For Quick Alerts
ALLOW NOTIFICATIONS  
For Daily Alerts

ಮದುವೆ ಎಂದರೇನು? ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿದರೆ ನಕ್ಕು ಸುಸ್ತಾಗುವಿರಿ: ಉತ್ತರ ಪತ್ರಿಕೆಯಾಯ್ತು ವೈರಲ್

|

ಮದುವೆ ಎಂದರೇನು? ಈ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಒಂದು ಪೇಜ್‌ ಉತ್ತರ ಬರಿದ್ದಾನೆ, ಒಂದು ಪೇಜ್‌ ಉತ್ತರ ಬರೆದರೂ ಟೀಚರ್ ನಾನ್‌ಸೆನ್ಸ್ ಅಂತ ಬರೆದು ಸೊನ್ನೆ ಕೊಟ್ಟಿದ್ದಾರೆ!

ಮದುವೆ ಬಗ್ಗೆ ಆ ವಿದ್ಯಾರ್ಥಿ ಬರೆದ ಉತ್ತರ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ವೈರಲ್‌ ಆಗಿದ್ದು ಅದನ್ನು ಓದಿದರೆ ನಗು ತಡೆಯೋಕೆ ಆಗಲ್ಲ, ಅಷ್ಟೊಂದು ಫನ್ನಿಯಾಗಿದೆ.

ವಿದ್ಯಾರ್ಥಿಗಳು ಈ ರೀತಿ ಬರೆಯಲು ಪ್ರಾರಂಭಿಸಿದರೆ ಸೋಷಿಯಲ್‌ ಸ್ಟಡಿ ಎಂಬ ಸಬ್ಜೆಕ್ಟ್ ಕ್ಯಾನ್ಸಲ್‌ ಮಾಡಬಹುದು, ಅಷ್ಟೊಂದು ಭಯಾನಕವಾಗಿ ಉತ್ತರ ಬರೆಯುತ್ತಿದ್ದಾರೆ.

What is Marriage Question

ಶಿಕ್ಷಕರಿಗೆ ಇಂಥ ಅನೇಕ ಉತ್ತರಗಳು ಬರುತ್ತಿರುತ್ತವೆ, ಕಲಿಸಿರುವ ವಿಷಯ ಒಂದು ಆದರೆ ಅವರು ಬರೆಯುವುದೇ ಮತ್ತೊಂದು. ಈಗ ಈ ವಿದ್ಯಾರ್ಥಿ ಮದುವೆ ಎಂದರೇನು ಎಂಬ ಪ್ರಶ್ನೆಗೆ ಏನು ಉತ್ತರ ಬರೆದಿದ್ದಾನೆ ಎಂದು ನೋಡೋಣ:

ಪ್ರಶ್ನೆ: ಮದುವೆ ಎಂದರೇನು?
ಉತ್ತರ:' ಮದುವೆ ಎಂದರೆ ಹುಡುಗಿಯ ಪೋಷಕರು ನೀನು ಈಗ ಮಹಿಳೆಯಾಗಿದ್ದೀಯಾ, ನಿನಗೆ ಇನ್ನು ಮುಂದೆ ತಿನ್ನಲು ಕೊಡಲು ಸಾಧ್ಯವಿಲ್ಲ ಆದ್ದರಿಂದ ಒಬ್ಬ ಪುರುಷನನ್ನು ನೋಡಿಕೊಂಡು ಮದುವೆಯಾಗು, ಅವನು ನಿನಗೆ ತಿನ್ನಕ್ಕೆ ಕೊಡುತ್ತಾನೆ ಎಂದು ಹೇಳುತ್ತಾರೆ. ನಂತರ ಹುಡುಗಿ ಪುರುಷನನ್ನು ಹುಡುಕಿಕೊಳ್ಳುತ್ತಾಳೆ, ಪೋಷಕರು ಅವಳಿಗೆ ಅವನ ಜೊತೆ ಮದುವೆ ಮಾಡುತ್ತಾರೆ. ಒಬ್ಬರು ತಮ್ಮನ್ನು ಪರೀಕ್ಷೆ ಮಾಡಿಕೊಳ್ಳುತ್ತಾರೆ, ನಂತರ ಖುಷಿಯಾಗಿರುತ್ತಾರೆ, ನಂತರ ಜೊತೆಯಾಗಿ ಇರಲು ಒಪ್ಪಿಕೊಳ್ಳುತ್ತಾರೆ. ನಂತರ ಅವರ ನಾನ್‌ಸೆನ್ಸ್ ಮಾಡಿ ಮಕ್ಕಳನ್ನು ಪಡೆಯುತ್ತಾರೆ,' ಎಂಬುವುದಾಗಿ ಬರೆದಿದ್ದಾನೆ.

ಈ ಉತ್ತರ ನೋಡಿ ಟೀಚರ್‌ಗೆ ತಾನು ಏನಪ್ಪಾ ಪಾಠ ಮಾಡಿರುವುದು, ಇವನು ಬರೆದಿರುವುದು ಏನು ಎಂದು ಖಂಡಿತ ಅನಿಸಿರುತ್ತದೆ, ನಾನ್‌ಸೆನ್ಸ್ ಅಂತ ಬರೆದು 0/10 ಕೊಟ್ಟಿದ್ದಾರೆ.

ಸೋಷಿಯಲ್ ಸ್ಟಡಿ ಬಗ್ಗೆ ತುಂಬಾ ಕಲ್ಪನೆ
ಕಲಾ ವಿಭಾಗದಲ್ಲಿ ಸೋಷಿಯಲ್‌ ಸ್ಟಡಿ ಅಂದರೆ ಸಮಾಜ-ವಿಜ್ಞಾನದಲ್ಲಿ, ಕುಟುಂಬ, ಮದುವೆ, ಸಮಾಜ, ಅವಿಭಕ್ತ ಕುಟುಂಬ ಇವುಗಳ ಬಗೆಯೆಲ್ಲಾ ವಿವರಿಸಲಾಗುತ್ತದೆ, ಆದರೆ ವಿದ್ಯಾರ್ಥಿಗಳಿಗೆ ಅವುಗಳನ್ನು ಕೇಳುವಾಗ ಅರೆ ಎಷ್ಟು ಸುಲಭ ಇದರಲ್ಲಿ ಕಲಿಯುವುದು ಏನಿದೆ ಎಂದು ಅನಿಸಬಹುದು, ಆದರೆ ಪರೀಕ್ಷೆಗೆ ಬರೆಯಲು ಕೂತಾಗ ಗೊತ್ತಾಗುವುದು ಅಂದುಕೊಂಡಂತೆ ಅಲ್ಲ, ಆಗ ಹೀಗೆ ಬಾಯಿಗೆ ಬಂದಂತೆ ಬರೆಯುತ್ತಾರೆ. ಉತ್ತರ ಪತ್ರಿಕೆಯಲ್ಲಿ ಪೇಜ್‌ ತುಂಬುವ ಕೆಲಸ ಮಾಡಿದರೆ ಮಾರ್ಕ್ಸ್ ಬರಬಹುದು ಎಂಬ ಭ್ರಮೆ ವಿದ್ಯಾರ್ಥಿಗಳಿಗೆ!

ಹಾಗಾದರೆ ಮದುವೆ ಎಂದರೇನು?
ಗಂಡು-ಹೆಣ್ಣು ಒಂದಾಗಿ ಬಾಳಲು ಸಮಾಜ ನೀಡುವ ಕಾನೂನುಬದ್ಧವಾದ ಅನುಮತಿಗೆ ಮದುವೆ ಎಂದು ಕರೆಯಲಾಗುವುದು. ನಮ್ಮ ಸಂಪ್ರದಾಯಗಳು, ಕಾನೂನುಗಳು ಮದುವೆಯಾದ ದಂಪತಿಗೆ ಕೆಲವೊಂದು ಹಕ್ಕುಗಳನ್ನು ನೀಡುತ್ತದೆ. ಅವರಿಗೆ ಸಮಾಜದಲ್ಲಿ ಒಂದು ಸ್ಥಾನಮಾನವನ್ನು ನೀಡುತ್ತದೆ. ಮದುವೆಯಾಗದೆ ಒಟ್ಟಿಗೆ ಬಾಳಿದರೆ ಆ ಸಂಬಂಧಕ್ಕೆ ಈ ಸಮಾಜದಲ್ಲಿ ಬೆಲೆಯಿಲ್ಲ, ಅದೇ ಮದುವೆ ಎಂಬ ಚೌಕಟ್ಟಿನ ಒಳಗಡೆ ಹೆಣ್ಣು-ಗಂಡು ಬಾಳಿದರೆ ಆ ಸಂಬಂಧಕ್ಕೆ ತುಂಬಾನೇ ಮೌಲ್ಯ ನೀಡಲಾಗುವುದು. ಹೀಗೆ ಮದುವೆಯಾದವರಿಗೆ ಕಾನೂನಿನ ರಕ್ಷಣೆ ಕೂಡ ಇರುತ್ತದೆ. ಮದುವೆಯಾದವರು ಬೇಡ ಎಂದು ಅವರಿಷ್ಟಕ್ಕೆ ಬೇರೆಯಾಗುವಂತಿಲ್ಲ, ಬೇರೆಯಾಗಲು ತೀರ್ಮಾನಿಸಿದರೆ ವಿಚ್ಛೇದನ ಪಡೆಯಬೇಕು, ವಿಚ್ಛೇದನ ಪಡೆಯುವಾಗ ಹೆಂಡತಿಗೆ ಕೆಲವು ಪರಿಹಾರಗಳನ್ನು ನೀಡಬೇಕಾಗುತ್ತದೆ, ಹಾಗಾಗಿ ಈ ಮದುವೆಯ ಚೌಕಟ್ಟು ಯಾವುದೇ ಚೌಕಟ್ಟು ಇಲ್ಲದೆ ಸಂಬಂಧಕ್ಕಿಂತ ಹೆಚ್ಚು ಸುರಕ್ಷಿತ.

ಶಿಕ್ಷಕರಿಗೆ ಇಂಥ ನಾನಾ ಅನುಭವ ಆಗಿರುತ್ತದೆ, ನನಗೂ ಇಂಥ ಅನುಭವ ಆಗಿದೆ
ನಾನು ಅತಿಥಿ ಉಪನ್ಯಾಸಕಿಯಾಗಿ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಪಾಠ ಮಾಡಿದ್ದೆ. ಪತ್ರಿಕೋದ್ಯಮದಲ್ಲಿ ಹೆಡ್‌ಲೈನ್‌ ಬಗೆ ವಿವರಿಸುವಾಗ waist headline in newspaper ಎಂದು ವಿವರಿಸಿದ್ದೆ, ನ್ಯೂಸ್‌ ಪೇಪರ್‌ನಲ್ಲಿ ಈ ಬಗೆಯ ಹೆಡ್‌ಲೈನ್‌ ಬಳಸಲಾಗುವುದು. ಪರೀಕ್ಷೆಯಲ್ಲಿ ಈ ಬಗ್ಗೆ ಕೇಳಿದಾಗ ಸೊಂಟದ ರೀತಿಯಲ್ಲಿ ಈ ಹೆಡ್‌ಲೈನ್‌ ತುಂಬಾನೇ ಆಕರ್ಷಕವಾಗಿರುತ್ತದೆ ಎಂದು ವಿದ್ಯಾರ್ಥಿಯೊಬ್ಬ ಬರೆದಿದ್ದ.

ಶಿಕ್ಷಕ ವೃತ್ತಿಯಲ್ಲಿದ್ದವರಿಗೆ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ಇಂಥ ವಿಚಿತ್ರವಾದ ಉತ್ತರಗಳು ಹಲವಾರು ಬಾರಿ ಸಿಕ್ಕಿರುತ್ತದೆ. ನೀವು ಶಿಕ್ಷಕರಾಗಿದ್ದರೆ ನಿಮ್ಮ ವಿದ್ಯಾರ್ಥಿಯೂ ಇಂಥ ಅಸಂಬದ್ಧ ಉತ್ತರ ನೀಡಿರುವ ಬಗ್ಗೆ ಕಮೆಂಟ್‌ನಲ್ಲಿ ತಿಳಿಸಿ.

English summary

Funny Answer to What is Marriage Question goes viral

What is Marriage Question? Funny Answer Of student goes Viral, Read on....
X
Desktop Bottom Promotion