLOW NOTIFICATIONS  
For Daily Alerts

ಪೇಯಿಂಟ್ ಬ್ರೆಷ್‌ ಬಳಸಿ ಅರಿಶಿಣ ಶಾಸ್ತ್ರ: ಸುಮ್ಮನೆ ರಿಸ್ಕ್ ಏಕೆ, ಅಲ್ವಾ?

|

ಕೊರೊನಾ ಈ ಪದ ಕೇಳುವಾಗಲೇ ಜನರಿಗೆ ಅಬ್ಬಾ ಈ ಶನಿ ಯಾವಾಗಪ್ಪಾ ತೊಲಗುವುದು ಎಂದು ಅನಿಸಲಾರಂಭಿಸಿದೆ. ಕೊರೊನಾ ದೆಸೆಯಿಂದಾಗಿ ಆಪ್ತರ ಮನೆಗೆ ಹೋಗುವಂತಿಲ್ಲ, ಸ್ನೇಹಿತರೆಲ್ಲಾ ಒಟ್ಟಾಗಿ ಕೂತು ಹರಟೆ ಹೊಡೆಯುವಂತಿಲ್ಲ, ಊರ ಹಬ್ಬಗಳ ಸಡಗರವಿಲ್ಲ, ಮದುವೆಯಲ್ಲಿ ಹಿಂದಿನ ಸಂಭ್ರಮವಿಲ್ಲ.

ಈಗ ಮದುವೆಯಲ್ಲಿ ಸ್ವಲ್ಪ ಜನರು ಸೇರಲು ಮಾತ್ರ ಅವಕಾಶ ಇರುವುದರಿಂದ ತುಂಬಾ ಆಪ್ತರನ್ನಷ್ಟೇ ಕರೆಯುತ್ತಾರೆ. ಅದರಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲೊಂದು ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಂಡು ಕೊಂಡ ವಿಧಾನ ಮಾತ್ರ ಸಕತ್‌ ವೈರಲ್ ಆಗಿದ್ದು ಅಲ್ಲದೆ ನೋಡಿದವರು ಹೀಗೂ ಉಂಟೇ ಎಂದು ನಗುತ್ತಿದ್ದಾರೆ.

Video of Woman Applying Turmeric on Bride with a Paint Roller Goes Viral

ಮದುವೆಯಲ್ಲಿ ಮದು ಮಗಳಿಗೆ ಅರಿಶಿಣ ಹಚ್ಚುವ ಶಾಸ್ತ್ರ ಇರುತ್ತದೆ. ಮಹಿಳೆಯರು ಬಂದು ಸೋಬಾನೆ ಪದಗಳನ್ನು ಹಚ್ಚುತ್ತಾ ಮದುಮಗಳಿಗೆ ಅರಿಶಿಣ ತಿಕ್ಕುತ್ತಾರೆ. ಒಂದೊಂದು ಕಡೆ ಒಂದೊಂದು ಶಾಸ್ತ್ರವಿರುತ್ತದೆ, ಹಿಂದೂಗಳ ಮದುವೆಯೆಂದ ಮೇಲೆ ಅರಿಶಿಣ ಶಾಸ್ತ್ರಕ್ಕೆ ತುಂಬಾನೇ ಮಹತ್ವವಿದೆ.

ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ. ಇಲ್ಲೊಂದು ಮದುವೆ ಶಾಸ್ತ್ರದಲ್ಲಿ ಅರಿಶಿಣ ಶಾಸ್ತ್ರ ಮಾಡಿದ್ದಾರೆ, ಆದರೆ ಎಲ್ಲರೂ ಮಾಡುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಅಂದರೆ ಸಾಮಾಜಿಕ ಅಂತರ ಕಾಯ್ದುಕೊಮಡು ಮಾಡಿದ್ದಾರೆ.

ಗೋಡೆಗೆ ಪೇಯಿಂಟ್ ಹಚ್ಚಲು ಬಳಸುವ ಬ್ರೆಷ್‌ ಅನ್ನು ಅರಿಶಿಣ ತಟ್ಟೆಗೆ ಅದ್ದಿ ದೂರದಿಂದಲೇ ಮದುವೆ ಹೆಣ್ಣಿನ ಮೈಗೆ ಹಚ್ಚಿದ್ದಾರೆ. ಇದರಿಂದ ಮದು ಮಗಳು ಹಾಗೂ ಹಚ್ಚುವವರು ಇಬ್ಬರೂ ಸೇಫ್‌ ಎಂದೇ ಹೇಳಬಹುದು.

ಮದು ಮಗಳು/ ಮದು ಮಗನಿಗೆ ಕೊರೊನಾ ಪಾಸಿಟಿವ್ ಬಂದು ಆ ಮದುವೆಗೆ ಬಂದವರೆಲ್ಲಾ ಕ್ವಾರೆಂಟೈನ್ ಆದ ಪ್ರಕರಣಗಳಿವೆ. ಇನ್ನು ಮದುವೆಗೆ ಬಂದವರ ಮೂಲಕವೂ ಕೊರೊನಾ ಹರಡಿರುವ ಪ್ರಕರಣಗಳಿವೆ. ಸುಮ್ಮನೆ ರಿಸ್ಕ್ ಏಕೆ ? ಅಂತ ಈ ರೀತಿ ಇನೋವೇಟಿವ್ ಆಗಿ ಮಾಡಿದ್ದಾರೆ ಕಾಣುತ್ತೆ, ಏನೇ ಆಗಲಿ ಐಡಿಯಾ ಸೂಪರ್ ಆಗಿದೆ ಅಲ್ವಾ?

English summary

Video of Woman Applying Turmeric on Bride with a Paint Roller Goes Viral

Video of Woman Applying Turmeric on Bride with a Paint Roller, Have a look at this innovative idea ...
Story first published: Wednesday, September 30, 2020, 15:34 [IST]
X
Desktop Bottom Promotion