For Quick Alerts
ALLOW NOTIFICATIONS  
For Daily Alerts

ಅಳುವ ಮಗುವನ್ನು ಎತ್ತಿಕೊಂಡು ಸಮಧಾನಿಸಿದ ಫ್ಲೈಟ್ ಸಿಬ್ಬಂದಿ: ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೋ

|

ಕೆಲವೊಂದು ಘಟನೆಗಳನ್ನು ನೋಡುವಾಗ ಜನರು ಮನುಷ್ಯತ್ವ ಎಂಬುವುದನ್ನು ಕಳೆದುಕೊಂಡೇ ಬಿಟ್ಟಿದ್ದಾರಾ ಎಂದು ಅನಿಸುತ್ತದೆ, ಆದರೆ ಇನ್ನು ಕೆಲವು ಘಟನೆಗಳನ್ನು ನೋಡುವಾಗ ಇಲ್ಲಾ.. ಮನುಷ್ಯತ್ವ ಇರುವವರೂ ಇದ್ದಾರೆ ಎಂದು ಅನಿಸುತ್ತದೆ. ಏರ್‌ ಇಂಡಿಯಾ ಫ್ಲೈಟ್‌ನ ಸಿಬ್ಬಂದಿಯೊಬ್ಬರು ನಡೆದುಕೊಂಡಿರುವ ರೀತಿ ತುಂಬಾನೇ ವೈರಲ್‌ ಆಗಿದೆ.

Air India Flight Attendant Consoles Crying Toddler Onboard, video goes viral

ಚಿಕ್ಕ ಮಕ್ಕಳನ್ನು ಕರೆದುಕೊಂಡು ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ ಅದರಲ್ಲೂ ಬಸ್‌, ಪ್ಲೈಟ್‌ನಲ್ಲಿ ಪ್ರಯಾಣ ಮಾಡುವಾಗ ಯಾವಾಗಪ್ಪಾ ನಮ್ಮ ಜಾಗ ತಲುಪುವುದು ಅನ್ನುವಷ್ಟು ಮಕ್ಕಳು ನಮ್ಮನ್ನು ಸುಸ್ತು ಹೊಡೆಸಿಬಿಟ್ಟಿರುತ್ತಾರೆ.

ಜೋರಾಗಿ ಅಳಲು ಪ್ರಾರಂಭಿಸಿದರೆ ಏನು ಮಾಡಿದರೂ ಸುಮ್ಮನಾಗಲ್ಲ, ಸುತ್ತ-ಮುತ್ತ ಇರುವ ಪ್ರಯಾಣಿಕರು ತಮಗೆ ಡಿಸ್ಟರ್ಬ್ ಆದ ಲುಕ್‌ ಬಿಡುವಾಗ ಇಂಥರಾ ಇರುಸು-ಮುರಿಸು ಉಂಟಾಗುವುದು. ಆಗ ಯಾರಾದರೂ ಮಕ್ಕಳನ್ನು ಸಮಧಾನ ಮಾಡಿದರೆ ತುಂಬಾನೇ ಖುಷಿಯಾಗುವುದು, ಆದರೆ ಹಾಗಾಗುವುದು ತುಂಬಾ ಕಡಿಮೆ, ಆದರೆ ಏರ್‌ ಇಂಡಿಯಾ ಫ್ಲೈಟ್‌ನಲ್ಲಿ ಮಗು ಅಳಲು ಪ್ರಾರಂಭಿಸಿದಾಗ ಅದರ ಸ್ಟಾಫ್‌ ಬಂದು ಮಗುವನ್ನುಎತ್ತಿಕೊಂಡು ಸಮಧಾನ ಪಡಿಸಿದ್ದಾರೆ. ಅವರು ಎತ್ತಿಕೊಂಡ ತಕ್ಷಣ ಜೋರಾಗಿ ಬೊಬ್ಬೆ ಹಾಕುತ್ತಿದ್ದ ಮಗು ಕೂಡ ಸಮಧಾನವಾಗಿದೆ.

ಮಗು ಅವರ ಹೆಗಲ ಮೇಲೆ ಆರಾಮವಾಗಿ ಮಲಗಿಕೊಂಡಿದೆ, ಈ ಸುಂದರ ವೀಡಿಯೋವನ್ನು ಅದೇ ಫ್ಲೈಟ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೀಗ ಆ ವೀಡಿಯೋ ತುಂಬಾನೇ ವೈರಲ್‌ ಆಗಿದೆ.

ನೆಟ್ಟಿಗರು ಆ ಫ್ಲೈಟ್ ಸಿಬ್ಬಂದಿಯನ್ನು ಹೃದಯವಂತ ಎಂದು ಹೊಗಳಿದ್ದಾರೆ. ಆ ಪ್ಲೈಟ್‌ ಸಿಬ್ಬಂದಿ ಹೆಸರು ನೇಲ್‌ ಮಾಕಮ್‌ ಎಂದಾಗಿದೆ.

ಇಂಥ ಘಟನೆಗಳು ಕಂಡು ಬರುವುದು ಅಪರೂಪವಾಗುತ್ತಿದೆ, ಆದ್ದರಿಂದಲೇ ಈ ರೀತಿ ನಡೆದಾಗ ವೈರಲ್ ಆಗುತ್ತಿದೆ.

English summary

Air India Flight Attendant Consoles Crying Toddler Onboard, video goes viral

Air India Flight Attendant Consoles Crying Toddler Onboard, People are appreciating Heartwarming gesture, Read on...
Story first published: Monday, September 5, 2022, 11:41 [IST]
X
Desktop Bottom Promotion