Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಆಗಸ್ಟ್ 19 ಹಾಗೂ 20 ರಂದು ಮೈಸೂರಿನಲ್ಲಿ ಭೂ ಮೇಳ : ವಿಶೇಷತೆ ಏನು ಗೊತ್ತಾ?
ಮೈಸೂರಿನಲ್ಲಿ ಇದೇ ಆಗಸ್ಟ್ 19 ಮತ್ತು 20 ರಂದು ಭೂ ಮೇಳವನ್ನು ಹಮ್ಮಿಕೊಳ್ಳಾಗಿದೆ. ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಅದನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಹಸಿರು ಉದ್ಯಮಿಗಳು, ಉತ್ಸಾಹಿಗಳು ಮತ್ತು ಸ್ಥಳೀಯ ಸಮುದಾಯಗಳು ಸೇರಿಕೊಂಡು ಈ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ.

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಫೀನಿಕ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಪರಿಸರದ ಬಗ್ಗೆ ಆಸಕ್ತಿ ಇರುವವರಿಗೆ ಮತ್ತು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಅನ್ವೇಷಿಸಲು ಮತ್ತು ಅಳವಡಿಸಿಕೊಳ್ಳಲು ಒಂದು ಅನನ್ಯ ಅವಕಾಶ ಅಂತಾನೇ ಹೇಳಬಹುದು.
ಇನ್ನೂ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಸಾವಯವ, ಕೈಯಿಂದ ತಯಾರಿಸಿದ ಮತ್ತು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಳಿಗೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಇದಿಷ್ಟೇ ಅಲ್ಲದೇ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಗಳು, ಪರಿಸರ ಸ್ನೇಹಿ ಹತ್ತಿ ಮತ್ತು ಸೆಣಬಿನ ಚೀಲಗಳು, ಕರಕುಶಲ ವಸ್ತುಗಳು, ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸೋದಕ್ಕೆ ನಿಮಗೆ ಅವಕಾಶವಿದೆ.
ಈ ಭೂ ಮೇಳವು ಮನೆಯಿಂದಲೇ ಕಾರ್ಯನಿರ್ವಹಿಸುವ ಸ್ಥಳೀಯ ಸಣ್ಣ ವ್ಯಾಪಾರಗಳಿಗೆ ತನ್ನ ಬೆಂಬಲವನ್ನು ವಿಸ್ತರಿಸುತ್ತದೆ ಅಂದ್ರೆ ತಪ್ಪಾಗೋದಿಲ್ಲ. ಸಣ್ಣ ವ್ಯಾಪಾರಿಗಳಿಗೆ ಇದೊಂದು ಅವಕಾಶವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಈ ಮೇಳವು ನವೀನ ಪರಿಸರ ಸ್ನೇಹಿ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶಾಲಾ ಮಕ್ಕಳು ಹತ್ತಿ ನೂಲು ನೂಲುವಂತಹ ಚಟುವಟಿಕೆಗಳು, ಅಡುಗೆ ಗೊಬ್ಬರ ತಯಾರಿಕೆ ಮತ್ತು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಕುರಿತು ಮಾಹಿತಿಯನ್ನು ನೀಡಲಿದ್ದಾರೆ. ಒಟ್ಟಿನಲ್ಲಿ ಈ ಎರಡು ದಿನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿದೆ. ಆಸಕ್ತಿಯಿದ್ದವರು ಈ ಮೇಳದಲ್ಲಿ ಭಾಗವಹಿಸಬಹುದು.



Click it and Unblock the Notifications