For Quick Alerts
ALLOW NOTIFICATIONS  
For Daily Alerts

50, 000 ವರ್ಷಗಳ ಬಳಿಕ ಗೋಚರಿಸಲಿದೆ ಹಸಿರು ಧೂಮಕೇತು: ಬರೀಗಣ್ಣಿನಲ್ಲಿ ಇದನ್ನು ಯಾವ ಸಮಯದಲ್ಲಿ ವೀಕ್ಷಿಸಬಹುದು

|

ಖಗೋಳದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತದೆ, ಅವುಗಳಲ್ಲಿ ಕೆಲವೊಂದು ಘಟನೆಗಳು ತುಂಬಾನೇ ವಿಸ್ಮಯ, ಕೆಲವೊಮ್ಮೆ ಆ ಘಟನೆಗಳು ಬರೀ ಕಣ್ಣಿಗೆ ಗೋಚರಿಸುವುದು ಅಂಥ ಘಟನೆ ಇಂದು ರಾತ್ರಿ ಆಕಾಶದಲ್ಲಿ ನಡೆಯಲಿದೆ.

Green Comet 2023,

ಹೌದು, ಹಸಿರು ಧೂಮಕೇತುವೊಂದು ಭೂಮಿಯ ಸಮೀಪ ಬರಲಿದೆ. ಈ ಧೂಮಕೇತುವಿನ ವಿಶೇಷವೆಂದರೆ 50, 000 ವರ್ಷಗಳ ಬಳಿಕ ಭೂಮಿಯ ಸಮೀಪ ಬರಲಿದೆ. ಇದನ್ನು ಹಸಿರು ಧೂಮಕೇತು ಎಂದು ಕರೆಯಲಾಗುವುದು. ಈ ಹಸಿರು ಧೂಮಕೇತುವನ್ನು ಇಂದು ನೋಡಬಹುದಾಗಿದೆ.

ಹಸಿರು ಧೂಮಕೇತು ಯಾವಾಗ ನೋಡಬಹುದು?
ಹಸಿರು ಧೂಮಕೇತುನ್ನು ಫೆಬ್ರವರಿ 2 ಹಾಗೂ 3ರಂದು ಕಾಣಬಹುದು. ಬುಧವಾರ ರಾತ್ರಿ 7 ಗಂಎಯಿಂದ ಗುರುವಾರ ಬೆಳಗ್ಗೆ 4 ಗಂಟೆಯ ತನಕ ಇದು ಗೋಚರಿಸಲಿದೆ. ಈ ಧೂಮಕೇತುವನ್ನು C/2022 E3 (ZTF)' ಎಂದು ಹೆಸರಿಡಲಾಗಿದೆ.

ಇದನ್ನು ಸ್ಪಷ್ಟವಾಗಿ ಎಲ್ಲಿ ನೋಡಬಹುದು?
ಬೆಳಗ್ಗೆ 5 ಗಂಟೆಯವರೆಗೆ ಬೈನಾಕ್ಯೂಲರ್‌ ಮೂಲಕ ನೀವು ನೆಹರೂ ತಾರಾಲಯದಲ್ಲಿ ಕಣ್ತುಂಬಿಕೊಳ್ಳಬಹುದು.

ಮೋಡವಿದ್ದರೆ ಇದು ಬರಿ ಕಣ್ಣಿನಲ್ಲಿ ಕಾಣುವುದು ಕಷ್ಟವಾಗಬಹುದು. ಡ್ರಾಕೊ ನಕ್ಷತ್ರ ಪುಂಜದ ಬಳಿ ಈ ಹಸಿರು ಧೂಮಕೇತು ಕಾಣಲಿದೆ. ಈ ದೃಶ್ಯವನ್ನು ನಮ್ಮ ಜೀವನದಲ್ಲಿ ಈ ಒಂದು ಬಾರಿ ಮಾತ್ರ ಕಾಣಬಹುದು, ಇನ್ನು ನಮ್ಮ ಮುಂದಿನ ಹಲವು ಪೀಳಿಗೆಗೆ ಈ ಧೂಮಕೇತು ನೋಡುವ ಭಾಗ್ಯವಿರಲ್ಲ, ಏಕೆಂದರೆ ಇದು 50, 000 ವರ್ಷಕ್ಕೊಮ್ಮೆ ಕಂಡು ಬರುವ ವಿದ್ಯಾಮಾನವಾಗಿದೆ. ಈಗ ನಮಗೆ ಸಿಕ್ಕಿರುವ ಈ ಅದೃಷ್ಟವನ್ನು ನೋಡಲು ಮಿಸ್‌ ಮಾಡಬೇಡಿ.

ನೀವು ಬರಿಗಣ್ಣಿನಲ್ಲಿ ನೋಡಬಹುದು ಈ ಸುಂದರ ದೃಶ್ಯ
ಡ್ರಾಕೊ ಧೂಮಕೇತುವನ್ನು ಇವತ್ತು ಮತ್ತು ನಾಳೆ ಕೂಡ ನೀವು ಬರಿಗಣ್ಣಿನಲ್ಲಿ ನೋಡಬಹುದು. 12 ಕೋಟಿ ಮೈಲಿ ದೂರದಲ್ಲಿರುವ ಈ ಹಸಿರು ಧೂಮಕೇತು ಫೆಬ್ರವರಿ 2, 3ರಂದು ಭೂಮಿಗೆ 4 ಕೋಟಿ ಮೈಲಿ ಸಮೀಪಕ್ಕೆ ಬರಲಿದೆ, ಈ ಕಾರಣದಿಂದಾಗಿ ಈ ಧೂಮಕೇತುವನ್ನು ನೀವು ಬರಿಗಣ್ಣಿನಲ್ಲಿ ನೋಡಬಹುದು.

English summary

Green Comet 2023: Rare star to make first appearance after 50,000 years; Know date, time and where to watch Live in India

Green Comet 2023: These rare star you can watch on feb 2 and 3, this star to make first appearance after 50,000 years,
X
Desktop Bottom Promotion