For Quick Alerts
ALLOW NOTIFICATIONS  
For Daily Alerts

'ಯಾವ ಮಕ್ಕಳು ಅನಾಥರಾಗಲು ಇಷ್ಟ ಪಡಲ್ಲ' ಎಂದು ಮಕ್ಕಳು ರಸ್ತೆ ಗುಂಡಿ ಮುಚ್ಚುತ್ತಿರುವ ವೀಡಿಯೋ ವೈರಲ್

|

ನಮ್ಮ ಬೆಂಗಳೂರು ರಸ್ತೆಯಲ್ಲಿ ಮರಣ ಗುಂಡಿಗಳಿಗೇನು ಕಡಿಮೆಯಿಲ್ಲ. ಅದರಲ್ಲೂ ಟೂ ವೀಲರ್‌ನಲ್ಲಿ ಹೋಗುವಾಗ ಮತ್ತಷ್ಟು ಜಾಗ್ರತೆವಹಿಸಬೇಕಾಗುತ್ತದೆ. ಆಗಾಗ ಅಲ್ಲಲ್ಲಿ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದರೂ ಸಾವಿರಾರು ಗುಂಡಿಗಳು ಯಮ ಸ್ವರೂಪದಲ್ಲಿ ಬಾಯಿ ತೆರೆದುಕೊಂಡಿವೆ. ಜನರು ಕೂಡ ಅಷ್ಟೇ ಬಿಬಿಎಂಪಿಗೆ ಹಿಡಿ ಶಾಪ ಹಾಕುತ್ತಾ ಸುಮ್ಮನಾಗುತ್ತೇವೆ, ಆದರೆ ಪುಟಾಣಿ ಮಕ್ಕಳು ಮಾಡಿರುವ ಕಾರ್ಯ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ನಮ್ಮಂಥ ನಾಗರಿಕರ ಹಾಗೂ ಬಿಬಿಎಂಪಿಯ ಕಣ್ಣು ತೆರೆಸುವಂತಿದೆ.

Bengaluru kids filled potholes; heartwarming video goes viral

ಒಂದು ಶಾಲಾ ಮಕ್ಕಳ ಗುಂಪು ಮುಂದೆ ಬಂದು ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್‌ ಆಗುತ್ತಿದೆ.' NO CHILD WANTS TO BE AN ORPHAN' ಅಂದ್ರೆ ಯಾವ ಮಗುವೂ ಅನಾಥವಾಗಲು ಬಯಸಲ್ಲ ಎಂಬ ಕ್ಯಾಪ್ಷನ್‌ ನೀಡಿ ಈ ವೀಡಿಯೋ ಪೋಸ್ಟ್‌ ಮಾಡಲಾಗಿದ್ದು ನಾಗರಿಕ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡುವಂತಿದೆ ಈ ಕಾರ್ಯ.

ಈ ವೀಡಿಯೋ ನೋಡಿದ ನೆಟ್ಟಿಗರು ಸಂತಸ, ಬಿಬಿಎಂಪಿ ವಿರುದ್ಧ ತಮ್ಮ ಆಕ್ರೋಶ ಎಲ್ಲವನ್ನೂ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ಈ ಮಕ್ಕಳ ಕಾರ್ಯ ನಮ್ಮ ಜವಾಬ್ದಾರಿ ಕೂಡ ನೆನಪಿಸುತ್ತೆ. ನಾವು ವೋಟ್‌ ಹಾಕಿ ಯ್ಕೆ ಮಾಡುವಾ ಎಂಥವರನ್ನು ಆಯ್ಕೆ ಮಾಡಬೇಕು, ನಮ್ಮ ಸಮಾಜ ಕಟ್ಟಿ ಕೊಡುವಲ್ಲಿ ನಮ್ಮ ಪಾತ್ರವೇನು ಎಂಬುವುದನ್ನು ನೆನಪಿಸುವಂತಿದೆ ಮಕ್ಕಳ ಈ ಕಾರ್ಯ.....

ಈ ಪುಟಾಣಿ ಮಕ್ಕಳು ಆಲೋಚಿಸಿದ ರೀತಿಗೆ, ಅವರ ಕಾರ್ಯಕ್ಕೆ ನಮ್ಮದೊಂದು ಮೆಚ್ಚುಗೆ.....

English summary

Bengaluru kids filled potholes; heartwarming video goes viral

Bengaluru kids filled potholes: Video Goes Viral In Social Media, Read on.....
Story first published: Thursday, November 24, 2022, 15:31 [IST]
X
Desktop Bottom Promotion