Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಂದ್ರೆ ಮಲಗುವ ಮುನ್ನ ಈ 4 ಕೆಲಸಗಳನ್ನು ತಪ್ಪದೇ ಮಾಡಿ!
ನಮ್ಮ ನೆಮ್ಮದಿ ಕೆಡೋದಕ್ಕೆ ಹಲವಾರು ಕಾರಣಗಳು ಇರಬಹುದು. ಅವುಗಳಲ್ಲಿ ಮುಖ್ಯವಾಗಿ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದಿದ್ದರೂ ಕೂಡ ನಮ್ಮಗೆ ರಾತ್ರಿಯಿಡೀ ನಿದ್ದೆ ಬರೋದಿಲ್ಲ. ಒಂದು ಕಡೆಯಿಂದ ಸಾಲಗಾರರ ಕಾಟ, ಇನ್ನೊಂದು ಕಡೆಯಿಂದ ನಮ್ಮ ಆಸೆಗಳನ್ನು ಪೂರೈಸಿಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ನೋವು ನಮ್ಮನ್ನು ಕಾಡುತ್ತಾ ಇರುತ್ತದೆ. ಇದರಿಂದ ಒಂದು ಕಡೆಯಿಂದ ನಮಗೆ ನಿದ್ರೆಯೂ ಸರಿಯಾಗಿ ಆಗೋದಿಲ್ಲ. ಜೊತೆಗೆ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ.

ನಾವು ರಾತ್ರಿ ಮಲಗುವ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ನಮ್ಮ ನಿದ್ರೆಯೂ ಚೆನ್ನಾಗಿ ಆಗುತ್ತದೆ. ಅಷ್ಟಕ್ಕು ನಮ್ಮ ಆರ್ಥಿಕ ಸಮಸ್ಯೆಗಳು ಸುಧಾರಣೆಯಾಗಬೇಕೆಂದರೆ ನಮ್ಮ ಕೈ ತುಂಬಾ ದುಡ್ಡು ಬರಬೇಕೆಂದರೆ ರಾತ್ರಿ ಮಲಗುವ ಮುನ್ನ ಈ ನಾಲ್ಕು ಕೆಲಸಗಳನ್ನು ತಪ್ಪದೇ ಮಾಡಿ. ಅಷ್ಟಕ್ಕೂ ರಾತ್ರಿ ಮಲಗುವ ಮುನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.
ಹಣವನ್ನು ಎಣಿಸಿ ನಂತರ ಮಲಗಿ!
ನೀವು ರಾತ್ರಿ ಮಗುವ ಮುನ್ನ ನಿತ್ಯವೂ ಹಣವನ್ನು ಎಣಿಸಬೇಕು. 10 ರೂಪಾಯಿ ನೋಟುಗಳ ಬಂಡಲ್ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಪ್ರತಿದಿನ ಎಣಿಸಿ. ಈ ರೀತಿ ಪ್ರತಿದಿನ ಮಾಡುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಯನ್ನು ನೀವು ನೋಡುತ್ತೀರಿ. ದಿನ ಕಳೆದಂತೆ ನಿಮ್ಮ ಆರ್ಥಿಕ ಸಂಕಷ್ಟ ಪರಿಹಾರವಾಗುತ್ತದೆ.
ಮನೆಯಲ್ಲಿ ಕರ್ಪೂರವನ್ನು ಉರಿಸಬೇಕು!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತಂತೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಕರ್ಪೂರ ಹಚ್ಚಿ ನಿಮ್ಮ ಇಡೀ ಮನೆಯ ಒಳಗೆ ಅಡ್ಡಾಡಿ. ಹೀಗೆ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಜೊತೆಗೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಮಲಗುವ ದಿಕ್ಕನ್ನು ನೆನಪಿನಲ್ಲಿಡಿ!
ರಾತ್ರಿ ಮಲಗುವಾಗ ನಿಮ್ಮ ದಿಕ್ಕನ್ನು ನೋಡಿಕೊಳ್ಳಿ. ಮಲಗುವಾಗ ಪಾದಗಳ ದಿಕ್ಕಿಗೆ ಗಮನ ಕೊಡದಿದ್ದರೆ ನಿಮ್ಮ ನಿದ್ದೆಗೆ ತೊಂದರೆಯಾಗಬಹುದು. ರಾತ್ರಿ ಮಲಗುವಾಗ ನಿಮ್ಮ ಪಾದಗಳು ಬಾಗಿಲಿನ ಕಡೆಗೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.
ದೇವರನ್ನು ಪ್ರಾರ್ಥಿಸಬೇಕು!
ಮಲಗುವ ಮುನ್ನ ನಿಮ್ಮ ಇಷ್ಟದ ದೇವರನ್ನು ಪ್ರಾರ್ಥಿಸಿ. ನಿಮಗೇನಾದರೂ ಆಸೆಯಿದ್ದರೆ ಅದನ್ನು ದೇವರ ಬಳಿ ಭಕ್ತಿಯಿಂದ ಹೇಳಿಕೊಳ್ಳಿ. ಅದಕ್ಕಾಗಿಯೇ ಪ್ರತಿ ರಾತ್ರಿ ಮಲಗುವ ಮೊದಲು ಪ್ರಾರ್ಥನೆ ಮಾಡಿ. ಆಗ ಮಾತ್ರ ನೀವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ನಾಲ್ಕು ಕೆಲಸಗಳನ್ನು ತಪ್ಪದೇ ಮಾಡಿದ್ರೆ ಖಂಡಿತ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಗ್ಯಾರಂಟಿ.



Click it and Unblock the Notifications
