ಅಜಾ ಏಕಾದಶಿ 2023 : ದ್ವಾದಶ ರಾಶಿಗಳ ಮೇಲೆ ಪರಿಣಾಮ ಹೇಗಿರಲಿದೆ?

ಅಜ ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಜ ಏಕಾದಶಿಯನ್ನು ಪ್ರತಿ ವರ್ಷ ಭಾದ್ರಪದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಅಜ ಏಕಾದಶಿಯನ್ನು ಅನ್ನದಾ ಏಕಾದಶಿ ಎಂದೂ ಕರೆಯುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಜ ಏಕಾದಶಿಯ ದಿನದಂದು ಉಪವಾಸವನ್ನು ಮಾಡೋದ್ರಿಂದ ಭಕ್ತರಿಗೆ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಸಿಗುತ್ತಂತೆ.

Aja Ekadashi 2023 effect on all zodiac sign in Kannada.

ಅಜ ಏಕಾದಶಿಯು ಭಗವಾನ್ ವಿಷ್ಣುವಿಗೆ ಹೆಚ್ಚು ಇಷ್ಟವಾಗುತ್ತದೆ. ಆದ್ದರಿಂದ ಈ ದಿನದಂದು ಉಪವಾಸ ಮಾಡೋದ್ರಿಂದ ವ್ಯಕ್ತಿಯು ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಅಜ ಏಕಾದಶಿ ದಿನಾಂಕ ಮತ್ತು ಮುಹೂರ್ತ :

ಅಜ ಏಕಾದಶಿಯನ್ನು 10 ಸೆಪ್ಟೆಂಬರ್ 2023 ರಂದು ಭಾನುವಾರ ಆಚರಿಸಲಾಗುತ್ತದೆ. ಏಕಾದಶಿ ತಿಥಿಯು ಶನಿವಾರ ಸೆಪ್ಟೆಂಬರ್ 9, 2023 ರಂದು ಸಂಜೆ 07:17 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಮಾರನೇ ದಿನ ಸೆಪ್ಟೆಂಬರ್ 10, 2023 ರ ಭಾನುವಾರದಂದು ರಾತ್ರಿ 09:28 ಕ್ಕೆ ಕೊನೆಗೊಳ್ಳುತ್ತದೆ.

ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

2023 ರಲ್ಲಿ ಬರುವ ಅಜ ಏಕಾದಶಿಯು ವಿಶೇಷವಾಗಿರಲಿದೆ. ಏಕೆಂದರೆ ಈ ಅಜ ಏಕಾದಶಿಯು ಎಲ್ಲಾ ರಾಶಿಯವರ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ದ್ವಾದಶ ರಾಶಿಯ ಮೇಲೆ ಅಜಾ ಏಕಾದಶಿಯು ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನು ತಿಳಿಯೋಣ.

1. ಮೇಷ ರಾಶಿ

ಅಜ ಏಕಾದಶಿಯ ದಿನ ಮೇಷ ರಾಶಿಯವರು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಅಜ ಏಕಾದಶಿಯ ಉಪವಾಸದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ. ಯಾವುದೇ ಕೆಲಸವನ್ನು ಮಾಡುವ ಮೊದಲು ಧೈರ್ಯದಿಂದ ಮುಂದೆ ಹೋಗೋದು ಮುಖ್ಯ.

2. ವೃಷಭ ರಾಶಿ

ವೃಷಭ ರಾಶಿಯವರಿಗೆ ಅಜ ಏಕಾದಶಿಯಂದು ಉದ್ಯೋಗದಲ್ಲಿ ಬಡ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ದೊರೆಯುತ್ತದೆ. ಅಲ್ಲದೆ ವೃಷಭ ರಾಶಿಯ ರೈತರಿಗೆ ಈ ದಿನವು ತುಂಬಾ ಪ್ರಯೋಜನಕಾರಿಯಾಗಿದೆ. ಕೃಷಿಯಲ್ಲಿ ಪ್ರಗತಿ ಕಂಡುಬರಲಿದ್ದು, ಕೊಳ್ಳುವವರ ಸಂಖ್ಯೆಯೂ ಹೆಚ್ಚಲಿದೆ.

3. ಮಿಥುನ ರಾಶಿ

ಅಜ ಏಕಾದಶಿಯ ಸಂದರ್ಭದಲ್ಲಿ ಮಿಥುನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮತ್ತು ಹೊಸ ಸ್ಥಳದಲ್ಲಿ ಉದ್ಯೋಗವನ್ನು ನಿರೀಕ್ಷಿಸಬಹುದು. ಈ ಸಮಯದಲ್ಲಿ ನಿಮ್ಮಲ್ಲಿ ಆತಂಕ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಗಮನ ಕೊಡಿ.

4. ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಈ ದಿನ ಕಿರಿಕಿರಿಯನ್ನು ಅನುಭವಿಸುತ್ತಾರೆ. ಮತ್ತು ಕೆಲಸದಲ್ಲಿ ಸಮಸ್ಯೆಗಳಿರಬಹುದು. ಇಷ್ಟೇ ಅಲ್ಲದೇ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

5. ಸಿಂಹ ರಾಶಿ

ಸಿಂಹ ರಾಶಿಯವರು ಈ ಅವಧಿಯಲ್ಲಿ ಮಾಡಿದ ಅಥವಾ ಹಿಂದೆ ಯಶಸ್ವಿಯಾಗದ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮಾನಸಿಕ ಒತ್ತಡ ದೂರವಾಗುತ್ತದೆ. ಮತ್ತು ಪ್ರಗತಿಯೂ ಇರುತ್ತದೆ.

6. ಕನ್ಯಾರಾಶಿ

ಈ ಅವಧಿಯಲ್ಲಿ ಕನ್ಯಾ ರಾಶಿಯವರಿಗೆ ಕೆಲಸ ಸಿಗುವ ಸಾಧ್ಯತೆಗಳಿವೆ. ಯಾವುದೇ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಬಹುದು. ಮನೆಯಲ್ಲಿ ಗೌರವ ಹೆಚ್ಚಾಗುತ್ತದೆ. ಮತ್ತು ಆರ್ಥಿಕ ಪ್ರಗತಿ ಇರುತ್ತದೆ.

7. ತುಲಾ

ಈ ಸಮಯದಲ್ಲಿ ತುಲಾ ರಾಶಿಯವರ ಜೀವನದಿಂದ ನಕಾರಾತ್ಮಕತೆ ದೂರವಾಗುತ್ತದೆ. ಯಾವುದೇ ಹಳೆಯ ತೊಂದರೆಗಳು ದೂರವಾಗುತ್ತವೆ. ಕೆಲಸದಲ್ಲಿ ಪ್ರಗತಿ ಇರುತ್ತದೆ ಮತ್ತು ಗ್ರಹಗಳ ಸ್ಥಿತಿಯು ಶುಭವಾಗಿರುತ್ತದೆ.

8. ವೃಶ್ಚಿಕ ರಾಶಿ

ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಜಾಗರೂಕರಾಗಿರಬೇಕು. ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು.

9. ಧನು ರಾಶಿ

ಈ ಅವಧಿಯಲ್ಲಿ ಧನು ರಾಶಿಯವರ ಸಂತೋಷ ಮತ್ತು ಸಮೃದ್ಧಿಯು ಹೆಚ್ಚಾಗುತ್ತದೆ. ನೀವು ಮಾಡಲು ಪ್ರಯತ್ನಿಸುತ್ತಿದ್ದ ಎಲ್ಲಾ ಕಾರ್ಯಗಳು ನೆರವೇರುತ್ತವೆ.

10. ಮಕರ ರಾಶಿ

ಈ ಸಮಯದಲ್ಲಿ ಮಕರ ರಾಶಿಯವರ ಕುಟುಂಬದಲ್ಲಿ ಸಂತೋಷವು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಕೈಗೊಳ್ಳುವ ಯಾವುದೇ ಪ್ರಯಾಣವು ನಿಮಗೆ ತೊಂದರೆ ನೀಡಬಹುದು. ಆದ್ದರಿಂದ ಪ್ರಯಾಣ ಮಾಡಬೇಡಿ.

11. ಕುಂಭ ರಾಶಿ

ಕುಂಭ ರಾಶಿಯವರ ಜೀವನದಲ್ಲಿ ಏನಾದರೂ ಹೊಸ ಘಟನೆಗಳು ಸಂಭವಿಸಬಹುದು. ಈ ಸಮಯದಲ್ಲಿ ಮದುವೆಯಾಘುವ ಯೋಗ ಅಥವಾ ಮಕ್ಕಳನ್ನು ಪಡೆಯುವ ಯೋಗವಿದೆ. ಅಷ್ಟೇ ಅಲ್ಲದೇ, ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು.

12. ಮೀನ ರಾಶಿ

ಮೀನ ರಾಶಿಯವರು ಈ ಅವಧಿಯಲ್ಲಿ ಕೆಲವು ದೊಡ್ಡ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬಹುದು. ಮತ್ತು ಕೆಲಸದಲ್ಲಿ ಪ್ರಗತಿ ಇರುತ್ತದೆ. ಸಂತೋಷ ಮತ್ತು ಶಾಂತಿ ನಿಮ್ಮ ಜೀವನದಲ್ಲಿ ಇರುತ್ತದೆ. ಈ ಸಮಯದಲ್ಲಿ ಯಾರೊಂದಿಗೂ ದ್ವೇಷವನ್ನು ಬೆಳೆಸಿಕೊಳ್ಳೋದಕ್ಕೆ ಹೋಗಬೇಡಿ.

English summary

Aja Ekadashi 2023 effect on all zodiac sign in Kannada.

Aja Ekadashi 2023 effect on all zodiac sign. Read more.
Story first published: Friday, September 8, 2023, 13:07 [IST]
X
Desktop Bottom Promotion