For Quick Alerts
ALLOW NOTIFICATIONS  
For Daily Alerts

Sun Halo : ಬೆಂಗಳೂರಿನಲ್ಲಿ ಕಂಡ ಹಲೋ ಸನ್: ಈ ಅಪರೂಪದ ದೃಶ್ಯ ಮಳೆಯ ಮುನ್ಸೂಚನೆಯೇ?

|

ಬೆಂಗಳೂರಿಗರಿಗೆ ಇವತ್ತೊಂದು ವಿಸ್ಮಯ ಕಾದಿತ್ತು. ತಲೆಯೆತ್ತಿ ಆಕಾಶ ನೋಡಿದರೆ ಸೂರ್ಯ ಇನ್ನೂ ಆಕರ್ಷಕವಾಗಿ ಕಾಣುತ್ತಿದ್ದಾನೆ. ಸೂರ್ಯನ ಸುತ್ತಲೂ ಒಂದು ವರ್ತುಲ... ಅದನ್ನು ನೋಡಿದ್ದೇ ಇಂಥ ಅಪರೂಪದ ದೃಶ್ಯ ಕಾಣುಸಿಗುವುದೇ ಎಂದು ತಮ್ಮ ಮೊಬೈಲ್‌, ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಾರೆ.

ಇಂದು ಕಂಡು ಬಂದಿರುವುದು ಹಲೋ ಸನ್‌ ಎಂಬ ಅಪರೂಪದ ದೃಶ್ಯವಾಗಿದೆ. ಇದು ಬೇಸಿಗೆಯಲ್ಲಿ ಕಂಡು ಬರುವುದುಂಟು. ಹಲೋ ಸನ್ ಎಂದರೇನು, ಏಕಾಗಿ ಉಂಟಾಗುತ್ತದೆ ಎಂದು ನೋಡೋಣ:

ಹಲೋ ಸನ್ ಎಂದರೇನು?

ಹಲೋ ಸನ್ ಎಂದರೇನು?

ವೃತ್ತಾಕಾರವಾದ ಆಕಾರದ ಮಧ್ಯದಿಂದ ಸೂರ್ಯನ ಬೆಳಕು ಹಾದು ಬರುವುದನ್ನು ಹಾಲೋ ಸನ್‌ ಎನ್ನುತ್ತಾರೆ. ಇಂದು ಬೆಂಗಳೂರಿನಲ್ಲಿ ಹಲೋ ಸನ್‌ ಕಂಡು ಬಂದಿದೆ. ಬೆಂಗಳೂರಿನ ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಬೆಳಗ್ಗೆ 11ರ ಸುಮಾರಿಗೆ ಸಂಪೂರ್ಣ ಕಾಮನಬಿಲ್ಲು ಗೋಚರಿಸಿತು. ಸೌರ ಪ್ರಭೆ (Sun Halo) ಎಂದು ಗುರುತಿಸಲಾದ ಇದು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಉಂಗುರಾಕಾರದ ಸೀರಿಸ್ ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ಪ್ರತಿಫಲಿಸುವುದರಿಂದ ಆಗುವ ವಿದ್ಯಮಾನವಾಗಿದೆ.

ಇದೇ ಸಿರಸ್ ಮೋಡಗಳು ಚಂದ್ರನ ಸುತ್ತಲೂ ಇದೇ ರೀತಿ ವೃತ್ತಾಕಾರದಲ್ಲಿರುವುದನ್ನು ಕೆಲವೊಮ್ಮೆ ರಾತ್ರಿಯಲ್ಲಿ ಕಾಣಬಹುದು.

ಹಲೋ ಸನ್‌ ಕಂಡು ಬಂದರೆ ಮಳೆ ಬರುವ ಮುನ್ಸೂಚನೆಯೇ?

ಹಲೋ ಸನ್‌ ಕಂಡು ಬಂದರೆ ಮಳೆ ಬರುವ ಮುನ್ಸೂಚನೆಯೇ?

ಹವಾಮಾನ ತಜ್ಞರ ಪ್ರಕಾರ ಸೂರ್ಯನ ಸುತ್ತ ಈ ರೀತಿ ವೃತ್ತಾಕಾರ ಕಂಡು ಬಂದರೆ ಮಳೆ ಬರುವುದು ಎಂದರ್ಥ. ಎಲ್ಲಾ ಸಂದರ್ಭದಲ್ಲಿ ಅಲ್ಲದಿದ್ದರೂ ಬಹುತೇಕ ಸಂದರ್ಭದಲ್ಲಿ ಈ ರೀತಿ ಕಂಡು ಬಂದ ನಂತರ ಮಳೆ ಕಂಡು ಬಂದಿದೆ.

ಹಲೋ ಸನ್‌ ಸುಂದರ ದೃಶ್ಯ

ಹಲೋ ಸನ್‌ ಸುಂದರ ದೃಶ್ಯ

ಹಲೋ ಸನ್‌ ಕಂಡು ಬಂದಾಗ ಆ ದೃಶ್ಯ ತುಂಬಾ ಮನಮೋಹಕವಾಗಿರುತ್ತದೆ. ಇಂದು ಅಂತ ಸುಂದರ ದೃಶ್ಯ ಬೆಂಗಳೂರಿನ ಜನರ ಕಣ್ಣಿಗೆ ತಂಪೆರೆದಿದೆ.

Read more about: sun sky ಸೂರ್ಯ ಆಕಾಶ
English summary

Sun Halo - What Is It, What Causes It and All you need to know about Rainbow Ring around Sun in Kannada

Sun Halo - What Is It, What Causes It and All you need to know about Rainbow Ring around Sun in Kannada, read on...
X
Desktop Bottom Promotion