For Quick Alerts
ALLOW NOTIFICATIONS  
For Daily Alerts

ಫ್ಯಾಷನ್ ಪ್ರಿಯರ ಮನಸೆಳೆಯುವ ಬಗೆ ಬಗೆಯ 'ಫ್ಯಾಷನ್ ಟ್ರೆಂಡ್‌ಗಳು'

By Jaya Subramanya
|

ದುರ್ಗಾಪೂಜೆಯ ಸುವರ್ಣ ಅವಸರದಲ್ಲಿ ಎಲ್ಲಾ ಸ್ತ್ರೀಯರು ವಿಶೇಷವಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಅದರಲ್ಲೂ ಬಂಗಾಳಿ ಸ್ತ್ರೀಯರಿಗೆ ದುರ್ಗಾಮಾತೆಯ ಪೂಜೆಯು ಅತಿ ಮಹತ್ವದ್ದು ಎಂದೆನಿಸಿದ್ದು ಈ ದಿನಕ್ಕಾಗಿ ವಿಶೇಷ ದಿರಿಸುಗಳನ್ನು ಮಹಿಳೆಯರು ಧರಿಸಿ ಮಾತೆಯ ಪೂಜೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಇವರುಗಳು ಧರಿಸುವ ದಿರಿಸು ಕೂಡ ದೇಶದಲ್ಲಿ ಖ್ಯಾತಿಯನ್ನು ಪಡೆದಿದೆ. ನೀವು ಈ ಬಾರಿಯ ಹಬ್ಬಕ್ಕಾಗಿ ವಿಶೇಷ ದಿರಿಸುಗಳನ್ನು ಶಾಪಿಂಗ್ ಮಾಡಲು ಬಯಸುತ್ತೀರಿ ಎಂದಾದಲ್ಲಿ ಇಂದಿನ ಲೇಖನದ ಮೂಲಕ ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡಲು ಬಯಸುತ್ತೇವೆ.

ನೀವು ಖರೀದಿ ಮಾಡುವ ದಿರಿಸು ಯಾವುದೇ ಆಗಿರಲಿ ಅದನ್ನು ಖರೀದಿಸುವ ಮುನ್ನ ಕೆಲವೊಂದು ನೀತಿನಿಯಮಗಳನ್ನು ನೀವು ಅನುಸರಿಸಬೇಕಾಗುತ್ತದೆ. ಬಟ್ಟೆಯ ಗುಣಮಟ್ಟ, ಅದನ್ನು ಹೊಲಿದಿರುವ ಶೈಲಿ ಹೀಗೆ ಪ್ರತಿಯೊಂದು ಅಂಶಗಳಿಗೂ ನೀವು ಗಮನಹರಿಸಿದಾಗ ಮಾತ್ರವೇ ನೀವು ಖರೀದಿ ಮಾಡುವ ದಿರಿಸು ಉತ್ತಮ ಎಂದೆನಿಸುತ್ತದೆ....

ಮೋಟಿಫ್ ಪ್ರಿಂಟ್ಸ್

ಮೋಟಿಫ್ ಪ್ರಿಂಟ್ಸ್

ಈ ಬಗೆಯ ಪ್ರಿಂಟ್‌ಗಳು ದಿರಿಸಿನಲ್ಲಿ ಸಂಪೂರ್ಣವಾಗಿ ಇರುತ್ತದೆ. ಇವುಗಳು ಬ್ಲಾಕ್ ಪ್ರಿಂಟ್‌ಗಳನ್ನು ಒಳಗೊಂಡಿದ್ದು ಈ ಬಾರಿಯ ದುರ್ಗಾಪೂಜೆಗಾಗಿ ಈ ರೀತಿಯ ದಿರಿಸುಗಳನ್ನು ನೀವು ಖರೀದಿಸಬಹುದಾಗಿದೆ. ಹೆಚ್ಚಿನ ಸ್ಟೋರ್‌ಗಳಲ್ಲಿ ಈ ಬಗೆಯ ದಿರಿಸುಗಳು ದೊರಕುತ್ತಿದ್ದು ಸೀರೆ ಮತ್ತು ಪ್ಯಾಂಟ್‌ಗಳಲ್ಲಿ ಈ ವಿನ್ಯಾಸಗಳು ಬೇರೆಯಾಗಿರುತ್ತವೆ.

ಗಮ್ಚಾ ಪ್ರಿಂಟ್ಸ್

ಗಮ್ಚಾ ಪ್ರಿಂಟ್ಸ್

ಇದೊಂದು ಅನನ್ಯ ಹ್ಯಾಂಡಲೂಮ್ ಪ್ರಿಂಟ್ ಆಗಿದ್ದು, ಇದು ಮೆತ್ತಗೆಯಾಗಿದ್ದು ನೋಡಲು ಆಕರ್ಷಕವಾಗಿರುತ್ತದೆ. ಈ ವಿನ್ಯಾಸಗಳನ್ನು ಬಳಸಿಕೊಂಡು ವಿನ್ಯಾಸಕಾರರು ದಿರಿಸು ಮತ್ತು ಸೀರೆಗಳನ್ನು ಸಿದ್ಧಪಡಿಸುತ್ತಾರೆ. ಹಾಗಿದ್ದರೆ ಗಮ್ಚಾ ಪ್ರಿಂಟ್‌ಗಳನ್ನು ಹೊಂದಿರುವ ದಿರಿಸುಗಳನ್ನು ಈ ಬಾರಿಯ ದುರ್ಗಾಪೂಜೆಗಾಗಿ ಖರೀದಿಸಲು ಮಾತ್ರ ಮರೆಯದಿರಿ.

ಎಂಬ್ರಾಯಿಡರಿ ಟ್ಯುಶ್ಯೋರ್

ಎಂಬ್ರಾಯಿಡರಿ ಟ್ಯುಶ್ಯೋರ್

ಸಾಂಪ್ರದಾಯಿಕ ಸಿಲ್ಕ್ ಬಟ್ಟೆಯಾಗಿರುವ ಟ್ಯುಶ್ಯೋರ್ ಬಂಗಾಳ ಮತ್ತು ಭಾರತದ ಇತರ ಸ್ಥಳಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಈ ಬಗೆಯ ಬಟ್ಟೆಗಳನ್ನು ಬಳಸಿಕೊಂಡು ಸೀರೆಗಳನ್ನು ಹಿಂದಿನ ಕಾಲದಿಂದೂ ಸಿದ್ಧಪಡಿಸಲಾಗುತ್ತದೆ. ಈ ಬಾರಿಯ ಟ್ಯುಶ್ಯೋರ್‌ನಲ್ಲಿ ನೀವು ಎಂಬ್ರಾಯಿಡರಿ ವಿನ್ಯಾಸಗಳನ್ನು ಕಂಡುಕೊಳ್ಳಬಹುದಾಗಿದೆ.

ಬಾತಿಕ್ ಪ್ರಿಂಟ್ಸ್

ಬಾತಿಕ್ ಪ್ರಿಂಟ್ಸ್

ಇದೊಂದು ಬಂಗಾಳಿ ಸಾಂಪ್ರದಾಯಿಕ ಪ್ರಿಂಟ್ ಆಗಿದ್ದು ಸೀರೆ, ಕುರ್ತಿ ಮತ್ತು ರವಿಕೆಗಳಲ್ಲಿ ಹೆಚ್ಚು ಚೆನ್ನಾಗಿ ಕಾಣಿಸುತ್ತದೆ. ಪುರುಷರ ದಿರಿಸುಗಳಾದ ಕುರ್ತಾ ಮತ್ತು ಶರ್ಟ್‌ಗಳಲ್ಲಿ ಕೂಡ ಇದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಈ ಬಗೆಯ ಪ್ರಿಂಟ್‌ಗಳು ಈಗ ಹೆಚ್ಚು ಚಾಲ್ತಿಯಲ್ಲಿದೆ.

ಕಾಂಟ್ರಾಸ್ಟ್ ಬ್ಲೌಸ್

ಕಾಂಟ್ರಾಸ್ಟ್ ಬ್ಲೌಸ್

ಸೀರೆಗಳಿಗೆ ಮ್ಯಾಚಿಂಗ್ ಆಗಿರುವ ಬ್ಲೌಸ್‌ಗಳು ಹಿಂದಿನ ವರ್ಷವೇ ಚಾಲ್ತಿಗೆ ಬಂದಿತ್ತು. ಆದರೆ ಈ ಬಾರಿ ಕಾಂಟ್ರಾಸ್ಟ್ ರವಿಕೆಗಳನ್ನು ಹೆಚ್ಚು ಪ್ರಸ್ತುತಪಡಿಸಲಾಗಿದೆ. ಬೇರೆ ಬೇರೆ ಬಣ್ಣಗಳಲ್ಲಿ ಈ ರವಿಕೆಗಳು ಲಭ್ಯವಿದ್ದು ನಿಜಕ್ಕೂ ನೀವು ಉಡುವ ಸೀರೆಗಳಿಗೆ ಇದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ.

ಅಫ್‌ಘಾನ್ ಆಭರಣ

ಅಫ್‌ಘಾನ್ ಆಭರಣ

ದಿರಿಸುಗಳ ಬಗ್ಗೆ ಈಗ ಮಾತನಾಡಿ ಆಯಿತು, ಈಗ ಆಭರಣಗಳ ಬಗ್ಗೆ ನಾವು ಮಾತನಾಡದೇ ಲೇಖನವನ್ನು ಮುಗಿಸುವಂತಿಲ್ಲ ತಾನೇ, ನೀವು ಧರಿಸುವ ಉಡುಗೆ ಯಾವುದೇ ಆಗಿರಲಿ ಅದಕ್ಕೆ ಆಭರಣವಿಲ್ಲದೆ ದಿರಿಸಿನ ಕಳೆ ಕುಗ್ಗಿ ಹೋಗುತ್ತದೆ. ಈಗ ಫ್ಯಾಷನ್ ಆಗಿರುವ ಅಫ್‌ಘಾನ್ ಆಭರಣಗಳನ್ನು ನೀವು ಉಡುವ ಸೀರೆಗೆ ಮ್ಯಾಚಿಂಗ್ ಆಗಿ ಬಳಸಿಕೊಳ್ಳಿ.

English summary

durga-puja-2017-will-be-about-these-trends

Fashion not just means about looking good but also following the latest trends. So, before you drop your shopping bags, we are here to tell you about this year's trending styles for Durga Puja. A few things are topping the list and in this article, we will discuss the most trending fashion styles which will be on the top of this year's trending list.
Story first published: Monday, September 11, 2017, 20:03 [IST]
X
Desktop Bottom Promotion