For Quick Alerts
ALLOW NOTIFICATIONS  
For Daily Alerts

Viral Video : ಅರೆರೆ... ಹೀಗೂ ನಿಶ್ಚಿತಾರ್ಥ ಮಾಡ್ಕೋಬಹುದಾ?

|

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು ಎಂಬ ಗಾದೆ ಮಾತಿದೆ, ಅದರಂತೆ ಇಲ್ಲೊಂದು ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆನ್‌ಲೈನ್‌ ಬಂದ ಮೇಲೆ ಎಲ್ಲವೂ ಆನ್‌ಲೈನ್‌ ಮಯ...ಆದರೆ ಕೆಲವೊಂದು ನೋಡುವಾಗ ನಮ್ಮ ಸಂಪ್ರದಾಯ ಕೂಡ ಆನ್‌ಲೈನ್‌ನಿಂದ ಪ್ರಭಾವಿತವಾಗುತ್ತಿದೆಯಾ? ಎಂದು ಅನಿಸದೆ ಇರಲ್ಲ.

ನಿಶ್ಚಿತಾರ್ಥಕ್ಕೆ ಮನೆಯ ಆಪ್ತರು ಬಾರದಿದ್ದರೆ ಒಂಥರಾ ಆಗುತ್ತದೆ, ಅಂಥದ್ದರಲ್ಲಿ ನಿಶ್ಚಿತಾರ್ಥದಲ್ಲಿ ಇರಬೇಕಾಗಿದ್ದ ಹುಡುಗ-ಹುಡುಗಿಯೇ ಇಲ್ಲದಿದ್ದರೆ ಹೇಗೆ? ಆದರೂ ಇಲ್ಲಿ ನಿಶ್ಚಿತಾರ್ಥ ಸುಗಮವಾಗಿ ನೆರವೇರಿದೆ.

 ಆನ್‌ಲೈನ್ ನಿಶ್ಚಿತಾರ್ಥ

ಆನ್‌ಲೈನ್ ನಿಶ್ಚಿತಾರ್ಥ

ಹೌದು ರಾಜಾಸ್ಥಾನ ಮೂಲ ಜೋಡಿಯೊಂದು ಆನ್‌ಲೈನ್‌ ಮುಖಾಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮನೆಮಂದಿ ಈ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದಾರೆ. ಹುಡುಗ-ಹುಡುಗಿ ಇಬ್ಬರು ಬೇರೆ-ಬೇರೆ ಊರಿನಲ್ಲಿದ್ದು ನಿಶ್ಚಿತಾರ್ಥಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಮೊಬೈಲ್‌ಗಳಿಗೆ ಶಾಸ್ತ್ರ ಭಾಗ್ಯ

ಮೊಬೈಲ್‌ಗಳಿಗೆ ಶಾಸ್ತ್ರ ಭಾಗ್ಯ

ಹುಡುಗ ಹುಡುಗಿ ವೀಡಿಯೋ ಕಾಲ್‌ ಮಾಡಿದ್ದಾರೆ. ಮನೆಯವರು ಹುಡುಗ-ಹುಡುಗಿಗೆ ಮಾಡಬೇಕಾದ ಶಾಸ್ತ್ರವನ್ನು ಮೊಬೈಲ್‌ಗಳಿಗೆ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹುಡುಗಿಗೆ ಹುಡುಗನ ಕಡೆಯಿಂದ ನೀಡುವ ಸೀರೆಯನ್ನು ಮೊಬೈಲ್ ಮೇಲೆ ಹಾಕಿದ್ದಾರೆ. ನೋಡಲು ತಮಾಷೆ ಅನಿಸಿದರೂ ಆನ್ಲೈನ್ ನಿಶ್ಚಿತಾರ್ಥದಲ್ಲಿ ಶಾಸ್ತ್ರಗಳ ಲೋಪ ಆಗದಂತೆ ನೋಡಿಕೊಂಡಿದ್ದಾರೆ.

ವೈರಲ್ ಆಯ್ತು ಆನ್ಲೈನ್ ನಿಶ್ಚಿತಾರ್ಥ

ವೈರಲ್ ಆಯ್ತು ಆನ್ಲೈನ್ ನಿಶ್ಚಿತಾರ್ಥ

ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಅಪ್ಲೋಡ್‌ ಆಗುತ್ತಿದ್ದಂತೆ ವೈರಲ್ ಆಗುತ್ತಿದೆ. ಇದಕ್ಕೆ ಜನರು ಬೇರೆ-ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರಿಗೆ ಇದು ಸೂಪರ್‌ ಐಡಿಯಾ, ನಿಶ್ಚಿತಾರ್ಥ ಹೀಗೂ ಮಾಡಬಹುದುನ ಎಂಬ ಐಡಿಯಾ ದೊರಕಿದೆ.

ಮದುವೆಯೂ ಆನ್‌ಲೈನ್‌ನಲ್ಲಿ ಆಗದಿರಲಿ

ಮದುವೆಯೂ ಆನ್‌ಲೈನ್‌ನಲ್ಲಿ ಆಗದಿರಲಿ

ಈ ಜೋಡಿ ನಿಶ್ಚಿತಾರ್ಥ ಆನ್‌ಲೈನ್‌ನಲ್ಲಿ ಮಾಡಿಕೊಂಡರು, ಇನ್ನು ತಾಳಿಯನ್ನು ಆನ್ಲೈನ್‌ ಮುಖಾಂತರ ಕಟ್ಟಿ, ಸಂಸಾರ ಆನ್ಲೈನ್‌ ಮುಖಾಂತರವೇ ಮಾಡದಿದ್ದರೆ ಸಾಕು ಅಲ್ವಾ? ಕಾಲವೇ ಏನಿದು ನಿನ್ನ ಮರ್ಮ.

English summary

Couple Engaged Through Online Video Goes Viral

Online trend started to influence our rituals also , here couple got engaged through online, video goes viral. Have look at video.
X