Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಅಪ್ಪಿ-ತಪ್ಪಿಯೂ ಮಕ್ಕಳ ಫೋಟೋವನ್ನು ಈ ದಿಕ್ಕಿನಲ್ಲಿ ಹಾಕಬೇಡಿ!
ಮಕ್ಕಳನ್ನು ಪೋಷಕರು ತುಂಬಾನೇ ಪ್ರೀತಿಯಿಂದ ಸಾಕಿರುತ್ತಾರೆ. ಅವರ ಮೇಲೆ ಜೀವವನ್ನೇ ಇಟ್ಟುಕೊಂಡಿರ್ತಾರೆ. ಅವರ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಸೆರೆ ಹಿಡಿಯೋದಕ್ಕೆ ಪೋಷಕರು ಇಷ್ಟ ಪಡ್ತಾರೆ. ಇದಕ್ಕಾಗಿ ಮಕ್ಕಳ ಬಾಲ್ಯದ ಫೋಟೋಗಳನ್ನು ತೆಗೆದು ಗೋಡೆಯ ಮೇಲೆ ನೇತು ಹಾಕೋದು ಸಾಮಾನ್ಯ. ಹೀಗಿದ್ದಾಗ ಅವರು ಎಷ್ಟು ದೊಡ್ಡವರಾದ್ರೂ ಕೂಡ ಅವರ ಬಾಲ್ಯದ ಕ್ಷಣಗಳನ್ನು ನಾವು ನೆನಪು ಮಾಡಿಕೊಳ್ಬಹುದು.

ಹಾಗಂತ ಮಕ್ಕಳ ಫೋಟೋಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಹಾಕುವ ಹಾಗಿಲ್ಲ. ಮಕ್ಕಳ ಫೋಟೋವನ್ನು ಇದೇ ದಿಕ್ಕಿನಲ್ಲಿ ಇರಿಸಬೇಕೆನ್ನುವ ಪದ್ಧತಿ ಇದೆ. ಒಂದು ವೇಳೆ ನೀವು ಅಪ್ಪಿ-ತಪ್ಪಿ ಬೇರೆ ಕಡೆ ಹಾಕಿದ್ರೆ ಅದಕ್ಕೆ ನೀವೇ ಬೆಲೆ ತೆರಬೇಕಾಗುತ್ತದೆ. ಅಷ್ಟಕ್ಕೂ ಮನೆಯಲ್ಲಿ ಮಕ್ಕಳ ಫೋಟೋ ಯಾವ ದಿಕ್ಕಿನಲ್ಲಿ ಇರಬೇಕು ಅನ್ನೋದನ್ನು ತಿಳಿಯೋಣ.
ಪಶ್ಚಿಮ ದಿಕ್ಕಿನಲ್ಲಿ ಫೋಟೋ ಇದ್ದರೆ ಉತ್ತಮ!
ಮನೆಯ ಪಶ್ಚಿಮ ದಿಕ್ಕು ಮಕ್ಕಳು ಮತ್ತು ಸೃಜನಶೀಲತೆಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಮಕ್ಕಳ ಚಿತ್ರಗಳನ್ನು ಹಾಕುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅವರ ಫೋಟೋವನ್ನು ಪಶ್ಚಿಮ ದಿಕ್ಕಿನಲ್ಲಿ ಹಾಕಿದರೆ ಅವರು ಅಧ್ಯಯನದಲ್ಲಿ ಚುರುಕಾಗುತ್ತಾರೆ. ಮತ್ತು ಯಾವಾಗಲೂ ತಮ್ಮ ಜೀವನದಲ್ಲಿ ಮುಂದುವರಿಯುತ್ತಾರೆ ಎನ್ನುವ ನಂಬಿಕೆಯಿದೆ.
ಒಬ್ಬನೇ ಮಗನಿದ್ದಾಗ ಏನು ಮಾಡಬೇಕು?
ನಿಮಗೆ ಒಬ್ಬನೇ ಮಗನಿದ್ದರೆ ನೀವು ಅವನ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಗೋಡೆಯ ಮೇಲೆ ಹಾಕಬಹುದು. ಈ ರೀತಿ ಮಾಡೋದ್ರಿಂದ ನಿಮ್ಮ ಮಗ ಶೀಘ್ರದಲ್ಲೇ ಜವಾಬ್ದಾರನಾಗುತ್ತಾನೆ. ಮತ್ತು ಇಡೀ ಕುಟುಂಬವನ್ನು ಏಕಾಂಗಿಯಾಗಿ ನೋಡಿಕೊಳ್ಳುವ ಧೈರ್ಯವನ್ನು ಪಡೆಯುತ್ತಾನೆ. ಈ ನಿರ್ದೇಶನವು ಮನೆಯ ಮಾಲೀಕರಿಗೆ ಸಂಬಂಧಿಸಿದೆ. ಆದ್ದರಿಂದ ನೀವು ನಿಮ್ಮ ಏಕೈಕ ಮಗನ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಹಾಕಿದ್ರೆ ಉತ್ತಮ ಅಂತ ಹೇಳಲಾಗುತ್ತದೆ.
ಯಶಸ್ಸು ಗಳಿಸಲು ಏನು ಮಾಡಬೇಕು?
ನಿಮ್ಮ ಮಗುವಿನ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ನಿಮ್ಮ ಮಗು ಪ್ರಕಾಶಮಾನವಾಗಿ ಮತ್ತು ಶಕ್ತಿಯುತವಾಗಿರುತ್ತದೆ. ಜೀವನದಲ್ಲಿ ಯಶಸ್ವನ್ನು ಸಾಧಿಸಲು ಸಹಾಯವಾಗುತ್ತದೆ. ಮತ್ತು ಅವರ ಮೇಲೆ ದೇವರ ಅನುಗ್ರಹ ಯಾವಾಗಲೂ ಇರುತ್ತಂತೆ.
ಕೌಟುಂಬಿಕ ಸಂಬಂಧ ಗಟ್ಟಿಯಾಗಲು ಏನು ಮಾಡಬೇಕು?
ನೀವು ಮಕ್ಕಳ ಚಿತ್ರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯದು. ಇದರಿಂದ ನಿಮ್ಮ ಮಕ್ಕಳ ಜೊತೆಗೆ ನಿಮ್ಮ ಬಂಧ ಗಟ್ಟಿಯಾಗಿರುತ್ತದೆ. ವಾಸ್ತವವಾಗಿ ಈ ದಿಕ್ಕಿನಲ್ಲಿ ಕುಟುಂಬದ ಫೋಟೋವನ್ನು ಹಾಕುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ ಫ್ಯಾಮಿಲಿ ಫೋಟೋಗಳನ್ನು ಹಾಕುವುದರಿಂದ ಕೌಟುಂಬಿಕ ಸಂಬಂಧಗಳು ಗಟ್ಟಿಯಾಗುತ್ತವೆ. ಮತ್ತು ಕುಟುಂಬಸ್ಥರ ಮಧ್ಯೆ ಐಕ್ಯತೆ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಂತೆ.



Click it and Unblock the Notifications