For Quick Alerts
ALLOW NOTIFICATIONS  
For Daily Alerts

2019ರಲ್ಲಿ ತುಂಬಾ ಸದ್ದು ಮಾಡಿದ ಟ್ವೀಟ್‌, ಹ್ಯಾಶ್‌ಟ್ಯಾಗ್‌, ಇಮೋಜಿಗಳು ಇವೇ ನೋಡಿ

|

ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಯಬೇಕೆಂದರೆ ಒಮ್ಮೆ ಟ್ವಿಟರ್ ಕಡೆ ಕಣ್ಣಾಡಿಸಿದರೆ ಸರಿ, ಪ್ರಚಲಿತ ಎಲ್ಲಾ ವಿದ್ಯಾಮಾನಗಳು ಅಲ್ಲಿ ನಮಗೆ ಸಿಗುತ್ತವೆ. ಜಗತ್ತಿನ ಟಾಪ್‌ ಲೀಡರ್‌ಗಳು, ಸೆಲೆಬ್ರಿಟಿಗಳು, ಮಾಧ್ಯಮಗಳು, ಸಾಮಾನ್ಯ ಜನರು ಹೀಗೆ ಎಲ್ಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು, ಶುಭಾಶಯಗಳನ್ನು ಕೋರಲು ಟ್ವಿಟರ್‌ ಬಳಸುತ್ತಾರೆ.

2019 top trending tweet

ಇನ್ನು ಟ್ವಿಟರ್ ಮೂಲಕ ಅನೇಕ ಅಭಿಯಾನವನ್ನೇ ಮಾಡುತ್ತಾರೆ. ಕೆಲವೊಂದು ಟ್ವೀಟ್‌ಗಳು ಸಕತ್‌ ಸದ್ದು ಮಾಡಿ ಸಂಚಕಲವನ್ನೇ ಮೂಡಿಸುತ್ತವೆ, ಜನರು ತಮ್ಮ ಖುಷಿ, ಕೋಪ, ಹತಾಶೆ ಎಲ್ಲವನ್ನು ವ್ಯಕ್ತ ಪಡಿಸಲು ಟ್ವಿಟರ್ ಮಾಧ್ಯಮ ಬಳಸುತ್ತಿದ್ದಾರೆ. ಅದರಲ್ಲಿ ಕೆಲವೊಂದು ಟ್ವೀಟ್‌ಗಳು ತುಂಬಾ ಟ್ರೆಂಡ್‌ ಆಗುತ್ತವೆ, ಅದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬರುತ್ತದೆ, ಮರು ಟ್ವೀಟ್‌ ಆಗುತ್ತವೆ.

ಈ ವರ್ಷ ಮುಗೀತಾ ಬಂದಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷಕ್ಕೆ ವಿದಾಯ ಹೇಳುತ್ತಿದ್ದೇವೆ. ಟ್ವಿಟರ್‌ ಜನವರಿ 1ರಿಂದ ನವೆಂಬರ್‌ 15ರ ನಡೆದ ವಿದ್ಯಾಮಾನಗಳಲ್ಲಿ ಈ ವರ್ಷದಲ್ಲಿ ಟಾಪ್‌ ಟ್ರೆಂಡ್‌ ಆದ ಟ್ವೀಟ್‌ ಹಾಗೂ ಇಮೋಜಿಗಳು ಯಾವುವು ಎಂದು ಟ್ವಿಟರ್ #ThisHappened in 2019 in India ಎಂಬ ಹ್ಯಾಶ್‌ ಟ್ಯಾಗ್‌ ನೀಡಿ ಹೇಳಿದೆ.

ಇಸ್ರೋ ಹೊಗಳಿ ನಾಸಾ ಟ್ವೀಟ್

ಇಸ್ರೋ ಹೊಗಳಿ ನಾಸಾ ಟ್ವೀಟ್

ಚಂದ್ರಯಾನ 2ರ ಕುರಿತು ಇಸ್ರೋ ಮಾಡಿದ ಮಹತ್ವದ ಪ್ರಯತ್ನವನ್ನು ಹೊಗಳಿ ನಾಸಾ ಮಾಡಿದ ಟ್ವೀಟ್‌ 2019ರ ಟಾಪ್‌ ಟ್ರೆಂಡ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಚಂದ್ರಯಾನ 2 ಇಸ್ರೋದ ಮಹತ್ವದ ಯೋಜನೆಯಾಗಿತ್ತು. ಇಡೀ ವಿಶ್ವವೇ ಭಾರತ ಚಂದ್ರನ ಇನ್ನೊಂದು ಮೇಲ್ಮೆ ಮೇಲೆ ಸಂಶೋಧನೆಗೆ ಮುಂದಾಗಿರುವುದನ್ನು ಕುತೂಹಲದಿಂದ ನೋಡುತ್ತಿತ್ತು. ಇಸ್ರೋದ ಸಾಧನೆ ಪ್ರತಿಯೊಬ್ಬ ಭಾರತೋಯನ ಹೆಮ್ಮೆ. ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ನಾಸಾ ಮಾಡಿದ ಟ್ವೀಟ್‌ 2019 ಟಾಪ್‌ ಟ್ವೀಟ್‌ಗಳಲ್ಲಿ ಮೊದಲಿನ ಸ್ಥಾನದಲ್ಲಿದೆ.

ಚುನಾವಣೆಯಲ್ಲಿ ಗೆದ್ದ ಬಳಿಕ ಮೋದಿ ಮಾಡಿದ ಟ್ವೀಟ್

ಚುನಾವಣೆಯಲ್ಲಿ ಗೆದ್ದ ಬಳಿಕ ಮೋದಿ ಮಾಡಿದ ಟ್ವೀಟ್

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಬಿಜೆಪಿಯ ಆ ಮಹಾ ಗೆಲುವಿಗೆ ಕಾರಣ ನರೇಂದ್ರ ಮೋದಿ. ಎರಡನೇಯ ಬಾರಿ ಪ್ರದಾನಿಯಾಗುವ ಅವಕಾಶ ಸಿಕ್ಕಾಗ ಮೋದಿ ಮಾಡಿದ ಟ್ವೀಟ್‌ ಈ ವರ್ಷದ ಟ್ರೆಂಡಿಂಗ್‌ ಟ್ವೀಟ್‌ಗಳಲ್ಲಿ ನಂ.2 ಸ್ಥಾನವನ್ನು ಪಡೆದಿದೆ. ಎಲ್ಲರು ಜತೆಯಾಗಿ ಬೆಳೆಯೋಣ, ಎಲ್ಲರು ಸಮೃದ್ಧರಾಗೋಣ, ಜತೆಯಾಗಿ ಬಲಶಾಲಿಯಾದ ಭಾರತವನ್ನು ಕಟ್ಟೋಣ, ಭಾರತ ಮತ್ತೊಮ್ಮೆ ಜಯಶಾಲಿಯಾಗಿದೆ, ವಿಜಯಭಾರತ್ ಎಂದು ಟ್ವೀಟ್‌ ಮಾಡಿದ್ದರು.

ಧೋನಿಗೆ ಕೊಹ್ಲಿ ಹುಟ್ಟುಹಬ್ಬದ ಶುಭ ಕೋರಿದ ಪೋಸ್ಟ್

ಧೋನಿಗೆ ಕೊಹ್ಲಿ ಹುಟ್ಟುಹಬ್ಬದ ಶುಭ ಕೋರಿದ ಪೋಸ್ಟ್

ಭಾರತ ಕ್ರಿಕೆಟ್‌ ತಂಡದ ಹಾಲಿ ನಾಯಕ ವಿರಾಟ್‌ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹುಟ್ಟು ಹಬ್ಬದಂದು ಶುಭಾಶಯ ಕೋರಿದ್ದರು. ಅದರಲ್ಲಿ ಕೊಹ್ಲಿ ಶುಭಾಶಯ ಕೋರಿದ ರೀತಿ ಕೊಹ್ಲಿ ಹಾಗೂ ಧೋನಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು.

'ಕೆಲವೇ ಕೆಲವು ಜನರಿಗೆ ನಂಬಿಕೆ ಹಾಗೂ ಗೌರವದ ಅರ್ಥ ಗೊತ್ತಿರುತ್ತದೆ, ನಿಮ್ಮ ಸ್ನೇಹ ಸಿಕ್ಕಿರುವುದಕ್ಕೆ ತುಂಬಾ ಖುಷಿಯಿದೆ, ಹಲವು ವರ್ಷಗಳಿಂದ ನಿಮ್ಮ ಜತೆ ಇದ್ದೇನೆ, ನೀವು ನಮ್ಮೆಲ್ಲರಿಗೆ ಅಣ್ಣವಿದ್ದಂತೆ, ಮೊದಲೇ ಹೇಳಿದಂತೆ ನೀವು ಯಾವತ್ತಿದ್ದರೂ ನನ್ನ ಕ್ಯಾಪ್ಟನ್‌' ಎಂದು ಟ್ವೀಟ್‌ ಮಾಡಿದ್ದರು.

ವಿಜಯ್ ಬಿಜಿಲ್ ಪೋಸ್ಟರ್

ವಿಜಯ್ ಬಿಜಿಲ್ ಪೋಸ್ಟರ್

ಇನ್ನು 2019ರ ಟಾಪ್‌ ಟ್ವೀಟ್‌ಗಳಲ್ಲಿ ನಂ.3 ಸ್ಥಾನ ಪಡೆದಿರುವುದು ತಮಿಳು ನಟ ವಿಜಯ್‌ ನಟಿಸಿರುವ ಬಿಜಿಲ್‌ ಸಿನಿಮಾದ ಪೋಸ್ಟರ್. ಈ ಪೋಸ್ಟರ್ ಹಾಕಿ ಕೆಲ ಕ್ಷಣಗಳಲ್ಲಿಯೇ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದೆವು. ಸಾಕಷ್ಟು ವಿಜಯ್‌ ಅಭಿಮಾನಿಗಳು ಮರು ಟ್ವೀಟ್‌ ಮಾಡಿ ತಮ್ಮ ಇಳಪತಿ ಸಿನಿಮಾವನ್ನು ಸ್ವಾಗತಿಸಿದ್ದರು. ದಕ್ಷಿಣ ಭಾರತದ ಮಾತ್ರವಲ್ಲ, ಬಾಲಿವುಡ್‌ ಚಿತ್ರಗಳಿಗೆ ಹೋಲಿಸಿದರೆ ಅತೀ ಹೆಚ್ಚು ಟ್ವಿಟರ್‌ನಲ್ಲಿ ಸದ್ದು ಮಾಡಿದ ಪೋಸ್ಟರ್ ಇದಾಗಿದೆ.

ಅತೀ ಹೆಚ್ಚು ಬಳಕೆಯಾದ ಹ್ಯಾಶ್‌ಟ್ಯಾಗ್‌

ಅತೀ ಹೆಚ್ಚು ಬಳಕೆಯಾದ ಹ್ಯಾಶ್‌ಟ್ಯಾಗ್‌

ಹ್ಯಾಶ್‌ಟ್ಯಾಗ್‌ ಬಳಸುವುದು ಟ್ವಿಟರ್ ಬಳಕೆದಾರರಿಗೆ ಗೊತ್ತೇ ಇರುತ್ತದೆ. 2019ರ ಜನವರಿ 1ರಿಂದ ನವೆಂಬರ್ 15ವರೆಗೆ ಅತೀ ಹೆಚ್ಚು ಬಳಸಿದ ಹ್ಯಾಶ್‌ಟ್ಯಾಗ್‌ 1. #loksabhaelections2019 2.chandrayaan2 3. #cwc19 4.#pulwama 5. #article370 6. #bigil 7.#diwali 8.#avengersendgame 9.#ayodhyaverdict 10.#eidmubarak

ಅತೀ ಹೆಚ್ಚು ಬಳಸಿದ ಇಮೋಜಿಗಳು

ಅತೀ ಹೆಚ್ಚು ಬಳಸಿದ ಇಮೋಜಿಗಳು

ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಚಾಟ್‌ ಮಾಡುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಇಮೋಜಿ ಹೆಚ್ಚಾಗಿ ಬಳಸುತ್ತಾರೆ. ಅತೀ ಹೆಚ್ಚು ಬಳಕೆಯಾದ ಇಮೋಜಿಗಳಲ್ಲಿ ಟಾಪ್‌ 10 ಇಮೋಜಿಗಳ ಪಟ್ಟಿಯನ್ನು ಟ್ವಿಟರ್ ನೀಡಿದೆ. ಅದರಲ್ಲಿ ನಗು, ನಮಸ್ತೆಯ ಇಮೋಜಿಗಳು ಟಾಪ್‌2ರಲ್ಲಿವೆ.

English summary

2019 top trending tweet, hashtag and emojis in India

The top Tweets, most used hash tag, most used emojis in India this year will surely make you smile, cry a little, and your heart may even skip a beat
Story first published: Tuesday, December 10, 2019, 15:42 [IST]
X
Desktop Bottom Promotion